Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಥೈರಾಯ್ಡ್ ಸಮಸ್ಯೆ ಇರುವವರಿಗೆ ಈ ಆಹಾರಗಳು ಒಳ್ಳೆಯದು
ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಒಂದು ಸಾಮಾನ್ಯ ಸಮಸ್ಯೆವೆಂಬಂತೆ ಬಹುತೇಕ ಜನರಲ್ಲಿ ಕಂಡು ಬರುತ್ತಿದೆ. ಈ ಸಮಸ್ಯೆ 20ರ ಹರೆಯದವರಲ್ಲೂ ಕಂಡು ಬರುತ್ತಿದೆ. ಥೈರಾಯ್ಡ್ ಹಾರ್ಮೋನ್ ಸಮಸ್ಯೆ ಪುರುಷ ಹಾಗೂ ಮಹಿಳೆಯರಲ್ಲಿ ಕಂಡು ಬರುವುದಾದರೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.
ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ಥೈರಾಯ್ಡ್ ಸಮಸ್ಯೆ ಉಂಟಾಗುವುದು. ಥೈರಾಯ್ಡ್ ಹಾರ್ಮೋನ್‌ಗಳು ಅತ್ಯಧಿಕ ಉತ್ಪತ್ತಿಯಾದರೆ ಹೈಪರ್ ಥೈರಾಯ್ಡ್, ಥೈರಾಯ್ಡ್ ಹಾರ್ಮೋನ್‌ಗಳು ಅತಿ ಕಡಿಮೆ ಉಂಟಾದರೆ ಹೈಪೋ ಥೈರಾಯ್ಡ್ ಉಂಟಾಗುವುದು.
ಥೈರಾಯ್ಡ್ ಸಮಸ್ಯೆ ಇರುವವರು ಔಷಧ ತೆಗೆದುಕೊಳ್ಳುವುದರ ಜೊತೆಗೆ ಆಹಾರಕ್ರಮದ ಕಡೆ ಗಮನ ನೀಡಿದರೆ ಥೈರಾಯ್ಡ್ ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತದೆ. ಥೈರಾಯ್ಡ್ ಸಮಸ್ಯೆ ಇರುವವರಿಗೆ ಈ ಆಹಾರಗಳು ತುಂಬಾ ಒಳ್ಳೆಯದು.

ಕಾಡ್ ಫಿಶ್
ಮೀನಿನಲ್ಲಿ ಅಯೋಡಿಯನ್ ಅಂಶ ತುಂಬಾ ಚೆನ್ನಾಗಿರುತ್ತದೆ, ನಿಮ್ಮ ದೇಹಕ್ಕೆ ಪ್ರತಿನಿತ್ಯ ಅಗ್ಯತವಿರುವ ಅಯೋಡಿಯನ್ ಕಾಡ್ ಫಿಶ್ ಆಯಿಲ್ ಸಿಗುವುದು. ಮೀನಿನ ಆಹಾರ ಸೇವನೆ ನಿಮಗೆ ಆರೋಗ್ಯಕರವಾಗಿದೆ.

ಹಾಲಿನ ಉತ್ಪನ್ನಗಳು
ಹಾಲಿನ ಉತ್ಪನ್ನಗಳನ್ನು ಸೇವಿಸುವುದು ತುಂಬಾ ಒಳ್ಳೆಯದು. ಬೆಳಗ್ಗೆ ಎದ್ದ ಬಳಿಕ ನಿಮ್ಮ ದಿನವನ್ನು ಒಂದು ಕಪ್ ಯೋಗರ್ಟ್‌ನೊಂದಿಗೆ ಸ್ಟಾರ್ಟ್ ಮಾಡಿದರೆ ತುಂಬಾ ಒಳ್ಳೆಯದು.

ಸೀಗಡಿ
ಸೀಗಡಿ ಮೀನು ಕೂಡ ಥೈರಾಯ್ಡ್ ಸಮಸ್ಯೆ ಇರುವವರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ಸೆಲೆನಿಯಮ್, ರಂಜಕ ಮತ್ತು ವಿಟಮಿನ್ ಬಿ 12 ಪೋಷಕಾಂಶಗಳಿವೆ.

ಮೊಟ್ಟೆ
ಪ್ರತಿದಿನ ಒಂದು ಮೊಟ್ಟೆ ತಿನ್ನುವುದು ಒಳ್ಳೆಯದು. ಮೊಟ್ಟೆಯ ಬಿಳಿ ಮಾತ್ರ ಸೇವನೆ ಮಾಡಿದರೆ ಪ್ರಯೋಜನವಿಲ್ಲ. ಮೊಟ್ಟೆಯ ಹಳದಿ ಸಹಿತ ತಿನ್ನಿ.

ಅಯೋಡಿಯನ್‌ಯುಕ್ತ ಉಪ್ಪು
ನೀವು ಅಡುಗೆಗೆ ಅಯೋಡಿಯನ್‌ಯುಕ್ತ ಉಪ್ಪು ಬಳಸಿ. ಅಯೋಡಿಯನ್ ಇರುವ ಕಲ್ಲುಪ್ಪು ಅಥವಾ ಪುಡಿ ಉಪ್ಪು ಬಳಸಿ.

ಪ್ರೂನ್ಸ್ (ಒಣ ಪ್ಲಮ್)
ಪ್ರೂನ್ಸ್‌ನಲ್ಲಿ ನಾರಿನಂಶ ತುಂಬಾ ಚೆನ್ನಾಗಿದೆ. ದಿನಾ ಸ್ವಲ್ಪ ಪ್ರೂನ್ಸ್ ತಿಂದರೆ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ, ಮಲಬದ್ಧತೆ ಸಮಸ್ಯೆ ಇರಲ್ಲ. ಇದರಲ್ಲಿ ಕಬ್ಬಿಣದಂಶ, ವಿಟಮನ್ ಕೆ, ಪೊಟಾಷ್ಯಿಯಂ ಅಂಶವಿದೆ.

ಲಿವರ್
ಥೈರಾಯ್ಡ್ ಸಮಸ್ಯೆ ಇರುವವರು ಲಿವರ್ ಸೇವನೆ ಮಾಡುವುದು ಒಳ್ಳೆಯದು. ಮಾಂಸದಲ್ಲಿ ಇರುವುದಕ್ಕಿಂತ ಅಧಿಕ ಪೋಷಕಾಂಶ ಲಿವರ್‌ನಲ್ಲಿರುತ್ತದೆ. ಲಿವರ್‌ನಲ್ಲಿ ವಿಟಮಿನ್ ಬಿ, ಬಿ12, ಫೋಲೆಟ್, ಖನಿಜಾಂಶಗಳು, ಕಬ್ಬಿಣದಂಶ,ಸತು ಇವುಗಳು ಅಧಿಕವಿರುತ್ತದೆ.

ಬೆಣ್ಣೆ ಹಣ್ಣು
ಬೆಣ್ಣೆ ಹಣ್ಣು ಕೂಡ ಥೈರಾಯ್ಡ್ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು. ಬಾಳೆಹಣ್ಣು ಕೂಡ ಥೈರಾಯ್ಡ್ ಸಮಸ್ಯೆ ಇರುವವರಿಗೆ ಒಳ್ಳೆಯ ಆಹಾರವಾಗಿದೆ.

ಯಾವ ಆಹಾರಗಳು ಒಳ್ಳೆಯದಲ್ಲ
* ಸಂಸ್ಕರಿಸಿದ ಆಹಾರ ಪದಾರ್ಥಗಳು
* ಸೋಯಾ ಗೋಧಿ
* ಸಕ್ಕರೆಯಂಶ ಇರುವ ಆಹಾರ



Click it and Unblock the Notifications