For Quick Alerts
ALLOW NOTIFICATIONS  
For Daily Alerts

ನೀವು ತುಂಬಾ ಬ್ಯುಸಿ ಆದರೂ ನಿಮ್ಮ ಹೊಟ್ಟೆ ಕರಗುತ್ತದೆ ಹೇಗಂತೀರಾ ?

|

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಪ್ರತಿ ದಿನ ಪ್ರತಿ ಕ್ಷಣ ಹಗಲಿರುಳೆನ್ನದೆ ಹೋರಾಡುತ್ತಾರೆ . ಇದು ಈಗಿನ ಕಾಲಕ್ಕೆ ಅನಿವಾರ್ಯ ಕೂಡ . ಏಕೆಂದರೆ ಇದು ಸ್ಪರ್ಧಾತ್ಮಕ ಯುಗ ಇಲ್ಲಿ ಯಾರ ಬಗ್ಗೆ ಯಾರೂ ಯೋಚಿಸಲು ಸಮಯವೇ ಇರುವುದಿಲ್ಲ. ತಮ್ಮ ಕೆಲಸ ನಿಗದಿತ ಸಮಯದಲ್ಲಿ ಅಚ್ಚುಕಟಾಗಿ ಮುಗಿಸಿದರೆ ಸಾಕು ಎನ್ನುವ ಪರಿಸ್ಥಿತಿ ಬಂದಿರುತ್ತದೆ .

ಸಣ್ಣ ಮಕ್ಕಳಿಗೆ ಸ್ಕೂಲಿಗೆ ಹೋಗಿ ಮತ್ತೆ ಮನೆಗೆ ಬಂದು ಟ್ಯೂಷನ್ ಗೆ ಹೋಗುವ ಬ್ಯುಸಿ , ಅಪ್ಪನಿಗೆ ಆಫೀಸ್‌ಗೆ ಸಮಯಕ್ಕೆ ಸರಿಯಾಗಿ ಹೋಗುವ ಧಾವಂತ, ಅಮ್ಮನಿಗೆ ಅಡುಗೆ ಮಾಡಿ ಮಕ್ಕಳಿಗೆ ಗಂಡನಿಗೆ ಉಣಬಡಿಸಿ ತಾನೂ ಆದಷ್ಟು ಬೇಗ ಕೆಲಸಕ್ಕೆ ಹೋಗುವ ಯೋಚನೆ , ಕಂಪನಿ ಯ ಬಾಸ್ ಗೆ ನಿನ್ನೆ ಎಷ್ಟರ ಮಟ್ಟಿಗೆ ಕೆಲಸ ಮುಗಿದಿದೆ ಮತ್ತು ಇಂದು ಏನೇನು ಬದಲಾವಣೆ ತರಬೇಕು ಯಾವ ಇಮೇಲ್ ನೋಡಬೇಕು ಏನೇನು ಹೊಸ ಆವಿಷ್ಕಾರ ಮಾಡಬೇಕು ಎನ್ನುವ ಉದ್ವೇಗ , ಇನ್ನು ವಯಸ್ಸಾದವರಿಗೆ ಬೆಳಗ್ಗೆ ಎದ್ದು ಕ್ಲಬ್ , ಪಾರ್ಕ್ , ಆಸ್ಪತ್ರೆ , ಲೈಬ್ರರಿ ಹೀಗೆ ಹಲವಾರು ಕಡೆ ಓಡಾಡಿ ತಮ್ಮ ಗೆಳೆಯರನ್ನು ನೋಡುವ ತವಕ. ನಮ್ಮ ಸುತ್ತ ಮುತ್ತ ಪ್ರತೀ ದಿನವೂ ಹೀಗೇ ನಿರಂತರವಾಗಿ ನಡೆಯುತ್ತದೆ ಇದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ , ಬದಲಾಗುವುದೂ ಇಲ್ಲ .

belly fat

ಮನುಷ್ಯನ ಜೀವನವೇ ಹೀಗೆ . ಹುಟ್ಟಿದ ಮೇಲೆ ಸಾಯುವವರೆಗೂ ಸದಾ ಹೋರಾಟವೇ . ಇದರ ಮಧ್ಯೆ ತನಗೆ ತನ್ನ ಸ್ವಂತ ಜೀವನಕ್ಕೆ ಸಮಯ ಮೀಸಲಿಡುವುದನ್ನು ಮರೆತೇ ಬಿಡುತ್ತಾನೆ . ಇದರಿಂದ ಆತನಿಗೆ ಆರೋಗ್ಯದಲ್ಲಿ ಏರುಪೇರಾಗುತ್ತದೆ . ಒತ್ತಡ ಜಾಸ್ತಿ ಆಗಿ ಆಸ್ಪತ್ರೆ ಪಾಲಾಗುತ್ತಾನೆ . ತಿಂದಿದನ್ನು ಕರಗಿಸಲು ವಾಕಿಂಗ್ ಮಾಡಲೂ ಸಮಯವೇ ಇಲ್ಲದೆ ಆತನ ದೇಹದಲ್ಲಿ ಯಥೇಚ್ಛವಾಗಿ ಕೊಬ್ಬಿನ ಅಂಶ ಶೇಖರಣೆ ಗೊಳ್ಳುತ್ತಾ ಹೋಗುತ್ತದೆ . ಹೀಗಾದರೆ ಮುಂದಿನ ಗತಿ ಏನು ಎನ್ನುವ ಹೊಸ ಚಿಂತೆ ಕಾಡಲು ಶುರುವಾಗುತ್ತದೆ .

ಅಂತಹವರಿಗಾಗಿಯೇ ನಾವು ಇಲ್ಲಿ ಕೆಲವೊಂದು ಅದ್ಬುತ ಮತ್ತು ಚಮತ್ಕಾರಿ ಆಹಾರಗಳ ವಿಷಯಗಳನ್ನು ಹೊತ್ತು ತಂದಿದ್ದೇವೆ . ನಿಮ್ಮ ಹೊಟ್ಟೆಯ ಸುತ್ತಲೂ ಸೇರಿಕೊಂಡಿರುವ ಕೊಬ್ಬನ್ನು ಇವು ಅತ್ಯಂತ ಪರಿಣಾಮಕಾರಿಯಾಗಿ ಕರಗಿಸಬಲ್ಲವು ಹಾಗು ಇದಕ್ಕೆಂದು ನೀವು ನಿಮ್ಮ ಬೇರೆ ಸಮಯವನ್ನೇನು ಮೀಸಲಿಡಬೇಕಿಲ್ಲ . ನಿಮ್ಮ ದಿನ ನಿತ್ಯದ ಸಮಯದಲ್ಲೇ ನಿಮ್ಮ ಆಫೀಸ್ ಕೆಲಸದ ಮದ್ಯೆಯೇ ಅತ್ಯಂತ ಯಶಸ್ವಿಯಾಗಿ ನಿಮ್ಮ ದೇಹದಲ್ಲಿರುವ ಕೊಬ್ಬಿನಂಶವನ್ನು ಕಡಿಮೆ ಮಾಡಿಕೊಳ್ಳಬಹುದು ಅದು ಗಂಟೆಗಳಲ್ಲಲ್ಲ , ನಿಮಿಷಗಳಲ್ಲಿ ಅಲ್ಲ ಕೇವಲ ಕೆಲವೇ ಸೆಕೆಂಡು ಗಳಲ್ಲಿ !!! ಆಶ್ಚರ್ಯವಾಗುತ್ತಿದೆಯೇ ? ಹೌದು . ಇದು ಸತ್ಯ . ಅಮೇರಿಕಾ ದ ನ್ಯೂ ಯಾರ್ಕ್ ಟೈಮ್ಸ್ ಪ್ರಕಾಶನದಲ್ಲಿ ಮೂಡಿ ಬಂದಿರುವ ಹಾಗು ಅತಿ ಹೆಚ್ಚು ಮಾರಾಟವಾಗಿರುವ " ಜೀರೋ ಬೆಲ್ಲಿ ಡಯಟ್ " ಎಂಬ ಪುಸ್ತಕದಲ್ಲಿ ಇದರ ಬಗ್ಗೆ ಸಾಕಷ್ಟು ಸಂಶೋಧನೆ ಕೈಗೊಂಡು ಅತ್ಯಂತ ಮಹತ್ವ ಪೂರ್ಣ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ .

ನಾವು ಮೊದಲೇ ಹೇಳಿದ ಹಾಗೆ ಇದು ಗಂಟೆಗಳ ಅಥವಾ ನಿಮಿಷಗಳ ಲೆಕ್ಕಾಚಾರದಲ್ಲಿ ತೂಕ ಕಡಿಮೆ ಮಾಡಿಕೊಳ್ಳುವ ವಿಚಾರವೇ ಅಲ್ಲ . ಕೇವಲ ಸೆಕೆಂಡ್ ಲೆಕ್ಕದಲ್ಲಿ ನಿಮ್ಮ ದೇಹದ ಕೊಬ್ಬನ್ನು ಕರಗಿಸುವಂತಹ ಆಹಾರಗಳ ವಿಷಯ . ಹಾಗಾದರೆ ಬನ್ನಿ ನೋಡೋಣ ಯಾವ ಆಹಾರ ಎಷ್ಟು ಸೆಕೆಂಡ್ ಗಳಲ್ಲಿ ನಮ್ಮಗಳ ದೇಹದ ಮೇಲೆ ಪ್ರಭಾವ ಬೀರಿ ಒಳ್ಳೆಯ ಫಲಿತಾಂಶ ತಂದುಕೊಡಬಲ್ಲುದು ಎಂದು .

Most Read: ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಬ್ಲಾಕ್ ಕಾಫಿ - ಕೇವಲ 2 ಸೆಕೆಂಡ್ ಗಳಲ್ಲಿ

ನಾವು ಭಾರತೀಯರು ಹಾಲಿಲ್ಲದ ಕಾಫಿ ಕುಡಿದಿರುವ ಉದಾಹರಣೆಯೇ ಇಲ್ಲ . ಆದರೆ ನ್ಯೂ ಯಾರ್ಕ್ ಟೈಮ್ಸ್ ನ ಜೀರೋ ಬೆಲ್ಲಿ ಡಯಟ್ ಪುಸ್ತಕದಲ್ಲಿ ಬ್ಲಾಕ್ ಕಾಫಿ ಗೆ ಬಹಳ ಮಹತ್ವ ಕೊಟ್ಟಿದ್ದಾರೆ . ಅವರ ಪ್ರಕಾರ ಹಾಲು ಮತ್ತು ಸಕ್ಕರೆ ಹಾಕಿ ತಯಾರು ಮಾಡಿದ ಕಾಫಿ ಯಲ್ಲಿ ಸುಮಾರು 80 ಕ್ಯಾಲೋರಿ ಅಂಶವಿರುತ್ತದೆ . ಅದೇ ಬ್ಲಾಕ್ ಕಾಫಿ ಯಲ್ಲಿ ಜೀರೋ ಕ್ಯಾಲೋರಿ ಅಂಶವಿರುತ್ತದೆ . ಕೆಲಸದ ಮದ್ಯೆ ರಿಫ್ರೆಶ್ ಆಗಲು ದಿನಂಪ್ರತಿ 2 ಕಪ್ ಬ್ಲಾಕ್ ಕಾಫಿ ಆರ್ಡರ್ ಮಾಡಬೇಕಂತೆ . ಇದರಿಂದ ಒತ್ತಡ ಕೂಡ ಕಡಿಮೆ ಆಗಿ ಹೊಟ್ಟೆಯಲ್ಲಿನ ಕೊಬ್ಬಿನಂಶ ಕೂಡ ಕರಗುತ್ತದಂತೆ . ಇದರಿಂದ ಒಂದು ವರ್ಷದಲ್ಲಿ ಸುಮಾರು 14 ಪೌಂಡಗಳಷ್ಟು ತೂಕ ಹೆಚ್ಚುವುದು ಅಕಸ್ಮಾತಾಗಿ ತಪ್ಪುತ್ತದೆ .

ನೀವು ಸೇವಿಸುವ ಸುವಾಸನೆಯುಳ್ಳ ಗಾಳಿ - ಕೇವಲ 5 ಸೆಕೆಂಡ್ ಗಳಲ್ಲಿ

ಇದಕ್ಕೆ ಸಹಕಾರ ಕೊಡುವವು ಗ್ರೀನ್ ಆಪಲ್ , ಬಾಳೆ ಹಣ್ಣು ಮತ್ತು ಪಿಯರ್ ಹಣ್ಣುಗಳು . ಈ ಹಣ್ಣುಗಳ ಸುವಾಸನೆ ಸಾಮಾನ್ಯವಾಗಿ ಮನುಷ್ಯನ ಹೊಟ್ಟೆ ಹಸಿವನ್ನು ತಡೆಯುತ್ತದೆ ಮತ್ತು ಇವುಗಳಿಂದ ಮಾಡಿದ ಸಕ್ಕರೆ ಯುಕ್ತ ಜ್ಯೂಸು ಸಹ ಇದೆ ರೀತಿ ಉಪಯೋಗಕ್ಕೆ ಬರುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳು ದೃಢಪಡಿಸಿವೆ . ಇದನ್ನು ನಮ್ಮ ಮನೆಗಳಲ್ಲಿ ನಡೆಯುವ ಒಂದು ಸಂಧರ್ಭವನ್ನು ಉದಾಹರಣೆ ಸಹಿತ ತೆಗೆದುಕೊಂಡು ಹೇಳಬೇಕೆಂದರೆ , ಡೈನಿಂಗ್ ಟೇಬಲ್ ಮೇಲೆ ಹಣ್ಣುಗಳ ಬುಟ್ಟಿ ಇಟ್ಟಿರುತ್ತೀರಿ . ಅದರ ಮೇಲೆ ನೊಣಗಳು ಬಂದು ಕೂರುವುದು ಸಹಜ . ಈ ಸಮಯದಲ್ಲಿ ಶಿಯಾ ಬಟರ್ ಆಧಾರಿತ ಸುವಾಸಿತ ಲೋಷನ್ ಒಂದನ್ನು ಹಣ್ಣುಗಳ ಬುಟ್ಟಿಯ ಪಕ್ಕದಲ್ಲಿಡಿ ಮತ್ತು ಚಮತ್ಕಾರ ನೋಡಿ . ನೊಣಗಳು ಹಣ್ಣುಗಳನ್ನು ಸ್ವಲ್ಪವೂ ತಿನ್ನುವುದಿಲ್ಲ . ಬದಲಿಗೆ ಶಿಯಾ ಬಟರ್ ನ ಸುವಾಸನೆ ಕುಡಿದುಕೊಂಡೇ ಕುಳಿತಿರುತ್ತವೆ . ಏಕೆಂದರೆ ಅವಕ್ಕೆ ಹೊಟ್ಟೆ ಹಸಿವಾಗುವುದಿಲ್ಲ .

ಕ್ಯಾಂಡಿ ಡೇ ಡ್ರೀಮ್ - ಕೇವಲ 15 ಸೆಕೆಂಡ್ ಗಳಲ್ಲಿ

ಸಂಶೋಧನೆಯ ಪ್ರಕಾರ ಊಟಕ್ಕೆ ಮುಂಚೆ ನಿಮಗಿಷ್ಟವಾಗುವ ಕ್ಯಾಂಡಿ ಪ್ಯಾಕೆಟ್ ಅನ್ನು ಸೇವಿಸಿ ಇದೊಂದು " ಟೇಸ್ಟ್ ನ ಟೆಸ್ಟ್ " ತಿನ್ನಲು ರುಚಿಕರ ಅದರಲ್ಲೂ ನಿಮಗಿಷ್ಟವಾದ ಫ್ಲೇವರ್ ತಾನೇ ಸಂಶೋಧಕರು ಇದರಲ್ಲಿ ಸತ್ಯ ಕಂಡು ಹಿಡಿದ ರೀತಿ ಹೇಗೆಂದರೆ , ಹಲವು ರೀತಿಯ ವಯಸ್ಸಿನ ಜನರನ್ನು ಒಂದೆಡೆ ಸೇರಿಸಿ ಅವರ ಕೈಗೆ ಅವರಿಗೆ ಮೆಚ್ಚುಗೆಯಾಗುವಂತಹ ಫ್ಲೇವರ್ ನ ಕ್ಯಾಂಡಿ ಪ್ಯಾಕೆಟ್ ಕೊಟ್ಟು ತಿನ್ನಲು ಹೇಳಿದರು . 3 ರಿಂದ 30 ಪ್ಯಾಕೆಟ್ ಗಳವರೆಗೂ ತಿನ್ನುವಂತೆ ಅವಕಾಶ ಕಲ್ಪಿಸಿದರು . ಆದರೆ ಯಾರು ಹೆಚ್ಚಿಗೆ ಕ್ಯಾಂಡಿ ಗಳನ್ನು ತಿನ್ನುತ್ತೇವೆಂದು ಅಂದುಕೊಂಡರೋ ಅವರು ಅತೀ ಕಡಿಮೆ ಕ್ಯಾಂಡಿ ಪ್ಯಾಕೆಟ್ ಗಳನ್ನು ತಿಂದರು .

ಚೀಸ್ ಬರ್ಗರ್ ನಿಂದ 560 ಕ್ಯಾಲೋರಿ ಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅದೂ ಕೇವಲ 30 ಸೆಕೆಂಡ್ ಗಳಲ್ಲಿ

ನೀವು ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಒಮ್ಮೆ ಅಂದುಕೊಂಡರೆ ಸಾಕು , ಅದರಂತೆ ಪ್ರಯತ್ನ ಪಟ್ಟರೆ ಖಂಡಿತ ನೀವು ಅಂದುಕೊಂಡ ಸಮಯದಲ್ಲಿ ನಿಮಗೆ ಪ್ರತಿಫಲ ದೊರೆಯುವುದು . ಇಲ್ಲಿ ಬರ್ಗರ್ ಗಳ ಬಗ್ಗೆ ನೋಡುವುದಾದರೆ

* ಬರ್ಗರ್ ಕಿಂಗ್ ಗೆ ಹೋಗಿ ಎ 1 ಬರ್ಗರ್ ಆರ್ಡರ್ ಮಾಡುವ ಬದಲು ಬೇಕನ್ ಡೀಲಕ್ಸ್ ಚೀಸ್ ಬರ್ಗರ್ ಆರ್ಡರ್ ಮಾಡಿ . ಇದು ನಿಮ್ಮ ದೇಹದಲ್ಲಿ ಸುಮಾರು 560 ಕ್ಯಾಲೋರಿ ಗಳಷ್ಟು ಕಡಿಮೆ ಮಾಡುವ ಶಕ್ತಿ ಹೊಂದಿರುತ್ತದೆ .
* ವೆಂಡಿ ಬರ್ಗರ್ ಶಾಪ್ ಗೆ ಹೋದರೆ ಹಾಟ್ ಎನ್ ಜ್ಯೂಸಿ ಕ್ವಾರ್ಟರ್ ಪೌಂಡ್ ಸಿಂಗಲ್ ಆರ್ಡರ್ ಮಾಡುವ ಬದಲು ಜೂನಿಯರ್ ಬೇಕನ್ ಚೀಸ್ ಬರ್ಗರ್ ಆರ್ಡರ್ ಮಾಡಿ . ಇದು ನಿಮ್ಮ ದೇಹದಲ್ಲಿ ಸುಮಾರು 210 ಕ್ಯಾಲೋರಿ ಗಳಷ್ಟು ಕಡಿಮೆ ಮಾಡುವ ಶಕ್ತಿ ಹೊಂದಿರುತ್ತದೆ .
* ಮೈಕ್ ಡೊನಾಲ್ಡ್ಸ್ ಗೆ ಹೋದರೂ ಕೂಡ ಇದೇ ರೀತಿ ಟ್ರೈ ಮಾಡಬಹುದು . ಅಲ್ಲಿ ಬೇಕನ್ , ಎಗ್ ಮತ್ತು ಚೀಸ್ ಬಗೆಲ್ ಆರ್ಡರ್ ಮಾಡುವ ಬದಲು ಎಗ್ ಮೈಕ್ ಮುಫಿನ್ ಆರ್ಡರ್ ಮಾಡಿ ಸುಮಾರು 320 ಕ್ಯಾಲೋರಿ ಗಳಷ್ಟು ಕಡಿಮೆ ಮಾಡಿಕೊಳ್ಳಿ . ಇವೆಲ್ಲಾ ನೀವು ತುಂಬಾ ಸಮಯ ತೆಗೆದುಕೊಂಡು ಮಾಡಬೇಕಿಲ್ಲ . ಕೇವಲ ನಿಮ್ಮ ಸಮಯದಲ್ಲೇ ಮಾಡಬಹುದು ಮತ್ತು ನೀವು ಅಂದುಕೊಂಡ ಹಾಗೆ ನಿಮ್ಮ ದೇಹದ ತೂಕ ಕಡಿಮೆ ಮಾಡಿ ಒಳ್ಳೆಯ ಆಕಾರದಲ್ಲಿ ನಿಮ್ಮ ದೇಹವನ್ನು ಇಟ್ಟುಕೊಳ್ಳಬಹುದು .

ನಿಮ್ಮ ವರ್ಕ್ ಔಟ್ ಸಮಯದ ವೇಳಾ ಪಟ್ಟಿ ತಯಾರಿಸಿಕೊಳ್ಳಿ - ಕೇವಲ 60 ಸೆಕೆಂಡ್ ಗಳಲ್ಲಿ

ಕೆಲವರು ಡ್ರಿಂಕ್ಸ್ ಮಾಡುತ್ತಾರೆ ಎನ್ನುವುದು ಸಹಜವಾಗಿಯೇ ನಮಗೆ ತಿಳಿದಿರುವ ವಿಚಾರ . ಅಂತಹವರು ಜಿಮ್ ಗೆ ಹೋಗುವ ಮೊದಲು ತಮ್ಮ ಸ್ನೇಹಿತರ ಜೊತೆ ಒಂದು ಸುತ್ತು ಡ್ರಿಂಕ್ಸ್ ಮಾಡಿದ ಮೇಲೆಯೇ ದೈಹಿಕ ಕಸರತ್ತು ಮಾಡುವ ಮನಸ್ಸು ಮಾಡುವುದು . ಕೆಲವರು ತಮ್ಮ ಸಂಗಾತಿಯೊಂದಿಗೆ ಈ ಅಭ್ಯಾಸ ಇಟ್ಟುಕೊಂಡಿರುತ್ತಾರೆ . ಆದರೆ ಇಲ್ಲಿ ಒಂದು ಸಣ್ಣ ಬದಲಾವಣೆ ಮಾಡಿದರೆ ದೇಹ ಬಹಳ ಆರೋಗ್ಯದಿಂದ ಕೂಡಿರುತ್ತದೆ . ಏನೆಂದರೆ ಮೊದಲು ನಾವು ದೈಹಿಕವಾಗಿ ಸದೃಢರಾಗಬೇಕು . ನಂತರ ಸ್ನೇಹಿತರು , ಪಾರ್ಟಿ , ಕೋಲ್ಡ್ ಡ್ರಿಂಕ್ಸ್ , ಹಾಟ್ ಡ್ರಿಂಕ್ಸ್ ಎಲ್ಲಾ ಇದ್ದಿದ್ದೇ . ಆದ್ದರಿಂದ ಸಮಯಕ್ಕೆ ಸರಿಯಾಗಿ ಜಿಮ್ ಗೆ ಹೋಗುವುದನ್ನು ಮಾತ್ರ ಮರೆಯಬಾರದು . ಜಮಾ ಇಂಟರ್ನಲ್ ಮೆಡಿಸಿನ್ ನ ವರದಿಯ ಪ್ರಕಾರ ಸುಮಾರು 4000 ಜೋಡಿಗಳು ಈ ರೀತಿಯ ಆರೋಗ್ಯಕರ ಪದ್ದತಿಯನ್ನು ತಮ್ಮ ಸ್ನೇಹಿತರ ಜೊತೆ ಇದ್ದಾಗ ತಾವೂ ಅನುಸರಿಸಿ ಜೊತೆಗಿರುವವರನ್ನು ಹುರಿದುಂಬಿಸುತ್ತಾರಂತೆ.

Most Read: ಒಂದೆರಡು ವಾರದಲ್ಲಿಯೇ ಬೊಜ್ಜು ಹೊಟ್ಟೆ ಕರಗಿಸುವ ಗಿಡಮೂಲಿಕೆಗಳು

ಫ್ರೋಜನ್ ತರಕಾರಿಗಳನ್ನು ಅಡುಗೆಗೆ ಉಪಯೋಗಿಸುವುದು - ಪರಿಣಾಮ ಕೇವಲ 75 ಸೆಕೆಂಡ್ ಗಳಲ್ಲಿ

ಫ್ರೆಶ್ ಆದ ಅಥವಾ ಕ್ಯಾನಿಂಗ್ ಮಾಡಿದ ತರಕಾರಿಗಳಲ್ಲಿ ಪೌಷ್ಟಿಕಾಂಶ ಅಧಿಕವಾಗಿದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ . ನಿಜವಾದ ಮತ್ತು ಹೆಚ್ಚು ಪೌಷ್ಟಿಕಾಂಶ ಅಡಗಿರುವುದು ಫ್ರಿಡ್ಜ್ ನಲ್ಲಿ ಇಟ್ಟಿರುವ ಫ್ರೋಜನ್ ತರಕಾರಿಗಳಲ್ಲಿ ಜರ್ನಲ್ ಒಫ್ ದಿ ಸೈನ್ಸ್ ಒಫ್ ಫುಡ್ ಅಂಡ್ ಅಗ್ರಿಕಲ್ಚರ್ ನ ವರದಿಯ ಪ್ರಕಾರ ಕ್ಯಾನಿಂಗ್ ಮಾಡಿದ ತರಕಾರಿಗಳಲ್ಲಿ ಸುಮಾರು 95 ಶೇಖಡಾ ವಿಟಮಿನ್ ' ಬಿ ' ಮತ್ತು ವಿಟಮಿನ್ ' ಸಿ ' ಹಾನಿಗೊಳಗಾಗಿರುತ್ತದೆ

ಓಟ್ ಮೀಲ್ ನ ಉಪಹಾರ ಕೇವಲ 90 ಸೆಕೆಂಡ್ ಗಳಲ್ಲಿ ಪರಿಣಾಮಕಾರಿ :

ಜರ್ನಲ್ ಒಫ್ ದಿ ಅಮೆರಿಕನ್ ಕಾಲೇಜ್ ಆಫ್ ನ್ಯೂಟ್ರಿಷನ್ ಸ್ಟಡಿಯ ವರದಿಯ ಆಧಾರದ ಮೇಲೆ ಬಿಸಿಯ ಓಟ್ ಮೀಲ್ ನ ಉಪಹಾರ ತಣ್ಣನೆಯ ಧಾನ್ಯಗಳಿಂದ ತಯಾರು ಮಾಡಿದ ಬೇರೆ ಉಪಹಾರಕ್ಕಿಂತ ಮನುಷ್ಯನ ದೇಹದ ಹಸಿವನ್ನು ನೀಗಿಸುತ್ತದೆ . ಉದಾಹರಣೆಗೆ ,
ಬಿಸ್ಟ್ರೋ ಕಪ್ ಓಟ್ ಮೀಲ್ : ಒಣಗಿರುವ ಓಟ್ , ಡ್ರೈ ಫ್ರೂಟ್ ಗಳು , ಅನೇಕ ರೀತಿಯ ಅರೋಗ್ಯ ಸಹಕಾರಿ ಬೀಜಗಳು ಮತ್ತು ಇಷ್ಟವಾಗುವ ಯಾವುದಾದರು ಒಂದು ಫ್ಲೇವರ್ ಇವುಗಳ ಸಂಪೂರ್ಣ ಮಿಶ್ರಣ . ಇಷ್ಟೆಲ್ಲ ಹೊಂದಿರುವ ಈ ಪ್ಯಾಕ್ ನಿಂದ ಆರೋಗ್ಯ ವೃದ್ಧಿ ಖಂಡಿತ .

ವಾಟೆಯುಳ್ಳ ಹಣ್ಣುಗಳು - ಕೇವಲ 100 ಸೆಕೆಂಡ್ ಗಳಲ್ಲಿ

ಈ ರೀತಿಯ ಹಣ್ಣುಗಳಿಗೆ ಬೀಜದ ಮೇಲೊಂದು ರಕ್ಷಾಕವಚ ಹೊಂದಿರುತ್ತವೆ . ಉದಾಹರೆಣೆಯೆಂದರೆ ಮಾವಿನ ಹಣ್ಣು , ಪೀಚ್ ಹಣ್ಣು , ಪ್ಲಮ್ ಮತ್ತು ನೆಕ್ಟಾರೈನ್ ಹಣ್ಣು ಇವುಗಳು ಅಧಿಕ ಕೊಬ್ಬಿನ ಅಂಶವನ್ನು ಕರಗಿಸಿ , ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡಿ ಇನ್ಸುಲಿನ್ ಸಮಸ್ಯೆಯನ್ನು ನಿಯಂತ್ರಿಸುತ್ತದೆ . ಈ ಹಣ್ಣುಗಳಲ್ಲಿ ಅತ್ಯಂತ ಶಕ್ತಿಶಾಲಿಯಾದ ಫಿನಾಲಿಕ್ ಕಾಂಪೌಂಡ್ ಗಳಿರುತ್ತವೆ . ಇವುಗಳನ್ನು ಸ್ನ್ಯಾಕ್ ಗಳಾಗಿ , ಬೆಳಗಿನ ತಿಂಡಿಯ ಜೊತೆ ಅಥವಾ ಮಧ್ಯಾಹ್ನದ ಸಲಾಡ್ ಜೊತೆ ಉಪಯೋಗಿಸಬಹುದು .

ನಿಮ್ಮ ಡಿನ್ನರ್ ಅನ್ನು ನೀವೇ ಪ್ಲಾನ್ ಮಾಡಿ - 2 ನಿಮಿಷದಲ್ಲಿ ಪರಿಣಾಮ ನೋಡಿ

ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಮೊದಲು ಅಥವಾ ಮಲಗುವ ಮುಂಚೆ ಊಟ ಮಾಡಿ ತಕ್ಷಣ ಮಲಗಿದರೆ ತೂಕ ಇಳಿಸಿಕೊಳ್ಳಬಹುದಂತೆ ಕೇಳಲು . ವಿಚಿತ್ರವೆನಿಸಿದರೂ ಇದು ಸತ್ಯ . ಪೆನ್ನ್ ಸ್ಟೇಟ್ ನ ನಿರಂತರ ಅಧ್ಯಯನದಿಂದ ಈ ವರದಿ ಬಯಲಾಗಿದೆ . ಅವರ ಪ್ರಕಾರ ಊಟಕ್ಕೆ ರಾತ್ರಿ ರೆಸ್ಟೋರೆಂಟ್ ನಲ್ಲಿ ಕುಳಿತುಕೊಳ್ಳುವ ಮುಂಚೆ ಸೇಬಿನ ಹಣ್ಣಿನ ಜ್ಯೂಸು ಅಥವಾ ಬ್ರೋತ್ ಸೂಪ್ ಕುಡಿದರೆ ಶೇಕಡಾ 20 ರಷ್ಟು ಕ್ಯಾಲೋರಿ ತೆಗೆದುಕೊಳ್ಳುವುದು ತಪ್ಪುತ್ತದಂತೆ . ರೆಸ್ಟೋರೆಂಟ್ ಮೀಲ್ ನಲ್ಲಿ ಸರಾಸರಿ ಸುಮಾರು 1128 ಕ್ಯಾಲೋರಿ ಇರುತ್ತದಂತೆ . ಪ್ರತಿ ದಿನ ಶೇಕಡಾ 20 ರಷ್ಟು ಕಡಿಮೆ ಮಾಡಿದರೆ ವರ್ಷಕ್ಕೆ 23 ಪೌಂಡ್ ನಷ್ಟು ತೂಕ ಕಡಿಮೆ ಮಾಡಿ ಕೊಳ್ಳಬಹುದಂತೆ.

Most Read: ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಅದ್ಭುತವಾದ ಮನೆಮದ್ದುಗಳು

ಬೀಫ್ ಫ್ರೈ ಮಾಡಿ - ಕೇವಲ 10 ನಿಮಿಷಗಳು

ಇದು ಯಾರಿಗೆ ವಾರಾಂತ್ಯ ಕೂಡ ಬಿಡುವಿಲ್ಲದೆ ಇರುತ್ತದೋ ಅವರಿಗೆ ಹೇಳಿ ಮಾಡಿಸಿದ ಅಡುಗೆ . ಪಾನ್ ನಲ್ಲಿ 1 ಟೇಬಲ್ ಸ್ಪೂನ್ ನಷ್ಟು ಕ್ಯಾನೋಲ ಆಯಿಲ್ ಹಾಕಿ ಚೆನ್ನಾಗಿ ಹೀಟ್ ಮಾಡಿ . ನಂತರ ಕಾದ ಪಾನ್ ನಲ್ಲಿ 3 ಪೌಂಡ್ ನಷ್ಟು ಬೀಫ್ ಹಾಕಿ ಎಲ್ಲ ಕಡೆಯಿಂದಲೂ ಸುಮಾರು ಹತ್ತು ನಿಮಿಷದವರೆಗೂ ಚೆನ್ನಾಗಿ ರೋಸ್ಟ್ ಮಾಡಿ . ಈರುಳ್ಳಿ ಮತ್ತು ಮಶ್ರೂಮ್ ಗಳನ್ನು ಹೆಚ್ಚಿಟ್ಟುಕೊಳ್ಳಿ . ರೋಸ್ಟ್ ಮಾಡಿದ ಬೀಫ್ ಅನ್ನು ಕುಕ್ಕರ್ ಗೆ ಹಾಕಿ ಈರುಳ್ಳಿ ಚೂರುಗಳು , ಹಣಬೆ ಚೂರುಗಳು , 2 ಟೇಬಲ್ ಸ್ಪೂನ್ ನಷ್ಟು ಕೆಂಪು ವೈನ್ ವಿನೆಗರ್ , 1 ಟೇಬಲ್ ಸ್ಪೂನ್ ನಷ್ಟು ವರ್ಚೆಸ್ಟರ್ಷಿರೆ ಸಾಸ್ , ಕೆಲವು ಬೇ ಎಲೆಗಳು ಮತ್ತು 1 ಕ್ಯಾನ್ ನಷ್ಟು ಡಾರ್ಕ್ ಬಿಯರ್ ಹಾಕಿ ಕಡಿಮೆ ಉರಿಯ ಮೇಲೆ ಚೆನ್ನಾಗಿ ಬೇಯಿಸಿ 6 ಗಂಟೆಯ ನಂತರ 345 ಕ್ಯಾಲೋರಿ ಹೊಂದಿರುವ ಭಾನುವಾರದ ಬಾಡೂಟ ತಿನ್ನಲು ಸಿದ್ದ .

English summary

Ways to lose belly fat when you are crazy busy

“Crazy busy.” There’s no escape from it. No matter who you ask—family, friends, colleagues, retirees, people in solitary confinement—everybody seems to be “crazy busy.” You’re crazy busy, too. Everyone from your Mom to your college roommate to your boss expects immediate feedback to their latest email, Instagram or text message—while you’re crazy busy sharing your own.That’s a lot of pressure. No wonder you don’t feel like you can find time to take care of yourself and finally get rid of that extra belly fat. Well, we’ve got good news: You don’t need any extra time.
X
Desktop Bottom Promotion