For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆ ಮಾಡುವ ಅಂಶೀಕರಿಸಿದ ಕೊಬ್ಬರಿ ಎಣ್ಣೆ

|

ಕೊಬ್ಬರಿ ಎಣ್ಣೆ ಅತ್ಯುತ್ತಮ ಆರೋಗ್ಯಕರ ಎಣ್ಣೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದರ ಒಳ್ಳೆಯ ಗುಣಗಳನ್ನು ಕ್ರೋಢೀಕರಿಸಿ ಬೇಡದ ಅಂಶಗಳನ್ನು ನಿವಾರಿಸಿದರೆ ಸಿಗುವುದೇ ಅಂಶೀಕರಿಸಿದ ಕೊಬ್ಬರಿ ಎಣ್ಣೆ (Fractionated Coconut Oil). ಈ ಎಣ್ಣೆಯನ್ನು ಸಾಮಾನ್ಯ ಕೊಬ್ಬರಿ ಎಣ್ಣೆಯಿಂದಲೇ ತಯಾರಿಸಲಾಗುತ್ತದೆ.

ಸಾಮಾನ್ಯ ಮತ್ತು ಅಂಶೀಕರಿಸಿದ, ಈ ಎರಡೂ ಕೊಬ್ಬರಿ ಎಣ್ಣೆಗಳು ಮಧ್ಯಮ-ಸರಪಳಿ ಟ್ರೈಗ್ಲಿಸರೈಡ್‌ಗಳ (medium-chain triglycerides-MCT) ಉತ್ತಮ ಮೂಲಗಳಾಗಿವೆ, ಇದು 6 ರಿಂದ 12 ಇಂಗಾಲದ ಪರಮಾಣುಗಳನ್ನು ಹೊಂದಿರುವ ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ.

ಆದರೂ, ಇವೆರಡೂ ಎಣ್ಣೆಗಳ ಕೊಬ್ಬಿನಾಮ್ಲಗಳ ಸಂಯೋಜನೆಯು ಪರಸ್ಪರ ಭಿನ್ನವಾಗಿವೆ.

ಕೊಬ್ಬರಿ ಎಣ್ಣೆಯಲ್ಲಿನ ಮುಖ್ಯ ಕೊಬ್ಬಿನಾಮ್ಲವು 12-ಕಾರ್ಬನ್ ಲಾರಿಕ್ ಆಮ್ಲ (12-carbon lauric acid (C12)) ಆಗಿದ್ದರೆ, ಈ ಕೊಬ್ಬಿನಾಮ್ಲವನ್ನು ಬಹುತೇಕ ಅಥವಾ ಪರಿಪೂರ್ಣವಾಗಿ ಅಂಶೀಕರಿಸಿದ ಕೊಬ್ಬರಿ ಎಣ್ಣೆಯಿಂದ ತೆಗೆದುಹಾಕಲಾಗುತ್ತದೆ.

ಕೊಬ್ಬರಿ ಎಣ್ಣೆಯಲ್ಲಿರುವ ಉದ್ದ-ಸರಪಳಿಯ ಕೊಬ್ಬಿನಾಮ್ಲಗಳನ್ನು (long-chain fatty acids) ಸಹ ತೆಗೆದುಹಾಕಲಾಗುತ್ತದೆ. ಹೀಗಾಗಿ, ಅಂಶೀಕರಿಸಿದ ಕೊಬ್ಬರಿ ಎಣ್ಣೆಯಲ್ಲಿರುವ ಮುಖ್ಯ ಮಧ್ಯಮ-ಸರಪಳಿ ಕೊಬ್ಬಿನಾಮ್ಲಗಳು (medium-chain fatty acids (MCFAs)) ಎಂದರೆ:

ಸಿ 8: ಕ್ಯಾಪ್ರಿಲಿಕ್ ಆಮ್ಲ ಅಥವಾ ಆಕ್ಟಾನೊಯಿಕ್ ಆಮ್ಲ
ಸಿ 10: ಕ್ಯಾಪ್ರಿಕ್ ಆಮ್ಲ ಅಥವಾ ಡೆಕಾನೊಯಿಕ್ ಆಮ್ಲ
ಎಂಸಿಎಫ್‌ಎಗಳು ಇತರ ಕೊಬ್ಬುಗಳಿಗಿಂತ ವಿಭಿನ್ನವಾಗಿ ಜೀವ ರಾಸಾಯನಿಕ ಕ್ರಿಯೆಗೆ ಒಳಪಡುತ್ತವೆ.

ಅವುಗಳನ್ನು ಜೀರ್ಣಾಂಗದಿಂದ ನೇರವಾಗಿ ಯಕೃತ್ತಿಗೆ ಸಾಗಿಸಲಾಗುತ್ತದೆ, ಅಲ್ಲಿ ಅವುಗಳನ್ನು ತ್ವರಿತ ಶಕ್ತಿಯ ಮೂಲವಾಗಿ ಬಳಸಬಹುದು. ಅವುಗಳನ್ನು ಕೀಟೋನ್ ಅಂಶಗಳಾಗಿಯೂ ಪರಿವರ್ತಿಸಬಹುದು, ಇವು ಅಪಸ್ಮಾರ ಇರುವವರಲ್ಲಿ ಚಿಕಿತ್ಸಕ ಪರಿಣಾಮಗಳನ್ನು ಉಂಟುಮಾಡುವ ಸಂಯುಕ್ತಗಳಾಗಿವೆ.

ಅಂಶೀಕರಿಸಿದ ಕೊಬ್ಬರಿ ಎಣ್ಣೆಯಲ್ಲಿ ಯಾವುದೇ ರುಚಿ, ಪರಿಮಳ ಮತ್ತು ಜಿಗುಟುತನ ಇರುವುದಿಲ್ಲ ಮತ್ತು ಸಾಮಾನ್ಯವಾಗಿ ಸಾಮಾನ್ಯ ಕೊಬ್ಬರಿ ಎಣ್ಣೆಗಿಂತಲೂ ಹೆಚ್ಚು ದುಬಾರಿ.
ಇದು ಮಧ್ಯಮ-ಸರಪಳಿ ಕೊಬ್ಬಿನಾಮ್ಲಗಳಿರುವ (medium-chain triglycerides-MCT) ಎಣ್ಣೆಯನ್ನೇ ಹೋಲುತ್ತದೆ ಅಥವಾ ಆ ಎಣ್ಣೆಯಂತೆಯೇ ಕಾಣಬಹುದು.

 ಅಂಶೀಕರಿಸಿದ ಕೊಬ್ಬರಿ ಎಣ್ಣೆಯನ್ನು ಹೇಗೆ ತಯಾರಿಸಲಾಗುತ್ತದೆ?

ಅಂಶೀಕರಿಸಿದ ಕೊಬ್ಬರಿ ಎಣ್ಣೆಯನ್ನು ಹೇಗೆ ತಯಾರಿಸಲಾಗುತ್ತದೆ?

ಅಂಶೀಕರಣ (fractionation) ಎಂಬ ಪ್ರಕ್ರಿಯೆಯ ಮೂಲಕ ಅಂಶೀಕರಿಸಿದ ಕೊಬ್ಬರಿ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ.

ಕೆಲವು ಎಣ್ಣೆಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ವಿವಿಧ ರೀತಿಯ ಕೊಬ್ಬುಗಳನ್ನು ಬೇರ್ಪಡಿಸಲು ಅಂಶೀಕರಣವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಒಂದೇ ಉತ್ಪನ್ನದಿಂದ ಗ್ರಾಹಕರಿಗೆ ವಿವಿಧ ವೈವಿಧ್ಯತೆಯನ್ನು ನೀಡಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಪ್ರತಿ ದ್ರವದ ಕುದಿಯುವ ತಾಪಮಾನ ಬೇರೆ ಬೇರೆಯೇ ಇರುವಂತೆ ಕೊಬ್ಬುಗಳ ಕರಗುವ ಅಥವಾ ಕುದಿಯುವ ತಾಪಮಾನಗಳೂ ಬೇರೆ ಬೇರೆಯಾಗಿಯೇ ಇರುತ್ತವೆ. ಈ ಗುಣವನ್ನು ಬಳಸಿ ವಿವಿಧ ತಾಪಮಾನಗಳಲ್ಲಿ ಈ ಕೊಬ್ಬುಗಳನ್ನು ಕರಗಿಸುವ ಮೂಲಕ ಪ್ರತ್ಯೇಕಿಸಲು ಸಾಧ್ಯವಾಗುತ್ತದೆ.

ಉದಾಹರಣೆಗೆ, ಲಾರಿಕ್ ಆಮ್ಲ ಮತ್ತು ಉದ್ದ-ಸರಪಳಿಯ ಕೊಬ್ಬಿನಾಮ್ಲಗಳು ಕ್ಯಾಪ್ರಿಲಿಕ್ ಆಮ್ಲ ಮತ್ತು ಕ್ಯಾಪ್ರಿಕ್ ಆಮ್ಲಕ್ಕಿಂತ ಹೆಚ್ಚಿನ ಕರಗುವ ಬಿಂದುಗಳನ್ನು ಹೊಂದಿರುತ್ತವೆ. ಆದ್ದರಿಂದ, ತಣ್ಣಗಾದಾಗ ಅವು ಬೇಗನೇ ಗಟ್ಟಿಯಾಗುತ್ತವೆ.

ಕೊಬ್ಬರಿ ಎಣ್ಣೆಯ ಭಿನ್ನರಾಶಿಯನ್ನು ಅದರ ಕರಗುವ ಬಿಂದುವಿನ ಮೇಲೆ ಎಣ್ಣೆಯನ್ನು ಬಿಸಿ ಮಾಡುವ ಮೂಲಕ ನಡೆಸಲಾಗುತ್ತದೆ. ನಂತರ, ಅದನ್ನು ತಣ್ಣಗಾಗಲು ಬಿಡಲಾಗುತ್ತದೆ, ಮತ್ತು ಗಟ್ಟಿಯಾಗಿದ್ದ ಎಣ್ಣೆಯ ಭಾಗವನ್ನು ದ್ರವದಿಂದ ಬೇರ್ಪಡಿಸಲಾಗುತ್ತದೆ.

ಈ ಕ್ರಿಯೆಯನ್ನೇ ಅಂಶೀಕರಣ ಎಂದು ಕರೆಯಲಾಗುತ್ತದೆ. ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವಾರು ಗಂಟೆಗಳೇ ಬೇಕಾಗಬಹುದು.

ಅಂಶೀಕರಿಸಿದ ಕೊಬ್ಬರಿ ಎಣ್ಣೆಯಿಂದ ತೂಕ ಇಳಿಕೆ

ಅಂಶೀಕರಿಸಿದ ಕೊಬ್ಬರಿ ಎಣ್ಣೆಯಿಂದ ತೂಕ ಇಳಿಕೆ

ಅಂಶೀಕರಿಸಿದ ಕೊಬ್ಬರಿ ಎಣ್ಣೆ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ:

ಅಂಶೀಕರಿಸಿದ ಕೊಬ್ಬರಿ ಎಣ್ಣೆಯ ಮುಖ್ಯ ಅಂಶವಾದ ಎಂಸಿಟಿಗಳಲ್ಲಿ ಹೆಚ್ಚಿನ ಆಹಾರವು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಈ ಪರಿಣಾಮವನ್ನೇ ಆಧರಿಸಿ ಆಹಾರದಲ್ಲಿನ ಇತರ ಕೊಬ್ಬನ್ನು ಎಂಸಿಟಿಗಳೊಂದಿಗೆ ಬದಲಾಯಿಸುವ ಮೂಲಕ ತೂಕ ಇಳಿಕೆ ಎಷ್ಟು ಫಲಪ್ರದವಾಗುತ್ತದೆ ಎಂಬ ವಿಷಯವನ್ನು ಆಧರಿಸಿ ಸಂಶೋಧನೆಗಳು ಪ್ರಗತಿಯಲ್ಲಿವೆ.

ಎಂಸಿಟಿಗಳು ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡಬಹುದು. ಹೇಗೆ? ಅವುಗಳ ಗುಣಗಳಿಂದ ಪಡೆಯಬಹುದಾದ ಪರಿಣಾಮಗಳನ್ನು ನೋಡೋಣ:

ಇವು ಹಸಿವು ಮತ್ತು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಇವು ಹೆಚ್ಚು ಕೊಬ್ಬು ಮತ್ತು ಕ್ಯಾಲೊರಿಗಳನ್ನುಬಳಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ

ದೇಹದಲ್ಲಿ ಕೊಬ್ಬಿನಂತೆ ಸಂಗ್ರಹಿಸಲ್ಪಡುವ ಸಾಧ್ಯತೆ ಕಡಿಮೆ ಇರುತ್ತದೆ.

ಆದರೂ, ಈ ಕ್ರಮದಿಂದ ಇಳಿಯುವ ತೂಕ ಸಾಮಾನ್ಯವಾಗಿ ಅಲ್ಪವೇ ಆಗಿರುತ್ತದೆ. ಆದರೆ ಯಾವುದೇ ಅಡ್ಡಪರಿಣಾಮವಿಲ್ಲದ, ಮತ್ತು ಆರೋಗ್ಯವನ್ನು ಬಾಧಿಸದ ಕ್ರಮವಾಗಿದೆ.

ಕಳೆದುಹೋದ ತೂಕದ ಪ್ರಮಾಣವು ಸಾಮಾನ್ಯವಾಗಿ ಸಾಕಷ್ಟು ಸಾಧಾರಣವಾಗಿರುತ್ತದೆ.

13 ಅಧ್ಯಯನಗಳ ಒಂದು ಪರಿಶೀಲನೆಯ ಪ್ರಕಾರ ಇತರ ಕೊಬ್ಬುಗಳಿಗೆ ಹೋಲಿಸಿದರೆ ಎಂಸಿಟಿಗಳು ಮೂರು ವಾರಗಳಲ್ಲಿ ದೇಹದ ತೂಕವನ್ನು ಸರಾಸರಿ 1.1 ಪೌಂಡ್ (0.5 ಕೆಜಿ) ಕಡಿಮೆ ಮಾಡಿವೆ ಎಂದು ಕಂಡುಹಿಡಿದಿದೆ.

ಈ ಅಧ್ಯಯನಕ್ಕೆ ವ್ಯಯಿಸಲಾದ ವೆಚ್ಚದಲ್ಲಿ ಅರ್ಧದಷ್ಟನ್ನು ಎಂಸಿಟಿ ತೈಲ ಉತ್ಪಾದಕರು ಭರಿಸಿದ್ದಾರೆ , ಆದ್ದರಿಂದ, ಏಕಪಕ್ಷೀಯ ಫಲಿತಾಂಶ ಬರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಇತರ ಸಂಭಾವ್ಯ ಆರೋಗ್ಯಕರ ಪ್ರಯೋಜನಗಳು

ಇತರ ಸಂಭಾವ್ಯ ಆರೋಗ್ಯಕರ ಪ್ರಯೋಜನಗಳು

ಅಂಶೀಕರಿಸಿದ ಕೊಬ್ಬರಿ ಎಣ್ಣೆಯಲ್ಲಿನ ಎಂಸಿಟಿಗಳು ಹಲವಾರು ಇತರ ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿವೆ, ಅವುಗಳೆಂದರೆ:

ಕಡಿಮೆಯಾದ ಇನ್ಸುಲಿನ್ ಪ್ರತಿರೋಧ: ಎಂಸಿಟಿಗಳನ್ನು ಸೇವಿಸುವ ಮೂಲಕ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಬಹುದು ಮತ್ತು ಮಧುಮೇಹ ಮತ್ತು ಹೆಚ್ಚಿನ ತೂಕ ಹೊಂದಿರುವ ವ್ಯಕ್ತಿಗಳಲ್ಲಿ ಇತರ ಅಪಾಯಕಾರಿ ಅಂಶಗಳನ್ನು ಸುಧಾರಿಸಬಹುದು ಎಂದು ಒಂದು ಸಣ್ಣ ಅಧ್ಯಯನವು ಕಂಡುಹಿಡಿದಿದೆ. ಈ ಪರಿಣಾಮವನ್ನು ದೃಢೀಕರಿಸಲು ಹೆಚ್ಚಿನ ಅಧ್ಯಯನಗಳನ್ನು ನಡೆಸಿ ಪ್ರಮಾಣಿಸಬೇಕಾಗಿದೆ.

ಅಪಸ್ಮಾರಕ್ಕೆ ಚಿಕಿತ್ಸೆ:

ಅಪಸ್ಮಾರಕ್ಕೆ ಚಿಕಿತ್ಸೆ:

ಅಪಸ್ಮಾರ ಹೊಂದಿರುವ ಮಕ್ಕಳು ಎಂಸಿಟಿಗಳಿಂದ ಸಮೃದ್ಧವಾಗಿರುವ ಕೀಟೋಜೆನಿಕ್ ಆಹಾರಕ್ರಮ (ಕೀಟೋ ಆಹಾರಕ್ರಮ)ದಿಂದ ಪ್ರಯೋಜನ ಪಡೆಯಬಹುದು. ಎಂಸಿಟಿಗಳನ್ನು ಸೇರಿಸುವುದರಿಂದ ಅವರಿಗೆ ಹೆಚ್ಚಿನ ಕಾರ್ಬೋಹೈಡ್ರೇಟುಗಳು ಮತ್ತು ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸುವ ಅವಕಾಶವಿದೆ, ಇದರಿಂದಾಗಿ ಈ ವ್ಯಕ್ತಿಗಳಿಗೂ ತಮಗೆ ಇಷ್ಟವಾದ ಆಹಾರವನ್ನು ಸೇವಿಸಲು ಸಾಧ್ಯವಾಗುತ್ತದೆ.

ಸುಧಾರಿತ ಮೆದುಳಿನ ಕಾರ್ಯ: ಆರಂಭಿಕ ದಿಂದ ಮಧ್ಯಮ ಮಟ್ಟದ ಆಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ಕೆಲವು ಜನರಲ್ಲಿ, ಎಂಸಿಟಿಗಳು ಮೆದುಳಿನ ಕಾರ್ಯವನ್ನು ಸುಧಾರಿಸಬಹುದು ಎಂದು ಒಂದು ಅಧ್ಯಯನ ವರದಿ ಮಾಡಿದೆ. ಆದರೂ ಈ ವಿಷಯವನ್ನು ದೃಢೀಕರಿಸಲು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ (14Trusted Source).

ಅಂಶೀಕರಿಸಿದ ಕೊಬ್ಬರಿ ಎಣ್ಣೆಗಳಲ್ಲಿ ಲಾರಿಕ್ ಆಮ್ಲ ಇರುವುದೇ ಇಲ್ಲ

ಅಂಶೀಕರಿಸಿದ ಕೊಬ್ಬರಿ ಎಣ್ಣೆಗಳಲ್ಲಿ ಲಾರಿಕ್ ಆಮ್ಲ ಇರುವುದೇ ಇಲ್ಲ

ಲಾರಿಕ್ ಆಮ್ಲ ಕೊಬ್ಬರಿ ಎಣ್ಣೆಯ ಪ್ರಮುಖ ಅಂಶವಾಗಿದೆ. ವಾಸ್ತವವಾಗಿ, ತೈಲದಲ್ಲಿ ಸುಮಾರು 50% ಲಾರಿಕ್ ಆಮ್ಲವನ್ನು ಹೊಂದಿರುತ್ತದೆ ಮತ್ತು ಈ ಸಂತೃಪ್ತ ಕೊಬ್ಬಿನಿಂದ ಸಮೃದ್ಧವಾಗಿರುವ ಆಹಾರ ಮೂಲಗಳಲ್ಲಿ ಒಂದಾಗಿದೆ.

ಲಾರಿಕ್ ಆಮ್ಲದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ವಿವಿಧ ಬಗೆಯ ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳನ್ನು ಕೊಲ್ಲುವ ಮೂಲಕ ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ. (15, 16Trusted Source, 17Trusted Source).

ಹೆಚ್ಚಿನ ಅಂಶೀಕರಿಸಿದ ಕೊಬ್ಬರಿ ಎಣ್ಣೆಗಳಲ್ಲಿ ಯಾವುದೇ ಲಾರಿಕ್ ಆಮ್ಲ ಇರುವುದಿಲ್ಲ, ಅಥವಾ ಬಹಳ ಕಡಿಮೆ ಪ್ರಮಾಣದಲ್ಲಿರುತ್ತವೆ.

ಆದ್ದರಿಂದ, ಅಂಶೀಕರಿಸಿದ ಕೊಬ್ಬರಿ ಎಣ್ಣೆಯಿಂದ ಸಾಮಾನ್ಯ ಕೊಬ್ಬರಿ ಎಣ್ಣೆಯಿಂದ ಲಭಿಸುವ ಎಲ್ಲಾ ಆರೋಗ್ಯಕರ ಪರಿಣಾಮಗಳನ್ನು ಪಡೆಯಲು ಸಾಧ್ಯವಿಲ್ಲ.

ಸಾರಾಂಶ

ಅಂಶೀಕರಿಸಿದ ಕೊಬ್ಬರಿ ಎಣ್ಣೆ ಸಾಮಾನ್ಯ ತಾಪಮಾನದಲ್ಲಿಯೂ ನೀರಿನಂತೆ ದ್ರವ ರೂಪದಲ್ಲಿ ಉಳಿಯಲು ಸಾಧ್ಯವಾಗುತ್ತದೆ ಏಕೆಂದರೆ ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲವನ್ನು ತೆಗೆದುಹಾಕಲಾಗಿರುತ್ತದೆ. ಹೀಗಾಗಿ, ಅಂಶೀಕರಿಸಿದ ಕೊಬ್ಬರಿ ಎಣ್ಣೆಯಿಂದ ಲಾರಿಕ್ ಆಮ್ಲದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಅಂಶೀಕರಿಸಿದ ಕೊಬ್ಬರಿ ಎಣ್ಣೆಯನ್ನು ಹೇಗೆ ಬಳಸಬಹುದು?

ಅಂಶೀಕರಿಸಿದ ಕೊಬ್ಬರಿ ಎಣ್ಣೆಯನ್ನು ಹೇಗೆ ಬಳಸಬಹುದು?

ಅಂಶೀಕರಿಸಿದ ಕೊಬ್ಬರಿ ಎಣ್ಣೆಯನ್ನು ಮೂರು ವಿಭಿನ್ನ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ:

ಅಂಶೀಕರಿಸಿದ ಕೊಬ್ಬರಿ ಎಣ್ಣೆ: ಈ ಎಣ್ಣೆಯನ್ನು ಮುಖ್ಯವಾಗಿ ಮನೆಯ ಸಾಮಾನ್ಯ ಅಗತ್ಯ ಮತ್ತು ವೈಯಕ್ತಿಕ ಆರೈಕೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಉದಾಹರಣೆಗೆ ಮಾಯಿಶ್ಚರೈಸರ್, ಹೇರ್ ಕಂಡಿಷನರ್ ಮತ್ತು ಮಸಾಜ್ ಎಣ್ಣೆ.

ಎಂಸಿಟಿ ಎಣ್ಣೆ(MCT oil): ಇದನ್ನು ಹೆಚ್ಚಾಗಿ ಆಹಾರ ಪೂರಕವಾಗಿ ಬಳಸಲಾಗುತ್ತದೆ, ದಿನಕ್ಕೆ 1-3 ಚಮಚ ಸೇವಿಸುವಂತೆ ಸಾಮಾನ್ಯವಾಗಿ ಸಲಹೆ ಮಾಡಲಾಗುತ್ತದೆ.

ದ್ರವರೂಪದ ಕೊಬ್ಬರಿ ಎಣ್ಣೆ: ಈ ಎಣ್ಣೆಯನ್ನು ಅಡುಗೆ ಮಾಡಲು ಬಳಸಬಹುದೆಂದು ಪ್ರಚಾರ ಮಾಡಲಾಗುತ್ತಿದೆ.

ಮೂರು ಬಿನ್ನ ಹೆಸರುಗಳಲ್ಲಿ ಮಾರಾಟವಾಗುತ್ತಿದ್ದರೂ, ಅಂತಿಮವಾಗಿ, ಇವು ಒಂದೇ ಉತ್ಪನ್ನವಾಗಿದ್ದು ಗ್ರಾಹಕರ ವಿವಿಧ ಬೇಡಿಗೆಗಳಿಗೆ ಅನುಸಾರವಾಗಿ ಆಯ್ದುಕೊಳ್ಳಬಹುದು. ಈ ಉತ್ಪನ್ನಗಳನ್ನು ಅಡುಗೆ ಮತ್ತು ತ್ವಚೆಯ ಆರೈಕೆಗಾಗಿ ಬಳಸಬಹುದು.

ಸುರಕ್ಷತೆ ಮತ್ತು ಅಡ್ಡಪರಿಣಾಮಗಳು

ಸುರಕ್ಷತೆ ಮತ್ತು ಅಡ್ಡಪರಿಣಾಮಗಳು

ಅಂಶೀಕರಿಸಿದ ಕೊಬ್ಬರಿ ಎಣ್ಣೆಯನ್ನು ಸೇವಿಸುವುವುದು ಬಹುತೇಕ ಎಲ್ಲಾ ವ್ಯಕ್ತಿಗಳಿಗೆ ಜನರಿಗೆ ಸುರಕ್ಷಿತವಾಗಿದೆ.

ಆದರೂ, ಕೆಲವು ಜನರಲ್ಲಿ ಜೀರ್ಣಕಾರಿ ತೊಂದರೆಗಳು ಎದುರಾಗಿವೆ ಎಂಬ ವರದಿಗಳು ಬಂದಿವೆ.

ಇವುಗಳಲ್ಲಿ ಹೊಟ್ಟೆಯ ಸೆಡೆತ, ಅತಿಸಾರ ಮತ್ತು ವಾಂತಿ ಪ್ರಮುಖ ತೊಂದರೆಗಲಾಗಿವೆ. ಮತ್ತು ಅವು ಎಂಸಿಟಿ-ತೈಲದಿಂದ ಸಮೃದ್ಧವಾಗಿರುವ ಕೀಟೋಜೆನಿಕ್ ಆಹಾರಕ್ರಮವನ್ನು ಅನುಸರಿಸಿದ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬಂದಿದೆ.

ಕೊನೆಯದಾಗಿ:

ಸಾಮಾನ್ಯ ಕೊಬ್ಬರಿ ಎಣ್ಣೆಯಲ್ಲಿ ಇರುವ ವಿವಿಧ ರೀತಿಯ ಕೊಬ್ಬನ್ನು ಬೇರ್ಪಡಿಸುವ ಮೂಲಕ ಅಂಶೀಕರಿಸಿದ ಕೊಬ್ಬರಿ ಎಣ್ಣೆಯನ್ನು ತಯಾರಿಸಲಾಗುತ್ತದೆ.

ಉಳಿದಿರುವುದು ಎರಡು ಬಗೆಯ ಮಧ್ಯಮ-ಸರಪಳಿ ಕೊಬ್ಬಿನಾಮ್ಲಗಳು, ಇದು ಸಾಧಾರಣ ತೂಕ ಇಳಿಕೆ ಮತ್ತು ಇತರ ಆರೋಗ್ಯ ಸಂಬಂಧಿ ಪ್ರಯೋಜನಗಳಿಗೆ ನೆರವಾಗಬಹುದು.

ಅಂಶೀಕರಿಸಿದ ಕೊಬ್ಬರಿ ಎಣ್ಣೆ ಕೆಲವು ಪ್ರಯೋಜನಗಳನ್ನು ನೀಡಬಹುದಾದರೂ, ಇದು ಸಾಮಾನ್ಯ ರೀತಿಯಕ್ಕಿಂತ ಹೆಚ್ಚು ಸಂಸ್ಕರಿಸಲ್ಪಡುತ್ತದೆ. ಜೊತೆಗೆ, ಹೆಚ್ಚು ಪ್ರಯೋಜನಕಾರಿ ಕೊಬ್ಬುಗಳಲ್ಲಿ ಒಂದಾದ ಲಾರಿಕ್ ಆಮ್ಲವನ್ನು ತೆಗೆದುಹಾಕಲಾಗುವ ಕಾರಣ ಈ ತೈಲದ ಪ್ರಯೋಜನಗಳೂ ಇಲ್ಲವಾಗುತ್ತವೆ.

English summary

Fractionated Coconut Oil Uses and Benefits in Kannada

Here are fractionated coconut oil uses and benefits read on.
X
Desktop Bottom Promotion