ದೇಹದ ತೂಕ ಇಳಿಸಿಕೊಳ್ಳಬೇಕೇ? ಬೇವಿನ ಎಲೆಗಳ ಟೀ ಕುಡಿಯಿರಿ..

By: Arshad Hussain
Subscribe to Boldsky

ಕರಿಬೇವಿನ ಎಲೆ ನಮ್ಮ ಅಡುಗೆ ಮನೆಯಲ್ಲಿ ಒಗ್ಗರಣೆಯ ಪ್ರಮುಖ ಸಾಮಾಗ್ರಿಯಾಗಿದೆ. ಹಿಂದಿಯಲ್ಲಿ ಕಡಿ ಪತ್ತಾ ಎಂದೂ ಕರೆಯಲಾಗುವ ಈ ಕಹಿಯಾದ ಎಲೆಗಳು ಸಿಹಿಬೇವಿನ ವರ್ಗಕ್ಕೆ ಸೇರಿದ್ದು ದಕ್ಷಿಣ ಭಾರತ ಹಾಗೂ ಶ್ರೀಲಂಕಾ ಮೂಲದ್ದೆಂದು ಹೇಳಲಾಗುತ್ತದೆ. ಭಾರತೀಯ ಅಡುಗೆಗಳಲ್ಲಿ ವಿವಿಧ ಖಾದ್ಯಗಳ ರುಚಿ ಹೆಚ್ಚಿಸಲು ನೆರವಾಗುವುದರ ಜೊತೆಗೇ ಇದರ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಹಲವಾರು ಕಾಯಿಲೆಗೆ ಔಷಧಿಯಂತೆಯೂ ಕೆಲಸ ನಿರ್ವಹಿಸುತ್ತದೆ. ವಾಕರಿಕೆ, ಮಧುಮೇಹ ಮೊದಲಾದವುಗಳಿಗೆ ಕರಿಬೇವು ಉತ್ತಮ ಪರಿಹಾರವಾಗಿದೆ.

ಇಂದಿನ ಲೇಖನದಲ್ಲಿ ಕರಿಬೇವನ್ನು ಔಷಧಿಯ ರೂಪದಲ್ಲಿ ಬಳಸುವ ಮೂಲಕ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ವಿಷಯದ ಬಗ್ಗೆ ಹನ್ನೆರಡು ಪ್ರಮುಖ ಮಾಹಿತಿಗಳನ್ನು ಒದಗಿಸಲಾಗಿದೆ. ವಿಶೇಷವಾಗಿ ನೀವು ಸ್ಥೂಲಕಾಯರಾಗಿದ್ದು ತೂಕವಿಳಿಸಬೇಕೆಂಬ ದೃಢ ನಿರ್ಧಾರ ಹೊಂದಿದ್ದಲ್ಲಿ ಬೇವಿನ ಎಲೆಗಳನ್ನು ಬಳಸಿ ತಯಾರಿಸುವ ವಿಶೇಷ ವಿಧಾನವೊಂದನ್ನೂ ನೀಡಲಾಗಿದೆ....  

ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ತೂಕ ಏರಲು ಹಲವಾರು ಕಾರಣಗಳಿವೆ. ಅಗತ್ಯಕ್ಕೂ ಹೆಚ್ಚು ಪ್ರಮಾಣದ ಆಹಾರ ಸೇವನೆ, ಅನಾರೋಗ್ಯಕರ ಆಹಾರಗಳತ್ತ ಒಲವು ಮತ್ತು ಸಂಸ್ಕರಿಸಿದ ಆಹಾರ ಸೇವನೆ, ಜೀರ್ಣಾಂಗಗಳ ಕಾಯಿಲೆ, ಬೆಳಗ್ಗಿನ ಉಪಾಹಾರವನ್ನು ಮಾಡದೇ ಇರುವುದು ಹಾಗೂ ಕಾಲಕಾಲಕ್ಕೆ ಕಲ್ಮಶಗಳನ್ನು ದೇಹದಿಂದ ನಿವಾರಿಸದೇ ದೇಹದಲ್ಲಿ ಹೆಚ್ಚು ಹೊತ್ತು ಸಂಗ್ರಹವಾಗಿರುವಂತೆ ಮಾಡುವುದು ಮೊದಲಾದವು ಕೆಲವು ಕಾರಣಗಳಾಗಿವೆ. ಇದರಲ್ಲಿ ಕಡೆಯ ಕಾರಣ ನಿಮ್ಮ ಸ್ಥೂಲಕಾಯಕ್ಕೆ ಮೂಲವಾಗಿದ್ದರೆ ಕರಿಬೇವು ನಿಮ್ಮ ನೆರವಿಗೆ ಬರಬಲ್ಲುದು. ಕರಿಬೇವಿನ ಸೇವನೆಯಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ಪೂರ್ಣವಾಗಿ ನಿವಾರಿಸಿ ಈ ಕೆಲಸಕ್ಕೆ ಕೊಬ್ಬನ್ನೂ ಬಳಸಿಕೊಳ್ಳುವ ಮೂಲಕ ತೂಕ ಇಳಿಯಲು ನೆರವಾಗುತ್ತದೆ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ಬೇವಿನ ಎಲೆಗಳಿಂದ ತಯಾರಾದ ಟೀ ವಿಶಿಷ್ಟ ಪರಿಮಳ ಹಾಗೂ ರುಚಿ ಭಿನ್ನವಾದ ಅನುಭವವನ್ನು ನೀಡುತ್ತದೆ. ನಿಯಮಿತವಾಗಿ ಈ ಟೀ ಕುಡಿಯುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ತನ್ಮೂಲಕ ಅತಿಸಾರವಾಗುವ ಸಾಧ್ಯತೆಗಳನ್ನು ಇಲ್ಲವಾಗಿಸುತ್ತದೆ.

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ತಗ್ಗಿಸುತ್ತದೆ

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ತಗ್ಗಿಸುತ್ತದೆ

ಒಂದು ವೇಳೆ ಅನಿವಾರ್ಯವಾಗಿ ಸಿಹಿತಿಂಡಿ ಅಥವಾ ಸಕ್ಕರೆ ಬೆರೆಸಿದ ಪೇಯಗಳನ್ನು ಸೇವಿಸಬೇಕಾಗಿ ಬಂದರೆ ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಥಟ್ಟನೇ ಏರಬಹುದು. ಈ ಹೆಚ್ಚಿನ ಸಕ್ಕರೆಯ ಅಗತ್ಯವಿಲ್ಲದೇ ಹೋದರೆ ಈ ಹೆಚ್ಚುವರಿ ಸಕ್ಕರೆ ಕೊಬ್ಬಾಗಿ ಪರಿವರ್ತನೆಗೊಳ್ಳುತ್ತದೆ ಹಾಗೂ ದೇಹದಲ್ಲಿ ಸಂಗ್ರಹಗೊಂಡು ತೂಕ ಹೆಚ್ಚಿಸುತ್ತದೆ. ಈ ಕಾರ್ಯಕ್ಕೆ ಬೇವಿನ ಎಲೆ ಅಡ್ಡಗಾಲು ಹಾಕುತ್ತದೆ. ಅಂದರೆ ಥಟ್ಟನೇ ಸಕ್ಕರೆ ಏರದಂತೆ ನೋಡಿಕೊಳ್ಳುವ ಮೂಲಕ ಕೊಬ್ಬಿಗೆ ಪರಿವರ್ತನೆಯಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಿ ಪರೋಕ್ಷವಾಗಿ ತೂಕ ಏರದಂತೆ ಹಾಗೂ ಮಧುಮೇಹದ ಅಡ್ಡಪರಿಣಾಮಗಳಿಗೆ ಒಳಗಾಗದಂತೆ ನೋಡಿಕೊಳ್ಳುತ್ತದೆ.

ಪ್ರಬಲ ಆಂಟಿ ಆಕ್ಸಿಡೆಂಟುಗಳಿವೆ

ಪ್ರಬಲ ಆಂಟಿ ಆಕ್ಸಿಡೆಂಟುಗಳಿವೆ

ಇದರಲ್ಲಿ carbazole alkaloid ಎಂಬ ಹೆಸರಿನ ಪ್ರಬಲವಾದ ರಾಸಾಯನಿಕವಿದೆ. ಇದು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಓಡಿಸಲು ಸಕ್ಷಮವಾಗಿದೆ ಹಾಗೂ ದೇಹದಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ಕೊಲ್ಲಲೂ ಸಮರ್ಥವಾಗಿದೆ. ಈ ಮೂಲಕ ದೇಹದಲ್ಲಿ ಎದುರಾಗುವ ಹಲವಾರು ಸೋಂಕು ಹಾಗೂ ಉರಿಯೂತಗಳಿಂದ ರಕ್ಷಿಸುತ್ತದೆ. ಇದಲ್ಲಿರುವ ಇನ್ನೊಂದು ಪೋಷಕಾಂಶವಾದ ಲಿನೋಲೂಲ್ ಬೇವಿನ ವಿಶಿಷ್ಟವಾದ ಪರಿಮಳಕ್ಕೆ ಕಾರಣವಾಗಿದೆ.

ಗಾಯ, ಸುಟ್ಟಗಾಯಗಳನ್ನು ಮಾಗಿಸುತ್ತದೆ

ಗಾಯ, ಸುಟ್ಟಗಾಯಗಳನ್ನು ಮಾಗಿಸುತ್ತದೆ

ಬೇವಿನ ಎಲೆಗಳ ಟೀ ಮಾಡಿದ ಬಳಿಕ ಸೋಸಿ ತೆಗೆದ ಎಲೆಗಳನ್ನು ಅರೆದು ಸಂಗ್ರಹಿಸಿಟ್ಟುಕೊಂಡರೆ ಚಿಕ್ಕ ಪುಟ್ಟ ಗಾಯ, ಸುಟ್ಟಗಾಯಗಳಿಗೆ ತಕ್ಷಣವೇ ಹಚ್ಚಲು ಮುಲಾಮಿನಂತೆ ಬಳಸಬಹುದು. ಇದರಲ್ಲಿರುವ mahanimbicine ಎಂಬ ಪೋಷಕಾಂಶ ಗಾಯಗಳು ಶೀಘ್ರವಾಗಿ ಮಾಗಿಸಲು ನೆರವಾಗುತ್ತದೆ ಹಾಗೂ ಗಾಯದಲ್ಲಿ ಕೂದಲ ಬುಡಗಳನ್ನು ಮತ್ತೊಮ್ಮೆ ಸ್ಥಾಪಿಸಲೂ ನೆರವಾಗುತ್ತದೆ.

ತೂಕ ಏರದಂತೆ ನೋಡಿಕೊಳ್ಳುತ್ತದೆ

ತೂಕ ಏರದಂತೆ ನೋಡಿಕೊಳ್ಳುತ್ತದೆ

ಪ್ರತಿದಿನವೂ ಕನಿಷ್ಟ ಒಂದು ಕಪ್ ಬೇವಿನ ಎಲೆಗಳ ಟೀ ಕುಡಿಯುವ ಮೂಲಕ ತೂಕ ಏರದಂತೆ ನೋಡಿಕೊಳ್ಳಬಹುದು ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಏರದಂತೆ ನೋಡಿಕೊಳ್ಳಲೂ ಸಾಧ್ಯವಾಗುತ್ತದೆ. ಬೇವಿನಲ್ಲಿರುವ mahanimbicine ಎಂಬ ಕಾರ್ಬಜೋಲ್ ಆಲ್ಕಲಾಯ್ಡ್ ಈ ಕೆಲಸದಲ್ಲಿ ನೆರವಾಗುತ್ತದೆ.

ಮಲಬದ್ಧತೆ ಹಾಗೂ ಅತಿಸಾರದಿಂದ ರಕ್ಷಿಸುತ್ತದೆ

ಮಲಬದ್ಧತೆ ಹಾಗೂ ಅತಿಸಾರದಿಂದ ರಕ್ಷಿಸುತ್ತದೆ

ಹಿಂದೆ ತಿಳಿಸಿದಂತೆ ಬೇವು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ, ವಿಶೇಷವಾಗಿ ಸಣ್ಣಕರುಳಿಗೆ ಹೆಚ್ಚಿನ ನೆರವು ನೀಡುತ್ತದೆ. ಬೇವಿನ ನೆರವು ಇಷ್ಟಕ್ಕೇ ಮುಗಿಯುವುದಿಲ್ಲ, ಇದರಲ್ಲಿ ಲಘುವಾದ ವಿರೇಚಕ ಗುಣವೂ ಇರುವ ಕಾರಣ ಇದು ಮಲಬದ್ಧತೆಯಾಗದಂತೆಯೂ ನೋಡಿಕೊಳ್ಳುತ್ತದೆ. ಒಂದು ವೇಳೆ ವಿಷಾಹಾರ ಸೇವನೆಯಿಂದ ಅತಿಸಾರ ಎದುರಾದರೆ ತಕ್ಷಣ ಬೇವಿನ ಎಲೆಗಳ ಟೀ ಕುಡಿಯುವ ಮೂಲಕ ಜೀರ್ಣಂಗಗಳಲ್ಲಿರುವ ಸೂಕ್ಷ್ಮಜೀವಿಗಳನ್ನು ಕೊಂದು ನಿವಾರಿಸಲು ಬೇವು ಸಹಕರಿಸುತ್ತದೆ. ಕೆಲವೊಮ್ಮೆ ಸೂಕ್ಷ್ಮಜೀವಿಗಳ ಪ್ರಭಾವ ಹೆಚ್ಚಾಗಿ ಇವುಗಳ ಸಂಖ್ಯೆ ವಿಪರೀತವಾಗಿ accelerated peristalsis ಎಂಬ ಸ್ಥಿತಿ ತಲುಪಿದ್ದರೂ ಬೇವಿನ ಎಲೆಗಳ ಟೀ ಸೇವನೆಯಿಂದ ಈ ಸ್ಥಿತಿಯಿಂದ ಹಿಮ್ಮರಳಲು ಸಾಧ್ಯವಾಗುತ್ತದೆ.

ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಇದರಲ್ಲಿರುವ ಲಿನೋಲೂಲ್ ಎಂಬ ಪೋಷಕಾಂಶ ಬೇವಿನ ವಿಶಿಷ್ಟ ಪರಿಮಳಕ್ಕೆ ಕಾರಣವಾಗಿದ್ದು ಒಗ್ಗರಣೆಯಲ್ಲಿ ಹೊರಡುವ ಪರಿಮಳ ಮನಮೋಹಗೊಳ್ಳಲು ಕಾರಣವಗಿದೆ. ಈ ಪರಿಮಳಕ್ಕೆ ಮನಸ್ಸಿನ ಹಾಗೂ ದೈಹಿಕ ಒತ್ತಡವನ್ನು ಕಡಿಮೆಗೊಳಿಸುವ ಶಕ್ತಿ ಇದೆ. ಒತ್ತಡ ಹೆಚ್ಚಿದ್ದಾಗ ಈ ಟೀ ಕುದಿಸುವಾಗ ಬರುವ ಪರಿಮಳವನ್ನು ಆಘ್ರಾಣಿಸಲು ಮರೆಯದಿರಿ. ಇದರಿಂದ ಮನಸ್ಸು ನಿರಾಳವಾಗಲು ನೆರವಾಗುತ್ತದೆ.

ಸ್ಮರಣಶಕ್ತಿ ಹೆಚ್ಚಿಸುತ್ತದೆ

ಸ್ಮರಣಶಕ್ತಿ ಹೆಚ್ಚಿಸುತ್ತದೆ

ಆಹಾರದೊಡನೆ ಅಥವಾ ಟೀ ರೂಪದಲ್ಲಿ ನಿಯಮಿತವಾಗಿ ಬೇವಿನ ಎಲೆಗಳನ್ನು ಸೇವಿಸುತ್ತಾ ಬರುವ ಮೂಲಕ ಸ್ಮರಣ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಈ ಬಗ್ಗೆ ಇನ್ನೂ ಸಂಶೋಧನೆಗಳು ಮುಂದುವರೆಯುತ್ತಿವೆ. ಮುಂದೊಂದು ದಿನ ಬೇವಿನ ಎಲೆಗಳಿಂದ ಪ್ರತ್ಯೇಕಿಸಲಾದ ಪೋಷಕಾಂಶಗಳಿಂದ ಮರೆಗುಳಿತನ ಹಾಗೂ ಆಲ್ಜೀಮರ್ಸ್ ಕಾಯಿಲೆಯನ್ನು ಪೂರ್ಣವಾಗಿ ಹಿಮ್ಮೆಟ್ಟಿಸುವ ಔಷಧಿಯನ್ನೂ ತಯಾರಿಸುವ ಬಗ್ಗೆ ವಿಜ್ಞಾನಿಗಳು ಆಶಾವಾದ ಹೊಂದಿದ್ದಾರೆ.

ವಾಕರಿಕೆ ಹಾಗೂ ಮುಂಜಾನೆಯ ಮಂಕುತನ ನಿವಾರಿಸುತ್ತದೆ

ವಾಕರಿಕೆ ಹಾಗೂ ಮುಂಜಾನೆಯ ಮಂಕುತನ ನಿವಾರಿಸುತ್ತದೆ

ಒಂದು ವೇಳೆ ಬಸ್ಸಿನ ಪ್ರಯಾಣದಲ್ಲಿ ವಾಂತಿಯಾಗುವ ಸಂಭವವಿದ್ದರೆ ಪ್ರಯಾಣಕ್ಕೂ ಮುನ್ನ ಒಂದು ಕಪ್ ಬೇವಿನ ಎಲೆಗಳ ಟೀ ಕುಡಿದೇ ಹೊರಡುವ ಮೂಲಕ ವಾಂತಿಯಾಗುವ ಸಾಧ್ಯತೆ ಇಲ್ಲವಾಗಿಸಬಹುದು. ಅಲ್ಲದೇ ಗರ್ಭಿಣಿಯರಿಗೆ ಎದುರಾಗುವ ಮುಂಜಾನೆಯ ಮಂಕುತನದಿಂದ ಹೊರಬರಲೂ ಈ ಟೀ ಸೇವನೆ ಉತ್ತಮ ಪರಿಹಾರವಾಗಿದೆ.

ಕಣ್ಣುಗಳ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣುಗಳ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಇದರಲ್ಲಿ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿರುವ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿದ್ದು ದೃಷ್ಟಿ ಉತ್ತಮವಾಗಿರಲು ನೆರವಾಗುತ್ತದೆ. ಆದ್ದರಿಂದ ನಿತ್ಯವೂ ಒಂದು ಕಪ್ ಬೇವಿನ ಎಲೆಗಳ ಟೀ ಕುಡಿಯುವ ಮೂಲಕ ಕಣ್ಣುಗಳ ದೃಷ್ಟಿ ಉತ್ತಮವಾಗಿರುವಂತೆ ನೋಡಿಕೊಳ್ಳಬಹುದು. ವಿಶೇಷವಾಗಿ ನೀವು ಕನ್ನಡಕ ಧರಿಸುತ್ತಿದ್ದರೆ ನಿಮ್ಮ ಕನ್ನಡಕದ ಸಂಖ್ಯೆ ಹೆಚ್ಚದಂತೆ ಹಾಗೂ ಕಣ್ಣುಗಳು ಒಣಗದಂತೆ ಇದರಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಅಲ್ಲದೇ ಕಣ್ಣುಗಳ ಮೇಲಿನ ಒತ್ತಡವನ್ನೂ ಕಡಿಮೆಗೊಳಿಸಲು ಸಹಕರಿಸುತ್ತವೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಜಪಾನ್ ನಲ್ಲಿರುವ ಮೇಜಿಯೋ ವಿಶ್ವವಿದ್ಯಾಲಯದಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ಇದರಲ್ಲಿರುವ ಕೆಲವು ಕಾರ್ಬಜೋಲ್ ಆಲ್ಕಲಾಯ್ಡುಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿರುವುದನ್ನು ಪ್ರಕಟಿಸಿದೆ. ವಿಶೇಷವಾಗಿ ಕರುಳಿನ ಕ್ಯಾನ್ಸರ್, ರಕ್ತದ ಕ್ಯಾನ್ಸರ್ ಹಾಗೂ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ವಿರುದ್ಧ ಈ ಆಲ್ಕಲಾಯ್ಡುಗಳು ಹೋರಾಡಿ ಈ ಅಂಗಗಳನ್ನು ರಕ್ಷಿಸುತ್ತವೆ. ಆದ್ದರಿಂದ ಕ್ಯಾನ್ಸರ್ ನಿಂದ ರಕ್ಷಣೆ ಪಡೆಯಲೋಸುಗವಾದರೂ ಬೇವಿನ ಎಲೆಗಳ ಟೀ ಕುಡಿಯುವುದು ಅಗತ್ಯವಾಗಿದೆ.

ಬೇವಿನ ಎಲೆಗಳ ಟೀ ತಯಾರಿಸುವ ವಿಧಾನ

ಬೇವಿನ ಎಲೆಗಳ ಟೀ ತಯಾರಿಸುವ ವಿಧಾನ

ಅಗತ್ಯವಿರುವ ಸಾಮಾಗ್ರಿಗಳು:

ಒಂದುಕಪ್ ನೀರು

30-45 ಬೇವಿನ ಎಲೆಗಳು

ವಿಧಾನ:

1.ಮೊದಲು ನೀರನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಸಿ ಬಳಿಕ ಉರಿ ಆರಿಸಿ

2. ಇದಕ್ಕೆ ಬೇವಿನ ಎಲೆಗಳನ್ನು ಬೆರೆಸಿ ಸುಮಾರು ಎರಡು ಘಂಟೆಗಳ ವರೆಗೆ ಅಥವಾ ನೀರಿನ ಬಣ್ಣ ಗಾಢವಾಗುವವರೆಗೆ

ಮುಚ್ಚಳ ಮುಚ್ಚಿಡಿ.

3. ಬಳಿಕ ಈ ನೀರನ್ನು ಸೋಸಿ ಎಲೆಗಳನ್ನು ನಿವಾರಿಸಿ. ಈ ನೀರನ್ನು ಮತ್ತೊಮ್ಮೆ ಕುದಿಸಿ.

4. ಒಂದು ಚಿಕ್ಕ ಚಮಚ ಜೇನು ಮತ್ತು ಒಂದೆರಡು ತೊಟ್ಟು ಲಿಂಬೆ ರಸ ಬೆರೆಸಿ ಬಿಸಿಬಿಸಿಯಾಗಿ ಕುಡಿಯಿರಿ.

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ

ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Health benefits-of-curry-leaves-tea-for-weight-loss

Curry leaves, also known as kadhi patta in Hindi, belong to the Sweet Neem tree that is native to southern India and Sri Lanka. And while it is predominantly used for adding a beautiful, earthy aroma to curry dishes, tea prepared from these leaves has been used for centuries to treat various ailments, ranging from morning sickness to diabetes.
Subscribe Newsletter