Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 11 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಹೊಟ್ಟೆಯ ಕೊಬ್ಬು ಕರಗಿಸಲು ದಿನನಿತ್ಯ ಇಂತಹ 6 ಆರೋಗ್ಯಕಾರಿ ಕ್ರಮಗಳನ್ನು ಪಾಲಿಸಿ
ಹೊಟ್ಟೆಯ ಕೊಬ್ಬು ಕರಗಿಸುವುದು ತುಂಬಾ ಕಠಿಣ ಕೆಲಸವಾಗಿರುವುದು. ಇದಕ್ಕಾಗಿ ಹಲವಾರು ವಿಧಾನಗಳನ್ನು ನೀವು ಹುಡುಕಬಹುದು. ಆದರೆ ಯಾವುದರಿಂದಲೂ ನಿಮಗೆ ಅಷ್ಟರ ಮಟ್ಟಿನ ತೃಪ್ತಿ ಸಿಗದೆ ಇರಬಹುದು. ಹೊಟ್ಟೆಯ ಕೊಬ್ಬಿನ ಸಮಸ್ಯೆಯಿಂದಾಗಿ ನಿಮಗೆ ಬೇಕಾದಂತೆ ಬಟ್ಟೆ ಧರಿಸಲು ಸಾಧ್ಯವಾಗದೆ ಇರಬಹುದು. ಇದರಿಂದ ಇನ್ನಿತರ ಕೆಲವೊಂದು ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು. ಹೊಟ್ಟೆಯ ಕೊಬ್ಬು ಎನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.
ಯಾಕೆಂದರೆ ಅತಿಯಾದ ಹೊಟ್ಟೆಯ ಕೊಬ್ಬಿನಿಂದಾಗಿ ಹೃದಯದ ಕಾಯಿಲೆ, ಟೈಪ್ 2 ಮಧುಮೇಹ, ಸ್ತನದ ಕ್ಯಾನ್ಸರ್ ಮತ್ತು ಅಧಿಕ ರಕ್ತದೊತ್ತಡ ಕಾಣಿಸಬಹುದು. ಹೊಟ್ಟೆಯ ಕೊಬ್ಬು ಕರಗಿಸಲು ಮುಖ್ಯ ವಿಧಾನವೆಂದರೆ ವ್ಯಾಯಾಮ ಮತ್ತು ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಿಕೊಂಡು ಹೋಗುವುದು. ಇದರಿಂದ ಹೊಟ್ಟೆಯ ಕೊಬ್ಬು ಕರಗಿಸಬಹುದು. ಆದರೆ ಇದರಿಂದ ನೀವು ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ತೂಕ ಕಳೆದುಕೊಳ್ಳಲು ನೆರವಾಗುವುದು. ಹೊಟ್ಟೆಯ ಕೊಬ್ಬನ್ನು ತುಂಬಾ ಪರಿಣಾಮಕಾರಿಯಾಗಿ ಇಳಿಸಿಕೊಳ್ಳುವುದು ಹೇಗೆ ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ....

ಆಹಾರ ಕ್ರಮ ಸುಧಾರಿಸಿಕೊಳ್ಳಿ
ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಕ್ರಮವು ಅತೀ ಅಗತ್ಯವಾಗಿರುವುದು. ಆರೋಗ್ಯಕರ ಆಹಾರ ಕ್ರಮವು ನಿಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ನೀವು ಹೀರಿಕೊಳ್ಳುವ ನಾರಿನಾಂಶವನ್ನು ಆಹಾರದಲ್ಲಿ ಹೆಚ್ಚಾಗಿ ಸೇವಿಸಬೇಕು. ನಾರಿನಾಂಶವು ಅಧಿಕವಾಗಿದ್ದರೆ ತೂಕ ಇಳಿಸಬಹುದು. ಇದರಿಂದ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ನೀವು ಕಡಿಮೆ ತಿನ್ನುವಿರಿ. ನಾರಿನಾಂಶವು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಆಹಾರದಲ್ಲಿ ನೀವು ಸೇವಿಸುವ ಕ್ಯಾಲರಿ ಪ್ರಮಾಣ ಕಡಿಮೆ ಮಾಡುವುದು. ನಾರಿನಾಂಶವು ಅಧಿಕವಾಗಿರುವ ಆಹಾರಗಳೆಂದರೆ ಅಗಸೆಬೀಜಗಳು, ಬೆರ್ರಿಗಳು, ಧಾನ್ಯಗಳು ಮತ್ತು ಕಾಳುಗಳು. ಕೊಬ್ಬಿನಾಂಶವಿರುವ ಆಹಾರ, ಸಕ್ಕರೆ ಮತ್ತು ಸಂಸ್ಕರಿತ ಕಾರ್ಬೋಹೈಡ್ರೇಟ್ಸ್ ನ್ನು ತ್ಯಜಿಸಬೇಕು. ಇದರಲ್ಲಿ ಪೋಷಕಾಂಶಗಳು ಕಡಿಮೆ ಇರುವುದು ಮತ್ತು ಕ್ಯಾಲರಿ ಹೆಚ್ಚಾಗಿರುವುದು.

ಒತ್ತಡ ಕಡಿಮೆ ಮಾಡಿ
ಒತ್ತಡದಿಂದಾಗಿ ತೂಕ ಹೆಚ್ಚಳವಾಗುವುದು. ಒತ್ತಡದ ಹಾರ್ಮೋನು ಕಾರ್ಟಿಸಾಲ್ ಹೆಚ್ಚಾಗುವ ಕಾರಣದಿಂದಾಗಿ ಹೊಟ್ಟೆಯ ಕೊಬ್ಬು ಬೆಳೆಯುವುದು. ಕಾರ್ಟಿಸಲ್ ವ್ಯಕ್ತಿಯ ಆಹಾರ ಕ್ರಮದ ಮೇಲೆ ಪರಿಣಾಮ ಬೀರುವುದು. ಇದು ಹಸಿವು ಹೆಚ್ಚು ಮಾಡುವ ಕಾರಣದಿಂಧಾಗಿ ಅನಗತ್ಯವಾಗಿ ಕ್ಯಾಲರಿ ಸೇವನೆ ಮಾಡುವಂತೆ ಆಗುವುದು. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಒತ್ತಡ ಕಡಿಮೆ ಮಾಡಿಕೊಳ್ಳುವಂತಹ ಕೆಲವೊಂದು ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳಬೇಕು. ಒತ್ತಡ ಕಡಿಮೆ ಮಾಡಲು ಯೋಗ ಅಥವಾ ಧ್ಯಾನ ಮಾಡಬಹುದು. ಒತ್ತಡ ಕಡಿಮೆ ಮಾಡಲು ನೀವು ಹೆಚ್ಚಿನ ಸಮಯ ಕುಟುಂಬದೊಂದಿಗೆ ಕಳೆಯಬಹುದು.

ಸರಿಯಾಗಿ ನಿದ್ರೆ ಮಾಡಿ
ನಿದ್ರೆಯು ಸಂಪೂರ್ಣ ಆರೋಗ್ಯ ಮೇಲೆ ಮಾತ್ರವಲ್ಲದೆ, ಹೊಟ್ಟೆಯ ಕೊಬ್ಬಿನ ಮೇಲೂ ಪರಿಣಾಮ ಬೀರುವುದು. ನಿದ್ರಾಹೀನತೆ ಇದ್ದರೆ ಅದರಿಂದ ಹಾರ್ಮೋನುಗಳ ವೈಪರಿತ್ಯ ಉಂಟಾಗಿ ಹಸಿವು ಹಾಗೂ ಬಯಕೆ ಹೆಚ್ಚಾಗುವುದು. ನಿದ್ರಾ ಹೀನತೆಯಿಂದಾಗಿ ಲೆಪ್ಟಿನ್ ಉತ್ಪತ್ತಿ ಕಡಿಮೆ ಆಗುವುದು, ಇದು ಹಸಿವು ನಿಯಂತ್ರಿಸುವ ಹಾರ್ಮೋನು ಆಗಿದೆ. ಇನ್ನೊಂದೆಡೆ ಇದು ಮತ್ತೊಂದು ಹಾರ್ಮೋನು ಆಗಿರುವಂತಹ ಗ್ರೇಲಿನ್ ಬಿಡುಗಡೆ ಮಾಡುವುದು. ಇದು ಹಸಿವು ಹೆಚ್ಚು ಮಾಡುವುದು. ಇದರಿಂದ ನೀವು ಹೊಟ್ಟೆಯ ಕೊಬ್ಬು ಕರಗಿಸಬೇಕು ಎಂದಾಗಿದ್ದರೆ ಆಗ ನೀವು ನಿದ್ರಾಹೀನತೆ ನಿವಾರಣೆ ಮಾಡಿಕೊಳ್ಳಿ.

ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ
ಆಲ್ಕೋಹಾಲ್ ಮನುಷ್ಯನ ದೇಹದ ಮೇಲೆ ಹಲವಾರು ರೀತಿಯಿಂದ ಪರಿಣಾಮ ಬೀರುವುದು. ಇದು ನಿಮ್ಮ ಆರೋಗ್ಯವನ್ನು ಸತತವಾಗಿ ಕುಂದಿಸುವುದು. ಆಲ್ಕೋಹಾಲ್ ನಿಂದಾಗಿ ಹೊಟ್ಟೆಯ ಸುತ್ತಲು ಅತಿಯಾಗಿ ಕೊಬ್ಬು ಶೇಖರಣೆ ಆಗುವುದು. ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿಕೊಂಡರೆ ಅದರಿಂದ ಹೊಟ್ಟೆಯ ಕೊಬ್ಬು ಕೂಡ ಕರಗಿಸಬಹುದು. ಹೆಚ್ಚಿನ ಆಲ್ಕೋಹಾಲ್ ಪಾನೀಯಗಳಲ್ಲಿ ಸಕ್ಕರೆ ಅಂಶವು ಹೆಚ್ಚಾಗಿ ರುವುದು. ಇದು ಹೊಟ್ಟೆಯ ಕೊಬ್ಬನ್ನು ವೃದ್ಧಿಸುವುದು.

ಆ್ಯಪಲ್ ಸೀಡರ್ ವಿನೇಗರ್ ನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿ
ಆ್ಯಪಲ್ ಸೀಡರ್ ವಿನೇಗರ್ ತೂಕ ಕಳೆದುಕೊಳ್ಳಲು ನೆರವಾಗುವುದು. ಕ್ಯಾಲರಿ ಕಡಿಮೆ ಇರುವಂತಹ ಈ ಪಾನೀಯವು ಕೊಬ್ಬು ಶೇಖರಣೆ ಆಗುವುದನ್ನು ತಡೆಯುವುದು. ಇದು ಹೊಟ್ಟೆಯ ಕೊಬ್ಬು ಕರಗಿಸಲು ಅತ್ಯುತ್ತಮವಾದ ಪರಿಹಾರವಾಗಿದೆ. ಹೊಟ್ಟೆಯ ಕೊಬ್ಬನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡಲು ನೀವು ಇದನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ನೀವು ಇದನ್ನು ನೀರಿಗೆ ಸೇರಿಸಿಕೊಂಡು ಕುಡಿಯಬಹುದು. ನೀವು ಬೆಳಗ್ಗೆ ಆ್ಯಪಲ್ ಸೀಡರ್ ವಿನೇಗರ್ ನ್ನು ಕುಡಿಯಬೇಕು. ಒಂದು ಕಪ್ ಬಿಸಿ ನೀರಿಗೆ ಸಣ್ಣ ಪ್ರಮಾಣದಲ್ಲಿ ಆ್ಯಪಲ್ ಸೀಡರ್ ವಿನೇಗರ್ ಸೇರಿಸಿರಿ.ಇದಕ್ಕೆ ಒಂದು ತುಂಡು ಲಿಂಬೆರಸ ಹಿಂಡಿಕೊಳ್ಳಿ ಮತ್ತು ಇದನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಗುವುದು.

ಕೃತಕ ಹಣ್ಣಿನ ಜ್ಯೂಸ್ ತ್ಯಜಿಸಿ
ಕೃತಕ ಹಣ್ಣಿನ ಜ್ಯೂಸ್ ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವುದು. ಇದರಲ್ಲಿ ತುಂಬಾ ಕಡಿಮೆ ಪೋಷಕಾಂಶಗಳು ಇರುವುದು. ಸಕ್ಕರೆಯಿಂದಾಗಿ ಹೊಟ್ಟೆ ಯಲ್ಲಿನ ಕೊಬ್ಬು ಹೆಚ್ಚಾಗುವುದು. ಹೊಟ್ಟೆಯ ಕೊಬ್ಬು ಹೆಚ್ಚಿಸುವ ಹಣ್ಣಿನ ಜ್ಯೂಸ್ ನ್ನು ಕಡೆಗಣಿಸಿ. ಇದರ ಬದಲಿಗೆ ನೀವು ಗ್ರೀನ್ ಟೀ ಅಥವಾ ಒಂದು ಲೋಟ ನೀರಿಗೆ ತಾಜಾ ಲಿಂಬೆರಸ ಹಾಕಿ ಕುಡಿಯಿರಿ. ನೀವು ಈ ಅಭ್ಯಾಸಗಳನ್ನು ಪಾಲಿಸುವ ಜತೆಗೆ ನಿಯಮಿತವಾಗಿ ವ್ಯಾಯಮ ಮಾಡಿದರೆ ಹೊಟ್ಟೆಯ ಕೊಬ್ಬು ಕರಗುವುದು.