ವಯಸ್ಸು ನಲವತ್ತು ದಾಟಿದ ಮಹಿಳೆಯರು ಮಾಡಲೇ ಬೇಕಾದ ಕೆಲಸಗಳಿವು!

Posted By: Divya
Subscribe to Boldsky

ವಯಸ್ಸು ನಲವತ್ತರ ಹರೆಯಕ್ಕೆ ಕಾಲಿಡುತ್ತಿದ್ದಂತೆ ದೇಹದ ಆರೋಗ್ಯ ಹಾಗೂ ದೈಹಿಕ ಸೌಂದರ್ಯವೂ ಸಾಕಷ್ಟು ಕುಂದುತ್ತವೆ. ಮುಖದ ತ್ವಚೆಯಲ್ಲಿ ಉಂಟಾಗುವ ಅನೇಕ ಬದಲಾವಣೆಗಳು ವಯಸ್ಸಿನ ಚಿನ್ನೆಯನ್ನು ಎತ್ತಿ ಹಿಡಿಯುತ್ತದೆ. ಮೇಕಪ್ ಹಾಗೂ ಕೇಶವಿನ್ಯಾಸಗಳಿಂದ ವಯಸ್ಸನ್ನು ಮರೆಮಾಚಬಹುದು. ಅದೇ ದೈಹಿಕ ಆರೋಗ್ಯದಲ್ಲಿ ಉಂಟಾದ ವಯಸ್ಸನ್ನು ಮರೆಮಾಚಿ, 20ನೇ ವರ್ಷದ ಹರೆಯಕ್ಕೆ ಬದಲಾಯಿಸಲು ಸಾಧ್ಯವಿಲ್ಲ.

ಮಧ್ಯವಯಸ್ಸಿಗೆ ಬರುವಾಗ ಅಥವಾ ಮಧ್ಯ ವಯಸ್ಸಿಗೆ ಬಂದಾಗ ಜೀರ್ಣಕ್ರಿಯೆ, ಕಿಡ್ನಿ ಸಮಸ್ಯೆ, ರಕ್ತದೊತ್ತಡ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಆರಂಭವಾಗುತ್ತವೆ. ಇವುಗಳನ್ನು ತಡೆದು, ಕಡಿಮೆವಯಸ್ಸಿಗೆ ತಿರುಗಲು ಸಾಧ್ಯವಿಲ್ಲ. ಆದರೆ ಕೆಲವು ಹವ್ಯಾಸ ಹಾಗೂ ಚಿಕಿತ್ಸೆಗಳ ಮೂಲಕ ನಮ್ಮ ನಿಜವಾದ ವಯಸ್ಸಿಗಿಂತ ಕಡಿಮೆ ವಯಸ್ಸಿನವರಂತೆ ತೋರಬಹುದು. ಆದರೆ ಅಂತಹ ಬದಲಾವಣೆಗಳಿಂದ ಅನೇಕ ಸಮಸ್ಯೆಗಳು ಉಂಟಾಗುವುದು. ಜೊತೆಗೆ ಆರೋಗ್ಯದಲ್ಲೂ ಅಪಾಯಕಾರಿ ಬದಲಾವಣೆ ಉಂಟಾಗಬಹುದು.

ವಯಸ್ಸಾದಂತೆ ನಮ್ಮ ಪ್ರೌಢಿಮೆ ಹಾಗೂ ಅನುಭವಕ್ಕೆ ಮಾನ್ಯತೆ ನೀಡಬೇಕೇ ಹೊರತು ಸೌಂದರ್ಯಕ್ಕಲ್ಲ ಎನ್ನುವುದನ್ನು ಅರಿಯಬೇಕು. ಸಲ್ಲದ ಸಾಹಸ ಮಾಡಲು ಹೋದರೆ ಸಹಿಸಲಾರದಷ್ಟು ನೋವುಂಟಾಗುವುದು. 40ಕ್ಕೆ ಹತ್ತಿರವಾಗುತ್ತಿದ್ದೀರಿ ಅಥವಾ 40 ದಾಟಿದ್ದೀರಿ ಎಂದಾದರೆ ತಪ್ಪದೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ. ಆಗ ವಯಸ್ಸಾದರೂ ಆರೋಗ್ಯವಾಗಿರಬಹುದು.... 

ವಯಸ್ಸನ್ನು ಮರೆಮಾಚುವ ವ್ಯಾಯಾಮ

ವಯಸ್ಸನ್ನು ಮರೆಮಾಚುವ ವ್ಯಾಯಾಮ

40ಕ್ಕೆ ಕಾಲಿಟ್ಟಾಗ ಸ್ನಾಯು ಮತ್ತು ನರ ವ್ಯವಸ್ಥೆಯಲ್ಲಿ ಶಕ್ತಿ ಕುಂಟಿತಗೊಳ್ಳುತ್ತದೆ. ಜೊತೆಗೆ ಸ್ನಾಯುಗಳು ಸಡಿಲವಾಗುತ್ತವೆ. ಆ ಸಮಯದಲ್ಲಿ ಅತಿಹೆಚ್ಚು ವ್ಯಾಯಾಮಗಳನ್ನು ಮಾಡಿ, ದೇಹವನ್ನು ಇನ್ನಷ್ಟು ಶಕ್ತಗೊಳಿಸಿ, ವಯಸ್ಸನ್ನು ಮರೆ ಮಾಚುತ್ತೇನೆಂದು ಹೊರಟರೆ ಇನ್ನಷ್ಟು ತೊಂದರೆ ಉಂಟಾಗುವುದು. ಸ್ನಾಯು ಮತ್ತು ನರವ್ಯವಸ್ಥೆಯಲ್ಲೂ ನೋವು ಉಂಟಾಗುವುದು.

ಹೆಚ್ಚು ಸಿಹಿ ತಿನ್ನುವ ರೂಢಿ ನಿಲ್ಲಿಸಿ

ಹೆಚ್ಚು ಸಿಹಿ ತಿನ್ನುವ ರೂಢಿ ನಿಲ್ಲಿಸಿ

ವಯಸ್ಸಾಗುತ್ತಿದ್ದಂತೆ ದೇಹಕ್ಕೆ ಸಕ್ಕರೆ ಪ್ರಮಣವನ್ನು ಕಡಿಮೆ ನೀಡಬೇಕು. ಒಂದು ಅಂದಾಜಿನ ಪ್ರಕಾರ ದಿನಕ್ಕೆ 25ಗ್ರಾಂಗಳಷ್ಟು ಸಿಹಿಯನ್ನು ಮಾತ್ರ ಸೇವಿಸಬೇಕು. ಸಕ್ಕರೆ ಪ್ರಮಾಣ ಹೆಚ್ಚಿದರೆ ಮಧುಮೇಹ ಬರುವ ಸಾಧ್ಯತೆ ಇರುತ್ತದೆ.

ಮ್ಯಾಮೊಗ್ರಾಮ್ಸ್ ತಪಾಸಣೆ

ಮ್ಯಾಮೊಗ್ರಾಮ್ಸ್ ತಪಾಸಣೆ

30ನೇ ವರ್ಷ ದಾಟಿದ ಮೇಲೆ ಮಹಿಳೆಯರು ಮೆಮೋಗ್ರಾಮ್ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುತ್ತದೆ. ಸಂಶೋಧನೆಯ ಪ್ರಕಾರ 40 ವರ್ಷ ದಾಟಿದ 69 ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಇರುತ್ತದೆ ಎಂದು ಹೇಳಲಾಗಿದೆ. 40 ದಾಟಿದ ಮೇಲೆ ಪ್ರತಿಯೊಬ್ಬ ಮಹಿಳೆಯು ವರ್ಷಕ್ಕೆ 2 ಬಾರಿ ಮ್ಯಾಮೊಗ್ರಾಮ್ಸ್ ತಪಾಸಣೆ ಮಾಡಿಸಬೇಕು.

ಒತ್ತಡಕ್ಕೆ ಒಳಗಾಗದಿರಿ

ಒತ್ತಡಕ್ಕೆ ಒಳಗಾಗದಿರಿ

40 ವರ್ಷದ ನಂತರ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚು ಖಿನ್ನತೆ ಕಾಣಿಸಿಕೊಳ್ಳುತ್ತದೆ. ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ವೈದ್ಯರ ಸಲಹೆ ಪಡೆಯುತ್ತಾರೆ. ಯಾವುದೇ ಸಮಸ್ಯೆಯ ಬಗ್ಗೆ ನಿರುತ್ಸಾಹ ಉಂಟಾದರೆ, ಆ ಭಾವನೆಯನ್ನು ಎರಡು ವಾರಕ್ಕೂ ಹೆಚ್ಚು ಕಾಲ ಮುಂದುವರಿಸಲು ಅವಕಾಶ ನೀಡದಿರಿ.

ಚೆನ್ನಾಗಿ ನಿದ್ರಿಸಬೇಕು

ಚೆನ್ನಾಗಿ ನಿದ್ರಿಸಬೇಕು

40ರ ನಂತರ ಸರಿಯಾಗಿ ನಿದ್ರಿಸದಿದ್ದರೆ ಹಾರ್ಮೋನ್‍ಗಳ ವ್ಯತ್ಯಾಸ ಉಂಟಾಗುವುದು. ಇದರಿಂದ ಮಾನಸಿಕ ಒತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಹಾಗಾಗಿ 7 ರಿಂದ 8 ತಾಸುಗಳ ನಿದ್ರೆ ಮಾಡಲೇ ಬೇಕು. ವಯಸ್ಸನ್ನು ಮರೆ ಮಾಚಲು ನಿದ್ರೆಗೆಡುವುದು ಒಂದು ಕೆಟ್ಟ ಹವ್ಯಾಸ.

ಸ್ತ್ರೀರೋಗ ತಜ್ಞರ ಭೇಟಿ ನೀಡಿ

ಸ್ತ್ರೀರೋಗ ತಜ್ಞರ ಭೇಟಿ ನೀಡಿ

40ರ ನಂತರ ಪ್ರತಿಯೊಬ್ಬ ಮಹಿಳೆಯು ಸ್ತ್ರೀರೋಗ ತಜ್ಞರಲ್ಲಿ ಸಲಹೆ ಪಡೆಯಬೇಕು. ವರ್ಷಕ್ಕೆ ಎರಡು ಬಾರಿಯಾದರೂ ಗರ್ಭಕೋಶ ಮತ್ತು ಸ್ತನ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಸೌಂದರ್ಯ ವರ್ಧಕ ಉತ್ಪನ್ನ

ಸೌಂದರ್ಯ ವರ್ಧಕ ಉತ್ಪನ್ನ

ವಯಸ್ಸಾದಂತೆ ತ್ವಚೆಯ ಆರೋಗ್ಯವೂ ಹಾಳಾಗುತ್ತದೆ. ಹಾಗಂತ ಆರೋಗ್ಯಕ್ಕೆ ಒಗ್ಗದ ಚಿಕಿತ್ಸೆ ಮಾಡಿಸಬಾರದು. ಮನೆಯಲ್ಲಿ ಸಿಗುವ ತಾಜಾ ಹಣ್ಣುಗಳ ಫೇಸ್ ಪ್ಯಾಕ್ ಧರಿಸಿ.

ಕಣ್ಣಿನ ತಪಾಸಣೆ ಮಾಡಿಸಬೇಕು

ಕಣ್ಣಿನ ತಪಾಸಣೆ ಮಾಡಿಸಬೇಕು

40ರ ನಂತರ ದೃಷ್ಟಿ ದೋಷಗಳು ಆರಂಭವಾಗುತ್ತದೆ. ವಯಸ್ಸನ್ನು ಮರೆಮಾಚುವ ಗುಂಗಿನಲ್ಲಿ ತಪಾಸಣೆ ಮಾಡಿಸಲು ಮರೆಯದಿರಿ.

ದಂತ ಪರೀಕ್ಷೆ ಮಾಡಿಸಿ

ದಂತ ಪರೀಕ್ಷೆ ಮಾಡಿಸಿ

ವಯಸ್ಸಾದಂತೆ ಹಲ್ಲಿನ ಸಮಸ್ಯೆ ಹಾಗೂ ದಂತ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಇವುಗಳ ನಿರ್ಲಕ್ಷ ಅಥವಾ ವಯಸ್ಸಿಗೆ ಸೂಕ್ತವಲ್ಲದ ಚಿಕಿತ್ಸೆ ಪಡೆಯಬಾರದು. ವೈದ್ಯರ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು.

ವಿಟಮಿನ್ ಮಾತ್ರೆಗಳ ಸೇವನೆ ನಿಲ್ಲಿಸಿ

ವಿಟಮಿನ್ ಮಾತ್ರೆಗಳ ಸೇವನೆ ನಿಲ್ಲಿಸಿ

ಋತುಬಂಧದ ಸಮಯದಲ್ಲಿ ಈಸ್ಟ್ರೋಜನ್ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವುದು. ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ಸಂಬಂಧಿತ ಸಮಸ್ಯೆಗಳು ಆರಂಭವಾಗುತ್ತವೆ. ಈ ವಿಚಾರವಾಗಿ ನಿಮಗನಿಸಿದ ವಿಟಮಿನ್ ಮಾತ್ರೆ ಅಥವಾ ವಯಸ್ಸನ್ನು ಮರೆಮಾಚಲು ಸಹಾಯ ಮಾಡುವ ಮಾತ್ರೆಗಳ ಸೇವನೆ ಮಾಡಬಾರದು. ಇದು ವಯಸ್ಸು ಮರೆ ಮಾಚುವ ಗುಂಗಿನಲ್ಲಿ ಮಹಿಳೆಯರು ಮಾಡುವ ಕೆಟ್ಟ ಕೆಲಸ. ಸಮಸ್ಯೆಗೆ ಸೂಕ್ತ ತಪಾಸಣೆಯಿಂದ ಚಿಕಿತ್ಸೆ ಮಡೆಯಬೇಕು.

For Quick Alerts
ALLOW NOTIFICATIONS
For Daily Alerts

    English summary

    These Are The Bad Habits Women Should Avoid In Their 40s

    In this article to know more about the habits to be avoided if you're someone who's hitting 40 or is already above 40. There are so many things that happen when you turn 40! Turning 40 is a fabulous thing for every woman out there. Those are the habits that we have listed in this article.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more