For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಒಂದು ಲೋಟ ಬಿಸಿನೀರಿನ ಜೊತೆ ಒಂದು ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ?

|

ಬೆಳಗ್ಗಿನ ಉಪಾಹಾರ ಬಿಡುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಆದರೆ ನಮ್ಮಲ್ಲಿ ಕೆಲವರು ಬೆಳಗ್ಗೆ ತಿಂಡಿ ಸೇವಿಸಲು ಸಮಯವಿಲ್ಲವೆಂದು ಅಥವಾ ತಿಂಡಿ ತಿನ್ನುವುದರಿಂದ ದಪ್ಪಗಾಗುತ್ತೇನೆ ಎಂದು ಹೇಳಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿರುತ್ತಾರೆ. ನೀವು ಕೂಡ ಹಾಗೆಯೇ ಮಾಡುತ್ತಿದ್ದರೆ ಈ ಲೇಖನ ನಿಮಗಾಗಿ.

Do You Know Benefits Of Having Glass Of Warm Water And Banana In The Morning

ದಿನಪೂರ್ತಿ ಲವಲವಿಕೆಯಿಂದ ಓಡಾಡಲು ನಮ್ಮ ದೇಹಕ್ಕೆ ಶಕ್ತಿ ಬೇಕು. ಬೆಳಗ್ಗೆ ಉಪಾಹಾರ ಮಾಡದಿದ್ದರೆ ಬೇಗನೆ ಆಯಾಸ, ಕೋಪ ಎಲ್ಲವೂ ಬರುವುದು. ನನಗೆ ಬೆಳಗ್ಗೆ ಬ್ರೇಕ್‌ಫಾಸ್ಟ್‌ ಮಾಡಲು ಸಮಯವೇ ಇಲ್ಲ, ಇಲ್ಲ ಬೆಳಗ್ಗಿನ ತಿಂಡಿ ತಿಂದರೆ ನಾನು ದಪ್ಪಗಾಗುತ್ತೇನೆ, ಡಯಟ್‌ನಲ್ಲಿ ಇದ್ದೇನೆ ಎನ್ನುವುದಾದರೆ ನೀವು ನಿಮ್ಮ ದಿನವನ್ನು ಒಂದು ಲೋಟ ಬಿಸಿನೀರು ಹಾಗೂ ಒಂದು ಬಾಳೆಹಣ್ಣಿನೊಂದಿಗೆ ಏಕೆ ಪ್ರಾರಂಭಿಸಬಾರದು?

ಇಲ್ಲಿ ನಾವು ನೀವು ನಿಮ್ಮ ದಿನವನ್ನು ಒಂದು ಲೋಟ ಬಿಸಿ ನೀರು ಹಾಗೂ ಬಾಳೆಹಣ್ಣಿನಿಂದ ಪ್ರಾರಂಭಿಸಿದರೆ ದೊರೆಯುವ ಪ್ರಯೋಜನಗಳ ಬಗ್ಗೆ ಹೇಳಿದ್ಧೇವೆ ನೋಡಿ:

 ಬ್ರೇಕ್‌ಫಾಸ್ಟ್‌ ಏಕೆ ಮಿಸ್‌ ಮಾಡಲೇ ಬಾರದು?

ಬ್ರೇಕ್‌ಫಾಸ್ಟ್‌ ಏಕೆ ಮಿಸ್‌ ಮಾಡಲೇ ಬಾರದು?

ಟೈಮ್‌ ಇಲ್ಲ ಅಂತ ಕಾರಣ ಹೇಳಿ ಏನೂ ತಿನ್ನದೆ, ಒಂದು ಲೋಟ ನೀರು ಕೂಡ ಕುಡಿಯದೆ ಕೆಲಸಕ್ಕೆ ಗಡಿಬಿಡಿಯಿಂದ ಹೊರಡುವ ಎಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ಈ ಅಭ್ಯಾಸ ಮುಂದೆ ನಿಮಗೆ ದೊಡ್ಡ ಆಪತ್ತು ತರುತ್ತದೆ ಎಂಬುವುದು ನೆನಪಿರಲಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿರಬಾರದು. ಎಷ್ಟೇ ಕೆಲಸದ ಒತ್ತಡವಿರಲಿ, ಬೆಳಗ್ಗೆ ನಿಮ್ಮ ಹೊಟ್ಟೆ ತುಂಬಿಸುವ ಕಡೆ ಸ್ವಲ್ಪವಾದರೂ ಗಮನಕೊಡಲೇಬೇಕು. ಇಲ್ಲದಿದ್ದರೆ ಪೋಷಕಾಂಶದ ಕೊರತೆಯ ಜೊತೆಗೆ ಮರೆವಿನ ಸಮಸ್ಯೆಯೂ ಉಂಟಾಗುವುದು.

ಪೋಷಕಾಂಶದ ಅವಶ್ಯಕತೆ

ಪೋಷಕಾಂಶದ ಅವಶ್ಯಕತೆ

ಬೆಳಗ್ಗೆ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು ಬೇಕು. ಬೆಳಗ್ಗೆ ಉಪಾಹಾರ ಮಾಡುವುದರಿಂದ ನಮ್ಮ ದೇಹವು ಅದರಲ್ಲಿರುವ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಆದ್ದರಿಂದ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಆರೋಗ್ಯಕರ ಆಹಾರ ಸೇವಿಸಿ. ಫಾಸ್ಟ್‌ ಫುಡ್ಸ್, ರೆಡಿ ಮೇಡ್‌ ಫುಡ್ಸ್ ಇವುಗಳನ್ನು ಸೇವಿಸಲೇಬೇಡಿ. ಬೆಳಗ್ಗೆ ಸ್ವಲ್ಪ ಹೆಚ್ಚೇ ಆಹಾರ ಸೇವಿಸಿದರೂ ತೊಂದರೆಯಿಲ್ಲ, ದೇಹ ಅರಗಿಸಿಕೊಳ್ಳುತ್ತದೆ, ದಪ್ಪವೇನು ಆಗುವುದೂ ಇಲ್ಲ.

ಒಂದು ಲೋಟ ಬಿಸಿ ನೀರು ಮತ್ತು ಬಾಳೆಹಣ್ಣು

ಒಂದು ಲೋಟ ಬಿಸಿ ನೀರು ಮತ್ತು ಬಾಳೆಹಣ್ಣು

ನೀವು ತೂಕ ಇಳಿಕೆಗಾಗಿ ಬೆಳಗ್ಗೆ ಏನೂ ತಿನ್ನುತ್ತಿಲ್ಲವೇ? ಹಾಗಾದರೆ ನೀವು ಬೆಳಗ್ಗೆ ಒಂದು ಲೋಟ ಬಿಸಿ ನೀರು ಹಾಗೂ ಬಾಳೆಹಣ್ಣು ತಿನ್ನುವುದರಿಂದ ತೂಕ ಇಳಿಕೆ ಮಾಡಬಹುದು ಗೊತ್ತಾ? ಒಂದು ಲೋಟ ಬಿಸಿ ನೀರಿನ ಜೊತೆಗೆ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇನ್ನು ಬೆಳಗ್ಗೆ ತಣ್ಣೀರು ಕುಡಿಯುವ ಬದಲು ಬಿಸಿ ನೀರು ಕುಡಿಯುವುದರಿಂದ ನೀರು ಮತ್ತಷ್ಟು ಕುಡಿಯಬೇಕೆನಿಸುವುದು. ತಣ್ಣೀರು ಆದರೆ ಅರ್ಧ ಲೋಟ ಕುಡಿದಾಗ ಸಾಕು ಅನಿಸುವುದು. ತೂಕ ಇಳಿಕೆಗೆ ಬಿಸಿ ನೀರು ಕುಡಿಯುವುದು ಒಳ್ಳೆಯದು.

 ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು

ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು

ಬಾಳೆಹಣ್ಣು ಬೆಳಗ್ಗೆ ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳೂ ದೊರೆಯುತ್ತದೆ. ಇದರಲ್ಲಿ ಪೊಟಾಷ್ಯಿಯಂ, ವಿಟಮಿನ್ ಬಿ6, ವಿಟಮಿನ್ ಸಿ, ಮೆಗ್ನಿಷ್ಯಿಯಂ, ಸತು, ಕಾರ್ಬ್ಸ್, ನಾರಿನಂಶವಿದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿರುವುದಕ್ಕಿಂತ ಈ ವಿಧಾನ ಪಾಲಿಸಿ, ಆರೋಗ್ಯ ಕಾಪಾಡಿ.

English summary

Do You Know Benefits Of Having Glass Of Warm Water And Banana In The Morning

Do you skip breakfast by giving excuse that don't have time or I am on diet, then you must have banana with glass of warm water.
Story first published: Tuesday, May 26, 2020, 18:06 [IST]
X
Desktop Bottom Promotion