Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ
ಮಹಿಳಾ ದಿನದ ಸ್ಪೇಷಲ್.. 30 ದಾಟಿದ ಮಹಿಳೆಯರೇ, ನಿಮ್ಮ ಆರೋಗ್ಯಕ್ಕಾಗಿ ಈ 7 ಸೂತ್ರಗಳನ್ನು ಪಾಲಿಸಿ! ಅನೇಕ ರೋಗಗಳಿಂದ ದೂರ ಉಳಿಯಿರಿ. ಹೌದು, ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆವನ್ನು (International Women's Day 2026) ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ಶಿಕ್ಷಣದ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತವೆ. ಆದರೆ, ಮಹಿಳೆಯರ ಆರೋಗ್ಯಕ್ಕೆ ಮಾತ್ರ ಅಷ್ಟೇ ಮಹತ್ವ ನೀಡಲಾಗುವುದಿಲ್ಲ. ಇಡೀ ಕುಟುಂಬದ ಆರೋಗ್ಯಕ್ಕೆ ಮಹಿಳೆಯರ ಆರೋಗ್ಯವೂ ಅತಿ ಮುಖ್ಯ.
ಆದರೆ, ಕುಟುಂಬ ನಿರ್ವಹಣೆ ಮತ್ತು ಕೆಲಸದ ಜವಾಬ್ದಾರಿಗಳ ನಡುವೆ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. 30ನೇ ವಯಸ್ಸು ಹಲವು ಮಹಿಳೆಯರ ಜೀವನದಲ್ಲಿ ಮಹತ್ವದ ಮೈಲಿಗಲ್ಲು. ಈ ಅವಧಿಯಲ್ಲಿ ವೃತ್ತಿ, ಕುಟುಂಬ ಮತ್ತು ವೈಯಕ್ತಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ. ದೇಹದಲ್ಲಿಯೂ ಸಣ್ಣಪುಟ್ಟ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ವಯಸ್ಸಿನಲ್ಲಿ ಆರೋಗ್ಯದ ಕಡೆಗೆ ವಿಶೇಷ ಗಮನ ನೀಡುವುದು ಅತಿ ಅವಶ್ಯಕ. ಇದನ್ನು ನಿರ್ಲಕ್ಷಿಸಿದರೆ, ದೇಹವು ಹಲವಾರು ಕಾಯಿಲೆಗಳಿಗೆ ಆಶ್ರಯ ತಾಣವಾಗಬಹುದು.

30ರ ನಂತರವೂ ನೀವು ಫಿಟ್ ಮತ್ತು ಆರೋಗ್ಯಕರವಾಗಿ ಉಳಿಯಲು ಸಹಾಯಕವಾಗುವ ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ನೀಡುತ್ತೇವೆ.
ಸಮತೋಲಿತ ಮತ್ತು ಪೌಷ್ಟಿಕ ಆಹಾರ
30ರ ನಂತರ ದೇಹದ ಮೆಟಬಾಲಿಸಮ್ ನಿಧಾನವಾಗುವುದರಿಂದ, ನಿಮ್ಮ ಆಹಾರ ಕ್ರಮದ ಬಗ್ಗೆ ವಿಶೇಷ ಗಮನ ನೀಡಬೇಕು. ಪ್ರತಿದಿನ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಭರಿತ ಆಹಾರಗಳನ್ನು ಸೇವಿಸಿ. ಹಸಿರು ತರಕಾರಿಗಳು, ಬೇಳೆಕಾಳುಗಳು, ಹಣ್ಣುಗಳು, ಒಣ ಹಣ್ಣುಗಳು ಮತ್ತು ಧಾನ್ಯಗಳು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತವೆ. ಹಾಲು, ಮೊಸರು, ಮತ್ತು ಪನೀರ್‌ನಂತಹ ಕ್ಯಾಲ್ಸಿಯಂಯುಕ್ತ ಆಹಾರಗಳು ಮೂಳೆಗಳನ್ನು ಬಲಪಡಿಸುತ್ತವೆ. ಕಬ್ಬಿಣಾಂಶಯುಕ್ತ ಆಹಾರ ಸೇವಿಸುವುದರಿಂದ ಆಯಾಸ ಮತ್ತು ರಕ್ತಹೀನತೆಯ ಭೀತಿ ಕಡಿಮೆಯಾಗುತ್ತದೆ. ಇದರ ಜೊತೆಗೆ, ಸಂಸ್ಕರಿಸಿದ ಆಹಾರ, ಅತಿಯಾದ ಸಕ್ಕರೆ ಮತ್ತು ಎಣ್ಣೆ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ. ಸಾಕಷ್ಟು ನೀರು ಕುಡಿಯುವುದು ಕೂಡ ದೇಹವನ್ನು ಆರೋಗ್ಯವಾಗಿಡಲು ಮುಖ್ಯ.
ನಿಯಮಿತವಾಗಿ ವ್ಯಾಯಾಮ ಮಾಡಿ
30ರ ನಂತರ ಫಿಟ್ನೆಸ್ ನಿರ್ಲಕ್ಷಿಸಬೇಡಿ. ದೈಹಿಕ ಚಟುವಟಿಕೆ ದೇಹವನ್ನು ಸಕ್ರಿಯವಾಗಿಟ್ಟು, ತೂಕ ನಿಯಂತ್ರಿಸುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ, ಯೋಗ, ಸೈಕ್ಲಿಂಗ್ ಅಥವಾ ಜಾಗಿಂಗ್‌ನಂತಹ ವ್ಯಾಯಾಮ ಮಾಡಿ. ಸ್ನಾಯುಗಳನ್ನು ಬಲಪಡಿಸಿ ಮೂಳೆಯ ಸಾಂದ್ರತೆ ಕಾಪಾಡಲು 'ಸ್ಟ್ರೆಂತ್ ಟ್ರೈನಿಂಗ್' ಸಹ ಮುಖ್ಯ. ನಿಯಮಿತ ವ್ಯಾಯಾಮವು ಒತ್ತಡ ಕಡಿಮೆ ಮಾಡಿ, ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ.
ಹಾರ್ಮೋನುಗಳ ಬದಲಾವಣೆಯತ್ತ ಗಮನವಿರಲಿ
30ರ ವಯಸ್ಸಿನಲ್ಲಿ ಹಾರ್ಮೋನಲ್ ಬದಲಾವಣೆಗಳು ನಿಧಾನವಾಗಿ ಆರಂಭವಾಗುತ್ತವೆ. ಅನೇಕ ಮಹಿಳೆಯರಲ್ಲಿ ಪಿಸಿಒಎಸ್ (PCOS), ಅನಿಯಮಿತ ಮುಟ್ಟಿನ ಅವಧಿ ಅಥವಾ ಥೈರಾಯ್ಡ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಸ್ಥಿತಿಯಲ್ಲಿ ನಿಮ್ಮ ಮುಟ್ಟಿನ ಚಕ್ರವನ್ನು ನಿರ್ಲಕ್ಷಿಸಬಾರದು. ಅಧಿಕ ನೋವು, ಅಕ್ರಮತೆ ಅಥವಾ ಅತಿಯಾದ ರಕ್ತಸ್ರಾವ ಮುಟ್ಟಿನ ಸಮಯದಲ್ಲಿ ಕಂಡುಬಂದರೆ, ತಜ್ಞ ವೈದ್ಯರನ್ನು ಸಂಪರ್ಕಿಸಿ. ಇದರ ಜೊತೆಗೆ, ಸಾಕಷ್ಟು ನಿದ್ರೆ, ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವು ಹಾರ್ಮೋನಲ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮಾನಸಿಕ ಆರೋಗ್ಯವೇ ಮಹಾಭಾಗ್ಯ
30ರ ನಂತರ ಮಹಿಳೆಯರು ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವುದರಿಂದ ಆಗಾಗ ಒತ್ತಡ ಅನುಭವಿಸುತ್ತಾರೆ. ನಿರಂತರ ಒತ್ತಡವು ದೇಹ ಮತ್ತು ಮನಸ್ಸು ಎರಡರ ಮೇಲೂ ಪರಿಣಾಮ ಬೀರುತ್ತದೆ. ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲು ಧ್ಯಾನ, ಯೋಗ ಮತ್ತು ವಿಶ್ರಾಂತಿ ತಂತ್ರಗಳನ್ನು ಅಳವಡಿಸಿಕೊಳ್ಳಿ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಹ ಮಾನಸಿಕ ಸಮತೋಲನಕ್ಕೆ ಸಹಾಯಕ. ಅಗತ್ಯವಿದ್ದಲ್ಲಿ, ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯಲು ಹಿಂಜರಿಯಬೇಡಿ.
ನಿಯಮಿತ ವೈದ್ಯಕೀಯ ತಪಾಸಣೆ
30ರ ನಂತರ ನಿಯಮಿತ ಆರೋಗ್ಯ ತಪಾಸಣೆಗಳು ಅತ್ಯಗತ್ಯ. ಕಾಲಕಾಲಕ್ಕೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ, ಥೈರಾಯ್ಡ್ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ಪರೀಕ್ಷಿಸಿಕೊಳ್ಳಿ. ಮಹಿಳೆಯರಿಗೆ ಪ್ಯಾಪ್ ಸ್ಮಿಯರ್ ಮತ್ತು ಸ್ತನ ತಪಾಸಣೆಗಳು ಕೂಡ ಮುಖ್ಯ. ಇವು ಸರ್ವಿಕಲ್ ಕ್ಯಾನ್ಸರ್ ಹಾಗೂ ಸ್ತನ ಸಂಬಂಧಿತ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಲು ನೆರವಾಗುತ್ತವೆ. ನಿಯಮಿತ ತಪಾಸಣೆಯಿಂದ ರೋಗಗಳನ್ನು ಗುರುತಿಸಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಬಹುದು.
ಚರ್ಮ ಮತ್ತು ಮೂಳೆಗಳ ಕಾಳಜಿ
30ರ ನಂತರ ಚರ್ಮದಲ್ಲಿಯೂ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕೊಲಾಜೆನ್ ಮಟ್ಟ ಕ್ರಮೇಣ ಕಡಿಮೆಯಾಗುವುದರಿಂದ ಸುಕ್ಕುಗಳು ಮತ್ತು ಚರ್ಮ ಸಡಿಲತೆ ಕಂಡುಬರಬಹುದು. ಚರ್ಮವನ್ನು ಆರೋಗ್ಯವಾಗಿಡಲು ಸನ್‌ಸ್ಕ್ರೀನ್ ಅನ್ನು ಬಳಸಿ ಹಾಗೂ ಸಾಕಷ್ಟು ನೀರು ಕುಡಿಯಿರಿ. ಸಮತೋಲಿತ ಆಹಾರ ಮತ್ತು ಆ್ಯಂಟಿಆಕ್ಸಿಡೆಂಟ್ ಭರಿತ ಭೋಜನ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಮೂಳೆಗಳ ಬಲಕ್ಕಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯನ್ನು ಸಾಕಷ್ಟು ಸೇವಿಸುವುದು ಅಗತ್ಯ.
ರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ
- ಧೂಮಪಾನ ಹಾಗೂ ಅತಿಯಾದ ಮದ್ಯಪಾನವನ್ನು ತ್ಯಜಿಸಿ.
- ಪ್ರತಿದಿನ 7 ರಿಂದ 8 ಗಂಟೆಗಳ ಆಳವಾದ ನಿದ್ರೆ ಮಾಡಿ.
- ಸರಿಯಾದ ಆಹಾರ, ನಿಯಮಿತ ವ್ಯಾಯಾಮ, ಮಾನಸಿಕ ಸಮತೋಲನ, ಕಾಲಕಾಲಕ್ಕೆ ಆರೋಗ್ಯ ತಪಾಸಣೆಗಳನ್ನು ಕೈಗೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











