ತೂಕ ಇಳಿಸುವ ಟಿಪ್ಸ್: ಏಳು ದಿನಗಳಲ್ಲಿ ಏಳು ಕೆ.ಜಿ. ಇಳಿಸಿ!

Posted By: Lekhaka
Subscribe to Boldsky

ಪ್ರತೀ ಸಲ ಹೊಸ ವರ್ಷ ಆರಂಭವಾಗುತ್ತಾ ಇರುವಂತೆ ನೀವು ಕೆಲವೊಂದು ಸಂಕಲ್ಪ ಕೈಗೊಳ್ಳುತ್ತೀರಿ. ಅದರಲ್ಲಿ ನಿಮ್ಮ ದೇಹದ ಅತಿಯಾದ ತೂಕ ಇಳಿಸುವಂತಹ ಸಂಕಲ್ಪವೂ ಒಂದಾಗಿರಬಹುದು. ವರ್ಷಗಳು ಉರುಳಿ ಮತ್ತೆ ಹೊಸ ವರ್ಷ ಬಂದರೂ ನಿಮ್ಮ ದೇಹದ ತೂಕ ಮಾತ್ರ ಹಾಗೆ ಇದೆ ಅಥವಾ ಅದಕ್ಕಿಂತ ಹೆಚ್ಚಾಗಿದೆ. ನೀವು ತೂಕ ಇಳಿಸುವ ಸಂಕಲ್ಪ ತೊಟ್ಟುಕೊಂಡು ಸಂಪೂರ್ಣವಾಗಿ ಸೋತು ಹೋಗಿರಬಹುದು. ಆದರೆ ಕೇವಲ ಏಳು ದಿನಗಳಲ್ಲಿ ಏಳು ಕಿ.ಲೋ.

ತೂಕ ಇಳಿಸಿಕೊಳ್ಳಬಹುದು ಎಂದರೆ ನೀವು ನಂಬುತ್ತೀರಾ? ಇಲ್ಲ ತಾನೇ? ಆದರೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ಏಳು ದಿನಗಳಲ್ಲಿ ಏಳು ಕೆ.ಜಿ ತೂಕ ಇಳಿಸಿಕೊಳ್ಳುವ ಬಗ್ಗೆ ತಿಳಿಸಲಿದೆ. ಹೊಸ ವರ್ಷದಲ್ಲಿ ಸಂಕಲ್ಪ ತೆಗೆದುಕೊಂಡು ಕಠಿಣ ಶ್ರಮ ವಹಿಸಿದರೆ ಖಂಡಿತವಾಗಿಯೂ ಇದು ಸಾಧ್ಯ. ಅದು ಹೇಗೆ ಎಂದು ತಿಳಿಯಿರಿ....

weight loss

ಮೊದಲ ದಿನ

ಮೊದಲ ದಿನ: ತೂಕವನ್ನು ಕಳೆದುಕೊಳ್ಳಲು ಬಯಸುವವರಿಗೆ ಇದು ಪ್ರಮುಖ ಅಂಶವಾಗಿದೆ. ನಿಮ್ಮ ಮೊದಲ ದಿನವನ್ನು ಹಣ್ಣುಗಳನ್ನು ತಿನ್ನುವುದರ ಮೂಲಕ ಪ್ರಾರಂಭಿಸಿ! ಉಳಿದ ಆಹಾರಗಳನ್ನು ಬದಿಗೆ ಸರಿಸಿ ಆರೋಗ್ಯಕರವಾಗಿರುವ ಇಂತಹ ಹಣ್ಣುಗಳನ್ನು ನೀವು ಸೇವಿಸಿದರೆ ಖಂಡಿತವಾಗಿಯೂ ತೂಕವನ್ನು ಕಳೆದುಕೊಳ್ಳುವಲ್ಲಿ ನಿಮಗೆ ಸಹಕಾರಿಯಾಗಲಿದೆ. ಸಾಮಾನ್ಯವಾಗಿ ಬಾಳೆಹಣ್ಣು ಒಂದನ್ನು ಹೊರತು ಪಡಿಸಿ, ಉಳಿದ ಹಣ್ಣುಗಳನ್ನು ನಿಮ್ಮ ಡಯೆಟ್‌ನ ಪಟ್ಟಿಯಲ್ಲಿ ಸೇರಿಸಿ. ಜೊತೆಗೆ ಸಾಧ್ಯವಾದಷ್ಟು ನೀರನ್ನು ಸೇವಿಸಿ. 

ಎರಡನೇ ದಿನ

ಏಳು ದಿನಗಳಲ್ಲಿ 7 ಕೆಜಿ ತೂಕಗಳನ್ನು ಕಳೆದುಕೊಳ್ಳಲು ನೀವು ಬಯಸುವುದಾದರೆ, ನೀವು ಕಟ್ಟುನಿಟ್ಟಾಗಿ ತರಕಾರಿಗಳನ್ನು ಮಾತ್ರ ಬಳಸಬೇಕು. ನಿಮ್ಮ ಊಟವನ್ನು ಇನ್ನಷ್ಟು ಸ್ವಾದಿಷ್ಟಕರವನ್ನಾಗಿಸಲು, ನೀವು ತರಕಾರಿಯಿಂದ ಮಾಡಲಾಗಿರುವ ಆರೋಗ್ಯಯುಕ್ತವಾಗಿರುವ ಸಲಾಡ್ ಅನ್ನು ಸೇವಿಸಿ. ಬೇಯಿಸಲಾಗಿರುವ ಅಥವಾ ಹಸಿ ತರಕಾರಿಯು ತೂಕವನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಲೂಗಡ್ಡೆ ಸೇರಿದಂತೆ ನೀವು ಎಲ್ಲಾ ರೀತಿಯ ತರಕಾರಗಳನ್ನು ಸೇವಿಸಬಹುದು, ಆದರೆ ಆಲೂಗಡ್ಡೆ ಅನ್ನು ಬೇಯಿಸಿ ತಿನ್ನುವುದು ಅತ್ಯಗತ್ಯ. ಇದರ ಜೊತೆಗೆ 8 ಗ್ಲಾಸ್ ನೀರು ಕುಡಿಯುವುದನ್ನು ಮರೆಯಬೇಡಿ. 

ಮೂರನೇ ದಿನ

ಮೂರನೇಯ ದಿನ ಸ್ವಲ್ಪ ರಂಗು ರಂಗಿನಿಂದ ಕೂಡಿರುತ್ತದೆ ! ಈ ದಿನ ನೀವು ಹಣ್ಣುಗಳು ಹಾಗೂ ತರಕಾರಿಗಳು ಎರಡನ್ನು ಮಿಕ್ಸ್ ಮಾಡಬೇಕಾಗುತ್ತದೆ. ಏಳು ದಿನಗಳಲ್ಲಿ 7 ಕೆಜಿ ತೂಕಗಳನ್ನು ಕಳೆದುಕೊಳ್ಳಲು ನೀವು ಬಯಸುವುದಾದರೆ, ಈ ಸಲಹೆಗಳನ್ನು ನೀವು ಪಾಲಿಸಲೇ ಬೇಕು. ನಿಮ್ಮ ದಿನವನ್ನು ಒಂದು ಬೌಲ್‌ ಹಣ್ಣಿನೊಂದಿಗೆ ಪ್ರಾರಂಭಿಸಿ, ಜೊತೆಗೆ ನಿಮ್ಮ ಮಧ್ಯಾಹ್ನದ ಊಟದ ಜೊತೆ ತರಕಾರಿ ಸಲಾಡ್ ಅನ್ನು ಸೇವಿಸಿ, ಹಾಗೂ ರಾತ್ರಿ ಊಟದ ನಂತರ ಹಣ್ಣುಗಳನ್ನು ತಿನ್ನಲು ಮರೆಯದಿರಿ. ಪೊಟೇಟೊ ಹಾಗೂ ಬಾಳೆಹಣ್ಣುಗಳನ್ನು ಮೂರನೇಯ ದಿನದಲ್ಲಿ ಬಳಸಬೇಡಿ. 

banana juice

ನಾಲ್ಕನೇ ದಿನ

ನಾಲ್ಕನೆಯ ದಿನದಲ್ಲಿ ನೀವು ಕೇವಲ ಬಾಳೆಹಣ್ಣು ಹಾಗೂ ಹಾಲು ಮಾತ್ರ ಸೇವಿಸಬೇಕು. ಅಂದರೆ ನೀವು ಬಾಳೆ ಹಣ್ಣಿನಿಂದ ಮಿಲ್ಕ್‌ಶೇಕ್ ಮಾಡಿ ಸೇವಿಸಬೇಕು. ಏಳು ದಿನಗಳಲ್ಲಿ 7 ಕೆಜಿ ತೂಕಗಳನ್ನು ಕಳೆದುಕೊಳ್ಳಲು ನೀವು ಬಯಸುವುದಾದರೆ ನಾಲ್ಕನೆಯ ದಿನ ನೀವು ಇದನ್ನು ತಪ್ಪದೇ ಅನುಸರಿಸಬೇಕು. ಕೆನೆ ತೆಗೆದ ಹಾಲನ್ನು ಮಾತ್ರ ಉಪಯೋಗಿಸಿ. 

ಐದನೇ ದಿನ

ಇಂದು, ನಿಮ್ಮ ಡಯೆಟ್‌ನಲ್ಲಿ ಕೊಚ್ಚಿಲು ಅಕ್ಕಿ (boiled rice) ಅನ್ನು ಸೇರಿಸಿಕೊಳ್ಳಿ. ಆದರೆ ಈ ಡಯಟ್ ಜೊತೆ ನೀವು ಟೊಮೇಟೊ ಅನ್ನು ಕೂಡ ಸೇರಿಸಬೇಕಾಗುತ್ತದೆ. ಸುಮಾರು 7 - 8 ಹಸಿ ಅಥವಾ ಬೇಯಿಸಿದ ಟೊಮೇಟೊ ಅನ್ನು ನಿಮ್ಮ ಡಯೆಟ್ ಪಟ್ಟಿಗೆ ಸೇರಿಸಿ. ಮಧ್ಯಾಹ್ನ ಟೊಮೇಟೊ ಅನ್ನು ಮಾತ್ರ ಸೇವಿಸಿ ಹಾಗೂ ರಾತ್ರಿಯ ಊಟಕ್ಕೆ ಕೊಚ್ಚಿಲು ಅಕ್ಕಿ ಸೇವಿಸಿ. ಜೊತೆಗೆ 12 ರಿಂದ 15 ಗ್ಲಾಸ್ ನೀರು ಕುಡಿಯುವುದನ್ನು ಮರೆಯಬೇಡಿ. 

ಆರನೇ ದಿನ

ನಿಮ್ಮ ತೂಕ ಇಳಿಕೆಯ ತಪಸ್ಸಿನಲ್ಲಿ ಅರನೇ ದಿನ ಮಧ್ಯಾಹ್ನದ ಊಟಕ್ಕೆ ಒಂದು ಕಪ್ ಅನ್ನ ಸೇವಿಸಿ. ಇದರ ಬಳಿಕ ದಿನವಿಡಿ ತರಕಾರಿ ಸೇವಿಸುತ್ತಾ ಇರಿ. ಏಳು ದಿನಗಳಲ್ಲಿ ಏಳು ಕೆ.ಜಿ. ತೂಕ ಇಳಿಸುವ ನಿಟ್ಟಿನಲ್ಲಿ ಇದು ತುಂಬಾ ಮಹತ್ವದ ದಿನವಾಗಿದೆ.

weight loss

ಏಳನೇ ದಿನ

ಈ ದಿನ ನೀವು ಕುಚ್ಚಲಕ್ಕಿ ಒಂದು ಕಪ್ ಸೇವಿಸಬಹುದು. ಅದರೊಂದಿಗೆ ನಿಮಗೆ ಇಷ್ಟವಿರುವ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬಹುದು. ಈ ಆಹಾರ ಪಥ್ಯದಲ್ಲಿ ದಿನವಿಡಿ ಸೇವಿಸುವ ಹಣ್ಣುಗಳ ಜ್ಯೂಸ್ ನಿಂದ ನಿಮ್ಮ ದೇಹದಲ್ಲಿ ಇರುವ ಎಲ್ಲಾ ವಿಷವು ಹೊರಹೋಗುವುದು....

English summary

How To Lose 7Kgs Weight In 7 Days

When you have the will power in you to lose 7kgs in 7 days, it will surely be achieved. With these simple diet tips that have been mentioned below, losing weight can be as quick as running a race. So, are you ready to take the plunge and join the race to lose 7kgs in 7 days? If it is a yes from you, then here are some things you need to follow. Take a look at these diet tips for you to lose 7kgs in 7 days.