For Quick Alerts
ALLOW NOTIFICATIONS  
For Daily Alerts

ದೇಹದ ತೂಕ ಹೆಚ್ಚಿದೆಯೇ? ಇಲ್ಲಿದೆ ನೋಡಿ ಸರಳ ಉಪಾಯಗಳು

By Divya Pandith
|

ದೇಹದ ತೂಕ ಇಳಿಸಲು ಏನು ಮಾಡಬೇಕು? ಎನ್ನುವ ಪ್ರಶ್ನೆ ತಲೆಗೆ ಬಂದಿದ್ದೆ, ನೀವು ಇಂಟರ್‍ನೆಟ್ ಸಹಾಯದ ಮೂಲಕ ಉತ್ತರವನ್ನು ಹುಡುಕಬಹುದು. ಅಲ್ಲಿ ನೀವು ದೇಹದ ತೂಕ ನಿವಾರಿಸುವುದು ಹೇಗೆ? ಎಂದು ಟೈಪ್ ಮಾಡಿದ ತಕ್ಷಣವೇ ಅನೇಕ ಬಗೆಯ ಉತ್ತರಗಳ ಸರಮಾಲೆಗಳು ಸಿಗುತ್ತವೆ. ಅದರಲ್ಲಿ ನಿಮಗೆ ಬೇಕಾದ ಬಗೆಯದ್ದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಒಂದೊಂದು ಸಲಹೆಯಲ್ಲೂ ಬಗೆ ಬಗೆಯ ದಿನಚರಿಯ ವಿಚಾರವಿರುತ್ತದೆ.

ಒಂದರಲ್ಲಿ ಅದು ಕುಡಿಯಿರಿ ಇದು ಕುಡಿಯಿರಿ ಎಂದಿದ್ದರೆ, ಇನ್ನೊಂದರಲ್ಲಿ ಆ ತಿಂಡಿ-ಈ ತಿಂಡಿ ಎನ್ನುವ ಊಟ ತಿಂಡಿಯ ವಿಚಾರವಿರುತ್ತದೆ. ಇನ್ನೂ ಕೆಲವು ತಾಣಗಳು ದೇಹವನ್ನು ದಂಡಿಸುವುದು ಹೇಗೆ? ಯಾವ ಬಗೆಯ ವ್ಯಾಯಾಮ ಮಾಡಬೇಕು ಎನ್ನುವುದರ ವಿಶಾಲ ವಿವರ ಸಿಗುತ್ತದೆ. ಆದರೆ ಇವುಗಳಲ್ಲಿ ಯಾವುದು ಮಾಡಬೇಕು ಯಾವುದು ಬಿಡಬೇಕು?


ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ಎಷ್ಟರ ಮಟ್ಟಿಗೆ ಸತ್ಯವಾದದ್ದು ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇರುವುದಿಲ್ಲ. ಕೆಲವು ಸರಳವಾದ ದಿನನಿತ್ಯದ ಪದ್ಧತಿಯಲ್ಲಿ ಬದಲಾವಣೆಗಳು ಹಾಗೂ ಸುಧಾರಣೆಗಳನ್ನು ಮಾಡಿಕೊಂಡರೆ ದೇಹದ ತೂಕವನ್ನು ಇಳಿಸಬಹುದು. ಇವುಗಳ ಬಗ್ಗೆ ಸೂಕ್ತ ಮಾಹಿತಿ ನಿಮಗೆ ಬೇಕೆನಿಸದರೆ ಮುಂದಿನ ವಿವರಣೆಯನ್ನು ಓದಿ...

ಊಟಕ್ಕೂ ಮುಂಚೆ ನೀರು ಕುಡಿಯಿರಿ

ಊಟಕ್ಕೂ ಮುಂಚೆ ನೀರು ಕುಡಿಯಿರಿ

ಊಟ-ತಿಂಡಿ ತಿನ್ನುವ ಮೊದಲು ಅಂದರೆ 15-20 ನಿಮಿಷ ಮುಂಚೆ ಒಂದು ಗ್ಲಾಸ್ ಸಾಮಾನ್ಯ ತಾಪಮಾನದ ನೀರನ್ನು ಕುಡಿಯಿರಿ. ಇದು ನಿಮ್ಮ ಹಸಿವನ್ನು ಕಟ್ಟುತ್ತದೆ. ಊಟದ ಸಂದರ್ಭದಲ್ಲಿ ಕಡಿಮೆ ತಿನ್ನುವಂತೆ ಮಾಡುತ್ತದೆ. ಕುಡಿದ ನೀರು ದೇಹದೊಳಗೆ ಬಿಸಿ ಮಾಡುವ ಕ್ರಿಯೆಯಿಂದ ಕ್ಯಾಲೋರಿ ಪ್ರಮಾಣ ಕಡಿಮೆಯಾಗುವುದು. ಇದು ದೇಹದ ತೂಕ ನಷ್ಟ ಮಾಡುವಲ್ಲಿ ಅತ್ಯಂತ ಸುಲಭ ಹಾಗೂ ಸೂಕ್ತ ಪಾತ್ರವನ್ನು ವಹಿಸುತ್ತದೆ.

ಅರೋಮಾ ಥೆರಪಿ

ಅರೋಮಾ ಥೆರಪಿ

ಅಡುಗೆ ಮಾಡುವಾಗ ನಮ್ಮ ಹಸಿವು ಕಡಿಮೆಯಾಗಿರುತ್ತದೆ. ಕಾರಣ ಅಲ್ಲಿ ಸಿಗುವ ಪರಿಮಳವು ಮಿದುಳಿಗೆ ತಿನ್ನುತ್ತಿದ್ದೇವೆ ಎನ್ನುವ ಸುಳ್ಳು ಸಂದೇಶವನ್ನು ರವಾನಿಸುತ್ತದೆ. ಹಸಿವಾದ ಸಂದರ್ಭದಲ್ಲಿ ಸೇಬು, ಪುದೀನಾ, ವೆನಿಲ್ಲಾ ಸುವಾಸನೆಯೊಡನೆ ಉಸಿರಾಡುವಂತೆ ಅರೋಮಾ ಥೆರಪಿ ಶಿಪಾರಸ್ಸು ಮಾಡುತ್ತದೆ. ಆಗ ಮಿದುಳು ಪದೇ ಪದೇ ತಿಂಡಿ ತಿನ್ನುವ ಸೂಚನೆಯನ್ನು ಕಡಿಮೆ ಮಾಡುತ್ತದೆ.

ಹಲ್ಲುಜ್ಜಿ

ಹಲ್ಲುಜ್ಜಿ

ಏನಾದರೂ ತಿನ್ನಬೇಕು ಎನಿಸಿದಾಗ ಹಲ್ಲುಜ್ಜಿ. ಹೀಗೆ ಮಾಡುವುದರಿಂದ ಪೇಸ್ಟ್‍ನಲ್ಲಿರುವ ಮೆಂತಾಲ್ ಅನುಭವವು ಮಿದುಳಿಗೆ ಊಟ ಮುಗಿದಿದೆ ಎನ್ನುವ ಸೂಚನೆಯನ್ನು ಮುಟ್ಟಿಸುತ್ತದೆ.

ನಿಂತುಕೊಂಡು ತಿನ್ನಿ

ನಿಂತುಕೊಂಡು ತಿನ್ನಿ

ನಿಂತುಕೊಂಡು ಊಟ ಮಾಡುವಾಗ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಹೆಚ್ಚು ಕ್ಯಾಲೋರಿಗಳು ಕಳೆದುಕೊಳ್ಳುತ್ತದೆ ಎನ್ನಲಾಗುವುದು. ನಿಂತು ತಿನ್ನುವಾಗ ಬೇಗ ತಿಂದು ಮುಗಿಸಲು ಪ್ರಯತ್ನಿಸುತ್ತೇವೆ. ಜೊತೆಗೆ ಕಡಿಮೆ ಊಟವನ್ನು ಮಾಡಿರುತ್ತೇವೆ.

ತಪ್ಪಾದ ಕೈಯಲ್ಲಿ ತಿನ್ನಿರಿ!

ತಪ್ಪಾದ ಕೈಯಲ್ಲಿ ತಿನ್ನಿರಿ!

ಮನೋ ವಿಜ್ಞಾನದ ಪ್ರಕಾರ ನಾವು ಬಲಗೈಯಲ್ಲಿ ಊಟ ಹಿಡಿದು ಎಡಗೈಯಲ್ಲಿ ತಿಂದರೆ ಮನಸ್ಸು ಬೇಡ ಎನ್ನುವ ಸೂಚನೆ ತೋರಿಸುತ್ತದೆ. ಅಲ್ಲದೆ ಎಂದಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಊಟಮಾಡುತ್ತೇವೆ. ಇದು ತೂಕ ನಷ್ಟ ಮಾಡಲು ಒಂದು ಸೂಕ್ತ ಮಾರ್ಗವಾಗಿದೆ.

ಪಾತ್ರೆಯ ಬಣ್ಣ

ಪಾತ್ರೆಯ ಬಣ್ಣ

ಹಸಿರು ಮತ್ತು ನೀಲಿ ಬಣ್ಣವು ನಮ್ಮ ಮನಸ್ಸನ್ನು ತಂಪು ಗೊಳಿಸುತ್ತವೆ. ಜೊತೆಗೆ ಹಸಿವನ್ನು ತಗ್ಗಿಸುತ್ತದೆ. ಆ ಕಾರಣದಿಂದಲೇ ಬಡಿಸುವ ಪಾತ್ರೆಗಳು ಹಾಗೂ ತಿನ್ನಲು ಬಳಸುವ ತಟ್ಟೆ, ಚಮಚಗಳು ನೀಲಿ ಮತ್ತು ಹಸಿರುಬಣ್ಣ ಹೊಂದಿರುವಂತೆ ನೋಡಿಕೊಳ್ಳಬೇಕು. ಆಗ ಹೆಚ್ಚು ಆಹಾರವನ್ನು ನಾವು ಸೇವಿಸಿರುವುದಿಲ್ಲ.

 ಕಡಿಮೆ ಬೆಳಕಲ್ಲಿ ಊಟ ಮಾಡಿ

ಕಡಿಮೆ ಬೆಳಕಲ್ಲಿ ಊಟ ಮಾಡಿ

ಊಟ ಮಾಡುವಾಗ ಕತ್ತಲಿದ್ದರೆ ಅಥವಾ ಸಂಧಿಯೊಳಗಿಂದ ಚೂರು ಬೆಳಕು ಬರುವಂತಹ ಜಾಗದಲ್ಲಿ ಊಟ ಮಾಡಿದರೆ ನಮ್ಮ ತಟ್ಟೆಯಲ್ಲಿ ಎಷ್ಟು ಪ್ರಮಾಣದ ಊಟವಿದೆ ಎನ್ನುವುದನ್ನು ಗುರುತಿಸಲು ಆಗುವುದಿಲ್ಲ. ಆಗ ನಾವು ಕಡಿಮೆ ಊಟವನ್ನು ಮಾಡಿರುತ್ತದೆ. ತೂಕವೂ ಕಡಿಮೆಯಾಗುತ್ತದೆ.

ನಿಧಾನವಾಗಿ ಕರಗುವ ಆಹಾರವನ್ನು ಆಯ್ಕೆ ಮಾಡಿ

ನಿಧಾನವಾಗಿ ಕರಗುವ ಆಹಾರವನ್ನು ಆಯ್ಕೆ ಮಾಡಿ

ಒಮ್ಮೆ ಸೇವಿಸಿದ ಆಹಾರವು ಆರೋಗ್ಯಪೂರ್ಣವಾಗಿರಬೇಕು. ಜೊತೆಗೆ ನಿಧಾನವಾಗಿ ಜೀರ್ಣವಾಗಬೇಕು. ಅಂತಹ ಆಹಾರವನ್ನು ಆಯ್ಕೆ ಮಾಡಿಕೊಂಡರೆ ಪದೇ ಪದೇ ತಿನ್ನುವುದನ್ನು ತಪ್ಪಿಸಬಹುದು. ಉದಾಹರಣೆಗೆ ಬೆಳಗ್ಗೆ ಓಟ್‍ಮೀಲ್ ಸೇವಿಸಿದರೆ ಮಧ್ಯಾಹ್ನದ ಊಟದ ವರೆಗೂ ಅದು ಹಸಿವನ್ನು ನೀಗಿಸುತ್ತದೆ.

ಊಟಕ್ಕೂ ಮುಂಚೆ ಹೊಸ ಬಟ್ಟೆ ತೊಟ್ಟು ರೆಡಿಯಾಗಿ

ಊಟಕ್ಕೂ ಮುಂಚೆ ಹೊಸ ಬಟ್ಟೆ ತೊಟ್ಟು ರೆಡಿಯಾಗಿ

ಇದು ಒಂದು ಬಗೆಯ ವಿಲಕ್ಷಣ ಎನಿಸಬಹುದು. ಆದರೆ ಒಳ್ಳೆಯ ಉಪಾಯ. ಊಟ ಮಾಡುವಾಗ ಹೊಸ ಬಟ್ಟೆ ತೊಟ್ಟು ಕಾರ್ಯಕ್ರಮಕ್ಕೆ ಹೋಗುವವರಂತೆ ರೆಡಿಯಾದರೆ, ಊಟ ಮಾಡುವಾಗ ಬಹಳ ನಾಜೂಕಿನಿಂದ ತಿನ್ನುತ್ತೇವೆ. ಅಲ್ಲದೆ ಊಟವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತೇವೆ. ಅಲ್ಲದೆ ತಿನ್ನುವ ವೇಗವೂ ನಿಧಾನವಾಗಿರುತ್ತದೆ.

ಹಸಿದಾಗ ಡಾರ್ಕ್ ಚಾಕಲೇಟ್ ತಿನ್ನಿ

ಹಸಿದಾಗ ಡಾರ್ಕ್ ಚಾಕಲೇಟ್ ತಿನ್ನಿ

ಸಣ್ಣ ಪ್ರಮಾಣದ ಹಸಿವಾದಾಗ ಎರಡು ಚೂರು ಡಾರ್ಕ್ ಚಾಕಲೇಟ್‍ಅನ್ನು ತಿನ್ನಿರಿ. ಇದು ನಿಮ್ಮ ಹಸಿವನ್ನು ನೀಗಿಸುವುದಲ್ಲದೆ ದೇಹದ ತೂಕನಷ್ಟಕ್ಕೂ ಸಹಾಯಮಾಡುತ್ತದೆ. ಒಮ್ಮೆಲೇ ಹೆಚ್ಚು ಆಹಾರವನ್ನು ಸೇವಿಸುವುದನ್ನು ತಡೆಗಟ್ಟುತ್ತದೆ.

ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಜ್ಯೂಸ್

ಚೆನ್ನಾಗಿ ತೊಳೆದ ನೆಲ್ಲಿಕಾಯಿಯ ಬೀಜವನ್ನು ನಿವಾರಿಸಿ ತಿರುಳನ್ನು ಮಿಕ್ಸಿಯಲ್ಲಿ ಹಾಕಿ ಕೊಂಚವೇ ನೀರಿನೊಡನೆ ಗೊಟಾಯಿಸಿ. ಬಳಿಕ ಸ್ವಚ್ಛವಾದ ಬಟ್ಟೆಯಲ್ಲಿ ಹಿಂಡಿ ರಸ ತೆಗೆಯಿರಿ. ಈ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಪ್ರತಿದಿನದ ಸೇವನೆಯಾಗಿ ಫ್ರಿಜ್ಜಿನಲ್ಲಿಡಿ. ಪ್ರತಿದಿನ ಬೆಳಿಗ್ಗೆ, ಅದರಲ್ಲೂ ಖಾಲಿಹೊಟ್ಟೆಯಲ್ಲಿ ಒಂದು ಲೋಟದಷ್ಟು ಒಂದು ಪ್ರಮಾಣ ನೆಲ್ಲಿಕಾಯಿ ರಸಕ್ಕೆ ಮೂರು ಪ್ರಮಾಣದಷ್ಟು ನೀರನ್ನು ಸೇರಿಸಿ ಕುಡಿಯಿರಿ. ಸಕ್ಕರೆ, ಬೆಲ್ಲ, ಜೇನು ಯಾವುದನ್ನೂ ಸೇರಿಸಬೇಡಿ.

ಬೀಟ್‌ರೂಟ್, ಪಾಲಕ್ ಸೊಪ್ಪು ಹಾಗೂ ಕೊತ್ತ೦ಬರಿ ಸೊಪ್ಪಿನ ಜ್ಯೂಸ್

ಬೀಟ್‌ರೂಟ್, ಪಾಲಕ್ ಸೊಪ್ಪು ಹಾಗೂ ಕೊತ್ತ೦ಬರಿ ಸೊಪ್ಪಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು

ಬೀಟ್‌ರೂಟ್ - ಒ೦ದು (ಮಧ್ಯಮ ಗಾತ್ರದ್ದು)

ಪಾಲಕ್ ಸೊಪ್ಪು - ಒ೦ದು ಸಣ್ಣ

ಕೊತ್ತ೦ಬರಿ ಸೊಪ್ಪು - ಒ೦ದು ಕಟ್ಟು

ಉಪ್ಪು - ಒ೦ದು ಟೀ ಚಮಚದಷ್ಟು

ತಯಾರಿಕಾ ವಿಧಾನ:

ಬೀಟ್‌ರೂಟ್ ಅನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿರಿ. ಪಾಲಕ್ ಸೊಪ್ಪು,ಹಾಗೂ ಕೊತ್ತ೦ಬರಿ ಸೊಪ್ಪುಗಳನ್ನು ಹದವಾಗಿ ಕತ್ತರಿಸಿರಿ. ಈಗ, ಇವೆಲ್ಲವನ್ನೂ ಮಿಕ್ಸರ್ ಒ೦ದನ್ನು ಬಳಸಿಕೊ೦ಡು ಜ್ಯೂಸ್ ಜಾರ್‌ನಲ್ಲಿ ಮಿಶ್ರಗೊಳಿಸಿ ಮೈನವಿರೇಳಿಸುವ, ಸ್ವಾದಿಷ್ಟವಾದ ತರಕಾರಿ ಜ್ಯೂಸ್ ಅನ್ನು ತಯಾರಿಸಿಕೊಳ್ಳಿರಿ.

ಕಲ್ಲ೦ಗಡಿ, ಲಿ೦ಬೆ, ಹಾಗೂ ಪುದಿನಾದ ಜ್ಯೂಸ್

ಕಲ್ಲ೦ಗಡಿ, ಲಿ೦ಬೆ, ಹಾಗೂ ಪುದಿನಾದ ಜ್ಯೂಸ್

ಬೇಕಾಗುವ ಸಾಮಗ್ರಿಗಳು

ಕಲ್ಲ೦ಗಡಿ ಹಣ್ಣು - ಒ೦ದು (ಮಧ್ಯಮ ಗಾತ್ರದ್ದು)

ಲಿ೦ಬೆ - ಒ೦ದು

ಪುದೀನಾ- ಒಂದು ಕಟ್ಟು

ವಿಧಾನ

ಬೀಜಗಳನ್ನು ಹಾಗೆಯೇ ಇರಿಸಿಕೊಳ್ಳುವುದರೊ೦ದಿಗೆ ಕಲ್ಲ೦ಗಡಿ ಹಣ್ಣನ್ನು ಸಣ್ಣ ಸಣ್ಣ ಘನಾಕೃತಿಗಳಲ್ಲಿ ಕತ್ತರಿಸಿರಿ. ಲಿ೦ಬೆಯನ್ನು ಹಿ೦ಡಿ ರಸವನ್ನು ಪಡೆದುಕೊಳ್ಳಿರಿ ಹಾಗೂ ತಾಜಾ ಪುದಿನಾ ಸೊಪ್ಪನ್ನು ಚೆನ್ನಾಗಿ ಹೆಚ್ಚಿರಿ. ಈಗ, ಇವೆಲ್ಲವನ್ನೂ ಜ್ಯೂಸರ್ ಒ೦ದರಲ್ಲಿ ಹಾಕಿ, ಮಿಕ್ಸರ್ ಅನ್ನು ಬಳಸಿಕೊ೦ಡು ತಿರುವುದರ ಮೂಲಕ ಸ್ವಾದಿಷ್ಟವಾದ ನೀರಿನ ಮಿಶ್ರಣವನ್ನು (ಜ್ಯೂಸ್) ಅನ್ನು ಪಡೆದುಕೊಳ್ಳಿರಿ.

ಲೋಳೆಸರ ಮತ್ತು ಲಿಂಬೆಯರಸದ ಜ್ಯೂಸ್

ಲೋಳೆಸರ ಮತ್ತು ಲಿಂಬೆಯರಸದ ಜ್ಯೂಸ್

ಒಂದು ಲೋಳೆಸರದ ಕೋಡನ್ನು ಮುರಿದು ಮಧ್ಯಕ್ಕೆ ಉದ್ದನಾಗಿ ಸೀಳಿ. ಇದನ್ನು ಲಿಂಬೆ ಹಿಂಡಿದಂತೆ ಹಿಂಡಿ ರಸ ತೆಗೆಯಿರಿ. ಇಲ್ಲದಿದ್ದರೆ ಸಿಪ್ಪೆ ನಿವಾರಿಸಿದ ಬಳಿಕ ಲಿಂಬೆ ಹಿಸುಕುವ ಉಪಕರಣದಿಂದಲೂ ರಸ ತೆಗೆಯಬಹುದು. ಇನ್ನು ಸಮಪ್ರಮಾಣದಲ್ಲಿ ಲಿಂಬೆರಸವನ್ನು ಸೇರಿಸಿ. ಸಾಕಷ್ಟು ನೀರು ಮತ್ತು ಕೊಂಚ ಸಕ್ಕರೆ ಅಥವಾ ಬೆಲ್ಲ (ರುಚಿಗೆ ಮಾತ್ರ) ಸೇರಿಸಿ ಎರಡರಿಂದ ಮೂರು ನಿಮಿಷ ಕಲಕಿ ನಿಯಮಿತವಾಗಿ ಕುಡಿಯಿರಿ. ಇದು ಸ್ಥೂಲಕಾಯದ ವ್ಯಕ್ತಿಗಳಿಗೆ ಸೂಕ್ತವಾದ ವಿಧಾನ

English summary

Tried & Tested Popular Weight Loss Tricks

Making use of some simple everyday habits and tricks will help you in a long way to achieve your desired weight loss goals. Here, we have listed some of the popular tried and tested weight loss tricks that are known to give you the desired results! Give this article a read to know about the best and rapid weight loss tips.
X
Desktop Bottom Promotion