For Quick Alerts
ALLOW NOTIFICATIONS  
For Daily Alerts

ಕರಗಿಸಲು ಕಷ್ಟವಾಗಿರುವ ಕೈಗಳ ತೋಳಿನ ಕೊಬ್ಬನ್ನು ಕರಗಿಸಲು ಸರಳ ಟಿಪ್ಸ್

By Arshad
|

ಬೊಜ್ಜು ತುಂಬಿಕೊಳ್ಳುವ ದೇಹದ ಭಾಗಗಳೆಂದರೆ ಸೊಂಟ, ನಿತಂಬ, ತೊಡೆ, ಭುಜ ಮತ್ತು ಭುಜದಿಂದ ಮೊಣಕೈವರೆಗಿನ ಭಾಗ (ರಟ್ಟೆ). ಇದರಲ್ಲಿ ಸೊಂಟದ ಕೊಬ್ಬು ಕರಗಿಸುವುದು ಭಾರೀ ಕಷ್ಟ. ರಟ್ಟೆಯ ಭಾಗದ ಕೊಬ್ಬು ಕರಗಿಸುವುದು ಕಷ್ಟವೂ ಹೌದು ಹಾಗೂ ಕೈ ಎತ್ತಿದಾಗ ಕೆಳಭಾಗದಲ್ಲಿ ಜೋಲುಬೀಳುವ ಕೊಬ್ಬು ಭಾರೀ ಮುಜುಗರವನ್ನೂ ತರುತ್ತದೆ. ಹಾಗಾಗಿ ರಟ್ಟೆಯ ಭಾಗದಲ್ಲಿ ಕೊಬ್ಬಿರುವ ಮಹಿಳೆಯರು ಚಿಕ್ಕ ತೋಳಿನ ಅಥವಾ ತೋಳಿಲ್ಲದ ಉಡುಪುಗಳನ್ನು ತೊಡಲು ಹಿಂದೇಟು ಹಾಕುತ್ತಾರೆ.

ನೀಳವಾಗಿರಬೇಕಾದ ತೋಳಲ್ಲೇಕೆ ಇಷ್ಟೊಂದು ಬೊಜ್ಜು?

ರಟ್ಟೆಯ ಭಾಗದ ಕೊಬ್ಬು ಅಷ್ಟು ಸುಲಭವಾಗಿ ಕರಗುವುದಿಲ್ಲ. ಪ್ರಾಯ ಹೆಚ್ಚುತ್ತಿದ್ದಂತೇ ಈ ಕೊಬ್ಬು ಸಹಾ ನಿಧಾನವಾಗಿ ಹೆಚ್ಚುತ್ತಾ ಸ್ನಾಯುಗಳು ಹೆಚ್ಚು ಹೆಚ್ಚು ಜೋಲುವಂತೆ ಮಾಡುತ್ತವೆ. ನಡುವಯಸ್ಸು ದಾಟಿದ ಬಳಿಕ ಕೈಗಳು ಕೆಳಗಿದ್ದಾಗ ಮೊಣಕೈ ಗಂಟಿನ ಬಳಿ ಕೊಬ್ಬಿನ ಮುದ್ದೆಯೊಂದು ಜಾರಿ ಬಂದು ನಿಂತಿರುವಂತೆ ಕಾಣಿಸುತ್ತದೆ. ಸಾಮಾನ್ಯವಾಗಿ ಮೂವತ್ತನೆಯ ವಯಸ್ಸಿನ ಬಳಿಕ ಕೊಬ್ಬು ದೇಹದ ಇತರ ಭಾಗಗಳಲ್ಲಿ ಸಂಗ್ರಹಗೊಳ್ಳುತ್ತಾ ಸ್ನಾಯುಗಳ ಗಾತ್ರ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಉಳಿದುಕೊಂಡುಬಿಡುತ್ತದೆ.


ಸಂಶಯವೇ ಬೇಡ, ಕೊಬ್ಬು ಕರಗಿಸುವಲ್ಲಿ ಇವು ಎತ್ತಿದ ಕೈ!

ರಟ್ಟೆಯ ಈ ಕೊಬ್ಬನ್ನು ಕರಗಿಸಲು ಕೆಲವು ವಿಧಾನಗಳಿದ್ದು ಇವುಗಳನ್ನು ಪ್ರಯತ್ನಿಸಿ ಸಮರ್ಪಕ ವಿಧಾನವೆಂದು ಕಂಡುಕೊಳ್ಳಲಾಗಿದ್ದು ಇಂದಿನ ಲೇಖನದಲ್ಲಿ ಈ ಬಗ್ಗೆ ಕೆಲವು ಮಹತ್ವದ ಮಾಹಿತಿಯನ್ನು ನೀಡಲಾಗಿದೆ....

ತೋಳು ಮಡಚುವ ವ್ಯಾಯಾಮ ಮಾಡಿ

ತೋಳು ಮಡಚುವ ವ್ಯಾಯಾಮ ಮಾಡಿ

ಈ ಭಾಗದ ಕೊಬ್ಬನ್ನು ಕರಗಿಸಲು ಅತಿ ಸಮರ್ಥ ವಿಧಾನವೆಂದರೆ ತೋಳು ಮಡಚುವ ವ್ಯಾಯಾಮ (Biceps Curl). ಒಂದು ಚಿಕ್ಕ ಡಂಬೆಲ್ ಅಥವಾ ಸುಮಾರು ಐದು ಕೇಜಿ ತೂಕದ ಭಾರವನ್ನು ಕೈಗಳಲ್ಲಿ ಹಿಡಿದು ಕೆಳಗಿನಿಂದ ಮೇಲಕ್ಕೆ ನೂರಾಎಂಭತ್ತು ಡಿಗ್ರಿ ಮಡಚುವಂತೆ ಕೈಗಳನ್ನು ಮಡಚಿ ನಿಧಾನವಾಗಿ ಬಿಡುವ ಈ ವ್ಯಾಯಾಮವನ್ನು ಪ್ರತಿದಿನವೂ ಅನುಸರಿಸುವ ಮೂಲಕ ಈ ಕೊಬ್ಬು ಕರಗುತ್ತದೆ.

ಪ್ರೋಟಿನ್ ಸೇವನೆಯ ಪ್ರಮಾಣವನ್ನು ಹೆಚ್ಚಿಸಿ

ಪ್ರೋಟಿನ್ ಸೇವನೆಯ ಪ್ರಮಾಣವನ್ನು ಹೆಚ್ಚಿಸಿ

ಯಾವುದೇ ವ್ಯಾಯಾಮಕ್ಕೆ ಪ್ರೋಟೀನಿನ ಅವಶ್ಯಕತೆ ಇದೆ. ಹಾಗಾಗಿ ನೀವು ವ್ಯಾಯಾಮ ಪ್ರಾರಂಭಿಸಿದರೆ ಕೊಂಚ ಪ್ರೋಟೀನ್ ಪ್ರಮಾಣವನ್ನು ನಿಮ್ಮ ಆಹಾರದಲ್ಲಿ ಹೆಚ್ಚಿಸಬೇಕಾಗುತ್ತದೆ. ಈ ಬಗ್ಗೆ ನಡೆಸಿದ ಸಂಶೋಧನೆಗಳ ಮೂಲಕ ಪ್ರೋಟೀನ್ ಸೇವನೆಯ ಹೆಚ್ಚಳದಿಂದ ಸ್ನಾಯುಗಳು ಹೆಚ್ಚು ದೃಢಗೊಳ್ಳುವ ಸಂಭವ 25%ದಷ್ಟು ಹೆಚ್ಚುತ್ತದೆ. ವ್ಯತಿರಿಕ್ತವಾಗಿ ಪ್ರೋಟೀನ್ ಸೇವನೆ ಹೆಚ್ಚಿಸಿ ವ್ಯಾಯಾಮದಿಂದ ರಜೆ ತೆಗೆದುಕೊಂಡರೆ ಈ ಕೊಬ್ಬು ಇನ್ನಷ್ಟು ಏರಬಹುದು.

ಡಿಪ್ಸ್ ವ್ಯಾಯಾಮ

ಡಿಪ್ಸ್ ವ್ಯಾಯಾಮ

ರಟ್ಟೆಗಳಿಗೆ ಅತಿ ಹೆಚ್ಚು ಸೆಳೆತ ನೀಡುವ ವ್ಯಾಯಾಮವೆಂದರೆ ಡಿಪ್ಸ್. ಈ ವ್ಯಾಯಾಮದಲ್ಲಿ ರಟ್ಟೆಯ ಹಿಂಭಾಗದ ಸ್ನಾಯುಗಳಿಗೆ ಹಾಗೂ ಎದೆಯ ಮೇಲ್ಭಾಗದ ಸ್ನಾಯುಗಳು ಹೆಚ್ಚಿನ ಸೆಳೆತ ಪಡೆಯುತ್ತವೆ. ಒಂದು ಸ್ಥಿರವಾದ ಸ್ಟ್ಯಾಂಡ್ ಅಥವಾ ಅಡ್ಡಸರಳನ್ನು ಹಿಡಿದು ರಟ್ಟೆಭಾಗ ಬೆನ್ನಿನಿಂದ ಹಿಂದೆ ಹೋಗುವ ಪ್ರಕಾರ ದೇಹವನ್ನು ಮುಂದೆ ಚಲಿಸಿ ಮತ್ತೆ ಹಿಂದೆ ಬರುವ ಮೂಲಕ ಈ ವ್ಯಾಯಾಮವನ್ನು ಮಾಡಬಹುದು. ಸೂಕ್ತ ಸಲಕರಣೆ ಇಲ್ಲದಿದ್ದರೆ ಮನೆಯ ಮಂಚದ ಅಂಚನ್ನು ಬಳಸಿಯೂ ಈ ವ್ಯಾಯಾಮವನ್ನು ಮಾಡಬಹುದು.

ಚಕ್ಕೋತ ಹಣ್ಣು ಸೇವಿಸಿ

ಚಕ್ಕೋತ ಹಣ್ಣು ಸೇವಿಸಿ

ಕೊಬ್ಬು ಕರಗಿಸಲು ನಾವು ಸೇವಿಸುವ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಕೊಂಚ ಚಕ್ಕೋತ ಹಣ್ಣನ್ನೂ ಸೇರಿಸಿಕೊಳ್ಳಿ. ಪ್ರತಿದಿನ ಅರ್ಧ ಕಪ್ ಚಕ್ಕೋತ ಹಣ್ಣಿನ ತೊಳೆಗಳನ್ನು ತಿನ್ನುವ ಮೂಲಕ ನಿಮ್ಮ ತೂಕವೂ ಕಡಿಮೆಯಾಗುತ್ತದೆ ಹಾಗೂ ರಟ್ಟೆಯ ಕೊಬ್ಬು ಸಹಾ ಕರಗಿರುತ್ತದೆ.

ಉಸಿರಾಟವನ್ನು ಹೆಚ್ಚಿಸುವ ವ್ಯಾಯಾಮ ಮಾಡಿ

ಉಸಿರಾಟವನ್ನು ಹೆಚ್ಚಿಸುವ ವ್ಯಾಯಾಮ ಮಾಡಿ

ರಟ್ಟೆಯ ಕೊಬ್ಬನ್ನು ಕರಗಿಸಲು ಅತಿ ಸಮರ್ಥ ವಿಧಾನವೆಂದರೆ ಉಸಿರಾಟವನ್ನು ತೀವ್ರಗೊಳಿಸುವ ವ್ಯಾಯಾಮಗಳು. ಅತಿ ಸರಳ ವ್ಯಾಯಾಮವೆಂದರೆ ಸಾಧ್ಯವಾದಷ್ಟು ಜೋರಾಗಿ ಎರಡೂ ಕೈಗಳನ್ನು ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಓಡುವುದು. ಕೆಲವು ಪ್ರಯೋಗಗಳಲ್ಲಿ ಈ ವ್ಯಾಯಾಮಗಳ ಮೂಲಕ ಕೊಬ್ಬು ಕರಗಿಸಲು ಯತ್ನಿಸಿದವರು ಉಳಿದವರಿಗಿಂತಲೂ ಎರಡು ಪಟ್ಟುಹೆಚ್ಚು ಕೊಬ್ಬನ್ನು ಕರಗಿಸಿರುವುದನ್ನು ಗಮನಿಸಲಾಗಿದೆ. ಹಗ್ಗ ಉಪಯೋಗಿಸಿ ಕುಪ್ಪಳಿಸುವುದು, ವೇಗವಾಗಿ ಈಜುವುದು ಮೊದಲಾದ ವ್ಯಾಯಾಮಗಳು ಫಲಕಾರಿಯಾಗಿವೆ.

ಪುಷ್ ಅಪ್ ವ್ಯಾಯಾಮ

ಪುಷ್ ಅಪ್ ವ್ಯಾಯಾಮ

ಪ್ರತಿಪೂರ್ಣ ವ್ಯಾಯಾಮ ಎಂದೂ ಕರೆಸಿಕೊಳ್ಳುವ ಪುಷ್ ಅಪ್ ರಟ್ಟೆಯ ಸ್ನಾಯುಗಳನ್ನೂ ಕರಗಿಸಲು ಸಮರ್ಥವಾಗಿದೆ. ಇದರಿಂದ ರಟ್ಟೆಯ ಸ್ನಾಯುಗಳು ಹುರಿಗಟ್ಟುವುದು ಮಾತ್ರವಲ್ಲ, ರಟ್ಟೆಯ ಹಿಂಭಾದ ಸ್ನಾಯುಗಳನ್ನೂ ಹುರಿಗಟ್ಟಿಸಿ ಕೊಬ್ಬನ್ನೂ ಕರಗಿಸುತ್ತದೆ.

ಬೆಳಗ್ಗಿನ ವ್ಯಾಯಾಮ ಹೆಚ್ಚು ಫಲಕಾರಿ

ಬೆಳಗ್ಗಿನ ವ್ಯಾಯಾಮ ಹೆಚ್ಚು ಫಲಕಾರಿ

ಪ್ರತಿದಿನವೂ ವ್ಯಾಯಾಮವನ್ನು ಅನುಸರಿಸುವ ಮೂಲಕ ರಟ್ಟೆಯ ಕೊಬ್ಬನ್ನು ಇತರ ಹೊತ್ತಿನ ವ್ಯಾಯಾಮಕ್ಕಿಂತಲೂ ವೇಗವಾಗಿ ಕರಗಿಸಬಹುದು. ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಖಾಲಿಹೊಟ್ಟೆಯಲ್ಲಿ ಕೇವಲ ನೀರು ಕುಡಿದು ವ್ಯಾಯಾಮ ಮಾಡಿ ಕೊಂಚ ಹೊತ್ತಿನ ಬಳಿಕವೇ ಉಪಾಹಾರ ಸೇವಿಸಿದವರು ಉಳಿದವರಿಗಿಂತಲೂ 20% ಹೆಚ್ಚು ಕೊಬ್ಬನ್ನು ಕರಗಿಸಿಕೊಂಡಿದ್ದಾರೆ.

English summary

Tried & Tested Methods To Lose Stubborn Arm Fat

You need to stop shying away from sleeveless tops due to the flabbiness in your arms. These tried and tested tips that we have given below will back your confidence in no time. Wobbly arms are one of the most common problems that many women face. A fatty or flabby arm can mar the physical appearance of a person.
X
Desktop Bottom Promotion