For Quick Alerts
ALLOW NOTIFICATIONS  
For Daily Alerts

ಹಸಿ ಸೋಯಾ ಬೀನ್‌ ತಿಂದರೆ ಸಿಗುವುದು ಈ 8 ಆರೋಗ್ಯ ಲಾಭ

|

ನೀವು ಹಸಿ ಸೋಯಾಬೀನ್‌ ರುಚಿ ನೋಡಿದ್ದೀರಾ? ಉತ್ತರ ಭಾರತದ ಕಡೆ ಇದನ್ನು ಹೆಚ್ಚಾಗಿ ಬೆಳೆಯಲಾಗುವುದು. ಇದನ್ನು ಪಲ್ಯ ಮಾಡುತ್ತಾರೆ, ಸಾರು ಕೂಡ ಕೂಡ ಮಾಡಬಹುದು. ಪ್ರೊಟೀನ್ ಅತ್ಯಧಿಕವಿರುವ ಈ ಬೀನ್ಸ್‌ನಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲಿ ಹಸಿ ಸೋಯಾಬೀನ್‌ನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ.

Green Soy Bean Benefits

ಹಸಿ ಸೋಯಾಬೀನ್‌ನಲ್ಲಿರುವ ಪೋಷಕಾಂಶಗಳು

100ಗ್ರಾಂ ಸೋಯಾಬೀನ್‌ನಲ್ಲಿ 129 ಕ್ಯಾಲೋರಿ ಶಕ್ತಿ, 75.2ಗ್ರಾಂ ನೀರು ಇದ್ದು

* 4.12ಗ್ರಾಂ ಕೊಬ್ಬಿನಂಶ
* 9.41ಗ್ರಾಂ ಪ್ರೊಟೀನ್
* 14.12ಗ್ರಾಂ ಕಾರ್ಬೋಹೈಡ್ರೇಟ್
* 5.9ಗ್ರಾಂ ನಾರಿನಂಶ
* 2.35ಗ್ರಾಂ ಸಕ್ಕರೆಯಂಶ
* 94ಮಿಗ್ರಾಂ ಕ್ಯಾಲ್ಸಿಯಂ
* 3.18ಮಿಗ್ರಾಂ ಕಬ್ಬಿಣದಂಶ
* 7.1ಮಿಗ್ರಾಂ ವಿಟಮಿನ್ ಸಿ
* ವಿಟಮಿನ್ ಎ

ಹಸಿ ಸೋಯಾಬೀನ್‌ನಲ್ಲಿರುವ ಆರೋಗ್ಯವರ್ಧಕ ಗುಣಗಳು

1. ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಇದರಲ್ಲಿ ನಾರಿನಂಶ ಇರುವುದರಿಂದ ದೇಹದಲ್ಲಿ ಬೇಡದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಪ್ರತಿದಿನ 47ಗ್ರಾಂನಷ್ಟು ಸೋಯಾ ಪ್ರೊಟೀನ್ ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ಶೇ. 9.3ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಯು ಹೇಳಿದೆ.

2. ಮಧುಮೇಹ ನಿಯಂತ್ರಿಸುತ್ತದೆ

ಇದನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಅಧಿಕವಾಗುವುದಿಲ್ಲ, ಅಲ್ಲದೆ ಇದರಲ್ಲಿ ಗ್ಲೈಸೆಮಿಕ್‌ ಇಂಡೆಕ್ಸ್ ಕಡಿಮೆ ಇರುವುದರಿಂದ ಮಧುಮೇಹಿಗಳು ಇದನ್ನು ತಿಂದರೆ ಒಳ್ಳೆಯದು.

3. ತೂಕ ಇಳಿಕೆಯಲ್ಲಿ ಸಹಕಾರಿ

ಸೋಯಾಬೀನ್‌ನಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ತೂಕ ಇಳಿಕೆಗೆ ಪ್ರಮುಖವಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು. ಅಲ್ಲದೆ ಈ ಬೀನ್‌ ತಿನ್ನುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ. ಇದರಿಂದ ತೂಕ ಇಳಿಕೆಯಲ್ಲಿ ಸಹಕಾರಿ.

4. ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ

ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವಲ್ಲಿ ಈ ರೀತಿಯ ಆರೋಗ್ಯಕರ ಆಹಾರಗಳು ತುಂಬಾ ಸಹಕಾರಿಯಾಗಿವೆ. ಅಗ್ರಿಕಲ್ಚರ್ ಅಂಡ್‌ ಫುಡ್‌ ಕೆಮಿಸ್ಟ್ರಿ ಎಂಬ ಜರ್ನಲ್ ಸೋಯಾಬೀನ್‌ನಲ್ಲಿ ಜೆನಿಸ್ಟೈನ್ ಆ್ಯಂಟಿಆಕ್ಸಿಡೆಂಟ್‌ ಅಂಶವಿರುವುದರಿಂದ ಸ್ತನ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಎಂದು ಹೇಳಿದೆ.

5. ನರ ಸಂಬಂಧಿತ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ

ಮೆನೋಪಾಸ್‌ ನಂತರ ಕಾಡುವ ಅರಳು-ಮರಳು ಸಮಸ್ಯೆ ತಡೆಗಟ್ಟುವಲ್ಲಿ ಇದು ಸಹಕಾರಿ. 2015ರಲ್ಲಿ ನಡೆಸಿದ ಅಧ್ಯಯನದಲ್ಲಿ ಐಸೋಫ್ಲೇವನ್ಸ್ ವಯಸ್ಸಾಗುತ್ತಿದ್ದಂತೆ ಕೆಲವರಲ್ಲಿ ಕಾಣಿಸುವ ಅರಳು ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿ ಎಂದಿದೆ. ಹಸಿ ಸೋಯಾ ಬೀನ್‌ ತಿನ್ನುವುದರಿಂದ ಐಸೋಫ್ಲೇವನ್ಸ್ ದೊರೆಯುತ್ತದೆ.

6. ಶಕ್ತಿ ದೊರೆಯುತ್ತದೆ

ಇದರಲ್ಲಿ ಅಮೈನೋ ಆಮ್ಲ ಹಾಗೂ ಪ್ರೊಟೀನ್ ಇರುವುದರಿಂದ ಇದನ್ನು ತಿನ್ನುವುದರಿಂದ ದೇಹದಲ್ಲಿ ಹಾನಿಗೊಳಗಾದ ನರಗಳನ್ನು ಸರಿಪಡಿಸುವಲ್ಲಿ ಸಹಕಾರಿ. ಅಲ್ಲದೆ ಪ್ರೊಟೀನ್‌ ದೇಹವನ್ನು ಸೇರಿದಾಗ ಶಕ್ತಿಯಾಗಿ ಪರಿವರ್ತನೆಯಾಗುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ.

7. ಮೆನೋಪಾಸ್‌ ಸಮಯದಲ್ಲಿ ಒಳ್ಳೆಯದು

ಮೆನೋಪಾಸ್‌ ಸಮಯದಲ್ಲಿ ತುಂಬಾ ಸೆಕೆಯಾಗುವುದು, ಖಿನ್ನತೆ, ತಲೆಸುತ್ತು ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಹಜ. ಆರೋಗ್ಯಕರವಾದ ಆಹಾರಶೈಲಿಯಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಸೋಯಾಬೀನ್‌ ಆಹಾರವನ್ನು ಮೆನೋಪಾಸ್‌ ಸಮಯದಲ್ಲಿ ತಿನ್ನುವುದು ಒಳ್ಳೆಯದು.

8. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ಇದರಲ್ಲಿ ವಿಟಮಿನ್ ಎ ಅಂಶವಿದ್ದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ವಯಸ್ಸಾಗುತ್ತದ್ದಂತೆ ಕೆಲವರಲ್ಲಿ ದೃಷ್ಟಿದೋಷದ ಸಮಸ್ಯೆ ಉಂಟಾಗುತ್ತದೆ. ವಿಟಮಿನ್ ಎ ಇರುವ ಆಹಾರವನ್ನು ಆಹಾರಕ್ರಮದಲ್ಲಿ ಸೇರಿಸಿ ಕಣ್ಣಿನ ಆರೋಗ್ಯ ಕಾಪಾಡಬಹುದು.

English summary

green soy bean health benefits

Soy beans are a good source of many nutrients, antioxidants, low in calories, contains no cholesterol and are naturally gluten-free. They are available fresh or frozen in pods, then shelled and eaten boiled or added to stir-fries, soups or salads.
X
Desktop Bottom Promotion