For Quick Alerts
ALLOW NOTIFICATIONS  
For Daily Alerts

ಮೊಟ್ಟೆಯ ಬಿಳಿಗಿಂತ ಹಳದಿ ಹೆಚ್ಚು ಆರೋಗ್ಯಕರವೇ?

|

ಮೊಟ್ಟೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಎಲ್ಲರಿಗೂ ಗೊತ್ತು. ಆದರೆ ಕೆಲವರು ಅದರ ಹಳದಿ ತಿನ್ನುವುದು ಒಳ್ಳೆಯದಲ್ಲ, ಇದರಿಂದ ಕೊಬ್ಬಿನಂಶ, ಕೊಲೆಸ್ಟ್ರಾಲ್ ಅಧಿಕವಾಗುವುದು ಎಂದು ಹಳದಿಯನ್ನು ಬಿಸಾಡಿ, ಪ್ರೊಟೀನ್ ಅಂಶವಿರುವ ಬರೀ ಬಿಳಿಯನ್ನಷ್ಟೇ ತಿನ್ನುತ್ತಾರೆ.

ಇನ್ನು ಕೆಲವರು ಮೊಟ್ಟೆಯ ಹಳದಿಯಲ್ಲಿ ಪ್ರೊಟೀನ್, ಒಳ್ಳೆಯ ಕೊಬ್ಬಿನಂಶ ಹಾಗೂ ಪೋಷಕಾಂಶಗಳು ಇರುವುದರಿಂದ ಮೊಟ್ಟೆಯನ್ನು ಹಳದಿ ಸಹಿತ ಸೇವಿಸಬೇಕು ಎಂದು ಹೇಳುತ್ತಾರೆ.

ಹೀಗೆ ಮೊಟ್ಟೆಯ ವಿಷಯದಲ್ಲಿ ಚರ್ಚೆ ಇದ್ದಿದ್ದೇ. ನಾವಿಲ್ಲಿ ಮೊಟ್ಟೆಯ ಬಿಳಿ ಹಾಗೂ ಹಳದಿ ಸಹಿತ ಮೊಟ್ಟೆ ತಿನ್ನುವುದು ಇವುದರಲ್ಲಿ ಯಾವುದು ತುಂಬಾ ಆರೋಗ್ಯಕರ, ಇದರ ಕುರಿತು ವೈಜ್ಞಾನಿಕವಾಗಿ ಸಾಬೀತವಾದ ಅಂಶವೇನು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

 ಮೊಟ್ಟೆಯ ಬಿಳಿ ಅಥವಾ ಸಂಪೂರ್ಣ ಮೊಟ್ಟೆ: ಇದರಲ್ಲಿ ಯಾವುದರಲ್ಲಿ ಕ್ಯಾಲೋರಿ ಅಂಶ ಅಧಿಕ

ಮೊಟ್ಟೆಯ ಬಿಳಿ ಅಥವಾ ಸಂಪೂರ್ಣ ಮೊಟ್ಟೆ: ಇದರಲ್ಲಿ ಯಾವುದರಲ್ಲಿ ಕ್ಯಾಲೋರಿ ಅಂಶ ಅಧಿಕ

ಕ್ಯಾಲೋರಿ ಬಗ್ಗೆ ನೋಡುವುದಾದರೆ 100 ಗ್ರಾಂ ಬೇಯಿಸಿದ ಮೊಟ್ಟೆಯಲ್ಲಿ 52 ಕ್ಯಾಲೋರಿ ಅದೇ, ಸಂಪೂರ್ಣ ಮೊಟ್ಟೆಯಲ್ಲಿ 155 ಕ್ಯಾಲೋರಿ ಇರುತ್ತದೆ. ಹಾಗಾಗಿ ಕ್ಯಾಲೋರಿ ದೃಷ್ಟಿಯಿಂದ ನೋಡುವುದಾದರೆ ಮೊಟ್ಟೆಯ ಬಿಳಿ ಒಳ್ಳೆಯದು.

ಮೊಟ್ಟೆಯ ಹಳದಿ ಅನಾರೋಗ್ಯಕರವೇ?

ಮೊಟ್ಟೆಯ ಹಳದಿ ಅನಾರೋಗ್ಯಕರವೇ?

ಖಂಡಿತ ಅಅಲ್ಲವೇ ಅಲ್ಲ, ಆದರೆ ಮೊಟ್ಟೆಯ ಹಳದಿ ಆರೋಗ್ಯಕರವಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಬರೀ ಮೊಟ್ಟೆಯ ಬಿಳಿ ತಿನ್ನುವುದಕ್ಕಿಂತ ಸಂಪೂರ್ಣ ಮೊಟ್ಟೆ ತಿನ್ನುವುದು ತುಂಬಾ ಆರೋಗ್ಯಕರ. ಇನ್ನು ಮಧುಮೇಹಿಗಳು ಕೂಡ ವಾರದಲ್ಲಿ 3-4 ಮೊಟ್ಟೆ ತಿನ್ನಬಹುದಾಗಿದೆ.

ಅಮೆರಿಕನ್ ಜರ್ನಲ್ ಆಫ್‌ ಕ್ಲಿನಿಕಲ್ ನ್ಯೂಟ್ರಿಷಿಯನ್ ಸಂಶೋಧನೆ ವರದಿ ಪ್ರಕಾರ ಮಸಲ್ ಬಿಲ್ಡ್ ಮಾಡುವುದರಲ್ಲಿ ಎರಡರ ಪರಿಣಾಮ ಒಂದೇ. ಇನ್ನು ಮತ್ತೊಂದು ಅಧ್ಯಯನ ಪ್ರಕಾರ ಮೊಟ್ಟೆಯ ಹಳದಿ ಹಾನಿಗೊಳಗಾದ ಸ್ನಾಯುಗಳನ್ನು ಸರಿಪಡಿಸುವುದರಲ್ಲಿ ಸಹಕಾರಿ.

ನಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬಿನಂಶ ಕೂಡ ಬೇಕಾಗಿದೆ. ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಅಂಶ ಅಧಿಕವಿದ್ದರೂ ಇದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ ಹಾಗೂ ಮೆದುಳಿಗೆ ನರಗಳು ಸಂದೇಶ ರವಾನೆಗೆ ಚುರುಕುಗಾಗಿರುವಂತೆ ನೋಡಿಕೊಳ್ಳುತ್ತದೆ.

ಮೊಟ್ಟೆಯ ಬಿಳಿಗಿಂತ ಸಂಪೂರ್ಣ ಮೊಟ್ಟೆ ಆರೋಗ್ಯಕರ

ಮೊಟ್ಟೆಯ ಬಿಳಿಗಿಂತ ಸಂಪೂರ್ಣ ಮೊಟ್ಟೆ ಆರೋಗ್ಯಕರ

ಮೊಟ್ಟೆಯ ಬಿಳಿಯಲ್ಲಿ ಪ್ರೊಟೀನ್ ಮಾತ್ರ ಇರುತ್ತದೆ, ಅದೇ ಸಂಪೂರ್ಣ ಮೊಟ್ಟೆಯಲ್ಲಿ ಇತರ ಪೋಷಕಾಂಶಗಳು ಕೂಡ ಇರುತ್ದೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಸಂಪೂರ್ಣ ಮೊಟ್ಟೆ ತಿನ್ನುವುದು ಒಳ್ಳೆಯದು. ಇದನ್ನು ಬ್ರೇಕ್‌ಫಾಸ್ಟ್‌ಗೆ ಸೇವಿಸಿದರೆ ಆ ದಿನಕ್ಕೆ ಬೇಕಾಗುವ ಶಕ್ತಿ ದೊರೆಯುವುದು.

ಮೊಟ್ಟೆಯ ಬಿಳಿ ಹಾಗೂ ಹಳದಿಯಲ್ಲಿರುವ ಪೋಷಕಾಂಶಗಳು

ಮೊಟ್ಟೆಯ ಬಿಳಿ ಹಾಗೂ ಹಳದಿಯಲ್ಲಿರುವ ಪೋಷಕಾಂಶಗಳು

ಮೊಟ್ಟೆಯ ಹಳದಿಯಲ್ಲಿ ಕೊಲೆಸ್ಟ್ರಾಲ್ ಅಥವಾ ಸ್ಯಾಚುರೇಟಡ್ ಕೊಬ್ಬಿನಂಶವಿದೆ, ಆದರೂ ಇದು ಸೂಪರ್‌ ಹೆಲ್ತಿ ಆಗಿದೆ, ಅದಕ್ಕೆ ಕಾರಣ ಹಳದಿಯಲ್ಲಿ ಚೊಲೈನ್, ಇನ್ನು ಮೆದುಳಿಗೆ ಅವಶ್ಯಕವಾದ ಪೋಷಕಾಂಶವಾದ ಅಸೆಟೈಲ್ಕೋಲಿನ್, ವಿಟಮಿನ್‌ಗಳಾದ ಎ, ಡಿ, ಇ ಮತ್ತು ಕೆ, ಇದರ ಜೊತೆಗೆ ಒಮೆಗಾ 3 ಕೊಬ್ಬಿನಂಶವಿದೆ, ಅಲ್ಲದೆ ಫೋಲೆಟ್, ವಿಟಮಿನ್ ಬಿ12 ಮೊಟ್ಟೆಯ ಬಿಳಿಯಲ್ಲಿರುವುದಕ್ಕಿಂತಲೂ ಅಧಿಕವಿದೆ. ಅಲ್ಲದೆ ಮೊಟ್ಟೆಯ ಹಳದಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಕೂಡ ಇದೆ.

ಇನ್ನು ಮೊಟ್ಟೆಯ ಬಿಳಿಯಲ್ಲಿ ಪ್ರೊಟೀನ್, ಕಡಿಮೆ ಪ್ರಮಾಣದ ಕ್ಯಾಲೋರಿ ಇದೆ.

ಮೊಟ್ಟೆಯ ಸಂಪೂರ್ಣ ಆರೋಗ್ಯಕರ ಗುಣಗಳು ಸಿಗಬೇಕೆಂದರೆ ಸಂಪೂರ್ಣ ಮೊಟ್ಟೆ ತಿನ್ನುವುದು ಒಳ್ಳೆಯದು.

ದಿನದಲ್ಲಿ ಎಷ್ಟು ಮೊಟ್ಟೆ ತಿನ್ನಬಹುದು?

ದಿನದಲ್ಲಿ ಎಷ್ಟು ಮೊಟ್ಟೆ ತಿನ್ನಬಹುದು?

ದಿನದಲ್ಲಿ 3 ಮೊಟ್ಟೆ ತಿನ್ನಬಹುದು ಎಂದು ವಿಜ್ಞಾನ ಹೇಳಿದೆ. ಇದಕ್ಕಿಂತ ಅಧಿಕ ತಿನ್ನುವುದು ಆರೋಗ್ಯಕರವಲ್ಲ. ಆದ್ದರಿಂದ ದಿನದಲ್ಲಿ ಒಂದು ಮೊಟ್ಟೆ ನೀವು ತಿನ್ನುತ್ತಿದ್ದರೆ ತಲೆಕೆಡಿಸಿಕೊಳ್ಳದೆ ತಿನ್ನಿ, ಇದರಿಂದ ಆರೋಗ್ಯಕ್ಕೆ ಒಳ್ಳೆಯದೇ ಹೊರತು, ಹಾನಿಯಿಲ್ಲ.

English summary

Egg White VS Whole Egg: Which One is Healthier?

Most people think egg white is healthier than egg yolk, lets find out which one healthier...
X