For Quick Alerts
ALLOW NOTIFICATIONS  
For Daily Alerts

ಹರ್ಡರ್ಲ್‌ ಆಟ ಆಡಿದರೆ ಸಾಕು ಫಿಟ್‌ ಆಗಿರಬಹುದು

|

ದೇಹವು ಫಿಟ್ ಆಗಿದ್ದರೆ ಆಗ ಖಂಡಿತವಾಗಿಯೂ ನಮ್ಮ ಆರೋಗ್ಯ ಚೆನ್ನಾಗಿರುವುದು, ನಮಗೇ ಗೊತ್ತಿಲ್ಲದಂತೆ ನಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಮತ್ತು ವೈದ್ಯರ ಬಳಿ ಹೋಗುವ ಸಂದರ್ಭವೂ ಕಡಿಮೆ ಆಗಬಹುದು. ಹದಿಹರೆಯದಲ್ಲೇ ಫಿಟ್ನೆಸ್ ಕಾಯ್ದುಕೊಂಡರೆ ಮುಂದೆ ವಯಸ್ಸಾಗುತ್ತಾ ಹೋದಂತೆ ನಮ್ಮ ಆರೋಗ್ಯಕ್ಕೆ ಗಣನೀಯ ಪ್ರಮಾಣದಲ್ಲಿ ನೆರವಾಗುವುದು.

hurdles game

ಕ್ರೀಡಾಳುಗಳು ಯಾವುದೇ ವಯಸ್ಸಿನವರಾದರೂ ತಮ್ಮ ಫಿಟ್ನೆಸ್ ಕಾಯ್ದುಕೊಂಡಿರುವರು. ಕ್ರೀಡಾಪಟುಗಳ ಫಿಟ್ನೆಸ್ ಗೆ ಅವರು ಮಾಡುವಂತಹ ವ್ಯಾಯಾಮ ಮತ್ತು ಆಡುವ ಕ್ರೀಡೆಗಳು ಮುಖ್ಯ ಕಾರಣ. ಅವರ ರೀತಿಯಲ್ಲೇ ನಾವು ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂದರೆ ಸ್ವಲ್ಪ ಶ್ರಮ ವಹಿಸಬೇಕು. ವ್ಯಸ್ತ ಜೀವನದಿಂದ ಹೊರಗೆ ಬಂದು ದೇಹದ ಫಿಟ್ನೆಸ್ ಕಡೆ ಗಮನಹರಿಸಬೇಕು.

ಕೆಲವೊಂದು ಕ್ರೀಡೆಗಳು ತುಂಬಾ ಒಳ್ಳೆಯದು. ಅದರಲ್ಲೂ ಓಡುವುದು, ಹರ್ಡಲ್ಸ್ ಇತ್ಯಾದಿಗಳು ದೈಹಿಕ ಶ್ರಮ ಬಯಸುವ ಕ್ರೀಡೆಗಳು. ಹರ್ಡಲ್ಸ್ ಎಂದರೆ ಅದು ಓಡುತ್ತಿರುವಾಗಲೇ ಇರುವಂತಹ ತಡೆಯನ್ನು ಜಿಗಿದು ಓಡುವುದು. ಇದು ತುಂಬಾ ಕಠಿಣ ಕ್ರೀಡೆಯಾದರೂ ದೇಹದ ಮೇಲೆ ಅದ್ಭುತ ಪರಿಣಾಮ ಬೀರುವುದು. ಹರ್ಡಲ್ಸ್ ನಿಂದ ನಮ್ಮ ದೇಹಕ್ಕೆ ಆಗುವ ಲಾಭಗಳು ಯಾವುದು ಎಂದು ತಿಳಿಯುವ.

1. ಸ್ನಾಯುಗಳನ್ನು ಬಲಪಡಿಸುವುದು

1. ಸ್ನಾಯುಗಳನ್ನು ಬಲಪಡಿಸುವುದು

ಹರ್ಡಲ್ಸ್ ಎನ್ನುವುದು ಎಲ್ಲರಿಗೂ ಸಾಧ್ಯವಾಗದ ಕ್ರೀಡೆ. ಆದರೆ ಒಂದು ಸಲ ಇದನ್ನು ಕರಗತ ಮಾಡಿಕೊಂಡರೆ ಆಗ ನೀವು ಜೀವನವಿಡಿ ದೈಹಿಕವಾಗಿ ಫಿಟ್ ಇರಬಹುದು. ಇದು ದೇಹದ ಸ್ನಾಯುಗಳಿಗೆ ಚಟುವಟಿಕೆ ನೀಡುವುದು. ಸೊಂಟ, ಕೈಗಳು, ಕಾಲು ಮತ್ತು ಹೊಟ್ಟೆಯ ಸ್ನಾಯುಗಳಿಗೆ ಇದರಿಂದ ಪ್ರಭಾವ ಬೀರುವುದು. ಓಡಿದ ಬಳಿಕ ಹಾರಲು ತುಂಬಾ ಶಕ್ತಿ ಬೇಕಾಗುತ್ತದೆ. ಇದನ್ನು ಸ್ನಾಯುಗಳು ಒದಗಿಸುವುದು.

2. ಮೂಳೆಗಳಿಗೆ ಶಕ್ತಿ ತುಂಬುವುದು

2. ಮೂಳೆಗಳಿಗೆ ಶಕ್ತಿ ತುಂಬುವುದು

ಹರ್ಡಲ್ಸ್ ವೇಳೆ ಕಾಲುಗಳಿಗೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಇದರಿಂದ ಮೂಳೆಗಳು ಕ್ರಿಯಾಶೀಲವಾಗಿ ಇರುವುದು. ಹೀಗಾಗಿ ಮುಂದೆ ಸಂಧಿವಾತ ಮತ್ತು ಗಂಟು ನೋವಿನಂತಹ ಸಮಸ್ಯೆಯನ್ನು ಇದನ್ನು ನಿವಾರಣೆ ಮಾಡುವುದು.

3. ಎತ್ತರ ಹೆಚ್ಚಿಸುವುದು

3. ಎತ್ತರ ಹೆಚ್ಚಿಸುವುದು

ಹದಿಹರೆಯಲ್ಲಿ ಇರುವ ಕೆಲವರಿಗೆ ತಮ್ಮ ಎತ್ತರದ ಬಗ್ಗೆ ಚಿಂತೆಯಾಗಿರುವುದು. ಇಂತಹವರು ಹರ್ಡಲ್ಸ್ ಅಭ್ಯಾಸ ಮಾಡಿದರೆ ಆಗ ಎತ್ತರ ಹೆಚ್ಚಿಸಿಕೊಳ್ಳಬಹುದು. ಓಡುವುದು ಹಾಗೂ ಜಿಗಿಯುವುದು ಎತ್ತರ ಹೆಚ್ಚಳಕ್ಕೆ ಬೇಕಾಗುವ ಪ್ರಮುಖ ವ್ಯಾಯಾಮಗಳು. ಇವೆರಡರಿಂದ ಮೂಳೆಗಳು ಬೆಳವಣಿಗೆ ಆಗಿ ವೇಗವಾಗಿ ಎತ್ತರ ಹೆಚ್ಚಿಸಿಕೊಳ್ಳಬಹುದು.

4. ದೇಹದ ಸಮತೋಲನ ಸುಧಾರಿಸುವುದು

4. ದೇಹದ ಸಮತೋಲನ ಸುಧಾರಿಸುವುದು

ಫಿಟ್ನೆಸ್ ನಲ್ಲಿ ಇರಬೇಕಾಗಿರುವುದು ದೇಹದ ಸಮತೋಲನ. ದೇಹದ ಸಮತೋಲನ ಕಾಪಾಡಲು ಪ್ರತಿನಿತ್ಯವೂ ಹರ್ಡಲ್ಸ್ ಅಭ್ಯಾಸ ಮಾಡಬೇಕು. ಓಡಿ, ಜಿಗಿದ ಬಳಿಕ ನೆಲದ ಮೇಲೆ ನಿಲ್ಲುವಾಗ ಸಮತೋಲನ ಬೇಕಾಗುವುದು. ಇದು ಮುಂದೆ ದೇಹ ಸಮತೋಲನಕ್ಕೆ ನೆರವಾಗುವುದು.

5. ರಕ್ತ ಸಂಚಾರ ಸುಧಾರಿಸುವುದು

5. ರಕ್ತ ಸಂಚಾರ ಸುಧಾರಿಸುವುದು

ಹರ್ಡಲ್ಸ್ ನಿಂದ ದೇಹದ ಅಂಗಾಂಗಗಳು ತುಂಬಾ ಚುರುಕು ಹಾಗೂ ಬಲಗೊಳ್ಳುವುದು. ದೇಹವು ಹರ್ಡಲ್ಸ್ ಅಭ್ಯಸಿಸುವ ವೇಳೆ ಇದು ದೇಹದಲ್ಲಿನ ರಕ್ತ ಸಂಚಾರವನ್ನು ಸುಧಾರಣೆ ಮಾಡುವುದು. ಹೀಗಾಗಿ ಹೃದಯದ ಕಾಯಿಲೆ ಮತ್ತು ರಕ್ತದೊತ್ತಡದ ಸಮಸ್ಯೆ ಕಡಿಮೆ ಮಾಡುವುದು.

6. ಮೆದುಳಿನ ಚಟುವಟಿಕೆಗೆ ವೃದ್ಧಿಸುವುದು

6. ಮೆದುಳಿನ ಚಟುವಟಿಕೆಗೆ ವೃದ್ಧಿಸುವುದು

ದೇಹದ ಸಮತೋಲನ ಕಾಪಾಡಿಕೊಂಡು ಓಡಿ, ಜಿಗಿಯಲು ಚುರುಕುತನ ಮತ್ತು ಸಮಯದ ನಿರ್ವಹಣೆ ಮುಖ್ಯ. ಇದು ಮೆದುಳಿನ ಚಟುವಟಿಕೆ ವೃದ್ಧಿಸಲು ನೆರವಾಗುವುದು. ಹರ್ಡಲ್ಸ್ ರಕ್ತ ಸಂಚಾರ ಸುಧಾರಣೆ ಮಾಡುವ ಪರಿಣಾಮವಾಗಿ ಅದು ಮೆದುಳಿನ ಹೆಚ್ಚಿನ ಆಮ್ಲಜನಕ ಒದಗಿಸಿ, ಅದರ ಕ್ರಿಯೆ ಸುಧಾರಿಸುವುದು.

7. ಹೃದಯದ ಆರೋಗ್ಯ ಸುಧಾರಿಸುವುದು

7. ಹೃದಯದ ಆರೋಗ್ಯ ಸುಧಾರಿಸುವುದು

ಓಟ ಮತ್ತು ಹಾರುವ ಚಟುವಟಿಕೆಯು ಹರ್ಡಲ್ಸ್ ನಲ್ಲಿ ಇರುವ ಕಾರಣದಿಂದಾಗಿ ಇದು ರಕ್ತ ಸಂಚಾರ ಸುಧಾರಣೆ ಮಾಡುವುದು. ಇದರಿಂದ ದೇಹದಲ್ಲಿ ಸರಿಯಾದ ರಕ್ತ ಸಂಚಾರವಾಗಿ ಹೃದಯವು ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುವುದು. ಇದು ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಯುವುದು.

8. ಕ್ಯಾಲರಿ ದಹಿಸುವುದು

8. ಕ್ಯಾಲರಿ ದಹಿಸುವುದು

ಹೆಚ್ಚಿನೆಲ್ಲಾ ವ್ಯಾಯಾಮಗಳು ದೇಹದ ಕ್ಯಾಲರಿ ದಹಿಸುವುದು. ಅದರಲ್ಲೂ ಹರ್ಡಲ್ಸ್ ನಲ್ಲಿ ಓಟ ಮತ್ತು ಜಿಗಿಯುವ ಚಟುವಟಿಕೆ ಇರುವ ಕಾರಣದಿಂದಾಗಿ ಇದು ಇನ್ನಷ್ಟು ಕ್ಯಾಲರಿ ದಹಿಸಲು ನೆರವಾಗುವುದು. ದೇಹ ತೂಕವನ್ನು ಸಮತೋಲನದಲ್ಲಿ ಇಡಲು ಹರ್ಡಲ್ಸ್ ನೆರವಾಗುವುದು.

9. ಫಿಟ್ನೆಸ್ ವೃದ್ಧಿಸುವುದು

9. ಫಿಟ್ನೆಸ್ ವೃದ್ಧಿಸುವುದು

ಸ್ನಾಯುಗಳು ಮತ್ತು ಮೂಳೆಗಳನ್ನು ಬಲಗೊಳಿಸುವ ಹರ್ಡಲ್ಸ್ ದಿನವಿಡಿ ಫಿಟ್ ಹಾಗೂ ಚುರುಕಾಗಿ ಇರಲು ನೆರವಾಗುವುದು. ಇದರಿಂದ ನಾವು ತುಂಬಾ ದೀರ್ಘಕಾಲ ಯಾವುದೇ ದೈಹಿಕ ಶ್ರಮದ ಕೆಲಸ ಮಾಡಿದರೂ ಅದರಿಂದ ಬಳಲಿಕೆ ಬರುವುದಿಲ್ಲ.

English summary

Amazing Health Benefits Of Hurdles Game For Body Fitness

Here we are discussing about amazing health benefits of hurdles game for body fitness. Hurdles or hurdle jump is a form of exercise in which a person runs and jumps over many hurdles with a speed. It comes under plyometric training which is done for power development, flexibility, and stronger hips and muscles.
X
Desktop Bottom Promotion