For Quick Alerts
ALLOW NOTIFICATIONS  
For Daily Alerts

ಬಿಳಿ ಕಾಳುಮೆಣಸಿನಲ್ಲಿರುವ ಆರೋಗ್ಯಕರ ಗುಣಗಳಿವು

|

ನೀವು ಬಿಳಿ ಕಾಳು ಮೆಣಸು ಹಾಗೂ ಕಪ್ಪು ಕಾಳು ಮೆಣಸನ್ನು ಅಡುಗೆಗೆ ಬಳಸುತ್ತಾ ಇರಬಹುದು. ರೆಸ್ಟೂರೆಂಟ್‌ಗಳಲ್ಲಿ ಪಾಸ್ತಾ, ಮ್ಯಾಸ್‌ ಮಾಡಿ ಆಲೂಗಡ್ಡೆ, ಸಲಾಡ್‌ ಹೀಗೆ ತೆಳು ಬಣ್ಣದ ಅಡುಗೆಗೆ ಬಿಳಿ ಕಾಳು ಮೆಣಸನ್ನು ಬಳಸುತ್ತಾರೆ. ಬಿಳಿ ಬಣ್ಣದ ಹಾಗೂ ಕಪ್ಪು ಬಣ್ಣದ ಕಾಳು ಮಣಸು ಅಡುಗೆಗೆ ಹಾಕುವ ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುವುದರಿಂದ ನಮಗೆ ಯಾವ ರುಚಿ ಬೇಕೋ ಆ ರುಚಿಗೆ ತಕ್ಕ ಕಾಳು ಮೆಣಸಿನಲ್ಲಿ ಬಿಳಿ ಅಥವಾ ಕಪ್ಪು ಮೆಣಸನ್ನು ಬಳಸುತ್ತೇವೆ.

White Pepper

ಕಪ್ಪು ಹಾಗೂ ಬಿಳಿ ಮೆಣಸನ್ನು ತಯಾರಿಸುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಬಲಿತ ಕಾಳು ಮೆಣಸನ್ನು ಸಿಪ್ಪೆ ಸಹಿತ ಒಣಗಿಸಿದರೆ ಅದು ಕಪ್ಪು ಕಾಳು ಮೆಣಸು ಆಗುತ್ತದೆ, ಅದೇ ಸಿಪ್ಪೆ ಸುಲಿದು ಒಣಗಿಸಿದರೆ ಅದು ಬಿಳಿ ಕಾಳು ಮೆಣಸು ಆಗುತ್ತದೆ.

ಬಿಳಿ ಮೆಣಸನ್ನು ಮೊದಲು ಫ್ರೆಂಚ್‌ ಅಡುಗೆಗಳಲ್ಲಿ ಬಳಸಲಾಗುತ್ತಿತ್ತು, ನಂತರ ಚೈನೀಸ್‌ ಅಡುಗೆಗಳಲ್ಲಿ ಬಳಸುತ್ತಿದ್ದರು, ಇದೀಗ ಭಾರತೀಯರ ಅಡುಗೆಯಲ್ಲಿ ಕೂಡ ಬಿಳಿ ಮೆಣಸು ಬಳಸಲಾಗುವುದು. ಇಲ್ಲಿ ನಾವು ಬಿಳಿ ಕಾಳು ಮೆಣಸಿನಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕರ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

1.ನೋವು ಕಡಿಮೆ ಮಾಡುವಲ್ಲಿ ಸಹಕಾರಿ

1.ನೋವು ಕಡಿಮೆ ಮಾಡುವಲ್ಲಿ ಸಹಕಾರಿ

ಅಧ್ಯಯನ ಪ್ರಕಾರ ಬಿಳಿ ಕಾಳು ಮೆಣಸಿನಲ್ಲಿ ಫೀನೊಲಿಕ್ ಅಂಶ ಇರುವುದರಿಂದ ಉರಿಯೂತದ ವಿರುದ್ಧ ಕೆಲಸ ಮಾಡುತ್ತದೆ. ಇದು ದೇಹದಲ್ಲಿದ್ದ ನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಮೈ ಕೈ ನೋವು ಇದ್ದಾಗ ಸೂಪ್‌ಗೆ ಕಾಳು ಮೆಣಸಿನ ಪುಡಿ ಹಾಕಿ ಕುಡಿದರೆ ಒಳ್ಳೆಯದು.

ಸಂಧಿವಾತ, ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ

ಸಂಧಿವಾತ, ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ

2. ಸಂಧಿವಾತಕಡಿಮೆ ಮಾಡುತ್ತದೆ

ವಯಸ್ಸಾದಂತೆ ಕಾಡುವ ಸಂಧಿವಾತ ನೋವು ಕಡಿಮೆ ಮಾಡಲು ಅಡುಗೆಗೆ ಬಿಳಿ ಕಾಳು ಮೆಣಸು ಬಳಸುವುದು ಒಳ್ಳೆಯದು. ಇದರಲ್ಲಿರುವ ಉರಿಯೂತ ಕಡಿಮೆ ಮಾಡುವ ಗುಣ ಮಂಡಿ, ಮೊಣಕೈ, ಮೊಣಕಾಲು ಮುಂತಾದ ಕಡೆಗಳಲ್ಲಿ ಕಂಡು ಬರುವ ನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.

3. ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ

ದೇಹದಲ್ಲಿ ತಂಪು ಹೆಚ್ಚಾದಾಗ ಉಸಿರಾಟದ ತೊಂದರೆ ಹೆಚ್ಚಾಗುವುದು. ಉಸಿರಾಟದ ತೊಂದರೆ ಚಳಿಗಾಲ ಹಾಗೂ ಮಳೆಗಾಲದಲ್ಲಿ ಹೆಚ್ಚಾಗುವುದು. ಈ ಸಮಯದಲ್ಲಿ ಅಡುಗೆಯಲ್ಲಿ ಕಾಳು ಮೆಣಸು ಹಾಕಿ ಬಳಸುವುದರಿಂದ ಶೀತ, ಕೆಮ್ಮು, ಅಸ್ತಮಾ ಮುಂತಾದ ತೊಂದರೆ ಉಂಟಾಗದಂತೆ ತಡೆಯುತ್ತದೆ.

ತಲೆನೋವು, ರಕ್ತದೊತ್ತಡ ಕಡಿಮೆ ಮಾಡುತ್ತದೆ

ತಲೆನೋವು, ರಕ್ತದೊತ್ತಡ ಕಡಿಮೆ ಮಾಡುತ್ತದೆ

5. ತಲೆನೋವು ಕಡಿಮೆ ಮಾಡುತ್ತದೆ

ಈ ಸಂಬಾರ ಪದಾರ್ಥದಲ್ಲಿರುವ ಪೈಪರೈನ್‌ ಎಂಬ ಅಂಶ ತಲೆನೋವು ಹಾಗೂ ಮೈಗ್ರೇನ್ ನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

6. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಕಾಳು ಮೆಣಸಿನಲ್ಲಿರುವ ಪೈಪರೈನ್ ಹಾಗೂ ಫ್ಲೇವೋನಾಯ್ಡ್ ಅಂಶ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿಯಾಗಿದೆ.

ಮಾನಸಿಕ ಒತ್ತಡ, ಮಧುಮೇಹ ನಿಯಂತ್ರಿಸುತ್ತದೆ

ಮಾನಸಿಕ ಒತ್ತಡ, ಮಧುಮೇಹ ನಿಯಂತ್ರಿಸುತ್ತದೆ

7.ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.

8. ಮಧುಮೇಹಿಗಳಿಗೆ ಒಳ್ಳೆಯದು

ಅಡುಗೆಗೆ ಕಾಳು ಮೆಣಸು ಹಾಕಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

English summary

Health Benefits Of White Pepper

white pepper is prepared by removing the outer cover of the seed before or after drying. Here we have discussed health benefits of white pepper, take a look.
X
Desktop Bottom Promotion