For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಹಾರ್ಮೋನ್‌ಗಳನ್ನು ನಿಯಂತ್ರಿಸುವ ಯೋಗಾಸನಗಳು

By Hemanth
|

ಭಾರತದಲ್ಲೇ ಹುಟ್ಟಿದ್ದ ಯೋಗವು ನಮ್ಮೆಲ್ಲರ ಕಡೆಗಣೆಯಿಂದಾಗಿ ಎಳೆಮರೆಯ ಕಾಯಿಯಂತಾಗಿತ್ತು. ಆದರೆ ವಿದೇಶಗಳಲ್ಲಿ ಯೋಗವು ಪ್ರಸಿದ್ಧಿಯನ್ನು ಪಡೆದ ಬಳಿಕ ನಮ್ಮ ಸರಕಾರವು ವಿಶ್ವ ಯೋಗ ದಿನವನ್ನು ಆಚರಿಸಬೇಕೆಂದು ಒತ್ತಡ ಹೇರಿದ್ದ ಕಾರಣದಿಂದ ಇಂದು ಯೋಗವು ಪ್ರತಿಯೊಬ್ಬರಿಗೂ ಪರಿಚಿತವಾಗಿದೆ ಮತ್ತು ಯೋಗದಿಂದ ರೋಗವನ್ನು ದೂರವಿಡಬಹುದು ಎನ್ನುವ ವಿಷಯವೂ ಜನರಿಗೆ ಮನವರಿಕೆಯಾಗುತ್ತಿದೆ. ಇದೇ ಕಾರಣದಿಂದ ಈಗ ಯೋಗ ತರಗತಿಗಳು ಪ್ರತಿಯೊಂದು ಕಡೆಯೂ ನಡೆಯುತ್ತಾ ಇದೆ. ಸಾಮಾನ್ಯ 9 ಯೋಗ ಮುದ್ರಾಗಳು ಮತ್ತು ಅದರ ಆರೋಗ್ಯಕಾರಿ ಲಾಭಗಳು

ಯೋಗ ಮಾಡಿದರೆ ಅದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದರಿಂದ ಯಕೃತ್‌ನ ಕಾರ್ಯಚಟುವಟಿಕೆಯು ಸುಧಾರಣೆಯಾಗಿ ಹೃದಯವು ಬಲಿಷ್ಠವಾಗುವುದು ಮಾತ್ರವಲ್ಲದೆ ಪ್ರತಿರೋಧಕ ಶಕ್ತಿಯು ಹೆಚ್ಚಾಗಿ ಮನಸ್ಸು ಶಾಂತವಾಗಿರುವುದು. ಅಸ್ತಮಾ ರೋಗವನ್ನು ಸೋಲಿಸುವ ಯೋಗಾಸನಗಳು

ಯೋಗದ ಕೆಲವೊಂದು ಆಸನಗಳು ಹಾರ್ಮೋನು ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ನೆರವಾಗುವುದು. ಇದರಿಂದ ನಮ್ಮ ದೇಹ ಹಾಗೂ ಮನಸ್ಸು ಶಾಂತವಾಗಿರುವುದು. ಈ ಲೇಖನದಲ್ಲಿ ಹಾರ್ಮೋನು ಮಟ್ಟವನ್ನು ನಿಯಂತ್ರಣದಲ್ಲಿ ಇಡುವಂತಹ ಕೆಲವೊಂದು ಆಸನಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ತುಂಬಾ ಸರಳ ಆಸನಗಳಾಗಿದ್ದು, ಒತ್ತಡವನ್ನು ಕಡಿಮೆ ಮಾಡಿ ಹಾರ್ಮೋನು ಮಟ್ಟವನ್ನು ನಿಯಂತ್ರಣದಲ್ಲಿ ಇಡಲಿದೆ...

Savasana

ಶವಾಸನ
ನೆಲದ ಮೇಲೆ ಮಲಗಿಕೊಂಡು ದೇಹಕ್ಕೆ ವಿಶ್ರಾಂತಿಯನ್ನು ನೀಡಿ. ಹೆಸರೇ ಹೇಳುವಂತೆ ಶವಾಸನವೆಂದರೆ ಶವವೆಂದು ಅರ್ಥ. ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಿದಾಗ ನಿಮಗೆ ಯಾವುದೇ ರೀತಿಯ ಜ್ಞಾನವಿರಬಾರದು. ಹೀಗೆ ನೀವು ಸುಮಾರು 15 ನಿಮಿಷ ಕಾಲ ಇರಬೇಕು ಅಥವಾ ನಿದ್ರೆ ಬರುವ ತನಕ. ಎಲ್ಲಾ ಆಸನಗಳನ್ನು ಮಾಡಿದ ಬಳಿಕ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿಯನ್ನು ನೀಡಲು ಈ ಆಸನವನ್ನು ಮಾಡಲಾಗುತ್ತದೆ. ಇದು ನರ ವ್ಯವಸ್ಥೆಗೆ ತುಂಬಾ ಒಳ್ಳೆಯದು ಮತ್ತು ಹಾರ್ಮೋನು ಮಟ್ಟವನ್ನು ಕಾಪಾಡುವುದು.

ಕಾಲುಗಳನ್ನು ಮೇಲಕೆತ್ತಿ
ಶವಾಸನದಂತೆ ಮಲಗಿಕೊಂಡು ನಿಮ್ಮ ಎರಡು ಕಾಲುಗಳನ್ನು ಒಂದು ಸ್ಟೂಲ್ ನ ಮೇಲಿಡಿ. ಈ ಆಸನದಲ್ಲಿ ಸುಮಾರು ಹತ್ತು ನಿಮಿಷ ಕಾಲ ಇರಿ. ಇದು ರಕ್ತವನ್ನು ಕಾಲಿನಿಂದ ದೇಹದ ಇತರ ಭಾಗಗಳಿಗೆ ಸರಬರಾಜು ಮಾಡುತ್ತದೆ. ಇದರಿಂದ ಹೃದಯ, ಮೆದುಳು ಮತ್ತು ಮೂತ್ರನಾಳದ ಗ್ರಂಥಿಗಳಿಗೆ ಆರಾಮ ಸಿಗುವುದು. ಇದು ಹಾರ್ಮೋನುಗಳನ್ನು ನಿಯಂತ್ರಣದಲ್ಲಿ ಇಡುವುದು. ಭುಜ, ಕೈ ತೋಳುಗಳ ಬಲವೃದ್ಧಿಗೆ-ಪಿಂಚ ಮಯೂರಾಸನ

ದೇವರ ಆಸನ
ಶವಾಸನದಂತೆ ಬೆನ್ನಿನ ಮೇಲೆ ಮಲಗಿಕೊಳ್ಳಿ. ಒಂದು ಬ್ಲಾಕ್ ತೆಗೆದುಕೊಂಡು ಅದರ ಮೇಲೆ ಚಾದರ ಹಾಕಿ. ಇದನ್ನು ಮೊಣಕಾಲಿನ ಕೆಳಗಡೆ ಇಡಿ. ಈ ಭಂಗಿಯಲ್ಲಿ ಹತ್ತು ನಿಮಿಷ ಹಾಗೆ ಇರಿ. ಇದು ಕಾಲು ಹಾಗೂ ಬೆನ್ನಿಗೆ ತುಂಬಾ ಒಳ್ಳೆಯದು. ಇದು ದೇಹ ಹಾಗೂ ಮನಸ್ಸನ್ನು ಶಾಂತವಾಗಿರಿಸಿ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡುತ್ತದೆ.

English summary

Simple Yoga Poses That Help Balance Hormones

Yoga is great in bringing a balance in your hormonal levels. Today in this article we shall discuss certain yoga poses that help not only to relax our mind and bodies, but also bring about a balance in the hormones in our body. These simple yoga poses will help to bring about a balance in these hormones.
Story first published: Monday, February 6, 2017, 19:31 [IST]
X
Desktop Bottom Promotion