For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳುವ ಸಂದರ್ಭದಲ್ಲಿ ಎಷ್ಟು ಪ್ರಮಾಣದಲ್ಲಿ ಹಾಗೂ ಯಾವಾಗ ಗ್ರೀನ್ ಟೀ ಕುಡಿಯಬೇಕು

|

ಇಂದಿನ ದಿನಗಳಲ್ಲಿ ಜನರು ಹೆಚ್ಚಾಗಿ ಗ್ರೀನ್ ಟೀಗೆ ಮೊರೆ ಹೋಗುತ್ತಿದ್ದಾರೆ. ಗ್ರೀನ್ ಟೀಯಲ್ಲಿರುವ ಹಲವಾರು ರೀತಿಯ ಆರೋಗ್ಯ ಲಾಭಗಳಿಂದಾಗಿ ಇದು ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಮುಖ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತೀ ಪ್ರಿಯವಾಗಿದೆ.

ನೀರಿನ ಬಳಿಕ ವಿಶ್ವದಲ್ಲಿ ಇದು ಅತೀ ಜನಪ್ರಿಯ ಪಾನೀಯವಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಪೋಷಕಾಂಶಗಳು ಹಾಗೂ ಆ್ಯಂಟಿಆಕ್ಸಿಡೆಂಟ್ಸ ಮೃದ್ಧವಾಗಿದೆ. ಈ ಕಾರಣದಿಂದ ಇದು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು. ಚೀನಾದಲ್ಲಿ ಹಿಂದಿನಿಂದಲೂ ಗ್ರೀನ್ ಟೀಯನ್ನು ಹಲವಾರು ಕಾಯಿಲೆಗಳ ಚಿಕಿತ್ಸೆಗೆ ಬಳಸಿಕೊಂಡು ಬರಲಾಗುತ್ತಿತ್ತು.

 ತೂಕ ಕಳೆದುಕೊಳ್ಳಲು ಗ್ರೀನ್ ಟೀ ಹೇಗೆ ನೆರವಾಗಲಿದೆ?

ತೂಕ ಕಳೆದುಕೊಳ್ಳಲು ಗ್ರೀನ್ ಟೀ ಹೇಗೆ ನೆರವಾಗಲಿದೆ?

ಚಯಾಪಚಯ ಕ್ರಿಯೆಯು ನೀವು ಸೇವಿಸಿದ ಆಹಾರ ಮತ್ತು ಪಾನೀಯವನ್ನು ಬಳಸಿಕೊಳ್ಳಬಹುದಾದ ಶಕ್ತಿಯಾಗಿ ಪರಿವರ್ತನೆ ಮಾಡುವುದು. ಗ್ರೀನ್ ಟೀ ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿಯಾಗಿದೆ. ಯಾಕೆಂದರೆ ಇದು ದೇಹದಲ್ಲಿ ಚಯಾಪಚಯ ಕ್ರಿಯೆಯು ತುಂಬಾ ಪರಿಣಾಮಕಾರಿಯಾಗಿ ನಡೆಯುವಂತೆ ಮಾಡುವುದು. ಇದರಲ್ಲಿ ಇರುವಂತಹ ಕ್ಯಾಟ್ಚಿನ್ ಮತ್ತು ಫ್ಲಾವನಾಯ್ಡ್ ಎನ್ನುವಂತಹ ಆ್ಯಂಟಿ ಆಕ್ಸಿಡೆಂಟ್ ಗಳು ಚಯಾಪಚಯ ಕ್ರಿಯೆಯನ್ನು ವೃದ್ಧಿಸುವುದು. 2010ರಲ್ಲಿ ಪ್ರಕಟಗೊಂಡಿರುವಂತಹ ವರದಿಯ ಪ್ರಕಾರ ಗ್ರೀನ್ ಟೀ ಸಪ್ಲಿಮೆಂಟ್ ನಲ್ಲಿ ಕೆಫಿನ್ ಅಥವಾ ಕ್ಯಾಟ್ಚಿನ್ ಸಣ್ಣ ಪ್ರಮಾಣದಲ್ಲಿ ಇದೆ. ಆದರೆ ಇದು ತುಂಬಾ ಪರಿಣಾಮಕಾರಿಯಾಗಿ ತೂಕ ಇಳಿಸಿಕೊಳ್ಳಲು ನೆರವಾಗುವುದು. ನಿಯಮಿತವಾಗಿ ವ್ಯಾಯಾಮ ಮಾಡುವ ಜತೆಗೆ ನೀವು ತುಂಬಾ ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಬೇಕು. ಅದರಲ್ಲಿ ಹಣ್ಣುಗಳು ಮತ್ತು ತರಕಾರಿ ಅಧಿಕವಾಗಿ ಸೇವಿಸಬೇಕು. ಇದರಿಂದ ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿಯಾಗಲಿದೆ. ಆದರೆ ಗ್ರೀನ್ ಟೀ ಜತೆಗೆ ಇವೆಲ್ಲವನ್ನು ಮಾಡಿದರೆ ಆಗ ನಿಮಗೆ ತುಂಬಾ ಧನಾತ್ಮಕವಾದ ಫಲಿತಾಂಶ ಸಿಗುವುದು.

ತೂಕ ಇಳಿಸಿಕೊಳ್ಳಲು ಎಷ್ಟು ಪ್ರಮಾಣದ ಗ್ರೀನ್ ಟೀ ಕುಡಿಯಬೇಕು?

ತೂಕ ಇಳಿಸಿಕೊಳ್ಳಲು ಎಷ್ಟು ಪ್ರಮಾಣದ ಗ್ರೀನ್ ಟೀ ಕುಡಿಯಬೇಕು?

ತೂಕ ಇಳಿಸಿಕೊಳ್ಳಬೇಕು ಎಂದು ಇದ್ದರೆ ಆಗ ನೀವು ದಿನಕ್ಕೆ 2ರಿಂದ 3 ಕಪ್ ಗ್ರೀನ್ ಟೀ ಕುಡಿದರೆ ಸಾಕು ಎಂದು ಯೂನಿವರ್ಸಿಟಿ ಆಫರ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ನ ಅಧ್ಯಯನವೊಂದು ಹೇಳಿದೆ. ಈ ಪ್ರಮಾಣವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಯಾಕೆಂದರೆ ವ್ಯಕ್ತಿಯ ನೈಸರ್ಗಿಕ ಚಯಾಪಚಯ ಕ್ರಿಯೆ ಮೇಲೆ ಇದು ಅವಲಂಬಿತವಾಗಿರವುದು.

Most Read:ಗ್ರೀನ್ ಟೀ- ಯಾವ ಸಮಯದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?

ಗ್ರೀನ್ ಟೀ ತಯಾರಿಸಲು ಸರಿಯಾದ ವಿಧಾನ

ಗ್ರೀನ್ ಟೀ ತಯಾರಿಸಲು ಸರಿಯಾದ ವಿಧಾನ

ನೀವು ಗ್ರೀನ್ ಟೀ ರುಚಿಯನ್ನು ಆನಂದಿಸುವ ವಿಚಾರಕ್ಕೆ ಬಂದರೆ, ಆಗ ನೀವು ಇದನ್ನು ಯಾವ ರೀತಿ ಸೇವಿಸುತ್ತೀರಿ ಎನ್ನುವುದು ತುಂಬಾ ಮುಖ್ಯ ಆಗಿರುವುದು. ನೀರನ್ನು ಅತಿಯಾಗಿ ಕುದಿಸಬೇಡಿ, ಇದರಿಂದ ಕ್ಯಾಟ್ಚಿನ್ ಪ್ರಮಾಣವು ನಷ್ಟವಾಗುವ ಸಾಧ್ಯತೆ ಇರುವುದು. ಒಳ್ಳೆಯ ರುಚಿ ಮತ್ತು ಫಲಿತಾಂಶಕ್ಕಾಗಿ ನೀವು ನೀರು ಕುದಿಸಿ ಮತ್ತು ಹತ್ತು ನಿಮಿಷ ಕಾಲ ಅದು ಹಾಗೆ ಇರಲಿ. ಇದರ ಬಳಿಕ ಗ್ರೀನ್ ಟೀ ಎಲೆಗಳ ಮೇಲೆ ಇದನ್ನು ಹಾಕಿ ಮತ್ತು ಎಲೆಗಳನ್ನು ತೆಗೆದ ಬಳಿಕ ನೀವು ಈ ಇದನ್ನು ಒಂದು ನಿಮಿಷ ಕಾಲ ಕುಡಿಯ ಬಹುದು.

ಗ್ರೀನ್ ಟೀ ವಿಧಗಳು

ಗ್ರೀನ್ ಟೀ ವಿಧಗಳು

ಗ್ರೀನ್ ಟೀ ಇಂದು ಮಾರುಕಟ್ಟೆಯಲ್ಲಿ ವಿವಿಧ ರೂಪದಲ್ಲಿ ಸಿಗುವುದು. ಆದರೆ ತೂಕ ಇಳಿಸಿಕೊಳ್ಳಲು ಬಳಸುವವರಿಗೆ ಇದರಲ್ಲಿ ಹೆಚ್ಚಿನ ವ್ಯತ್ಯಾಸವಾಗದು. ಸಾಮಾನ್ಯ, ಕನಿಷ್ಠ ಸಂಸ್ಕರಿಸಲ್ಪಟ್ಟಿರುವಂತಹ ಗ್ರೀನ್ ಟೀಯಲ್ಲಿ ಅತ್ಯಧಿಕ ಮಟ್ಟದ ಪೋಷಕಾಂಶಗಳು ಇವೆ ಮತ್ತು ಇದು ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದರಿಂದ ಇನ್ನಿತರ ಹಲವಾರು ಆರೋಗ್ಯ ಲಾಭಗಳು ಕೂಡ ಇದೆ. ಗ್ರೀನ್ ಟೀ ಹಲವಾರು ರೀತಿಯ ಪೋಷಕಾಂಶಗಳನ್ನು ಒದಗಿಸಿಕೊಟ್ಟರೂ ಅದರಲ್ಲಿ ಇರುವಂತಹ ಕ್ಯಾಲರಿಯು ನಗಣ್ಯವಾಗಿದೆ. ಇದು ತುಂಬಾ ಪರಿಣಾಮಕಾರಿ ಅಂಶವಾಗಿದೆ.

ಗ್ರೀನ್ ಟೀ ನೈಸರ್ಗಿಕ ಮೂತ್ರವರ್ಧಕ

ಗ್ರೀನ್ ಟೀ ನೈಸರ್ಗಿಕ ಮೂತ್ರವರ್ಧಕ

ಗ್ರೀನ್ ಟೀಯು ನೈಸರ್ಗಿಕ ಮೂತ್ರವರ್ಧಕವಾಗಿದೆ. ಇದರಿಂದಾಗಿ ದೇಹದಲ್ಲಿ ದ್ರವ ಸಂಗ್ರಹಣೆ ಆಗುವಂತಹ ಸಮಸ್ಯೆಯನ್ನು ನಿವಾರಿಸಬಹುದು ಮತ್ತು ತಡೆಯಬಹುದು. ನಿಯಮಿತವಾಗಿ ಗ್ರೀನ್ ಟೀ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ಸುಮಾರು 19ರಷ್ಟು ಕೊಬ್ಬಿನಾಂಶವು ಕಡಿಮೆ ಆಗುವುದು. ಮಟ್ಚ ಟೀ ತುಂಬಾ ಪೋಷಕಾಂಶಗಳು ಇರುವುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ ಇದಕ್ಕೆ ಎಲೆಗಳನ್ನು ಹಾಕಿಕೊಂಡು ಅದನ್ನು ಕುಡಿಯಲಾಗುತ್ತದೆ.

English summary

Weight loss:How much and when should you have green tea

Green tea has gained widespread attention globally as a weight loss product, making it the second most popular beverage around, after water.Due to its nutritional and antioxidant value, green tea has been associated with several health benefits, including weight loss. It has been used for ages in traditional Chinese medicine to treat various health conditions.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more