For Quick Alerts
ALLOW NOTIFICATIONS  
For Daily Alerts

ಪುರುಷರಿಗೆ ತೂಕದ ಇಳಿಕೆಯಿಂದ ಲಭಿಸುವ ಲಾಭಗಳು

|

ಸಾಮಾನ್ಯವಾಗಿ ಸ್ಥೂಲಕಾಯ ಪುರುಷ ಎಂಬ ಪದ ಕೇಳಿದಾಕ್ಷಣ ನಮ್ಮ ಮನದಲ್ಲಿ ಮೂಡುವ ಚಿತ್ರವೆಂದರೆ ಡೊಳ್ಳು ಹೊಟ್ಟೆಯ ಪುರುಷ. ಹೌದು,ಸ್ಥೂಲ ಪುರುಷರಲ್ಲಿ ಸೊಂಟದ ಸುತ್ತಳತೆ ಹೆಚ್ಚಿರುವುದು ಪ್ರಮುಖ ಕಾಳಜಿಯಾಗಿದ್ದು ಇದಕ್ಕೆ ಕೆಲವಾರು ಕಾರಣಗಳಿವೆ. ಇಂದು ಹೆಚ್ಚಿನ ಪುರುಷರಲ್ಲಿ ಕಾಣಬರುವ ಸ್ಥೂಲಕಾಯಕ್ಕೆ ವ್ಯಾಯಾಮದ ಕೊರತೆ, ಮಾನಸಿಕ ಒತ್ತಡ, ರಸದೂತಗಳ ತೊಂದರೆ ಹಾಗೂ ಪ್ರಮುಖವಾಗಿ ತಪ್ಪಾದ ಆಹಾರಕ್ರಮಗಳು ಕಾರಣವಾಗಿವೆ.

ಇಂದು ಜೀವನ ವೇಗದ ಗತಿಯಲ್ಲಿ ಮುಂದುವರೆಯುತ್ತಿರುವಾಗ ಈ ವೇಗಕ್ಕೆ ಹೊಂದಿಕೊಳ್ಳುವಲ್ಲಿ ಪುರುಷರ ಮೇಲೇ ಹೆಚ್ಚಿನ ಒತ್ತಡವಿರುತ್ತದೆ ಹಾಗೂ ಈ ಅಗತ್ಯತೆಗೆ ಸ್ಪಂದಿಸುವ ಕಾರಣ ವ್ಯಾಯಾಮಕ್ಕೆ ಸಮಯವಿಲ್ಲದಾಗುತ್ತದೆ. ಸ್ಥೂಲಕಾಯದಲ್ಲಿ ಸೊಂಟದ ಕೊಬ್ಬು ಅತಿ ಮಾರಕವಾಗಿದೆ ಹಾಗೂ ಇದು ಹಲವಾರು ನಿಧಾನವಾಗಿ ಕೊಲ್ಲುವ ಮಾರಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಹೃದಯದ ತೊಂದರೆಗಳು, ಮಧುಮೇಹ, ಯಕೃತ್ ಅಥವಾ ಮೂತ್ರಪಿಂಡದ ತೊಂದರೆಗಳ ಸಾಧ್ಯತೆ ಸ್ಥೂಲಕಾಯದವರಿಗೆ ಹೆಚ್ಚು. ವಿಶೇಷವಾಗಿ ಸ್ಥೂಲದೇಹಿಗಳು ಧೂಮಪಾನಿಗಳು ಅಥವಾ ಮದ್ಯಪಾನಿಗಳಾಗಿದ್ದರೆ ಈ ಸಾಧ್ಯತೆ ಇನ್ನಷ್ಟು ಹೆಚ್ಚುತ್ತದೆ.

ಮದ್ಯಪಾನ ಮತ್ತು ಧೂಮಪಾನ

ಮದ್ಯಪಾನ ಮತ್ತು ಧೂಮಪಾನ

ಸಾಮಾನ್ಯವಾಗಿ ಮದ್ಯಪಾನ ಮತ್ತು ಧೂಮಪಾನವನ್ನು ಪುರುಷರು ದಿನದ ಸಮಸ್ಯೆಗಳ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವುದಕ್ಕೆ ಎಂಬ ನೆಪ ನೀಡಿ ಸೇವಿಸುತ್ತಾರೆ. ಆದರೆ ಇವುಗಳ ದುಷ್ಪರಿ ಣಾಮಗಳ ಬಗ್ಗೆ ಅರಿತಿದ್ದೂ ಜಾಣ ಮರೆವನ್ನು ಪ್ರಕಟಿಸುತ್ತಾರೆ ಹಾಗೂ ತಮ್ಮ ಆರೋಗ್ಯದ ಕಾಳಜಿಯನ್ನು ಕಡೆಗಣಿಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸೂಕ್ತ ಕ್ರಮ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳುವಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಮುಂಚೂಣಿಯಲ್ಲಿರುತ್ತಾರೆ. ಸ್ಥೂಲಕಾಯ ಪ್ರಾರಂಭವಾಗಿದ್ದರೂ ಪುರುಷರು ಇದನ್ನು ಕಡೆಗಣಿಸಿ ವ್ಯಾಯಮ ಮಾಡಬೇಕೆಂಬ ಇರಾದೆಯನ್ನು ನಾಳೆ ನಾಳೆ ಎಂದು ಮುಂದೂಡುತ್ತಾ ಅನಾರೋಗ್ಯಕರ ಆಹಾರಕ್ರಮ ಮತ್ತು ಜೀವನ ಶೈಲಿಯನ್ನು ಮುಂದುವರೆಸುತ್ತಾರೆ, ಇದು ಸ್ಥೂಲದೇಹ ಇನ್ನಷ್ಟು ವಿಸ್ತಾರವಾಗಲು ಕಾರಣವಾಗುತ್ತದೆ.

ಪುರುಷರಲ್ಲಿ ಸ್ಥೂಲಕಾಯ ಕಡಿಮೆಯಾಗಲು ಏಕಿಷ್ಟು ಪ್ರಾಧಾನ್ಯತೆ?

ಪುರುಷರಲ್ಲಿ ಸ್ಥೂಲಕಾಯ ಕಡಿಮೆಯಾಗಲು ಏಕಿಷ್ಟು ಪ್ರಾಧಾನ್ಯತೆ?

ಆರೋಗ್ಯವೇ ಭಾಗ್ಯ ಎಂಬ ಕನ್ನಡದ ಗಾದೆಮಾತು ಸರ್ವರಿಗೂ, ಸದಾಕಾಲ ಅನ್ವಯಿಸುವ ಗಾದೆಮಾತಾಗಿದ್ದು ಆರೋಗ್ಯವನ್ನು ಉಳಿಸಿಕೊಂಡರೆ ಇದೇ ನಿಜವಾದ ಭಾಗ್ಯವಾಗಿದೆ. ಸ್ಥೂಲದೇಹ ಹೊಂದಿರುವುದು ಸಹಜಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನವೂ ಆಗಿದೆ. ಸ್ಥೂಲದೇಹವೇ ಅನಾರೋಗ್ಯವಲ್ಲವದರೂ ಕೆಲವು ಕಾಯಿಲೆಗಳು ಆವರಿಸುವ ಸಾಧ್ಯತೆ ಉಳಿದವರಿಗಿಂತ ಇವರಿಗೆ ಹೆಚ್ಚು. ಇವು ಯಾವುವೆಂದರೆ...

Most Read: ಮೂವತ್ತರ ಬಳಿಕ ಪುರುಷರ ದೇಹದಲ್ಲಿ ಎದುರಾಗುವ ಬದಲಾವಣೆಗಳು

ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ತೊಂದರೆಗಳು

ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ತೊಂದರೆಗಳು

ಸ್ಥೂಲದೇಹಿಗಳಲ್ಲಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳಲ್ಲಿ ಭಾರೀ ಏರುಪೇರು ಇರುವುದನ್ನು ಪರೀಕ್ಷೆಗಳು ಸಾಬೀತುಪಡಿಸಿವೆ. ಒಂದು ವೇಳೆ ಇವುಗಳಿಗೆ ಮೂಗುದಾರ ಹಾಕಿ ನಿಯಂತ್ರಿಸದೇ ಇದ್ದರೆ ಇವುಗಳು ಈಗಾಗಲೇ ಹೃದಯದ ಮೇಲೆ ಇರುವ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು.

ಹೃದಯದ ತೊಂದರೆಗಳು

ಹೃದಯದ ತೊಂದರೆಗಳು

ಸ್ಥೂಲದೇಹಿಗಳ ಹೃದಯದ ಬಡಿತ ಸದಾ ಸಾಮಾನ್ಯಕ್ಕಿಂತ ಹೆಚ್ಚೇ ಇರುತ್ತದೆ ಹಾಗೂ ಇದೇ ಹೆಚ್ಚಿಸ ಸಾವುಗಳಿಗೆ ಪ್ರಥಮ ಕಾರಣವಾಗಿದೆ. ಅನಾರೋಗ್ಯಕರ ಜೀವನಕ್ರಮ, ಇದರ ಜೊತೆಗೇ ಮಾನಸಿಕ ಒತ್ತಡವೂ ಇದ್ದರೆ ಇದು ಯಾವುದೇ ವಯಸ್ಸಿನ ಲ್ಲಾದರೂ ಸ್ಥೂಲದೇಹಿಗೆ ಥಟ್ಟನೇ ಹೃದಯಾಘಾತ ನೀಡಬಹುದು. ಕ್ಯಾನ್ಸರ್, ವಿಶೇಷವಾಗಿ ಕರುಳು ಮತ್ತು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್..

ಟೈಪ್ 2 ಮಧುಮೇಹ

ಟೈಪ್ 2 ಮಧುಮೇಹ

ಯಕೃತ್ ತೊಂದರೆಗಳು: ಅಂಗದ ಗಾತ್ರ ಹೆಚ್ಚುವುದು ಅಥವಾ ಕೊಬ್ಬು ತುಂಬಿಕೊಳ್ಳುವುದು (fatty liver) ಎದೆಯುರಿ ಅಥವ ಹುಳಿ ತೇಗು ಸತತವಾಗಿ ಕಾಣಬರುವುದು.

ಸಂಧಿವಾತ

ಸಂಧಿವಾತ

ಸ್ಥೂಲದೇಹಿ ಪುರುಷರ ಮೂಳೆಗಳಲ್ಲಿ ಮತ್ತು ಸ್ನಾಯುಗಳಲ್ಲಿ ಸದಾ ತೊಂದರೆ ಆವರಿಸಿರುತ್ತದೆ, ವಿಶೇಷವಾಗಿ ನಮ್ಮ ದೇಹದ ಅತಿ ದೊಡ್ಡ ಮೂಳೆ ಸಂಧಿಯಾದ ಮೊಣಕಾಲಿನ ಗಂಟುಗಳಲ್ಲಿ ಈ ತೊಂದರೆ ಅತಿ ಹೆಚ್ಚು. ಅಲ್ಲದೇ osteoarthritis ಅಥವಾ ಮೂಳೆಗಳು ಶಿಥಿಲವಾಗಿದ್ದು ಸವೆದಿರುವ ತೊಂದರೆ ಸ್ಥೂಲದೇಹಿ ಪುರುಷರಿಗೇ ಹೆಚ್ಚಾಗಿ ಕಾಡುತ್ತದೆ.

ಅಸುಖಕರ ನಿದ್ದೆ (Sleep apnea)

ಅಸುಖಕರ ನಿದ್ದೆ (Sleep apnea)

ಈ ವ್ಯಕ್ತಿಗಳಿಗೆ ಸುಖಕರ ನಿದ್ದೆ ಬರದೇ ಇರಲು ಇವರ ಗೊರಕೆ ಕಾರಣವಾಗುತ್ತದೆ ಹಾಗೂ ಕೆಲವೊಮ್ಮೆ ನಿದ್ದೆಯಲ್ಲಿ ಆಮ್ಲಜನಕ ಪೂರೈಕೆಗೇ ಅಡ್ಡಿಯಾಗಿ ಮಾರಕವಾಗಬಹುದು. ಪಿತ್ತಜನಕಾಂಗದ ತೊಂದರೆ ಅಥವಾ ಕಲ್ಲುಗಳು ಕಾಣಿಸಿಕೊಳ್ಳುವುದು, ಏಕಾಗ್ರತೆಯ ಕೊರತೆ ಹಾಗೂ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಕಷ್ಟಕರವಾಗುವುದು. ಮಾನಸಿಕ ತೊಂದರೆಗಳಾದ ಋಣಾತ್ಮಕ ಸ್ವ-ವಿಮರ್ಶೆ ಅಥವಾ ಅತಿಯಾದ ಸ್ವಯಂ ಪ್ರಜ್ಞೆ.ಒಂದು ವೇಳೆ ನೀವು ಸ್ಥೂಲದೇಹಿ ಪುರುಷರಾಗಿದ್ದರೆ ನಿಮಗೆ ಕೆಲವಾರು ಅನಾರೋಗ್ಯಗಳು ಆವರಿಸುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ನೀವು ಈಗಿನಿಂದಲೇ ತೂಕವನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲರಾದರೆ ನೀವು ಇಳಿಸುವ ಪ್ರತಿ ಕೇಜಿ ತೂಕವೂ ನಿಮಗೆ ಕೆಲವಾರು ಆರೋಗ್ಯಕರ ಪ್ರಯೋಜನವನ್ನು ತಂದು ನೀಡಬಲ್ಲುದು. ಸಾಮಾನ್ಯವಾಗಿ ತೂಕ ಇಳಿಕೆ ತುಂಬಾ ನಿಧಾನವಾದ ಪ್ರಕ್ರಿಯೆಯಾಗಿದ್ದು ಇದಕ್ಕೆ ದೈಹಿಕ ಪ್ರಯತ್ನಕ್ಕಿಂತಲೂ ಮಾನಸಿಕ ದೃಢತೆಯೇ ಹೆಚ್ಚಿನ ಪಾತ್ರ ವಹಿಸುತ್ತದೆ. ಪ್ರಾರಂಭಿಕ ಕೆಲವು ತಿಂಗಳುಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ, ಆದರೆ ಕ್ರಮೇಣ ನಿಧಾನವಾಗಿ ಇಳಿಯುವುದು ಕಾಣಿಸುತ್ತದೆ.

Most Read: ನಕಲಿ ಉತ್ಪನ್ನ ಬಳಸಿ ಆರೋಗ್ಯ ಕೆಡಿಸಿಕೊಂಡ ಮಹಿಳೆ

ಆರೋಗ್ಯಕರ ಹೃದಯ

ಆರೋಗ್ಯಕರ ಹೃದಯ

ಸ್ಥೂಲದೇಹಿ ಪುರುಷರ ಹೃದಯಕ್ಕೆ ಹೆಚ್ಚಿನ ಭಾಗಗಳಿಗೆ ಆಮ್ಲಜನಕವನ್ನು ಒದಗಿಸುವ ಹೆಚ್ಚುವರಿ ಜವಾಬ್ದಾರಿ ಇರುವ ಕಾರಣ ತನ್ನ ಕ್ಷಮತೆಗಿಂತಲೂ ಹೆಚ್ಚೇ ಸಾಮರ್ಥ್ಯದಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಇದೇ ಹಲವಾರು ಹೃದಯಸಂಬಂಧಿ ತೊಂದರೆಗಳಿಗೆ ಕಾರಣ. ಹಾಗಾಗಿ ತೂಕ ಇಳಿಸಿಕೊಳ್ಳುವ ಮೂಲಕ ಮೊದಲಾಗಿ ನೀವು ಹೃದಯದ ಮೇಲಿನ ಈ ಹೊರೆಯನ್ನು ಇಳಿಸುತ್ತೀರಿ. ತನ್ಮೂಲಕ ಇದುವರೆಗೆ ಅಧಿಕ ಒತ್ತಡದಲ್ಲಿಯೇ ರಕ್ತವನ್ನು ದೂಡುತ್ತಿದ್ದ ಹೃದಯ ಈಗ ಸಾಮಾನ್ಯ ಒತ್ತಡದಲ್ಲಿ ದೂಡಿಕೊಟ್ಟರೆ ಸಾಕಾಗುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ: ಹೃಢಮನಸ್ಸು ಹಾಗೂ ನಿಯಮಿತ ಮತ್ತು ಸತತವಾದ ವ್ಯಾಯಾಮದಿಂದ ಕೆಲವಾರು ಕೇಜಿಗಳನ್ನು ಕಳೆದುಕೊಳ್ಳುವ ಮೂಲಕ ದೇಹದಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ (ಅಥವಾ ಹೆಚ್ ಡಿ ಎಲ್) ಮಟ್ಟ ಹೆಚ್ಚುತ್ತದೆ. ಯಾವಾಗ ಈ ಮಟ್ಟ ಏರಿತೋ ಆಗ ತಾನಾಗಿಯೇ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಮಟ್ಟ ತಗ್ಗುತ್ತದೆ. ತನ್ಮೂಲಕ ಹೃದಯದ ತೊಂದರೆಗಳ ಸಾಧ್ಯತೆಯೂ ಕಡಿಮೆಯಾಗುತ್ತವೆ. ಮಧುಮೇಹ ಆವರಿಸುವ ಸಾಧ್ಯತೆ ತಗ್ಗುತ್ತದೆ:ನೀವು ಇಳಿಸುವ ಪ್ರತಿ ಕೇಜಿ ತೂಕವೂ ನಿಮ್ಮ ದೇಹ ರಕ್ತದಲ್ಲಿ ಗ್ಲುಕೋಸ್ ಮಟ್ಟಗಳನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ ಹಾಗೂ ಈ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸುತ್ತದೆ.

ಕ್ಯಾನ್ಸರ್ ಆವರಿಸುವ ಸಾಧ್ಯತೆ ತಗ್ಗುತ್ತದೆ

ಕ್ಯಾನ್ಸರ್ ಆವರಿಸುವ ಸಾಧ್ಯತೆ ತಗ್ಗುತ್ತದೆ

ತೂಕ ಇಳಿಕೆಯಿಂದ ಹಲವಾರು ಬಗೆಯ ಕ್ಯಾನ್ಸರ್ ಆವರಿಸುವ ಸಾಧ್ಯತೆ ತಗ್ಗುತ್ತದೆ. ಸ್ಥೂಲದೇಹಿಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಸ್ಥೂಲದೇಹಿ ಮಹಿಳೆಯರಲ್ಲಿ ಗರ್ಭಕೋಶ ಮತ್ತು ಗರ್ಭಕಂಠದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಮೂಳೆಗಳು ಟೊಳ್ಳಾಗುವ osteoporosis ಎಂಬ ಸ್ಥಿತಿ ಆವರಿಸುವ ಸಾಧ್ಯತೆ ಹೆಚ್ಚುತ್ತದೆ: ಸ್ಥೂಲದೇಹಿಗಳ ಅತಿ ಹೆಚ್ಚು ಭಾರ ದೇಹದ ನಡುಭಾಗದಲ್ಲಿ ಕೇಂದ್ರೀಕೃತವಾಗಿದ್ದು ಈ ಭಾರವನ್ನು ಹೊರುವ ಕಾಲುಗಳ ಮೂಳೆಗಳು ಮತ್ತು ಗಂಟುಗಳು ಅತಿ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತವೆ. ಹಾಗಾಗಿ ಕಳೆದುಕೊಳ್ಳುವ ಪ್ರತಿ ಕೇಜಿ ತೂಕವೂ ಮೂಳೆಗಳ ಮೇಲಿನ ಈ ಭಾರವನ್ನು ತಗ್ಗಿಸುತ್ತವೆ ಹಾಗೂ ಈ ಮೂಲಕ ಶಿಥಿಲವಾಗುವ ಮತ್ತು ಗಾಳಿಗುಳ್ಳೆಗಳು ತುಂಬಿಕೊಳ್ಳುವ osteoporosis ಎಂಬ ಸ್ಥಿತಿ ಹಾಗೂ ಸಂಧುಗಳು ಶಿಥಿಲವಾಗುವ osteoarthritis ಎಂಬ ಕಾಯಿಲೆ ಆವರಿಸುವ ಸಾಧ್ಯತೆಯೂ ತಗ್ಗುತ್ತದೆ.

ಜೀವನ ಉತ್ತಮಗೊಳ್ಳುತ್ತದೆ

ಜೀವನ ಉತ್ತಮಗೊಳ್ಳುತ್ತದೆ

ಹೆಚ್ಚುವರಿ ತೂಕ ಕಳೆದುಕೊಂಡಾಗ ಜೀವನ ಉತ್ತಮಗೊಳ್ಳುತ್ತದೆ ಹಾಗೂ ಆಯಸ್ಸು ಸಹಾ ವೃದ್ದಿಯಾಗುತ್ತದೆ. ದೇಹದಲ್ಲಿ ಕೊಬ್ಬು ಅಗತ್ಯಕ್ಕೂ ಹೆಚ್ಚಿದ್ದರೆ ಕೆಲವಾರು ಕಾಯಿಲೆಗಳು ಆವರಿಸುವ ಸಾಧ್ಯತೆ ಹೆಚ್ಚು ಹಾಗೂ ವೃದ್ಧಾಪ್ಯದಲ್ಲಿ ಚಲನಾ ಸಾಮರ್ಥವನ್ನು ಕಸಿಕೊಳ್ಳುವುದರಿಂದ ರಕ್ಷಣೆ ಪಡೆದಂತಾಗುತ್ತದೆ. ಸಾಮಾನ್ಯವಾಗಿ ಸ್ಥೂಲದೇಹಿ ವೃದ್ದರಿಗೆ ನಿತ್ಯದ ಚಲನವಲನಗಳು ಬಹಳ ಕಷ್ಟಕರವಾಗಿರುವುದನ್ನು ಗಮನಿಸಬಹುದು. ಲೈಂಗಿಕ ಜೀವನ ಉತ್ತಮಗೊಳ್ಳುತ್ತದೆ: ಲೈಂಗಿಕ ಜೀವನ ಉತ್ತಮವಾಗಿರಲು ಸಹಾ ದೇಹದ ತೂಕ ಇಳಿಸುಗುವುದು ಅಗತ್ಯ. ಕೆಲವು ಕೇಜಿಗಳನ್ನು ಕಳೆದುಕೊಂಡಾಗ ಪುರುಷರಲ್ಲಿ ಸಾಮಾನ್ಯ ನಿಮಿರುತನ ಸಾಧಿಸುವುದು ಮತ್ತು ಉಳಿಸಿಕೊಳ್ಳುವುದು ಹಾಗೂ ಮಹಿಳೆಯರಲ್ಲಿ ಹೆಚ್ಚಿನ ಕಾಮಾಸಕ್ತಿ ಮತ್ತು ಕಳೆದುಕೊಂಡ ತೂಕದಿಂದಾಗಿ ಹೆಚ್ಚಿರುವ ಸೌಂದರ್ಯ ಪ್ರಜ್ಞೆ ಹೆಚ್ಚಿನ ಆತ್ಮವಿಶ್ವಾಸವನ್ನೂ ನೀಡುತ್ತದೆ.

ಸಂತಾನಫಲ ಪಡೆಯುವ ಸಾಧ್ಯತೆ ಹೆಚ್ಚುತ್ತದೆ

ಸಂತಾನಫಲ ಪಡೆಯುವ ಸಾಧ್ಯತೆ ಹೆಚ್ಚುತ್ತದೆ

ಸ್ಥೂಲದೇಹಿ ಪುರುಷ ಮತ್ತು ಮಹಿಳೆಯರಲ್ಲಿ ಸಂತಾನಫಲ ಪಡೆಯುವ ಸಾಧ್ಯತೆ ತಗ್ಗುತ್ತದೆ. ಈ ತೊಂದರೆಗೆ ಸರಳ ಪರಿಹಾರವೆಂದರೆ ತೂಕವನ್ನು ಇಳಿಸುವುದು. ವಿಶೇಷವಾಗಿ ಮಹಿಳೆಯರಲ್ಲಿ ಆರೋಗ್ಯವಂತ ಸಂತಾನ ಮತ್ತು ತೊಂದರೆ ರಹಿತ ಗರ್ಭಾವಸ್ಥೆ ಇರಬೇಕೆಂದರೆ ದೇಹದ ತೂಕವೂ ಆರೋಗ್ಯಕರ ಮಿತಿಗಳಲ್ಲಿರುವುದು ಅವಶ್ಯ.

ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ

ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ

ತೂಕವನ್ನು ಕಳೆದುಕೊಳ್ಳುವ ಮೂಲಕ ಹೆಚ್ಚಿನ ಚೈತನ್ಯ ಮತ್ತು ಧನಾತ್ಮಕ ಮನೋಭಾವ ಪಡೆಯಬಹುದು. ಸಾಮಾನ್ಯವಾಗಿ ಸ್ಥೂಲದೇಹಿಗಳು ಹೆಚ್ಚಿನ ಚಟುವಟಿಕೆಗಳಿಗೆ ತಮ್ಮ ದೇಹಭಾರದ ಕಾರಣದಿಂದಲೇ ಇಲ್ಲ ಎನ್ನಬೇಕಾಗುತ್ತದೆ ಹಾಗೂ ಈಗ ಕಳೆದುಕೊಂಡಿರುವ ತೂಕ ಆ ಕಳೆದುಕೊಂಡಿದ್ದ ಅವಕಾಶಗಳನ್ನೆಲ್ಲಾ ಮತ್ತೆ ದೊರಕುವಂತೆ ಮಾಡಿ ಜೀವನವನ್ನು ವೈವಿಧ್ಯಮಯವಾಗಿಸುತ್ತದೆ. ಸ್ವಾಭಿಮಾನ ಹೆಚ್ಚುತ್ತದೆ: ಸಾಮಾನ್ಯವಾಗಿ ಸ್ಥೂಲದೇಹವನ್ನು ಸಮಾಜ ಋಣಾತ್ಮಕ ಭಾವದಿಂದ ನೋಡುವ ಕಾರಣದಿಂದಾಗಿ ಸ್ಥೂಲದೇಹಿಗಳು ಕೊಂಚ ವಿಮನಸ್ಕರಾಗಿಯೇ ಇರುತ್ತಾರೆ. ಈಗ ಕೆಲವು ಕೇಜಿಗಳನ್ನು ಕಳೆದುಕೊಂಡರೂ ಇವರು ತಮ್ಮ ಆತ್ಮವಿಶ್ವಾಸವನ್ನು ಮತ್ತೆ ಪಡೆದುಕೊಳ್ಳುತ್ತಾರೆ ಹಾಗೂ ಹೆಚ್ಚಿನದನ್ನು ಸಾಧಿಸುವಲ್ಲಿ ಹೆಚ್ಚಿನ ಸ್ವಪ್ರೇರಣೆಯನ್ನು ಪಡೆದುಕೊಳ್ಳುತ್ತಾರೆ. ಪರಿಣಾಮವಾಗಿ ಇವರು ತಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಶೀಘ್ರವೇ ಪಡೆದುಕೊಳ್ಳುವಲ್ಲಿ ಹೆಚ್ಚಿನ ಅಸ್ಥೆ ವಹಿಸುತ್ತಾರೆ. ಈ ಅಸ್ಥೆಯಿಂದಾಗಿಯೇ ಸ್ವಾಭಿಮಾನವೂ ಅಪಾರವಾಗಿ ಹೆಚ್ಚುತ್ತದೆ.

English summary

Benefits of Weight Loss for Men

Men usually give into vices like smoking and drinking as it ‘seems’ to reduce stress and deal with daily pressures of life. Most of the men do not pay any attention to their health and fitness unless any signs of a health problem emerge. Men also are the last ones to seek medical help unlike women who are more proactive. Men can keep their weighty issues at bay by following a regular routine of exercise, proper diet and having a healthy lifestyle.
X