ತೂಕ ಇಳಿಸುವ ಟಿಪ್ಸ್: ಬೆಲ್ಲ ಬೆರೆಸಿ ತಯಾರಿಸಿದ ನಿಂಬೆ ನೀರು ಕುಡಿಯಿರಿ!

Posted By: Hemanth
Subscribe to Boldsky

ಸುಂದರ, ಕಟ್ಟುಮಸ್ತಾದ ದೇಹ ಬೇಕೆಂದು ಪ್ರತಿಯೊಬ್ಬರ ಇಚ್ಛೆ. ಆದರೆ ಇಂತಹ ದೇಹ ಪಡೆಯಲು ಕಠಿಣ ಪರಿಶ್ರಮ ಮತ್ತು ಬದ್ಧತೆ ಬೇಕು. ಒಂದು ದಿನ ವ್ಯಾಯಾಮ ಮಾಡಿ ಬಿಟ್ಟರೆ ಸಾಲದು. ಪ್ರತಿನಿತ್ಯ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಇತ್ಯಾದಿಗಳನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ಕಟ್ಟುಮಸ್ತಾದ ದೇಹ ಪಡೆಯಬಹುದು. ಆದರೆ ಕೆಲವೊಂದು ಅಭ್ಯಾಸಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ.

ಯಾಕೆಂದರೆ ಹಸಿವಾದಾಗ ಕೈ ಸಿಕ್ಕಿದ ಬರ್ಗರ್ ಮತ್ತು ಚಿಪ್ಸ್ ತಿಂದು ಬಿಡುತ್ತೇವೆ. ಇದರಲ್ಲಿ ಅತಿಯಾದ ಕ್ಯಾಲರಿ ಇರುವ ಕಾರಣ ದೇಹದಲ್ಲಿ ಅದು ಶೇಖರಣೆಯಾಗಿ ಬೊಜ್ಜು ನಿರ್ಮಾಣವಾಗುವುದು. ಇದರಿಂದ ದೇಹದಲ್ಲಿ ಬೊಜ್ಜು ನಿರ್ಮಾಣವಾಗುವುದು ಮಾತ್ರವಲ್ಲದೆ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಕಾಣಿಸಬಹುದು. 

ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಈ ತಿಂಡಿಗಳನ್ನು ತಿನ್ನುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ಅದರಿಂದ ರಕ್ತನಾಳಗಳಿಗೆ ತಡೆಯಾಗಿ ಹೃದಯಾಘಾತವಾಗುವ ಸಂಭವವಿದೆ. ಇದರಿಂದ ಮೊದಲು ಆಹಾರದ ಮೇಲೆ ನಿಯಂತ್ರಣ ಸಾಧಿಸುವುದು ಅತೀ ಅಗತ್ಯ. ಇದಕ್ಕೆ ಒಳ್ಳೆಯ ಆರಂಭವೆಂದರೆ ಬೆಲ್ಲದೊಂದಿಗೆ ಲಿಂಬೆನೀರನ್ನು ಬೆಳಗ್ಗೆ ಕುಡಿಯುವುದು. ಈ ನೀರು ದೇಹದಲ್ಲಿ ಬೊಜ್ಜನ್ನು ಕಡಿಮೆ ಮಾಡಿರುವುದು ಪ್ರಮಾಣಿತವಾಗಿದೆ...

ಲಿಂಬೆಯ ಲಾಭಗಳು

ಲಿಂಬೆಯ ಲಾಭಗಳು

ಲಿಂಬೆಯಲ್ಲಿ ವಿಟಮಿನ್ ಸಮೃದ್ಧವಾಗಿದೆ ಮತ್ತು ಇದು ಒಳ್ಳೆಯ ಸಿಟ್ರಸ್ ಹಣ್ಣಾಗಿರುವ ಕಾರಣದಿಂದ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದನ್ನು ಪ್ರತಿನಿತ್ಯ ಬೆಳಗ್ಗೆ ಸೇವನೆ ಮಾಡಿದರೆ ಅದರಿಂದ ದೇಹದ ತೂಕ ಇಳಿಸುವಲ್ಲಿ ಪರಿಣಾಮಕಾರಿ ಫಲಿತಾಂಶ ಪಡೆಯಬಹುದು. ಲಿಂಬೆಯಲ್ಲಿ ಇರುವಂತಹ ಆಮ್ಲೀಯ ಗುಣವು ಕ್ಯಾಲರಿ ದಹಿಸುವಂತೆ ಮಾಡಿ ಜೀರ್ಣಕ್ರಿಯೆಗೆ ನೆರವಾಗುವುದು. ಬೆಳಗ್ಗೆ ಲಿಂಬೆ ರಸ ಸೇವನೆ ಮಾಡುವುದರಿಂದ ಇತರ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದು ಯಾವುದೆಂದು ತಿಳಿದುಕೊಳ್ಳುವ....

ನಿರ್ಜಲೀಕರಣ ತಡೆಯುವುದು

ನಿರ್ಜಲೀಕರಣ ತಡೆಯುವುದು

ಲಿಂಬೆನೀರು ಸೇವನೆ ಮಾಡುವುದರಿಂದ ನಿರ್ಜಲೀಕರಣ ತಡೆಗಟ್ಟಬಹುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ದೇಹದಲ್ಲಿ ನೀರಿನ ಅಂಶವು ಬೇಕಾದರೆ ಮತ್ತು ವಿಷಕಾರಿ ಅಂಶ ಹೊರಹಾಕಲು ನೀರು ಕುಡಿಯಲೇ ಬೇಕು. ಹೆಚ್ಚಿನವರಿಗೆ ನೀರು ಕುಡಿಯಲು ಇಷ್ಟವಾಗಲ್ಲ, ಇದರಿಂದ ಲಿಂಬೆನೀರು ಒಳ್ಳೆಯದು.

ಹೃದಯ ಮತ್ತು ಪ್ರತಿರೋಧಕ ಶಕ್ತಿಗೆ ಒಳ್ಳೆಯದು

ಹೃದಯ ಮತ್ತು ಪ್ರತಿರೋಧಕ ಶಕ್ತಿಗೆ ಒಳ್ಳೆಯದು

ವಿಟಮಿನ್ ಸಿ ಸಮೃದ್ಧವಾಗಿರುವ ಲಿಂಬೆಯು ಹೃದಯಸಂಬಂಧಿ ಕಾಯಿಲೆಗಳನ್ನು ತಡೆಯುವುದು. ಇದರಿಂದ ಪಾರ್ಶ್ವವಾಯುವಿನ ಅಪಾಯ ಕಡಿಮೆಯಾಗಿ ರಕ್ತದೊತ್ತಡ ನಿಯಂತ್ರಿಸಬಹುದು. ಇದು ಸಾಮಾನ್ಯ ಶೀತದ ವೈರಸ್ ನಿಂದ ರಕ್ಷಿಸುವಂತಹ ಕೋಟೆಯನ್ನು ಸೃಷ್ಟಿ ಮಾಡುವುದು.

ಇದು ಚರ್ಮದ ಗುಣಮಟ್ಟ ಸುಧಾರಿಸುವುದು

ಇದು ಚರ್ಮದ ಗುಣಮಟ್ಟ ಸುಧಾರಿಸುವುದು

ಲಿಂಬೆ ನೀರು ಒಣಚರ್ಮ ಮತ್ತು ನೆರಿಗೆ ಸಮಸ್ಯೆ ಕಡಿಮೆ ಮಾಡಿ ಉತ್ತಮ ಗುಣಮಟ್ಟದ ಚರ್ಮ ಪಡೆಯಲು ನೆರವಾಗುವುದು. ದೇಹವು ಹೆಚ್ಚು ನೀರಿನಾಂಶ ಪಡೆದಷ್ಟು ಒಣಚರ್ಮ ಮತ್ತು ನೆರಿಗೆ ಕಡಿಮೆಯಾಗುವುದು.

ಚಯಾಪಚಯ ಕ್ರಿಯೆ ಹೆಚ್ಚಿಸುವುದು

ಚಯಾಪಚಯ ಕ್ರಿಯೆ ಹೆಚ್ಚಿಸುವುದು

ಲಿಂಬೆಯು ತೂಕ ಇಳಿಕೆಗೆ ಸಹಕರಿಸುವುದು ಮತ್ತು ಚಯಾಪಚಯ ಕ್ರಿಯೆಗೆ ವೇಗ ನೀಡಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದು.

ಉಸಿರಿನ ದುರ್ವಾಸನೆ ನಿವಾರಣೆ

ಉಸಿರಿನ ದುರ್ವಾಸನೆ ನಿವಾರಣೆ

ಉಸಿರಿನ ದುರ್ವಾಸನೆಯಿಂದ ಬಳಲುತ್ತಿರುವವರು ಲಿಂಬೆ ನೀರು ಸೇವನೆ ಮಾಡಿದರೆ ದುರ್ವಾಸನೆ ನಿವಾರಣೆಯಾಗುವುದು. ಯಾಕೆಂದರೆ ಲಿಂಬೆಯು ಜೊಲ್ಲು ಸ್ರವಿಸುವಿಕೆ ಉತ್ತೇಜಿಸುವುದು ಮತ್ತು ಬಾಯಿ ಒಣಗುವುದನ್ನು ತಡೆಯುವುದು. ಬಾಯಿ ಒಣಗುವುದು ಬ್ಯಾಕ್ಟೀರಿಯಾ ನಿರ್ಮಾಣವಾಗಲು ಪ್ರಮುಖ ಕಾರಣವಾಗಿದೆ.

ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗದಂತೆ ತಡೆಯುವುದು

ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗದಂತೆ ತಡೆಯುವುದು

ಲಿಂಬೆಯ ಹಲವಾರು ಲಾಭಗಳೊಂದಿಗೆ ಲಿಂಬೆಯು ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುವುದನ್ನು ತಡೆಯುವುದು. ಲಿಂಬೆಯಲ್ಲಿರುವಂತಹ ಸಿಟ್ರಿಕ್ ಆಮ್ಲವು ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗದಂತೆ ತಡೆಯುವುದು ಮತ್ತು ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕುವುದು.

ಬೆಲ್ಲದ ಆರೋಗ್ಯ ಲಾಭಗಳು

ಬೆಲ್ಲದ ಆರೋಗ್ಯ ಲಾಭಗಳು

ದೇಹಕ್ಕೆ ಹಾನಿಯಾಗುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನವರು ಸಕ್ಕರೆ ಸೇವನೆ ಕಡೆಗಣಿಸುವರು. ಅದರಲ್ಲೂ ಮಧುಮೇಹಿಗಳು ಸಕ್ಕರೆ ಇರುವಂತಹ ಆಹಾರ ಕಡೆಗಣಿಸುವರು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುವುದು. ಆದರೆ ಬೆಲ್ಲ ಸೇವನೆ ತುಂಬಾ ಲಾಭಕಾರಿ. ಬೆಲ್ಲದಲ್ಲಿ ಯಾವುದೇ ರೀತಿಯ ಕೃತಕ ಸಿಹಿ ಸೇರಿಸುವುದಿಲ್ಲ ಮತ್ತು ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು ಬಳಸಬಹುದು.

ಬೆಲ್ಲದ ಆರೋಗ್ಯ ಲಾಭಗಳು

ಬೆಲ್ಲದ ಆರೋಗ್ಯ ಲಾಭಗಳು

ಕಬ್ಬಿನ ಹಾಲಿನಿಂದ ತಯಾರಿಸುವಂತಹ ಬೆಲ್ಲವು ನೈಸರ್ಗಿಕ ಸಿಹಿ ನೀಡುವುದು. ಇದು ಸಕ್ಕರೆಗೆ ಪರ್ಯಾಯವಾಗಿ ಕೆಲಸ ಮಾಡುವುದಲ್ಲದೆ, ಇದರಲ್ಲಿ ನಾರಿನಾಂಶ, ಖನಿಜಾಂಶ ಮತ್ತು ಪ್ರೋಟೀನ್ ಲಭ್ಯವಿದೆ. ಬೆಲ್ಲವು ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ. ಇದು ದೇಹದಲ್ಲಿರುವ ಅಧಿಕ ಕೊಬ್ಬನ್ನು ತೆಗೆದು ಚಯಾಪಚಯ ಕ್ರಿಯೆ ಹೆಚ್ಚಿಸುವುದು. ಬೊಜ್ಜು ದೇಹವನ್ನು ಹೊಂದಿರುವವರಿಗೆ ಇದು ತುಂಬಾ ಸಹಕಾರಿಯಾಗಲಿದೆ. ಜೀರ್ಣಕ್ರಿಯೆ ಸರಾಗವಾಗಿಸುವ ಬೆಲ್ಲವು ದೇಹದಲ್ಲಿರುವ ವಿಷಕಾರಿ ಅಂಶವನ್ನು ತೆಗೆದುಹಾಕಿ ರಕ್ತವನ್ನು ಶುದ್ಧೀಕರಿಸುವುದು.

ಬೆಲ್ಲದ ಆರೋಗ್ಯ ಲಾಭಗಳು

ಬೆಲ್ಲದ ಆರೋಗ್ಯ ಲಾಭಗಳು

ಇದರಿಂದ ತೂಕ ಕಳೆದುಕೊಳ್ಳಲು ಬಯಸುವವರು ಪ್ರತಿನಿತ್ಯ ಬೆಲ್ಲ ಸೇವನೆ ಮಾಡಬಹುದು. ದೇಹದಲ್ಲಿ ಜಮೆಯಾಗಿರುವಂತಹ ಕೊಬ್ಬನ್ನು ಬೆಲ್ಲವು ತೆಗೆದುಹಾಕುವುದು. ದೇಹದಲ್ಲಿ ವಿದ್ಯುದ್ವಿಚ್ಛೇದ ಮಟ್ಟ ಸಮತೋಲನ ಕಾಯ್ದುಕೊಳ್ಳುವುದು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಾಗದಂತೆ ಕಾಪಾಡುವುದು.

ತೂಕ ಇಳಿಸುವ ಪಾನೀಯ ತಯಾರಿಸುವುದು ಹೇಗೆ?

ತೂಕ ಇಳಿಸುವ ಪಾನೀಯ ತಯಾರಿಸುವುದು ಹೇಗೆ?

*ಬೆಲ್ಲ ಬೆರೆಸಿರುವ ಲಿಂಬೆ ನೀರು ತೂಕ ಕಳೆದುಕೊಳ್ಳುವ ಪ್ರಕ್ರಿಯೆಗೆ ವೇಗ ನೀಡುವುದು. ಇದನ್ನು ತಯಾರಿಸಲು ಒಂದು ಲೋಟ ನೀರು, ಅದಕ್ಕೆ ಅರ್ಧ ಲಿಂಬೆ ರಸ ಬೆರೆಸಿ.

*ಇದಕ್ಕೆ ಒಂದು ಚಮಚ ಬೆಲ್ಲ ಹಾಕಿಕೊಳ್ಳಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಚಯಾಪಚಯ ಕ್ರಿಯೆ ಹೆಚ್ಚಿಸಲು ಮತ್ತು ತೂಕ ಕಡಿಮೆ ಮಾಡಲು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಸೇವಿಸಿ. ಈ ಪಾನೀಯವು ದೇಹಕ್ಕೆ ಬೇಕಾಗಿರುವ ಶಕ್ತಿ ನೀಡುವುದು ಮತ್ತು ಆರೋಗ್ಯ ಕಾಪಾಡುವುದು.

English summary

Lemon Water And Jaggery For Weight Loss: An Easy Fitness Hack

Whenever they are hungry, the best thing to munch down is usually a burger or chips. These food items contain high amount of calories which gets stored in the body. Besides, obesity can lead to a heart ailment, as due to fat storage the level of cholesterol rises which blocks the path of blood flow to arteries. Therefore, before it's too late, start to control your food habits. One good start to it can be done by consuming lemon water with jaggery early in the morning. This drink has shown a potential benefit in reducing belly fat and renders an active lifestyle.