For Quick Alerts
ALLOW NOTIFICATIONS  
For Daily Alerts

ನಟರಾಜ ಆಸನ: ತೂಕ ಇಳಿಕೆಗೆ ಮಲೈಕಾ ಅರೋರಾ ಹೇಳಿದ ಶಾರ್ಟ್ ಕಟ್

|

ಬಾಲಿವುಡ್ ಸುಂದರಿ ಮಲೈಕಾ ಅರೋರಾ ಸದಾ ತಮ್ಮ ಮೈ ಮಾಟದಿಂದಲೇ ಸುದ್ದಿಯಲ್ಲಿರುತ್ತಾರೆ. ವಯಸ್ಸು 47 ಆದರೆ ನೋಡಿದರೆ 30 ಹರೆಯದವರಂತೆ ಕಾಣುವುದೇ ಇವರ ಪ್ಲಸ್‌ ಪಾಯಿಂಟ್‌. ಹಾಗಂತ ಇವರಿಗೆ ಮಾದಕ ಮೈಮಾಟ ಸುಮ್ಮನೆ ಬಂದಿಲ್ಲ, ಅದಕ್ಕಾಗಿ ಅಷ್ಟೊಂದು ಕಸರತ್ತು ಕೂಡ ಮಾಡುತ್ತಾರೆ.

ಮೈಮಾಟದ ಅಂದ ಕಾಪಾಡುವ ಸಲುವಾಗಿ ಅವರು ಪ್ರತಿನಿತ್ಯ ವರ್ಕೌಟ್ ಮಾಡುತ್ತಾರೆ, ಅದರಲ್ಲೂ ದಿನಾ ಯೋಗವನ್ನು ಅಭ್ಯಾಸ ಮಾಡುತ್ತಾರೆ. ಜೊತೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಗ್ಯಕ್ಕಾಗಿ, ದೇಹ ಸೌಂದರ್ಯ ಕಾಪಾಡಲು ಏನು ಮಾಡಬೇಕೆಂದು ಎಂಬುವುದರ ಬಗ್ಗೆ ಟಿಪ್ಸ್ ಕೂಡ ನೀಡುತ್ತಿರುತ್ತಾರೆ.

ತೂಕ ಇಳಿಕೆಗೆ ಮಲೈಕಾ ಅರೋರಾ ನೀಡದ ಶಾರ್ಟ್ ಕಟ್

ತೂಕ ಇಳಿಕೆಗೆ ಮಲೈಕಾ ಅರೋರಾ ನೀಡದ ಶಾರ್ಟ್ ಕಟ್

ಈ ಬಾರಿ ಬಾಡಿ ಶೇಪ್‌ಗಾಗಿ ತುಂಬಾ ಸಮಯ ವ್ಯಯಿಸಲು ಸಮಯವಿಲ್ಲ ಎಂದು ಹೇಳುವವರಿಗೆ ಮಲೈಕಾ ಅರೋರಾ ಶಾರ್ಟ್ ಕಟ್ ಒಂದನ್ನು ಹೇಳಿಕೊಟ್ಟಿದ್ದಾರೆ.

ಆಕರ್ಷಕ ಬಾಡಿ ಶೇಪ್ ಬೇಕು, ಸ್ನಾಯುಗಳು ಬಲವಾಗಬೇಕು ಎಂದು ಬಯಸುವುದಾದರೆ ನಟರಾಜ ಆಸನ ಬೆಸ್ಟ್ ಎಂದಿದ್ದಾರೆ ಮಲೈಕಾ ಅರೋರ.

ನಟರಾಜ ಆಸನ ಶಿವನ ನೃತ್ಯದ ಭಂಗಿ ಆಗಿದೆ. ಈ ಭಂಗಿಯನ್ನು ಯಾರು ಕೂಡ ಮಾಡಬಹುದಾಗಿದೆ. ಮೊದ ಮೊದಲಿಗೆ ಈ ಭಂಗಿ ಅಭ್ಯಾಸ ಮಾಡಲು ಸಪೋರ್ಟ್ ಬೇಕಾಗಬಹುದು. ಆದರೆ ನಂತರ ನೀವು ಸರಾಗವಾಗಿ ಈ ಭಂಗಿಯಲ್ಲಿ ನಿಂತುಕೊಳ್ಳಬಹುದಾಗಿದೆ.

ನಟರಾಜ ಆಸನ ಮಾಡುವುದರಿಂದ ದೊರೆಯುವ ಪ್ರಮುಖ ಪ್ರಯೋಜನಗಳು

ನಟರಾಜ ಆಸನ ಮಾಡುವುದರಿಂದ ದೊರೆಯುವ ಪ್ರಮುಖ ಪ್ರಯೋಜನಗಳು

ನಟರಾಜ ಆಸನ ಮಾಡುವುದರಿಂದ ಎದೆ, ಭುಜ ಅಗಲವಾಗುತ್ತದೆ. ಕೈಗಳು, ಕಾಲುಗಳು, ತೊಡೆ ಸ್ನಾಯುಗಳು ಬಲವಾಗುತ್ತವೆ. ಅಲ್ಲದೆ ನಟರಾಜ ಆಸನ ಅಭ್ಯಾಸ ಮಾಡುವುದರಿಂದ ಫಿಟ್ನೆಸ್‌ ಕೂಡ ಕಾಪಾಡಬಹುದು.

ಈ ನಟರಾಜ ಆಸನ ಹೇಗೆ ಮಾಡಬೇಕು, ಇದನ್ನು ಮಾಡುವಾಗ ಗಮನಿಸಿಬೇಕಾದ ಅಂಶಗಳೇನು ಎಂಬುವುದರ ಬಗ್ಗೆ ಕೂಡ ಮಲೈಕಾ ಕೆಲವೊಂದು ಟಿಪ್ಸ್ ನೀಡಿದ್ದಾರೆ.

ನಟರಾಜ ಆಸನ ಮಾಡುವುದು ಹೇಗೆ?

ನಟರಾಜ ಆಸನ ಮಾಡುವುದು ಹೇಗೆ?

  • ಕಾಲುಗಳ ಮೇಲೆ ನೇರವಾಗಿ ನಿಂತುಕೊಳ್ಳಿ. ಬಲ ಕೈಯಲ್ಲಿ ಒಂದು ಗಟ್ಟಿಯಾದ ಕೋಲು ಹಿಡಿದುಕೊಳ್ಳಿ.
  • ಈಗ ಉಸಿರನ್ನು ನಿಧಾನಕ್ಕೆ ಎಳೆದುಕೊಂಡು ಎಡ ಕಾಲನ್ನು ಹಿಂದೆಕ್ಕೆ ಚಾಚಿ.
  • ಈಗ ನಿಧಾನಕ್ಕೆ ಉಸಿರನ್ನು ಬಿಡುತ್ತಾ ಎಡ ಕೈಯನ್ನು ಹಿಂದೆಕ್ಕೆ ಚಾಚಿ ಎಡಗಾಲನ್ನು ಹಿಡಿದುಕೊಳ್ಳಿ.
  • ಎಡ ಕಾಲಿನ ಹೆಬ್ಬರಳು ಸೀಲಿಂಗ್/ಆಕಾಶ ನೋಡುವಂತೆ ಇರಲಿ. ಇದೇ ಸಮಯದಲ್ಲಿ ಕಾಲನ್ನು ನಿಮ್ಮ ದೇಹದ ಬಳಿಗೆ ಪ್ರೆಸ್ ಮಾಡಿ, ಇದೇ ಭಂಗಿಯಲ್ಲಿ 15 ಸೆಕೆಂಡ್ ನಿಲ್ಲಿ, ನಂತರ ಉಸಿರನ್ನು ನಿಧಾನಕ್ಕೆ ಬಿಡುತ್ತಾ ಮೊದಲಿನ ಸ್ಥಿತಿಗೆ ಬಂದು ನಂತರ ಬಲಗಾಲಿನಿಂದ ಈ ಭಂಗಿ ಆವರ್ತಿಸಿ.
  • ನಟರಾಜ ಆಸನ ಮಾಡುವಾಗ ಗಮನಿಸಬೇಕಾದ 6 ಅಂಶಗಳು

    ನಟರಾಜ ಆಸನ ಮಾಡುವಾಗ ಗಮನಿಸಬೇಕಾದ 6 ಅಂಶಗಳು

    • ಈ ಆಸನವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಊಟವಾದ ಬಳಿಕ ಕನಿಷ್ಠ 6 ಗಂಟೆ ಅಂತವಿರಬೇಕು. ಆದ್ದರಿಂದ ಇದನ್ನು ಬೆಳಗ್ಗೆ ಮಾಡುವುದು ಸೂಕ್ತ.
    • ನಿಮ್ಮ ಕಾಲುಗಳಿಗೆ ಭಾರ ಹಾಕಿ ಬಲವಾಗಿ ನಿಲ್ಲಿ, ಕಾಲುಗಳನ್ನು ಎತ್ತುವಾಗ ಬೆರಳುಗಳಲ್ಲಿ ಬ್ಯಾಲೆನ್ಸ್ ಮಾಡಬೇಕು.
    • ಕಾಲಿನ ಮಣಿಗಂಟನ್ನು ನಿಮ್ಮ ದೇಹದ ಕಡೆ ಎಳೆಯಲು ಪ್ರಯತ್ನಿಸಬೇಕು, ನಿಮ್ಮ ನೋಟ ನೇರವಾಗಿರಲಿ.
    • ನಿಮ್ಮ ಎದೆ ನೆಲಕ್ಕೆ ಸಮನಾಂತರವಾಗಿ ಇದ್ದರೆ ಚೆನ್ನಾಗಿ ಬ್ಯಾಲೆನ್ಸ್ ಸಿಗುತ್ತದೆ.
    • ನಿಮ್ಮ ಹಿಪ್ಸ್ (ಹಿಂಭಾಗ ಕೂಡ) ನೆಲಕ್ಕೆ ಸಮನಾಂತರವಾಗಿರಬೇಕು.
    • ಮೇಲಕ್ಕೆ ಎತ್ತಿದ ಕಾಲಿನ ಹೆಬ್ಬರಳು ಮೇಲಕ್ಕೆ ಮುಖ ಮಾಡಿರಬೇಕು.
    •  ನಟರಾಜ ಆಸನ ಅಭ್ಯಾಸ ಮಾಡುವುದರಿಂದ ದೊರೆಯುವ ಪ್ರಯೋಜನಗಳು

      ನಟರಾಜ ಆಸನ ಅಭ್ಯಾಸ ಮಾಡುವುದರಿಂದ ದೊರೆಯುವ ಪ್ರಯೋಜನಗಳು

      • ಇದು ಒಟ್ಟು ಮೊತ್ತ ದೇಹದ ಆಕಾರ ಆಕರ್ಷಕವಾಗಿರುವಂತೆ ಮಾಡುತ್ತದೆ.
      • ಇದಕ್ಕೆ ಬಳಸುವ ಉಸಿರಾಟದ ಟೆಕ್ನಿಕ್‌ನಿಂದಾಗಿ ತೂಕ ಇಳಿಕೆಗೆ ಸಹಕಾರಿ.
      • ಇದು ದೇಹದಲ್ಲಿ ಶಕ್ತಿ ಹೆಚ್ಚಿಸುತ್ತದೆ.
      • ಚಯಪಚಯ ಕ್ರಿಯೆಗೆ ತುಂಬಾನೇ ಸಹಕಾರಿ.
      • ಸೊಂಟದ ಕೆಳಭಾಗದ ಭಾಗದ ಬಲ ಹೆಚ್ಚಿಸುತ್ತದೆ.
      • ಮಹಿಳೆಯರು ಈ ಆಸನ ಅಭ್ಯಾಸ ಮಾಡುವುದರಿಂದ ಆಕರ್ಷಕ ಮೈ ಮಾಟವನ್ನು ಪಡೆಯಬಹುದಾಗಿದೆ.

English summary

Malaika Arora Asks Fans To Try Natarajasana For A Strong Core And Better Balance

Here are Malaika Arora wants you all to do Natarajasana for a weight loss and better balance, Read on...
Story first published: Wednesday, November 4, 2020, 16:06 [IST]
X
Desktop Bottom Promotion