For Quick Alerts
ALLOW NOTIFICATIONS  
For Daily Alerts

ತುಂಬಾ ದಪ್ಪಗಿದ್ದೀರಾ ? ಹಾಗಾದರೆ ಈ ರುಚಿಕರ ಆಹಾರಗಳನ್ನು ತಿನ್ನಿ, ತೂಕ ಇಳಿಸಿಕೊಳ್ಳಿ!

|

ಯಾರಿಗೇ ಆದರೂ ನೋಡಲು ಚೆಂದ ಕಾಣಲು ಬಣ್ಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ , ದೇಹದ ಆಕಾರ . ಕೆಲವರು ಸಣ್ಣಗಿರುತ್ತಾರೆ , ಕೆಲವರು ದಪ್ಪಗಿರುತ್ತಾರೆ , ಕೆಲವರು ಉದ್ದವಿದ್ದರೆ ಇನ್ನೂ ಕೆಲವರು ಕುಳ್ಳಗಿರುತ್ತಾರೆ . ಸ್ವಾಭಾವಕವಾಗಿ ರಚನೆಗೊಂಡ ದೇಹವಿರುವವರು ಒಂದು ಕಡೆಯಾದರೆ , ಅಸಾಮಾನ್ಯವಾಗಿ ತಮಗೆ ತಾವೇ ರಚಿಸಿಕೊಂಡ ದೇಹದವರು ಇನ್ನೊಂದು ಕಡೆ . ಇಂತಹವರಲ್ಲಿ ಹುಟ್ಟಿನಿಂದ ಸಣ್ಣಗಿದ್ದು ಬದಲಾದ ಜೀವನ ಶೈಲಿ ಯಿಂದ ಅಥವಾ ಆಹಾರ ಪದ್ದತಿಯಿಂದ ದಪ್ಪವಾಗಿರುವವರು ನಮ್ಮ ನಿಮ್ಮ ಮಧ್ಯದಲ್ಲೇ ಇರುತ್ತಾರೆ . ಅವರು ನೀವೇನಾ ? ನೀವು ಸಣ್ಣಗಾಗಲು ಮತ್ತು ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ ? ಹಾಗಿದ್ದರೆ ನಿಮಗೆ ಈ ಲೇಖನ ಬಹಳ ಪ್ರಯೋಜನಕಾರಿಯಾಗಿದೆ . ಏಕೆಂದು ಮುಂದೆ ಓದಿ...

weight loss

ಸಾಮಾನ್ಯವಾಗಿ ದೇಹದ ತೂಕ ಇಳಿಸಿಕೊಳ್ಳಲು ಬಯಸುವವರು ಆ ತಿಂಡಿ ತಿನ್ನಬಾರದು ಈ ಆಹಾರ ಸೇವಿಸಬಾರದು ಎಂಬ ನಿಯಮವಿರುತ್ತದೆ . ಪ್ರತಿದಿನ ಪಥ್ಯ ಅಥವಾ ಡಯಟ್ ಮಾಡಿ ಮಾಡಿ ನಾಲಿಗೆ ಜಿಡ್ಡುಗಟ್ಟಿ ಹೋಗಿರುತ್ತದೆ . ದಿನವೂ ವ್ಯಾಯಾಮ ಮಾಡಬೇಕಲ್ಲ ಎಂಬ ಸೋಮಾರಿತನ ಒಂದು ಕಡೆಯಾದರೆ ಪಕ್ಕದವರು ಒಳ್ಳೆ ಬಾಯಲ್ಲಿ ನೀರೂರಿಸುವಂತಹ ಆಹಾರ ತೋರಿಸಿಕೊಂಡು ತಿನ್ನುತ್ತಿರಬೇಕಾದರೆ ನಮಗೆ ಆ ಅದೃಷ್ಟ ಇಲ್ಲ ಎಂಬ ಕೊರಗು ಇನ್ನೊಂದು ಕಡೆ . ಪ್ರತಿದಿನವೂ ಇದೆ ಯೋಚನೆಯಲ್ಲೇ ಜೀವನ ಸಾಗುತ್ತಿರುತ್ತದೆ . ಇನ್ನು ಮುಂದೆ ಆ ಕಷ್ಟ ನಿಮಗಿಲ್ಲ . ನಿಮ್ಮ ಈ ಆಲೋಚನೆಗಳ ನಿವಾರಣೆಗೆಂದೇ ನಾವು ಇಲ್ಲಿ ಕೆಲವು ಬಾಯಿಗೆ ರುಚಿಕರವಾದ ಮತ್ತು ನಿಮ್ಮ ದೇಹದ ತೂಕ ಇಳಿಸಿಕೊಳ್ಳುವುದರಲ್ಲಿ ಸಹಾಯಕರವಾದ ಆಹಾರಗಳನ್ನೇ ಪಟ್ಟಿ ಮಾಡಿದ್ದೇವೆ .

ರೋಸ್ಟ್ ಮಾಡಿರುವ ಆಲೂಗಡ್ಡೆ

ರೋಸ್ಟ್ ಮಾಡಿರುವ ಆಲೂಗಡ್ಡೆ

ಆಲೂಗಡ್ಡೆ ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ. ಬೇಯಿಸಿದ ಆಲೂಗಡ್ಡೆಯಂತೂ ತಿನ್ನಲು ಬಹಳ ರುಚಿ . ಆದರೆ ಬಹಳ ಜನರು ಇದರಲ್ಲಿ ಅಧಿಕ ಕಾರ್ಬೋಹೈಡ್ರೇಟ್ ಅಂಶವಿರುತ್ತದೆ ಎಂದು ಇದನ್ನು ದೂರವೇ ಇಟ್ಟಿರುತ್ತಾರೆ . ಆದರೆ ಅದರಲ್ಲಿ ದೇಹದ ಯಾವುದಾದರೂ ಭಾಗ ಊದಿಕೊಂಡಿದ್ದರೆ ಅದನ್ನು ಕಡಿಮೆ ಮಾಡುವ ಗುಣಗಳಿವೆ ಎಂದು ಯಾರಿಗೂ ಗೊತ್ತಿಲ್ಲ . ಇಂತಹ ಒಂದು ಬಟ್ಟಲು ರೋಸ್ಟ್ ಮಾಡಿರುವ ಆಲೂಗಡ್ಡೆಯನ್ನು ತಿನ್ನುವುದಕ್ಕೆ ಬಹಳ ರುಚಿಯಾಗಿರುತ್ತದೆ ಮತ್ತು ಇದರಿಂದ ನಿಮ್ಮ ದೇಹದ ತೂಕವೇನೂ ಹೆಚ್ಚಾಗುವುದಿಲ್ಲ.

Most Read: ರಾತ್ರಿ ಊಟಕ್ಕೆ ದಿನಾ ದಾಲ್ ರೈಸ್ ಸೇವಿಸಿದರೆ-ತೂಕ ಇಳಿಸಿಕೊಳ್ಳಬಹುದು!

ಸಿಹಿ ಗೆಣಸು

ಸಿಹಿ ಗೆಣಸು

ಹೆಚ್ಚಾಗಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಕಂಡುಬರುವ ಈ ಸಿಹಿ ಗೆಣಸು ಮತ್ತು ಅದರಿಂದ ತಯಾರಾದ ಖಾದ್ಯ ನಮ್ಮ ದೇಹ ಸೇರಿದರೆ ಸಾಮಾನ್ಯವಾಗಿ ಸೊಂಟದ ಸುತ್ತಳತೆಯಲ್ಲಿ ಅಕಸ್ಮಾತಾಗಿ ಶೇಕರಿಸಲ್ಪಡುವ ಸಕ್ಕರೆ ಅಂಶವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ . ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ . ಹಾಗಾದರೆ ಸಿಹಿ ಗೆಣಸಿನಲ್ಲಿ ಅಂತಹದ್ದೇನಿದೆ ಎಂದು ಯೋಚಿಸುತ್ತಿದ್ದೀರಾ ? ಗಿಡಗಳಲ್ಲಿ ಕಾಣಸಿಗುವ ಕಿತ್ತಳೆ ಮತ್ತು ಹಳದಿ ಪಿಗ್ಮೆಂಟ್ ಗೆ ಕಾರಣವಾಗಿರುವ ಕೆರೋಟಿನ್ ಅಂಶವೇ ಈ ಸಿಹಿ ಗೆಣಸಿನಲ್ಲಿ ಅಡಗಿದೆ . ಕೆರೋಟಿನ್ ಅಂಶ ಸಾಮಾನ್ಯವಾಗಿ ದೇಹ ಬಿಡುಗಡೆ ಗೊಳಿಸುವ ಗ್ಲುಕೋಸ್ ಮತ್ತು ಇನ್ಸುಲಿನ್ ಅನ್ನು ತಗ್ಗಿಸುತ್ತದೆ.

ಚೀಸ್ ಮಕಾರೋನಿ

ಚೀಸ್ ಮಕಾರೋನಿ

ಬೆಣ್ಣೆ , ತುಪ್ಪ , ಹಾಲಿನ ಜಿಡ್ಡು ಪದಾರ್ಥಗಳು ಎಂದರೆ ಸಾಕು ತೂಕ ಹೆಚ್ಚು ಮಾಡುತ್ತವೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ . ಆದರೆ ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಯಾವ ತೊಂದರೆಯೂ ಇರುವುದಿಲ್ಲ . ಕಡಿಮೆ ಕೊಬ್ಬಿನ ಅಂಶವಿರುವ ಹಾಲು , ಕಡಿಮೆ ಕೊಬ್ಬಿನ ಅಂಶವಿರುವ ಚೇದ್ದಾರ್ ಚೀಸ್ ಮತ್ತು ಕಡಿಮೆ ಕೊಬ್ಬಿನ ಅಂಶವಿರುವ ಬೆಣ್ಣೆ ಉಪಯೋಗಿಸಿಕೊಂಡು ಚೀಸ್ ಮಕಾರೋನಿ ಮಾಡಿ ತಿಂದರಂತೂ ಬಾಯಿ ಚಪ್ಪರಿಸುವಂತಹ ರುಚಿ . ಇನ್ನು ಬೇಕೆಂದರೆ ಚೀಸ್ ನ ಬದಲು ಹೂ ಕೋಸಿನ ಪ್ಯೂರೀ ಉಪಯೋಗಿಸಬಹುದು .

ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್

ಚಾಕೋಲೇಟ್ ಎಲ್ಲರಿಗೂ ಪ್ರಿಯ .ಏಕೆಂದರೆ ಅದರ ರುಚಿ . ಆರೋಗ್ಯದ ರೀತಿಯಲ್ಲಿ ಯೋಚಿಸಬೇಕೆಂದರೆ ಇದರಲ್ಲಿರುವ ಆಂಟಿ ಆಕ್ಸಿಡಂಟ್ ಗುಣ ಹೃದಯದ ಸಮಸ್ಯೆಯನ್ನು ತಡೆಗಟ್ಟುತ್ತದೆ ಮತ್ತು ಇದರಲ್ಲಿರುವ " ಪೊಲಿಫೆನೋಲ್ " ಎಂಬ ಅಂಶ ದೇಹದ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ .

Most Read: ಬಾಯಿಯ ಭಾಗದಲ್ಲಿ ಆವರಿಸಬಹುದಾದ ಪ್ರಮುಖ ಕಾಯಿಲೆಗಳು

ಕಾಫಿ

ಕಾಫಿ

ಬೆಳಗಿನ ಚಳಿಯಲ್ಲಿ ಅಥವಾ ಸಂಜೆಯ ಸೂರ್ಯಾಸ್ತದ ಸಮಯದಲ್ಲಿ ಬಿಸಿ ಬಿಸಿ ಕಾಫಿ ಕುಡಿಯಲು ಬಲು ಚೆನ್ನ . ಇದು ತುಂಬಾ ಜನರ ಬಯಕೆಯೂ ಕೂಡ . ಒತ್ತಡದ ಜೀವನದಿಂದ ಬೇಸತ್ತ ಎಲ್ಲರೂ ಇಷ್ಟಪಡುವ ಒಂದು ಕೆಲಸ ಇದು . ಇದರಿಂದ ಮನಸ್ಸಿಗೆ ಮುದ ಸಿಗುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಎಂಬ ಬಗ್ಗೆ ವೈಜ್ಞಾನಿಕವಾಗಿ ಸಾಬೀತುಗೊಂಡಿದೆ . ಬೆಳಗಿನ ವ್ಯಾಯಾಮಕ್ಕಿಂತ ಮುಂಚೆ ಕುಡಿಯುವ ಕಾಫಿ ಬಹಳ ಉಪಕಾರಿ . ಇದರಲ್ಲಿರುವ ಕೆಫೀನ್ ಅಂಶ ದೇಹದ ರಕ್ತನಾಳಕ್ಕೆ ಬಿಡುಗಡೆಯಾಗುವ ಗ್ಲುಕೋಸ್ ಅಂಶವನ್ನು ತಡೆಯುತ್ತದೆ ಮತ್ತು ದೇಹದ ಕೊಬ್ಬನ್ನು ಕರಗಿಸಿ ದೇಹದ ದಿನ ನಿತ್ಯದ ಚಟುವಟಿಕೆಗೆ ಅಗತ್ಯವಾಗಿ ಬೇಕಾಗಿರುವ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ .

ಸೂಪ್

ಸೂಪ್

ತರಕಾರಿ ಸೂಪ್ ಮತ್ತು ಚಿಕನ್ ಸೂಪ್ ಎರಡೂ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ . ಆರೋಗ್ಯಕ್ಕೂ ಹಿತ , ಹೊಟ್ಟೆಗೂ ತುಂಬಿದಂತಹ ಅನುಭವ.ಈ ಎಲ್ಲ ರೀತಿಯ ಆಹಾರಗಳು ನಿಮ್ಮ ಬಾಯಿ ರುಚಿಯ ಜೊತೆಗೆ ನಿಮ್ಮ ದೇಹವನ್ನು ಯಾವುದೇ ಕಾರಣಕ್ಕೂ ದಪ್ಪವಾಗಿಸುವುದಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ . ಇದರಿಂದ ನೀವೂ ಸಹ ಯಾವುದೇ ಮಾನಸಿಕ ಖಿನ್ನತೆಗೆ ಒಳಗಾಗದೆ ಇತರರ ಜೊತೆ ಬೆರೆತು ವ್ಯಾಯಾಮ ಮಾಡಿ ಈ ರುಚಿಕರ ತಿನಿಸುಗಳನ್ನು ತಿನ್ನಬೇಕೆಂದು ನಾವು ಬಯಸುತ್ತೇವೆ .

English summary

Eat these foods if you’re on a weight loss plan

Comfort foods are there for a reason. Most importantly, if you are on a weight loss plan, they help in satiating your taste buds without any guilt and eating them makes you feel good and full. Here we have listed a few comfort foods that you can eat and still can smoothly achieve your weight loss goals.
X
Desktop Bottom Promotion