For Quick Alerts
ALLOW NOTIFICATIONS  
For Daily Alerts

ಹೃದಯದ ಸ್ವಾಸ್ಥ್ಯ ಕಾಪಾಡುವ ಕಮಲದ ಬೇರಿನ ಆರೋಗ್ಯ ಲಾಭಗಳು ಗೊತ್ತೇ?

|

ಭಾರತೀಯರು ಕಮಲ ಹೂವನ್ನು ತುಂಬಾ ಪವಿತ್ರವೆಂದು ಭಾವಿಸಿರುವರು. ಅದರಲ್ಲೂ ಹಿಂದೂಗಳ ಲಕ್ಷ್ಮೀ ದೇವತೆಯು ಕಮಲದ ಹೂವಿನ ಮೇಲೆ ವಾಸವಾಗಿರುವಳು ಎಂದು ನಂಬಿರುವರು. ಕಮಲಯು ಹೆಚ್ಚಾಗಿ ಕೆಸರು ಇರುವಂತಹ ಜಾಗದಲ್ಲಿ ಬೆಳೆಯುತ್ತದೆ. ಕಮಲವನ್ನು ದೇವಸ್ಥಾನಗಳಲ್ಲಿ ಪೂಜೆಗೆ ಬಳಸಿದರೆ ಶ್ರೇಷ್ಠ ಎಂದೂ ಹೇಳಲಾಗುತ್ತದೆ.

ಆದರೆ ನೀವು ಕಮಲದ ಬೇರಿನಲ್ಲಿರುವಂತಹ ಪೋಷಕಾಂಶಗಳ ಬಗ್ಗೆ ಕೇಳಿದ್ದೀರಾ? ಇದನ್ನು ಖಾದ್ಯಗಳಿಗೂ ಬಳಕೆ ಮಾಡುತ್ತಾರೆ ಎಂದು ನಿಮಗೇನಾದರೂ ತಿಳಿದಿದೆಯಾ? ಇಲ್ಲ ತಾನೇ? ಹಾಗಾದರೆ ಈ ಲೇಖನವನ್ನು ನೀವು ಓದಲೇಬೇಕು. ಯಾಕೆಂದರೆ ಕಮಲದ ಬೇರನ್ನು ಕಮಲ ಕಕ್ಡಿ ಎಂದು ಕರೆಯಲಾಗುತ್ತದೆ. ಇದು ತಿನ್ನಬಹುದಾದ ಒಂದು ಸಸ್ಯದ ಬೇರಾಗಿದೆ.

Lotus Root

ಈ ಬೇರನ್ನು ಹೆಚ್ಚಾಗಿ ಚೀನಾ, ಕೊರಿಯಾ, ಭಾರತ ಮತ್ತು ಜಪಾನ್ ನಲ್ಲಿ ಖಾದ್ಯಗಳಿಗೆ ಬಳಕೆ ಮಾಡಿಕೊಳ್ಳುವರು. ಆದರೆ ಭಾರತೀಯರು ಹಿಂದಿನಿಂದಲೂ ಇದನ್ನು ಆಯುರ್ವೇದದಲ್ಲಿ ಹಲವಾರು ರೀತಿಯ ಕಾಯಿಲೆಗಳ ನಿವಾರಣೆಗೆ ಬಳಕೆ ಮಾಡುತ್ತಲಿದ್ದರು. ಮುಖ್ಯವಾಗಿ ಚರ್ಮ, ಹೊಟ್ಟೆ, ಶ್ವಾಸಕೋಶ ಮತ್ತು ಇತರ ಕಾಯಿಲೆಗಳಿಗೆ ಇದನ್ನು ಬಳಕೆ ಮಾಡಲಾಗುತ್ತಿತ್ತು.

ನಾವು ಪೂಜೆ ಬಳಸುವಂತಹ ಕಮಲದ ಹೂವಿನ ಬೇರಿನಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶ ಹಾಗೂ ಹಾಗೂ ಕಡಿಮೆ ಕ್ಯಾಲರಿ ಇದೆ. ಇದರಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳಿಂದಾಗಿ ನಾವು ದೀರ್ಘಕಾಲ ತನಕ ಸೇವನೆ ಮಾಡಿದರೆ, ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದರ ಆರೋಗ್ಯ ಲಾಭಗಳು, ಅದೇ ರೀತಿಯಾಗಿ ಅಡ್ಡಪರಿಣಾಮಗಳು ಮತ್ತು ಕಮಲ ಬೇರಿನಿಂದ ತಯಾರಿಸಿಕೊಂಡ ಒಂದು ಖಾದ್ಯದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಯುವ.

ಕಮಲದ ಬೇರಿನಲ್ಲಿರುವ ಪೌಷ್ಠಿಕ ಸತ್ವಗಳು

ಕಮಲದ ಬೇರಿನಲ್ಲಿರುವ ಪೌಷ್ಠಿಕ ಸತ್ವಗಳು

100 ಗ್ರಾಂ ಹಸಿ ಕಮಲ ಬೇರಿನಲ್ಲಿ 79.10 ಗ್ರಾಂ ನೀರು ಮತ್ತು 74 ಕೆಸಿಎಎಲ್ ಶಕ್ತಿ ಇದೆ. ಕಮಲ ಬೇರಿನಲ್ಲಿ ಇರುವ ಇತರ ಕೆಲವು ಪೋಷಕಾಂಶಗಳು ಈ ರೀತಿಯಾಗಿ ಇದೆ.

2.60 ಗ್ರಾಂ ಪ್ರೋಟೀನ್

17.23 ಗ್ರಾಂ ಕಾರ್ಬೋಹೈಡ್ರೇಟ್ಸ್

4.9 ಗ್ರಾಂ ನಾರಿನಾಂಶ

45 ಗ್ರಾಂ ಕ್ಯಾಲ್ಸಿಯಂ

1.16 ಗ್ರಾಂ ಕಬ್ಬಿಣಾಂಶ

23 ಮಿ.ಗ್ರಾಂ ಮೆಗ್ನಿಶಿಯಂ

100 ಮಿ.ಗ್ರಾಂ ಪೋಸ್ಪರಸ್

556 ಮಿ.ಗ್ರಾಂ. ಪೊಟಾಶಿಯಂ

450 ಮಿ.ಗ್ರಾಂ. ಸೋಡಿಯಂ

0.39 ಮಿ.ಗ್ರಾಂ ಸತು

44 ಮಿ.ಗ್ರಾಂ. ವಿಟಮಿನ್ ಸಿ

0.25 ಮಿ.ಗ್ರಾಂ. ವಿಟಮಿನ್ ಬಿ6

Most Read: ನೋ ಎನ್ನಲು ಮುಜುಗರವೇ?, ತಪ್ಪಿತಸ್ಥ ಭಾವನೆ ಇಲ್ಲದೆ 'ನೋ' ಎನ್ನುವುದು ಹೇಗೆ?

ಕಮಲದ ಬೇರಿನಲ್ಲಿರುವ ಆರೋಗ್ಯಕರ ಪ್ರಯೋಜನಗಳು

1. ಜೀರ್ಣಕ್ರಿಯೆ ಸುಧಾರಣೆ

1. ಜೀರ್ಣಕ್ರಿಯೆ ಸುಧಾರಣೆ

ಹೆಚ್ಚಿನವರಿಗೆ ಇಂದಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆಯು ಕಾಡುವುದು ಹೆಚ್ಚು, ಇದಕ್ಕಾಗಿ ಕಮಲದ ಬೇರನ್ನು ಬಳಸಬಹುದು. ಯಾಕೆಂದರೆ ಇದರಲ್ಲಿ ಅಧಿಕ ನಾರಿನಾಂಶವಿದೆ. ಇದು ಮಲವನ್ನು ಮೆದುಗೊಳಿಸುವುದು ಮತ್ತು ಮಲಬ್ಧತೆ ಸಹಿತ ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು. ಭೇದಿ ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ.

2. ರಕ್ತದೊತ್ತಡ ನಿಯಂತ್ರಿಸುವುದು

2. ರಕ್ತದೊತ್ತಡ ನಿಯಂತ್ರಿಸುವುದು

ಕಮಲದ ಬೇರಿನಲ್ಲಿ ಇರುವ ಪೊಟಾಶಿಯಂ ಅಂಶವು ರಕ್ತನಾಳಗಳಿಗೆ ಆರಾಮ ನೀಡುವುದು ಮತ್ತು ರಕ್ತ ಸರಬರಾಜು ಸರಿಯಾಗಿ ಆಗಲು ನೆರವಾಗುವುದು. ಇದು ದೇಹದಲ್ಲಿ ಇರುವ ದ್ರವಾಂಶವನ್ನು ಸಮತೋಲನದಲ್ಲಿ ಇಡುವುದು ಮತ್ತು ರಕ್ತದ ಮೇಲೆ ಸೋಡಿಯಂನ ಪ್ರಭಾವ ಕಡಿಮೆ ಮಾಡುವುದು. ಇದರಿಂದಾಗಿ ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ.

3. ಪ್ರತಿರೋಧಕ ವ್ಯವಸ್ಥೆ ಬಲಗೊಳಿಸುವುದು

3. ಪ್ರತಿರೋಧಕ ವ್ಯವಸ್ಥೆ ಬಲಗೊಳಿಸುವುದು

ದೇಹಕ್ಕೆ ಯಾವುದೇ ಕಾಯಿಲೆಗಳು ಬಾಧಿಸದಂತೆ ಇರಬೇಕಾದರೆ ಆಗ ಪ್ರಮುಖವಾಗಿ ಪ್ರತಿರೋಧಕ ವ್ಯವಸ್ಥೆಯು ಬಲವಾಗಿರಬೇಕು. ಕಮಲ ಹೂವಿನ ಬೇರಿನಲ್ಲಿರುವಂತಹ ವಿಟಮಿನ್ ಸಿಯು ಬಿಳಿ ರಕ್ತದ ಕಣಗಳನ್ನು ಹೆಚ್ಚಿಸುವುದು ಮತ್ತು ಇದರಿಂದ ಯಾವುದೇ ರೋಗದ ವಿರುದ್ಧ ಇದು ಹೋರಾಡುವಂತೆ ಮಾಡುವುದು. ದೇಹದ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವುದು.

4. ಹೃದಯದ ಆರೋಗ್ಯ ಕಾಪಾಡುವುದು

4. ಹೃದಯದ ಆರೋಗ್ಯ ಕಾಪಾಡುವುದು

ಕಮಲ ಹೂವಿನ ಬೇರಿನಲ್ಲಿ ಪಿರಿಡಾಕ್ಸಿನ್ ಎನ್ನುವ ಅಂಶವಿದ್ದು, ಹೋಮೋಸಿಸ್ಟೈನ್ ಅಂಶವನ್ನು ಇದು ಕಡಿಮೆ ಮಾಡುತ್ತದೆ. ಅಧಿಕ ಮಟ್ಟದಲ್ಲಿ ಹೋಮೋಸಿಸ್ಟೈನ್ ಇದ್ದರೆ ಅದರಿಂದ ಹೃದಯಾಘಾತದ ಅಪಾಯ ಹೆಚ್ಚಾಗಿರುವುದು. ಪೊಟಾಶಿಯಂ ಮತ್ತು ಆಹಾರದ ನಾರಿನಾಂಶದಿಂದಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ನ್ನು ಇದು ತೆಗೆಯುವುದು.

5. ಒತ್ತಡ ತಗ್ಗಿಸುವುದು

5. ಒತ್ತಡ ತಗ್ಗಿಸುವುದು

ಕಮಲ ಹೂವಿನ ಬೇರಿನಲ್ಲಿ ಇರುವಂತಹ ವಿಟಮಿನ್ ಬಿ6 ಅಂಶವು ಎರಡು ಪ್ರಮುಖ ಹಾರ್ಮೋನ್ ಗಳಾಗಿರುವಂತಹ ಸಿರೊಟೋನಿನ್ ಮತ್ತು ಡೋಪಮೈನ್ ಉತ್ಪತ್ತಿಗೆ ನೆರವಾಗುವುದು. ಈ ಹಾರ್ಮೋನ್ ಗಳು ಮೆದುಳಿನ ಮೇಲೆ ಧನಾತ್ಮಕ ಪರಿಣಾಮ ಬೀರುವುದು ಮತ್ತು ಮನಸ್ಥಿತಿ ಸುಧಾರಿಸಿ, ಒತ್ತಡ ಕಡಿಮೆ ಮಾಡುವುದು.

6. ಚರ್ಮ ಮತ್ತು ಕೂದಲಿನ ಸಮಸ್ಯೆ ನಿವಾರಣೆ

6. ಚರ್ಮ ಮತ್ತು ಕೂದಲಿನ ಸಮಸ್ಯೆ ನಿವಾರಣೆ

ವಿಟಮಿನ್ ಬಿ ಮತ್ತು ಸಿ ಅಂಶವನ್ನು ಹೊಂದಿರುವಂತಹ ಕಮಲ ಹೂವಿನ ಬೇರು ಚರ್ಮವನ್ನು ಕಾಂತಿಯುತವಾಗಿಸುವುದು ಮತ್ತು ಕೂದಲನ್ನು ರೇಷ್ಮೆಯಂತೆ ಮಾಡುವುದು. ಈ ವಿಟಮಿನ್ ಗಳು ದೇಹದಲ್ಲಿ ಕಾಲಜನ್ ಬಿಡುಗಡೆಗೆ ನೆರವಾಗುವುದು ಮತ್ತು ಚರ್ಮದ ಆರೋಗ್ಯ ಸುಧಾರಣೆ ಮಾಡುವುದು. ಇದರಿಂದ ನೀವು ಯೌವನಯುತವಾಗಿ ಕಾಣಬಹುದು.

7. ಅಕ್ಷಿಪಟಲದ ಅವನತಿ ತಡೆಯುವುದು

7. ಅಕ್ಷಿಪಟಲದ ಅವನತಿ ತಡೆಯುವುದು

ಕಮಲ ಹೂವಿನ ಬೇರಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಕ್ಷಿಪಟಲದ ಅವನತಿ ತಡೆಯವುದು. ಕಮಲ ಹೂವಿನ ಬೇರನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಎಲ್ಲಾ ರೀತಿಯ ಕಣ್ಣಿನ ಮತ್ತು ಉರಿಯೂತದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದಾಗಿದೆ.

8. ತೂಕ ಸಮತೋಲನದಲ್ಲಿಡಲು

8. ತೂಕ ಸಮತೋಲನದಲ್ಲಿಡಲು

ಕಮಲ ಹೂವಿನ ಬೇರಿನಲ್ಲಿ ಉನ್ನತ ಮಟ್ಟದ ನಾರಿನಾಂಶ ಮತ್ತು ಪ್ರಮುಖ ಪೋಷಕಾಂಶಗಳು ಇವೆ. ಇದು ದೀರ್ಘಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು ಮತ್ತು ಪದೇ ಪದೇ ಹಸಿವಾಗುವುದನ್ನು ತಪ್ಪಿಸುವುದು. ಇದರಿಂದ ನಿಮ್ಮ ತೂಕ ಸಮತೋಲನದಲ್ಲಿ ಇರುವುದು ಮತ್ತು ಬೊಜ್ಜು ಬರುವುದನ್ನು ತಡೆಯುವುದು.

9. ಮೆದುಳಿನ ಆರೋಗ್ಯ ಕಾಪಾಡುವುದು

9. ಮೆದುಳಿನ ಆರೋಗ್ಯ ಕಾಪಾಡುವುದು

ಕಮಲ ಹೂವಿನ ಬೇರಿನಲ್ಲಿ ವಿಟಮಿನ್ ಬಿ6 ಇದೆ ಮತ್ತು ಇದು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ವ್ಯಕ್ತಿಯ ಮನಸ್ಥಿತಿ ಸಮತೋಲನದಲ್ಲಿಡಲು ನೆರವಾಗುವುದು. ಇದು ಒತ್ತಡ ಮತ್ತು ತಲೆನೋವನ್ನು ನಿಯಂತ್ರಣದಲ್ಲಿ ಇಡುವುದು.

10. ಕ್ಯಾನ್ಸರ್ ತಡೆಯಲು ನೆರವಾಗುವುದು

10. ಕ್ಯಾನ್ಸರ್ ತಡೆಯಲು ನೆರವಾಗುವುದು

ಕಮಲದ ಹೂವಿನ ಬೇರಿನಲ್ಲಿ ಇರುವಂತಹ ವಿಟಮಿನ್ ಸಿಯು ಡಿಎನ್ ಎ ರಚನೆ ಸಂರಕ್ಷಿಸಲು ನೆರವಾಗುವುದು ಮತ್ತು ಅಂಗಾಂಶಗಳು ಅಸಾಮಾನ್ಯಗೊಂಡು ಕ್ಯಾನ್ಸರ್ ಗೆ ಕಾರಣವಾಗುವುದನ್ನು ತಡೆಯುವುದು. ಕಮಲ ಹೂವಿನ ಬೇರನ್ನು ತಿಂದರೆ ಕ್ಯಾನ್ಸರ್ ತಡೆಯಬಹುದು. ಕಮಲ ಹೂವಿನ ಬೇರಿನ ಅಡ್ಡಪರಿಣಾಮಗಳು ಪ್ರತಿಯೊಂದು ವಸ್ತುವಿನಲ್ಲಿ ಒಳ್ಳೆಯದು ಹಾಗೂ ಕೆಟ್ಟ ಅಂಶಗಳು ಇದ್ದೇ ಇರುತ್ತದೆ. ಅದೇ ರೀತಿಯಾಗಿ ಕಮಲ ಹೂವಿನ ಬೇರಿನಲ್ಲಿ ಕೂಡ ಆರೋಗ್ಯವಾಗಿರಲು ಮತ್ತು ಫಿಟ್ ಇರಲು ಪ್ರಮುಖ ಪೋಷಕಾಂಶಗಳು ಇವೆ. ಅದಾಗ್ಯೂ, ಇದನ್ನು ಸಾಂಪ್ರದಾಯಿಕ ಔಷಧಿಗೆ ಬದಲಿಯಾಗಿ ಬಳಸಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದನ್ನು ಹಸಿಯಾಗಿ ತಿನ್ನಬಾರದು. ಯಾಕೆಂದರೆ ಇದರಲ್ಲಿ ಹಾನಿಕಾರಕ ಕೀಟಗಳು ಇರಬಹುದು.

ಆರೋಗ್ಯಕಾರಿ ಕಮಲ ಹೂವಿನ ಬೇರಿನ ಖಾದ್ಯ

ಆರೋಗ್ಯಕಾರಿ ಕಮಲ ಹೂವಿನ ಬೇರಿನ ಖಾದ್ಯ

ನಾಲ್ಕು ಮಂದಿಗೆ ಬಡಿಸಬಹುದು 500 ಗ್ರಾಂ ಕಮಲ ಹೂವಿನ ದಂಡು

ಸಾಮಾಗ್ರಿಗಳು

500 ಗ್ರಾಂ ಮೊಸರು

25 ಗ್ರಾಂ ಶುಂಠಿ ಹುಡಿ

50 ಗ್ರಾಂ ಜೀರಿಗೆ

5 ಗ್ರಾಂ ಹಿಂಗು

25 ಗ್ರಾಂ ಏಲಕ್ಕಿ ಹುಡಿ

100 ಗ್ರಾಂ ತುಪ್ಪ

1-2 ಕರಿಬೇವಿನ ಎಲೆಗಳು

ರುಚಿಗೆ ತಕ್ಕಷ್ಟು ಉಪ್ಪು

ವಿಧಾನ

ಕಮಲ ಹೂವಿನ ದಂಡನ್ನು ಅರ್ಧ ಮಾಡಿ ಕತ್ತರಿಸಿ ಮತ್ತು ಹತ್ತು ನಿಮಿಷ ಕಾಲ ನೀರಿಗೆ ಹಾಕಿ ಕುದಿಸಿ. ಇದರ ಬಳಿಕ ಎಲ್ಲಾ ಸಾಮಗ್ರಿಯನ್ನು ಬೇಯಿಸಿಕೊಂಡ ಕಮಲ ದಂಡಿನ ಜತೆಗೆ ತವಾಗೆ ಹಾಕಿ ಮತ್ತು ಸರಿಯಾಗಿ ತಿರುಗಿಸಿಕೊಂಡು ಕಲಸಿಕೊಳ್ಳಿ. ಇದು ದಪ್ಪವಾದ ಬಳಿಕ ಅದನ್ನು ತೆಗೆದು ಬಿಸಿಯಾಗಿರುವಾಗಲೇ ಅನ್ನದೊಂದಿಗೆ ಬಡಿಸಿ.

English summary

Lotus Root: Health Benefits, Nutrition And Recipe

Lotus root, also known as Kamal Kakdi, is the edible rhizome of Nelumbo nucifera plant, commonly known as Indian Lotus. The root is popularly used in cuisines of China, Korea, India, and Japan. Lotus root has great importance in Ayurveda as it is used in treating several diseases related to skin, stomach, lungs and others. Lotus root is high in fibre and low in calories. If consumed for long, it can help in maintaining our health due to the essential nutrients present in it. Let's take a look at its benefits, side effects, and a healthy lotus curry recipe which will surely entice your tastebuds.
X
Desktop Bottom Promotion