For Quick Alerts
ALLOW NOTIFICATIONS  
For Daily Alerts

Neeraj Chopra Diet Plan: ಚಿನ್ನದ ಹುಡುಗ ನೀರಜ್ ಚೋಪ್ರಾರ ಡಯೆಟ್ ಪ್ಲಾನ್ ಹೇಗಿದೆ ಗೊತ್ತಾ?

|

ಸದ್ಯ ದೇಶದೆಲ್ಲಡೆ ಕೇಳಿಬರುತ್ತಿರುವ ಹೆಸರೆಂದರೆ ನೀರಜ್ ಚೋಪ್ರಾ. 13 ವರ್ಷಗಳ ನಂತರ, ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ತಂದ ವೀರ. ಕಟ್ಟುಮಸ್ತಾದ ದೇಹ ಹೊಂದಿರುವ ಬಲಶಾಲಿ ಆಟಗಾರ. ಸಣ್ಣ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿರುವ ಚೋಪ್ರಾರನ್ನ ಇಡೀ ದೇಶ ಹಾಡಿ-ಹೊಗಳುತ್ತಿರುವ ಸಂದರ್ಭದಲ್ಲಿ, ಜನರ ಮನಸ್ಸಿನಲ್ಲಿ ಮೂಡುತ್ತಿರುವ ಮತ್ತೊಂದು ಪ್ರಶ್ನೆ ಅಂದ್ರೆ, ಅವರ ಆಹಾರದ ಗುಟ್ಟೇನು ಎಂಬುದು. ಈ ಪ್ರಶ್ನೆಗೆ ನಾವಿಂದು ಉತ್ತರ ಕೊಡಲಿದ್ದೇವೆ.

ನೀರಜ್ ಚೋಪ್ರಾರ ಆಹಾರ ಶೈಲಿ ಹೇಗಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ನೀರಜ್ ಚೋಪ್ರಾರ ಆಹಾರ ಶೈಲಿ ಹೇಗಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ನೀರಜ್ ಚೋಪ್ರಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮಗೆ ಏನು ಇಷ್ಟ ಎಂಬುದನ್ನು ವಿವರಿಸಿದ್ದಾರೆ. ಆ ಪ್ರಕಾರ, ಅವರು ಯಾವಾಗಲೂ ತಿನ್ನಲು ಬಯಸುವ ಆಹಾರವೆಂದರೆ ಬ್ರೆಡ್ ಆಮ್ಲೆಟ್. ಇದನ್ನು ಎಷ್ಟು ಬೇಕಾದರೂ, ಯಾವಾಗ ಬೇಕಾದರೂ ತಿನ್ನಲು ಸಿದ್ಧರಿರುತ್ತಾರೆ. ಆಮ್ಲೆಟ್ ನ್ನು ಸಿಕ್ಕಾಪಟ್ಟೆ ಇಷ್ಪಡುವ ಇವರ ನೆಚ್ಚಿನ ಆಹಾರಗಳಲ್ಲಿ ಮುಖ್ಯವಾದುದಾಗಿದೆ. ಅದರ ಜೊತೆಗೆ ಇತ್ತೀಚೆಗೆ ಸಾಲ್ಮನ್ ಮೀನುಗಳನ್ನು ಕೂಡ ತಮ್ಮ ಆಹಾರದಲ್ಲಿ ಸೇರಿಸಿಕೊಂಡಿದ್ದಾರೆಂದು ಹೇಳಿದ್ದಾರೆ.

ನೀರಜ್ ಚೋಪ್ರಾರ ನೆಚ್ಚಿನ ಇತರ ಆಹಾರಗಳು ಇಲ್ಲಿದೆ:

ನೀರಜ್ ಚೋಪ್ರಾರ ನೆಚ್ಚಿನ ಇತರ ಆಹಾರಗಳು ಇಲ್ಲಿದೆ:

ನೀರಜ್ ಗೂ ಗೊಲ್ಗಪ್ಪಾ ಎಂದರೆ ತುಂಬಾ ಇಷ್ಟ. ಗೋಲ್ಗಪ್ಪ ಅಥವಾ ಪಾನಿಪುರಿ ಎಂದು ಹೆಸರುವಾಸಿಯಾಗಿರುವ ಇದನ್ನು ಇಷ್ಟಪಡದವರೇ ಇಲ್ಲ. ಅದೇ ರೀತಿ ಇದು ಚೋಪ್ರಾ ಅವರಿಗೂ ಫೇವರೆಟ್. ಇದರಲ್ಲಿ ಯಾವುದೇ ಹಾನಿಕಾರಕ ವಸ್ತುವಿಲ್ಲ ಎಂಬುದು ಇವರ ಅಭಿಪ್ರಾಯವಾಗಿದೆ. ಇದರ ಜೊತೆಗೆ ಕೆಲವೊಮ್ಮೆ ತನಗಾಗಿ ಉಪ್ಪಿನ ಅನ್ನವನ್ನು ಮಾಡಿಕೊಳ್ಳುತ್ತಾರಂತೆ.

ಚೋಪ್ರಾ ಅವರು ತಮ್ಮ ಅಭ್ಯಾಸದ ಹೆಚ್ಚಿನ ಸಮಯಗಳಲ್ಲಿ ಹಣ್ಣಿನ ರಸ ಕುಡಿಯುತ್ತಾರೆ. ಇದು ಆರೋಗ್ಯಕ್ಕೂ ಉತ್ತಮ, ಶಕ್ತಿಯನ್ನೂ ಹೆಚ್ಚಿಸುವುದು. ಇವರ ಮತ್ತೊಂದು ಹವ್ಯಾಸ ಎಂದರೆ ಯಾವುದೇ ದೇಶದಲ್ಲಿ ಪಂದ್ಯಾಟ ಇದ್ದರೂ, ಅಲ್ಲಿನ ಆಹಾರವನ್ನು ಟೇಸ್ಟ್ ಮಾಡುವುದು ಇವರಿಗೆ ಇಷ್ಟವಂತೆ. ಅದೇ ರೀತಿ ಬೇರೆ ಯಾವುದೇ ದೇಶದ ಆಟಗಾರರಿಗೆ ಇಂಡಿಯನ್ ಚಿಕನ್ ಕರಿ ಅಥವಾ ಬಟರ್ ಚಿಕನ್ ತಿನ್ನಲು ಸಲಹೆ ನೀಡುತ್ತಾರಂತೆ.

ಕ್ರೀಡಾಪಟುಗಳಿಗೆ ಸಾಲ್ಮನ್ ಮೀನು ವಿಶೇಷ ಏಕೆ?:

ಕ್ರೀಡಾಪಟುಗಳಿಗೆ ಸಾಲ್ಮನ್ ಮೀನು ವಿಶೇಷ ಏಕೆ?:

ಸಾಲ್ಮನ್ ಮೀನು ಪ್ರೋಟೀನ್, ಕಬ್ಬಿಣ, ಫೈಬರ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದ್ದು, ಇದು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ನಮ್ಮ ದೇಹದಲ್ಲಿನ ಸ್ನಾಯುಗಳ ಚೈತನ್ಯಕ್ಕೆ ಸಹ ಸಹಾಯ ಮಾಡುತ್ತದೆ. ಈ ಮೀನು ಉರಿಯೂತದ ಗುಣಗಳನ್ನು ಹೊಂದಿದ್ದು, ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಈ ಮೀನಿನಲ್ಲಿ ವಿಟಮಿನ್‌ಗಳೂ ಹೇರಳವಾಗಿ ಕಂಡುಬರುತ್ತವೆ. ಜೊತೆಗೆ ವಿಟಮಿನ್ ಬಿ 3, ಬಿ 1 ಸಮೃದ್ಧವಾಗಿದ್ದು, ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುವಲ್ಲಿ ಸಹಾಯಕವಾಗಿವೆ.

ಕ್ರೀಡಾಪಟುಗಳಿಗೆ ಆರೋಗ್ಯಕರ ಆಹಾರ ಎಷ್ಟು ಮುಖ್ಯ?:

ಕ್ರೀಡಾಪಟುಗಳಿಗೆ ಆರೋಗ್ಯಕರ ಆಹಾರ ಎಷ್ಟು ಮುಖ್ಯ?:

ಕ್ರೀಡಾಪಟುಗಳಂತಲ್ಲ, ಪ್ರತಿಯೊಬ್ಬರಿಗೂ ಆರೋಗ್ಯಕರ ಆಹಾರ ಪದ್ದತಿ ತುಂಬಾ ಮುಖ್ಯ. ಅದರಲ್ಲೂ ಕ್ರೀಡಾಪಟುಗಳು ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ, ಅವರು ಸೇವಿಸುವ ಆಹಾರ, ಸ್ವಲ್ಪ ಹೆಚ್ಚು-ಕಮ್ಮಿ ಆದರೂ, ಅವರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಕ್ರೀಡಾಪಟುಗಳಿಗೆ ಹೆಚ್ಚು ಸಾಮರ್ಥ್ಯ ಅವಶ್ಯವಿರುತ್ತದೆ. ಅದು ಸಿಗುವುದು ಆರೋಗ್ಯಕರ ಆಹಾರದಿಂದ ಹೊರತು, ಜಂಕ್ ಫುಡ್ ಗಳಿಂದಲ್ಲ. ಆದ್ದರಿಂದ ಪೋಷಕಾಂಶ ಸಮೃದ್ಧವಾದ, ಸಮತೋಲಿತ ಆಹಾರವನ್ನು ಸೇವಿಸಬೇಕು.

English summary

Neeraj Chopra Diet Plan: Eating Habits of Tokyo Olympics Gold Medalist in Kannada

Here we talking about Neeraj Chopra Diet Plan: Eating Habits of Tokyo Olympics Gold Medalist in Kannada, read on
Story first published: Wednesday, August 11, 2021, 16:24 [IST]
X
Desktop Bottom Promotion