For Quick Alerts
ALLOW NOTIFICATIONS  
For Daily Alerts

ನೀವು ನಂಬಲೇಬೇಕು! ಟೊಮೆಟೊ ಹಣ್ಣಿನಿಂದ ಕೂಡ ದೇಹದ ತೂಕ ಇಳಿಸಬಹುದು!

|

ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳು ತಮ್ಮ ಆಹಾರವನ್ನು ಆಯ್ದುಕೊಳ್ಳುವ ಮೂಲಕ ಹೆಚ್ಚಿನ ವ್ಯತ್ಯಾಸವನ್ನು ಗಮನಿಸಬಹುದು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆಯ ವೈದ್ಯರ ಪ್ರಕಾರ, ಸ್ಥೂಲದೇಹಿಗಳು ತಮ್ಮ ಅಹಾರದಲ್ಲಿ ಕಡಿಮೆ 'ಪರಿವರ್ತನೆಗೊಳ್ಳುವ ಕೊಬ್ಬು' (trans fat), ಸಿದ್ಧ ಆಹಾರಗಳ ಸೇವನೆಯನ್ನು ಕನಿಷ್ಟವಾಗಿಸುವುದು, ಸಂಸ್ಕರಿತ ಸಕ್ಕರೆಯ ಪ್ರಮಾಣವನ್ನುಇಳಿಸುವುದು ಹಾಗೂ ಸಂತೃಪ್ತ ಕೊಬ್ಬಿನ ಸೇವನೆಯನ್ನು ಮಿತಗೊಳಿಸುವ ಮೂಲಕ ತೂಕ ಇಳಿಸಲು ಸಾಧ್ಯವಾಗುತ್ತದೆ. ಇಂದಿನ ಲೇಖನದಲ್ಲಿ ಈ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಟೊಮಾಟೋ ಪ್ರಯೋಜನಕಾರಿಯೇ ಅಲ್ಲವೇ ಎಂಬುದನ್ನು ನೋಡೋಣ.

ನಿತ್ಯದ ಆಹಾರದಲ್ಲಿ ಟೊಮೆಟೊ ಸಹಿತ ಹಲವು ಹಸಿಯಾಗಿ ತಿನ್ನಬಹುದಾದ ಆಹಾರಗಳನ್ನು ಸೇವಿಸುವ ಮೂಲಕ ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ಪಡೆಯಬಹುದು ಹಾಗೂ ತೂಕ ಇಳಿಕೆಯ ಪ್ರಯತ್ನದಲ್ಲಿಯೂ ಯಶಸ್ಸು ಪಡೆಯಬಹುದು. ಟೊಮೆಟೊಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ ಹಾಗೂ ಇದನ್ನು ಸೇವಿಸಿದ ಬಳಿಕ ಹೊಟ್ಟೆ ತುಂಬಿದ ಭಾವನೆ ಮೂಡಿ ಹೆಚ್ಚು ಹೊತ್ತು ಅನಗತ್ಯ ಆಹಾರ ಸೇವಿಸದಿರಲು ಸಾಧ್ಯವಾಗುತ್ತದೆ.

ಒಂದು ದೊಡ್ಡ ಟೊಮೆಟೊವಿನಲ್ಲಿ ಸುಮಾರು 33 ಕ್ಯಾಲೋರಿಗಳಿರುತ್ತವೆ ಹಾಗೂ ಮಧ್ಯಮ ಗಾತ್ರದ ಟೊಮೆಟೊವಿನಲ್ಲಿ 22 ಕ್ಯಾಲೋರಿಗಳಿರುತ್ತವೆ. ಚಿಕ್ಕ ಚೆರ್ರಿ ಗಾತ್ರದಲ್ಲಿ 13 ಕ್ಯಾಲೋರಿ ಹಾಗೂ ಪ್ಲಮ್ ಗಾತ್ರದಲ್ಲಿ 11 ಕ್ಯಾಲೋರಿಗಳಿರುತ್ತವೆ. ಈ ಕಡಿಮೆ ಕ್ಯಾಲೋರಿಗಳು ಆರೋಗ್ಯಕ್ಕೆ ಪೂರಕ ಹಾಗೂ ಪ್ರಬಲ ಆಹಾರವೆಂದು ಪರಿಗಣಿಸಲ್ಪಟ್ಟಿದೆ. ಅಂದರೆ ಇದು ಹಸಿವನ್ನು ತಣಿಸುವ ಜೊತೆಗೇ ಆರೋಗ್ಯವನ್ನು ವೃದ್ದಿಸುವ ಆಹಾರವೂ ಆಗಿದೆ.

ಸಸ್ಯಶಾಸ್ತ್ರದ ಪ್ರಕಾರ ಟೊಮೆಟೊ ಒಂದು ಹಣ್ಣು, ತರಕಾರಿಯಲ್ಲ, ನಾವು ಇದನ್ನು ತರಕಾರಿಯ ರೂಪದಲ್ಲಿ ಬಳಸುತ್ತಿದ್ದೇವೆ. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ವಿಟಮಿನ್, ಖನಿಜಗಳು ಹಾಗೂ ಹೆಚ್ಚಿನ ಪ್ರಮಾಣದ ಕರಗದ ನಾರು ಇದ್ದು ತೂಕ ಇಳಿಸುವ ಪ್ರಯತ್ನಕ್ಕೆ ಹೆಚ್ಚಿನ ಬೆಂಬಲ ನೀಡುತ್ತದೆ. ಬನ್ನಿ, ತೂಕ ಇಳಿಸುವ ಪ್ರಯತ್ನದಲ್ಲಿರುವವರು ಟೊಮಾಟೋ ಸೇವನೆಯಿಂದ ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ...

ಜೀವರಾಸಾಯನಿಕ ಕ್ರಿಯೆಗೆ ಚುರುಕು ಒದಗಿಸುತ್ತದೆ

ಜೀವರಾಸಾಯನಿಕ ಕ್ರಿಯೆಗೆ ಚುರುಕು ಒದಗಿಸುತ್ತದೆ

ಟೊಮೆಟೊ ಹಣ್ಣಿನ ರಸದ ಸೇವನೆಯಿಂದ ಕೊಬ್ಬಿನ ಆಮ್ಲಗಳ ಆಮ್ಲಜನೀಕರಣದಲ್ಲಿ ವಂಶವಾಹಿಗಳ ಪ್ರಭಾವ ಬೀರಿ ಮೇದಸ್ಸಿನ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಸಂಶೋಧನೆಗಳಲ್ಲಿ ಕಂಡುಬಂದಂತೆ ಟೊಮೆಟೊ ರಸದ ಸೇವನೆಯಿಂದ ವಿರಾಮ ವೇಳೆಯಲ್ಲಿ ದಹಿಸಲಾಗುವ ಶಕ್ತಿ (Resting Energy Expenditure) ಹೆಚ್ಚುತ್ತದೆ ಹಾಗೂ ದೇಹದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವೂ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ.

ಕಡಿಮೆ ಗ್ಲೈಸಮಿಕ್ ಸೂಚಕ

ಕಡಿಮೆ ಗ್ಲೈಸಮಿಕ್ ಸೂಚಕ

ಟೊಮೆಟೊ ಕಡಿಮೆ ಗ್ಲೈಸೆಮಿಕ್ ಸೂಚಕ ಕೇವಲ 38 ಅಂಕಗಳನ್ನು ಪಡೆದಿದೆ. ಇತರ ಸಂಸ್ಕರಿತ ಆಹಾರಗಳಿಗೆ ಹೋಲಿಸಿದರೆ ಈ ಅಂಶ ದೇಹಕ್ಕೆ ಹೆಚ್ಚು ಪೂರಕವಾಗಿದೆ. ನಾವು ಸೇವಿಸುವ ಆಹಾರ ಎಷ್ಟು ಬೇಗನೇ ರಕ್ತದಲ್ಲಿ ಸಕ್ಕರೆಯ ರೂಪದಲ್ಲಿ ಲಭ್ಯವಾಗುತ್ತದೆ ಎಂಬ ಅಂಶವನ್ನೂ ಈ ಕೋಷ್ಟಕ ಪ್ರಕಟಿಸುತ್ತದೆ. ಇದು ಬೇಗನೇ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸಿದಷ್ಟೂ ಈ ಆಹಾರ ಅನಾರೋಗ್ಯಕರ ಎಂದು ಭಾವಿಸಬಹುದು. ಹಾಗಾಗಿ ನಿಧಾನವಾಗಿ, ಸಾಕಷ್ಟು ತಡವಾಗಿ ಸಕ್ಕರೆ ರಕ್ತವನ್ನು ಸೇರುವಂತಹ ಆಹಾರಗಳೇ ಆರೋಗ್ಯಕರವಾಗಿವೆ. ಟೊಮಾಟೋದಲ್ಲಿ ಇದು ಕಡಿಮೆ ಇರುವ ಮೂಲಕ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಅತಿ ನಿಧಾನವಾಗಿ ಏರಿಸುತ್ತದೆ.

ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ದವಾಗಿದೆ

ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ದವಾಗಿದೆ

ಟೊಮೆಟೊಗಳಲ್ಲಿ ಲೈಕೋಪೀನ್ ಎಂಬ ಪೋಷಕಾಂಶ ಸಮೃದ್ದವಾಗಿದ್ದು ಇದು ಹಾನಿಕಾರಕ ಆಕ್ಸಿಜನ್ ರ್‍ಯಾಡಿಕಲ್ಸ್ ಎಂಬ ಕಣಗಳನ್ನು ದೇಹದಿಂದ ಹೊರಹಾಕಲು ನೆರವಾಗುತ್ತದೆ. ಈ ಕಣಗಳು ದೇಹದ ಡಿಎನ್ ಎ ರಚನೆಯನ್ನೇ ಬದಲಿಸಿ ದೇಹದಲ್ಲಿ ಸುಸ್ತಿನ ಭಾವನೆಯನ್ನು ಮೂಡಿಸಲು ಕಾರಣವಾಗಿವೆ. ಪರಿಣಾಮವಾಗಿ ದೇಹದಲ್ಲಿ ಸುಸ್ತಿನ ಭಾವನೆಯನ್ನು ಮೂಡಿಸಿ ದೇಹ ಚಟುವಟಿಕೆಯಿಂದ ವಿಮುಖವಾಗುತ್ತಾ ಕೊಬ್ಬಿನ ಶೇಖರಕ್ಕೆ ಕಾರಣವಾಗುತ್ತದೆ. ಆದ್ದರಿಂದ ಟೊಮಾಟೋಗಳನ್ನು ಸೇವಿಸುವ ಮೂಲಕ ಉತ್ಕರ್ಷಣಶೀಲ ಒತ್ತಡ (oxidative stress) ಕಡಿಮೆಯಾಗುತ್ತದೆ ಹಾಗೂ ಪರಿಣಾಮಕಾರಿಯಾಗಿ ತೂಕ ಇಳಿಸಲು ಸಾಧ್ಯವಾಗುತ್ತದೆ.

ಉರಿಯೂತ ನಿವಾರಕ ಗುಣ

ಉರಿಯೂತ ನಿವಾರಕ ಗುಣ

ಲೈಕೋಪೀನ್ ಒಂದು ಉತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು ಉರಿಯೂತವುಂಟುಮಾಡುವ ಜೈವಿಕ ಅಣುಗಳ ಉತ್ಪತ್ತಿಯನ್ನು ತಡೆಹಿಡಿಯುತ್ತದೆ. ಈ ಮೂಲಕ ಎದುರಾಗಬಹುದಾಗಿದ್ದ ಉರಿಯೂತದಿಂದ ರಕ್ಷಣೆ ನೀಡುತ್ತದೆ. ಉರಿಯೂತ ಹೆಚ್ಚಾದರೆ ಇದನ್ನು ಸರಿಪಡಿಸಲು ದೇಹ ಹೆಚ್ಚಿನ ಕೊಬ್ಬಿನ ಸಂಗ್ರಹ ಮಾಡಬೇಕಾಗುತ್ತದೆ. ಹಾಗಾಗಿ ನಿಯಮಿತವಾಗಿ ಟೊಮಾಟೋಗಳನ್ನು ಸೇವಿಸುವ ಮೂಲಕ ಉರಿಯೂತ ಮತ್ತು ತನ್ಮೂಲಕ ಎದುರಾಗಬಹುದಾಗಿದ್ದ ಸ್ಥೂಲಕಾಯದಿಂದಲೂ ಕಾಪಾಡುತ್ತದೆ.

ಒತ್ತಡವನ್ನು ನಿವಾರಿಸುತ್ತದೆ

ಒತ್ತಡವನ್ನು ನಿವಾರಿಸುತ್ತದೆ

ಅತಿಯಾದ ಮಾನಸಿಕ ಒತ್ತಡವೂ ತೂಕ ಹೆಚ್ಚಳಕ್ಕೆ ಇನ್ನೊಂದು ಕಾರಣವಾಗಿದೆ. ರಕ್ತದೊತ್ತಡದಲ್ಲಿ ಥಟ್ಟನೇ ಏರುವಿಕೆ ದೇಹದಲ್ಲಿ ಕಲ್ಮಶಗಳ ಸಂಗ್ರಹ ಹಾಗೂ ಹೆಚ್ಚು ಆಹಾರ ತಿನ್ನಲು ಭಾವನಾತ್ಮಕವಾದ ಪ್ರಚೋದನೆ ನೀಡುತ್ತದೆ. ಟೊಮಾಟೋ ದಲ್ಲಿರುವ ಬೀಟಾ ಕ್ಯಾರೋಟಿನ್, ಲೈಕೋಪಿನ್ ಹಾಗೂ ವಿಟಮಿನ್ ಇ ಮೊದಲಾದ ಪೋಷಕಾಂಶಗಳ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಹಾಗು ಹೃದಯಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ

ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ

ನಿಯಮಿತವಾಗಿ ಟೊಮೆಟೊಗಳನ್ನು ಸೇವಿಸುತ್ತಾ ಬರುವ ಮೂಲಕ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (LDL cholesterol) ಕಡಿಮೆಯಾಗುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ (HDL cholesterol) ಹೆಚ್ಚುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ತೂಕ ಇಳಿಕೆಗೆ ನೆರವಾಗುತ್ತದೆ ಹಾಗೂ ಹಲವಾರು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. ತೂಕ ಇಳಿಕೆಯ ಹೊರತಾಗಿ ಇದು ಕಲವು ಮಾರಕ ರೋಗಗಳಿಂದಲೂ ರಕ್ಷಣೆ ಒದಗಿಸಲು ನೆರವಾಗುತ್ತದೆ.

ತೂಕ ಇಳಿಕೆಗೆ ಟೊಮೆಟೊ ಸೇವನೆ ಹೇಗೆ?

ತೂಕ ಇಳಿಕೆಗೆ ಟೊಮೆಟೊ ಸೇವನೆ ಹೇಗೆ?

ನಿಮ್ಮ ಅಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿಯಾಗಿ ತಿನ್ನಬಹುದಾದ ಹಣ್ಣು ಮತ್ತು ತರಕಾರಿಗಳಿರಬೇಕು. ಇದರಲ್ಲಿ ತಾಜಾ ಮತ್ತು ಚೆನ್ನಾಗಿ ಹಣ್ಣಾದ ಟೊಮೆಟೊಗಳೂ ಇರಲಿ. ಸಾಧ್ಯವಾದರೆ ಟೊಮೆಟೊ ಹಣ್ಣಿನ ರಸ ಅಥವಾ ಸ್ಮೂಥಿ ಮಾಡಿ ಕುಡಿಯಿರಿ. ಇದರಲ್ಲಿ ನಿಮ್ಮ ಇಷ್ಟದ ಇತರ ಹಣ್ಣುಗಳನ್ನೂ ಸೇರಿಸಿಕೊಳ್ಳಬಹುದು. ಟೊಮೆಟೊ ಬಳಸಿ ಮಾಡಿದ ಸಾರು ಅಥವಾ ಇತರ ಆಹಾರಗಳಲ್ಲಿ ಟೊಮೆಟೊಗಳನ್ನು ಸೇರಿಸಿ ಸೇವಿಸಿ.

ತೂಕ ಇಳಿಕೆಗೆ ಟೊಮೆಟೊ ಸೇವನೆ ಹೇಗೆ?

ತೂಕ ಇಳಿಕೆಗೆ ಟೊಮೆಟೊ ಸೇವನೆ ಹೇಗೆ?

ಗ್ರಿಲ್ ಮಾಡಿದ ಚಿಕನ್ ಸೇವನೆಯ ಸಮಯದಲ್ಲಿ ನಡುವೆ ಟೊಮಾಟೋಗಳನ್ನೂ ಸೇರಿಸಿ. ಈ ಚಿಕನ್ ಸೇವನೆಯ ಸಮಯದಲ್ಲಿ ಶತಾವರಿ, ಹಸಿರು ಬೀನ್ಸ್ ಗಳನ್ನೂ ಸೇವಿಸಿ. ಒಂದು ಬೋಗುಣಿಯಲ್ಲಿ ಕೊಂಚ ಟೊಮಾಟೋಗಳನ್ನು ಚಿಕ್ಕದಾಗಿ ಕತ್ತರಿಸಿ ಇದಕ್ಕೆ ಲಿಂಬೆರಸ ಹಿಂಡಿ ಸೇವಿಸಿ. ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೆ ಟೊಮೆಟೊ ಸೂಪ್ ಸೇವಿಸಿ. ಮಧ್ಯಾಹ್ನದ ಊಟದಲ್ಲಿ ಟೊಮೆಟೊ, ಸೌತೆಕಾಯಿ ಹಾಗೂ ಚಿಕನ್ ಸ್ಯಾಂಡ್ವಿಚ್ ಸೇವಿಸಬಹುದು.

English summary

Do You Know These Benefits Of Tomato For Weight Loss?

A large tomato has 33 calories and a medium sized tomato has 22 calories. A cherry tomato contains 13 calories and a plum tomato contains 11 calories. The low-calorie values and health benefits of tomatoes puts them in the power food category, which means they are good for your weight and overall health. The juicy tomatoes are a great source of protein, vitamins, minerals and dietary fibre that can significantly reduce your waist size in a month.
X
Desktop Bottom Promotion