For Quick Alerts
ALLOW NOTIFICATIONS  
For Daily Alerts

ವ್ಯಾಯಾಮದ ಬಳಿಕ ಈ ಆಹಾರಗಳನ್ನು ತಿನ್ನಲೇಬಾರದು

|

ನೀವು ವ್ಯಾಯಾಮ ಮಾಡುತ್ತಿದ್ದೀರಾ? ಹಾಗಾದರೆ ಬಯಸಿದ ಫಲ ಸಿಗಲು ಆಹಾರಕ್ರಮದ ಕಡೆ ಗಮನ ನೀಡಲೇಬೇಕು. ವ್ಯಾಯಾಮ ನಂತರ ಕೆಲವೊಂದು ಆಹಾರಗಳನ್ನು ತಿನ್ನಬೇಕು, ಇನ್ನು ಕೆಲವೊಂದು ಆಹಾರಗಳನ್ನು ತಿನ್ನಲೇಬಾರದು.

ಪ್ರತಿ ನಿತ್ಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಮೈಕೊಬ್ಬು ಕರಗುವುದು ಮಾತ್ರವಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಂದಮುಕ್ತಿ ಪಡೆಯಬಹುದು. ಮಧುಮೇಹ, ಒಬೆಸಿಟಿ ಮುಂತಾದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಆಹಾರಕ್ರಮ ತುಂಬಾ ಒಳ್ಳೆಯದು. ದಿನ ನಿತ್ಯ ವ್ಯಾಯಾಮ ಹಾಗೂ ಆರೋಗ್ಯಕರ ಆಹಾರಕ್ರಮವನ್ನು ಪಾಲಿಸಿದ್ದೇ ಆದರೆ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ಇಲ್ಲವಾಗಿಸಬಹುದು.

ಈ ಲೇಖನದಲ್ಲಿ ನಾವು ವ್ಯಾಯಾಮದ ನಂತರ ಯಾವ ಆಹಾರಗಳನ್ನು ತಿನ್ನಬಾರದು ಎಂದು ಹೇಳಿದ್ದೇವೆ ನೋಡಿ:

1. ಖಾರ ಪದಾರ್ಥಗಳು

1. ಖಾರ ಪದಾರ್ಥಗಳು

ಜಿಮ್‌ನಲ್ಲಿ ಚೆನ್ನಾಗಿ ದೇಹ ದಂಡಿಸಿ ನಂತರ ಪಾನಿಪುರಿ ತಿನ್ನಲು ಹೋದರೆ ವ್ಯಾಯಾಮ ಮಾಡಿ ಏನೂ ಪ್ರಯೋಜನವಿಲ್ಲ. ಏಕೆಂದರೆ ದೇಹದ ಸ್ನಾಯುಗಳು ಬಳಲಿರುತ್ತವೆ. ವ್ಯಾಯಾಮ ಮಾಡಿದ ತಕ್ಷಣ ಖಾರ ಪದಾರ್ಥಗಳನ್ನು ತಿಂದರೆ ಜೀರ್ಣಕ್ರಿಯೆಗೆ ಅಡಚಣೆ ಆಗುತ್ತದೆ, ದೇಹಕ್ಕೆ ಆ ಆಹಾರವನ್ನು ಜೀರ್ಣ ಮಾಡುವ ಸಾಮಾರ್ಥ್ಯವಿರುವುದಿಲ್ಲ.

2. ಸೋಡಾ

2. ಸೋಡಾ

ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರಳಿಸಿದಾಗ ಬಾಯಾರಿಕೆಯಾಗುವುದು ಸಹಜ, ಹಾಗಂತ ತಣ್ಣನೆಯ ಸೋಡಾ ನೀರು ಕುಡಿದರೆ ಹೊಟ್ಟೆ ಉಬ್ಬುವ ತೊಂದರೆ ಕಾಣಿಸಿಕೊಳ್ಳಬಹುದು. ಇನ್ನು ಸೋಡಾ ಹಾಕಿದ ಪದಾರ್ಥಗಳನ್ನು ತಿನ್ನುವುದರಿಂದ ಕೂಡ ಹೊಟ್ಟೆ ಹಾಳಾಗುವುದು.

3. ಅತ್ಯಧಿಕ ಪ್ರೊಟೀನ್ ಇರುವ ಆಹಾರ

3. ಅತ್ಯಧಿಕ ಪ್ರೊಟೀನ್ ಇರುವ ಆಹಾರ

ವ್ಯಾಯಾಮ ಬಳಿಕ ಪ್ರೊಟೀನ್ ಶೇಕ್‌ ತೆಗೆದುಕೊಳ್ಳುತ್ತಾರೆ. ಆದರೆ ಪ್ರೊಟೀನ್ ಅನ್ನು ಕೂಡ ಮಿತಿಯಲ್ಲಿ ತೆಗೆದುಕೊಳ್ಳಬೇಕು. ಅತ್ಯಧಿಕ ಪ್ರೊಟೀನ್ ಇರುವ ಆಹಾರವನ್ನು ವ್ಯಾಯಾಮ ಮಾಡಿದ ತಕ್ಷಣ ತಿನ್ನಬಾರದು. ವ್ಯಾಯಾಮ ಮಾಡಿದ ಬಳಿಕ ಮಸಾಲೆ ಪದಾರ್ಥಗಳನ್ನು ಹಾಕಿ ತಯಾರಿಸಿದ ಮಾಂಸಾಹಾರ ತಿನ್ನಬಾರದು. ತಿಂದರೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು. ವ್ಯಾಯಾಮದ ಬಳಿಕ ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಬೇಕು. ವ್ಯಾಯಾಮ ಮಾಡಿದ ಎರಡು ಗಂಟೆಯ ಬಳಿಕ ಮಿತಿಯಲ್ಲಿ ಪ್ರೊಟೀನ್ ಆಹಾರ ಸೇವಿಸಬಹುದು.

4. ಅಧಿಕ ನಾರಿನಂಶವಿರುವ ಆಹಾರ

4. ಅಧಿಕ ನಾರಿನಂಶವಿರುವ ಆಹಾರ

ನಾರಿನಂಶವಿರುವ ಆಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಂತ ತುಂಬಾ ನಾರಿನಂಶವಿರುವ ಆಹಾರವನ್ನು ವ್ಯಾಯಾಮ ಮಾಡಿದ ಅರ್ಧ ಗಂಟೆಯೊಳಗೆ ತಿನ್ನಲು ಹೋಗಬೇಡಿ . ವ್ಯಾಯಾಮ ಬಳಿಕ ಅಧಿಕ ನಾರಿನಂಶವಿರುವ ಆಹಾರ ತಿಂದರೆ ಹೊಟ್ಟೆ ಉಬ್ಬುವುದು, ಅಜೀರ್ಣ ಸಮಸ್ಯೆ ಉಂಟಾಗುವುದು.

5.ಕೊಬ್ಬಿನಂಶವಿರುವ ಆಹಾರಗಳು

5.ಕೊಬ್ಬಿನಂಶವಿರುವ ಆಹಾರಗಳು

ಎಣ್ಣೆಯಲ್ಲಿ ಕರಿದ ಪದಾರ್ಥಗಳು ಬಾಯಿಗೆ ರುಚಿ ಅನಿಸಿದರೂ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇನ್ನು ವ್ಯಾಯಾಮ ಮಾಡಿದ ತಕ್ಷಣ ಇಂಥ ಅಹಾರಗಳನ್ನು ತಿನ್ನಲೇಬಾರದು. ಕೊಬ್ಬಿನಂಶವಿರುವ ಆಹಾರ ತಿಂದರೆ ದೇಹಕ್ಕೆ ಜೀರ್ಣವಾಗಲು ಕಷ್ಟವಾಗುತ್ತದೆ, ಅಲ್ಲದೆ ಕರಗಿದ ಕ್ಯಾಲೋರಿ ಮತ್ತೆ ದೇಹಕ್ಕೆ ಸೇರುವುದರಿಂದ ತೂಕ ಇಳಿಕೆಯೂ ಆಗುವುದಿಲ್ಲ.

6. ಹಸಿ ತರಕಾರಿಗಳು

6. ಹಸಿ ತರಕಾರಿಗಳು

ಹಸಿ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು, ಆದರೆ ಇವುಗಳನ್ನು ವ್ಯಾಯಾಮದ ನಂತರ ತಿನ್ನುವುದು ಸೂಕ್ತವಲ್ಲ. ವ್ಯಾಯಾಮದ ನಂತರ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು, ಖನಿಜಾಂಶಗಳು, ವಿಟಮಿನ್ಸ್ ಅಗ್ಯತ, ಆದರೆ ಇದನ್ನು ಹಸಿ ತರಕಾರಿ ತಿನ್ನುವುದರಿಂದ ಪೂರೈಸಲು ಸಾಧ್ಯವಿಲ್ಲ.

7. ಆಮ್ಲೆಟ್

7. ಆಮ್ಲೆಟ್

ವ್ಯಾಯಾಮದ ಬಳಿಕ ಮೊಟ್ಟೆ ತಿನ್ನುವುದಾದರೆ ಅದನ್ನು ಬೇಯಿಸಿ ತಿನ್ನಬೇಕು. ಆಮ್ಲೆಟ್ ಅಥವಾ ಎಗ್‌ಬುರ್ಜಿ ಮಾಡಿ ತಿನ್ನುವುದರಿಂದ ವ್ಯಾಯಾಮದ ಫಲ ನಿರೀಕ್ಷಿಸಲು ಸಾಧ್ಯವಿಲ್ಲ. ಮೊಟ್ಟೆಯನ್ನು ತಿನ್ನುವುದಾದರೆ ಬೇಯಿಸಿ ತಿನ್ನಬೇಕು, ಇಲ್ಲಾ ಹಸಿ ಮೊಟ್ಟೆಯನ್ನು ಪ್ರೊಟೀನ್‌ ಶೇಕ್‌ ಜೊತೆ ಮಿಕ್ಸ್ ಮಾಡಿ ಕುಡಿಯಬಹುದು.

8. ಸಿಹಿ ಪದಾರ್ಥಗಳು

8. ಸಿಹಿ ಪದಾರ್ಥಗಳು

ವ್ಯಾಯಾಮದ ನಂತರ ನೀವು ತಿನ್ನುವ ಸ್ನ್ಯಾಕ್ಸ್‌ನಲ್ಲಿ ಕಾರ್ಬೋಹೈಡ್ರೇಟ್ಸ್ ಹಾಗೂ ನಾರಿನಂಶವಿರಬೇಕು, ಇದರಿಂದ ದೇಹಕ್ಕೆ ಅಗ್ಯತವಿರುವ ಗ್ಲೈಕೋಜಿನ್ ಪೂರೈಕೆಯಾಗುತ್ತದೆ. ಆದರೆ ಕೇಕ್, ಪೇಸ್ಟ್ರಿ ತಿಂದರೆ ಇದರಿಂದ ಶರೀರದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.

9. ಉಪ್ಪಿನಂಶವಿರುವ ಪದಾರ್ಥಗಳು

9. ಉಪ್ಪಿನಂಶವಿರುವ ಪದಾರ್ಥಗಳು

ವ್ಯಾಯಾಮ ಮಾಡಿದ ಬಳಿಕ ತಿನ್ನುವ ಆಹಾರದಲ್ಲಿ ಉಪ್ಪಿನಂಶ ಕಡಿಮೆ ಇರಬೇಕು. ರೆಡಿಮೇಡ್ ಆಹಾರ ಸೇವನೆ ಮಾಡಿದರೆ ಅದರಲ್ಲಿ ಉಪ್ಪಿನಂಶ ಅಧಿಕವಿರುತ್ತದೆ. ಬಾಯಿ ರುಚಿಗಾಗಿ ಪಾಪ್‌ಕಾರ್ನ್‌, ಫ್ರೆಂಚ್‌ಫ್ರೈ ಅಂಥ ಚಪ್ಪರಿಸಿದರೆ ಇದರಿಂದ ನಿಮ್ಮ ದೇಹಕ್ಕೆ ಅಗ್ಯತವಿರುವ ಪೋಷಕಾಂಸಗಳು ದೊರೆಯದೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗುವುದು.

10. ಚಾಕೋಲೆಟ್

10. ಚಾಕೋಲೆಟ್

ನೀವು ತೂಕ ಇಳಿಕೆಗಾಗಿ ವ್ಯಾಯಾಮ ಮಾಡುತ್ತಿದ್ದರೆ ವ್ಯಾಯಾಮದ ಬಳಿಕ ಚಾಕೋಲೆಟ್‌ಗೆ ನೋ... ನೋ. ಚಾಕೋಲೆಟ್‌ನಲ್ಲಿರುವ ಕೊಬ್ಬಿನಂಶದಿಂದಾಗಿ ದೇಹವು ಪ್ರೊಟೀನ್ ಹೀರಿಕೊಳ್ಳುವುದು ಕಡಿಮೆಯಾಗುತ್ತದೆ, ಅಲ್ಲದೆ ಕೃತಕ ಸಿಹಿ ದೇಹವನ್ನು ಸೇರಿ ಮೈ ತೂಕ ಹೆಚ್ಚಿಸುವುದು. `

English summary

Foods You Should Never Eat After Your Workout

Reckless eating or in other words mindless munching of food after exercise, in the long run, will wreck your health. Have a look at some of the foods to avoid after a workout, here.
Story first published: Tuesday, February 11, 2020, 17:26 [IST]
X