ಒಂದೇ ವಾರದಲ್ಲಿ 'ಮಂಡಿ ನೋವು' ಕಡಿಮೆಗೊಳಿಸುವ ಮನೆಮದ್ದುಗಳು

By: manu
Subscribe to Boldsky

ದೇಹಕ್ಕೆ ವಯಸ್ಸಾಗುತ್ತಿರುವಂತೆ ಮತ್ತು ಅದು ಸಾಕಷ್ಟು ಶ್ರಮ ವಯಿಸುತ್ತಿರುವಾಗ ಕೆಲವೊಂದು ಅಂಗಾಂಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ನೋವು ಬಂದು ಹೋದರೆ ಇನ್ನು ಕೆಲವು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಅದರಲ್ಲಿ ಮಂಡಿನೋವು ಕೂಡ ಒಂದು. ಮಂಡಿ ನೋವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನವರನ್ನು ಕಾಡುತ್ತಿರುತ್ತದೆ.

ಮಂಡಿ ನೋವು ಹೆಚ್ಚಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಆರ್ಥೊಪೆಡಿಕ್ ತಜ್ಞರು ಮತ್ತು ವೈದ್ಯರ ಪ್ರಕಾರ ಇದಕ್ಕೆ ಹಲವಾರು ಕಾರಣಗಳು ಇರುತ್ತವೆಯಂತೆ. ಇವು ಮಂಡಿಗಳನ್ನು ಗಟ್ಟಿ ಮಾಡುತ್ತದೆ, ಹಾಗೂ ಇದರಿಂದ ಜನರು ಆಗಾಗ ಕಾಲುಗಳನ್ನು ನೇರ ಮಾಡಿ ಸಡಿಲ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅಲದೆ ಇದರ ನೋವು ಯಾತನದಾಯಕವಾಗಿರುತ್ತದೆ.

ಕಂಗಾಲಾಗದಿರಿ ಕೀಲು ನೋವಿಗೆ: ಇಲ್ಲಿದೆ ಶೀಘ್ರ ಪರಿಹಾರ

ಸಾಮಾನ್ಯವಾಗಿ ಇದು 60 ವರ್ಷ ಮೇಲ್ಪಟ್ಟವರು ಈ ಮಂಡಿ ನೋವಿಗೆ ಸುಲಭವಾಗಿ ಗುರಿಯಾಗುತ್ತಿದ್ದರು. ಆದರೆ ಇದು ಈಗ ತಾರ್ಕಿಕವಾಗಿ ಸಮ್ಮತವಲ್ಲ. ಏಕೆಂದರೆ ಹಲವಾರು ಯುವ ಜನರು ಇದಕ್ಕೆ ಈಗಾಗಲೇ ಗುರಿಯಾಗಿದ್ದಾರೆ. ಅವರಲ್ಲಿಯೂ ಸಹ ಮಂಡಿ ಊತ ಕಂಡು ಬರುತ್ತಿದೆ. ಇದಕ್ಕಾಗಿ ಇಂದು ಹಲವಾರು ಔಷಧಿಗಳು ದೊರೆಯುತ್ತಿದ್ದರೂ, ಮನೆ ಮದ್ದುಗಳನ್ನು ಬಳಸಿ ಇವುಗಳನ್ನು ಸುಲಭವಾಗಿ ಗುಣ ಮುಖ ಮಾಡಿಕೊಳ್ಳಬಹುದು.

ಈ ಮನೆಮದ್ದುಗಳು ತುಂಬಾ ಸುರಕ್ಷಿತ, ಇವು ತೀರಾ ಅಪರೂಪಕ್ಕೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಬಹುತೇಕ ಮಂದಿ ಇದರಿಂದ ಪ್ರಯೋಜನಗಳನ್ನು ಈಗಾಗಲೇ ಪಡೆದಿದ್ದಾರೆ. ನಿಮಗೂ ಮಂಡಿ ನೋವಿದ್ದಲ್ಲಿ, ನೀವು ಸಹ ಈ ಮನೆ ಮದ್ದುಗಳ ಸಹಾಯದಿಂದ ಅದನ್ನು ನಿವಾರಿಸಿಕೊಳ್ಳಬಹುದು. ಬನ್ನಿ ಅವು ಯಾವುವು ಎಂದು ತಿಳಿದುಕೊಂಡು ಬರೋಣ... 

ಕರ್ಪೂರದ ಎಣ್ಣೆ ಬಹಳ ಒಳ್ಳೆಯದು

ಕರ್ಪೂರದ ಎಣ್ಣೆ ಬಹಳ ಒಳ್ಳೆಯದು

ನೋವಿರುವ ಭಾಗಕ್ಕೆ ಕರ್ಪೂರದ ಎಣ್ಣೆ ಹಚ್ಚುವ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಸೆಳೆತ ಮತ್ತು ಒತ್ತಡವನ್ನು ನಿವಾರಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ, ಅಂದರೆ ಬರೆ ಕರಗಿದರೆ ಸಾಕು, ಕುದಿ ಬರಬಾರದು, ಇದಕ್ಕೆ ಒಂದು ಚಿಕ್ಕಚಮಚ ಪುಡಿಮಾಡಿದ ಕರ್ಪೂರದ ಬಿಲ್ಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ತಣಿಯಲು ಬಿಟ್ಟು ಒಂದು ಚಿಕ್ಕ ಡಬ್ಬಿಯಲ್ಲಿ ಸಂಗ್ರಹಿಸಿ. ಮಂಡಿನೋವಿದ್ದರೆ ದಿನಕ್ಕೆರಡು ಬಾರಿ ಕೊಂಚ ಪ್ರಮಾಣವನ್ನು ನೋವಿರುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚಿ. ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಮಂಜುಗಡ್ಡೆಯನ್ನು ಇರಿಸಿ

ಮಂಜುಗಡ್ಡೆಯನ್ನು ಇರಿಸಿ

ಮಂಜುಗಡ್ಡೆಯು ಊದಿಕೊಂಡ ಮಂಡಿಗಳಿಗೆ ಒಳ್ಳೆಯ ಮನೆ ಮದ್ದಾಗಿರುತ್ತದೆ. ಮಂಡಿಗಳು ಊದಿಕೊಂಡಾಗ ಅದರ ಮೇಲೆ ಮಂಜುಗಡ್ಡೆಯನ್ನು ಇರಿಸಿ. ಇದಕ್ಕಾಗಿ ಮಂಜುಗಡ್ಡೆಗಳನ್ನು ದಪ್ಪನಾದ ಬಟ್ಟೆಯಲ್ಲಿ ಸುತ್ತಿ,ಅದು ಕರವಸ್ತ್ರವಾದರು ಸರಿ, ಅದರಲ್ಲಿ ಸುತ್ತಿ ನೋವಿರುವ ಭಾಗದಲ್ಲಿ ಎಲ್ಲಿ ಬೇಕೋ, ಅಲ್ಲಿ ಈ ಪ್ಯಾಕ್ ಇಟ್ಟುಕೊಳ್ಳಿ. 20-30 ನಿಮಿಷದ ಅವಧಿಯಲ್ಲಿ 3-4 ಬಾರಿ ಇದನ್ನು ಇಡಿ. ಆಗ ನೋವು ಕಡಿಮೆಯಾಗುತ್ತದೆ.

ಅಡುಗೆಮನೆಯಲ್ಲಿ ಸದಾ ಇರುವ ಓಮದ ಕಾಳು

ಅಡುಗೆಮನೆಯಲ್ಲಿ ಸದಾ ಇರುವ ಓಮದ ಕಾಳು

ಪುಟ್ಟ ಜೀರಿಗೆಯಂತೆ ಕಾಣುವ ಓಮದ ಕಾಳುಗಳಲ್ಲಿರುವ ಅರಿವಳಿಕಾ ಮತ್ತು ಉರಿಯೂತ ನಿವಾರಕ ಗುಣಗಳು ಮಂಡಿನೋವಿನ ಶಮನಕ್ಕೂ ಉತ್ತಮ ಪರಿಹಾರ ನೀಡುತ್ತವೆ. ಉರಿಯೂತ ಅಥವಾ ಸಂಧಿವಾತದಿಂದಾಗಿ ಎದುರಾಗಿದ್ದ ಊತ, ಚರ್ಮ ಕೆಂಪಗಾಗಿರುವುದು ಮೊದಲಾದ ತೊಂದರೆಗಳೂ ಸುಲಭವಾಗಿ ಮತ್ತು ಶೀಘ್ರವಾಗಿ ಕಡಿಮೆಯಾಗುತ್ತದೆ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಇದಕ್ಕಾಗಿ ಕೊಂಚ ಓಮದ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಅರೆದು (ಮಿಕ್ಸಿಯಲ್ಲಿ ಅರೆಯಬಾರದು, ಬಿಸಿಗೆ ಸುಟ್ಟುಹೋಗುತ್ತದೆ) ಈ ಲೇಪನವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.

ಅಡುಗೆ ಮನೆಯ ರಾಣಿ ಅರಿಶಿನ

ಅಡುಗೆ ಮನೆಯ ರಾಣಿ ಅರಿಶಿನ

ಅರಿಶಿನ ನಿಸರ್ಗ ಒದಗಿಸಿದ ಅತ್ಯುತ್ತಮ ನಂಜುನಿರೋಧಕವಾಗಿದ್ದು ದೇಹದ ಹತ್ತು ಹಲವು ನೋವುಗಳಿಗೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ಮಂಡಿನೋವು, ಸಂಧಿವಾತಕ್ಕೂ ಅರಿಶಿನ ಉತ್ತಮವಾಗಿದೆ. ಕೊಂಚ ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ ನೋವಿದ್ದ ಕಡೆ ದಿನಕ್ಕೆರಡು ಬಾರಿ ಕೊಂಚವೇ ಮಸಾಜ್ ನೊಂದಿಗೆ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಶೀಘ್ರವೇ ನೋವು ಕಡಿಮೆಯಾಗುತ್ತದೆ.

ಅರಿಶಿನ ಬೆರೆಸಿದ ಹಾಲು ಕುಡಿಯಿರಿ

ಅರಿಶಿನ ಬೆರೆಸಿದ ಹಾಲು ಕುಡಿಯಿರಿ

ಅರಿಶಿನ ಬೆರೆಸಿದ ಹಾಲು ಕುಡಿಯಿರಿ ಅರಿಶಿನ ಬೆರೆತ ಹಾಲು ಸೇವನೆ ಮಂಡಿ ನೋವಿಗೆ ಉಪಶಮನವನ್ನು ಒದಗಿಸುವ ಒಂದು ಮನೆಮದ್ದಾಗಿದ್ದು ನಿಮಗೆ ತಕ್ಷಣ ಆರಾಮವನ್ನು ನೀಡುತ್ತದೆ. ದಿನವೂ ಅರಿಶಿನ ಬೆರೆತ ಹಾಲನ್ನು ಕುಡಿಯಿರಿ. ಈ ಸಾಂಬಾರು ಪದಾರ್ಥವು ಉತ್ಕರ್ಷಣ ನಿರೋಧಿ, ಆಂಟಿಸೆಪ್ಟಿಕ್ ಆಗಿದೆ. ಹಾಲು ಮೂಳೆಗಳಿಗೆ ಅತ್ಯುತ್ತಮ.

ಅರಿಶಿನದ ಹಾಲು ತಯಾರಿಸುವ ವಿಧಾನ....

ಹಸಿಯಾಗಿರುವ ಅರಿಶಿನದ ಕೊಂಬಿನ ಸುಮಾರು ಒಂದು ಇಂಚಿನಷ್ಟು ತುಂಡನ್ನು ಜಜ್ಜಿ ಕುದಿಯುತ್ತಿರುವ ಹಾಲಿನಲ್ಲಿ ಸೇರಿಸಿ. ಈಗ ಉರಿಯನ್ನು ಅತಿಚಿಕ್ಕದಾಗಿ ಮಾಡಿ ಮುಚ್ಚಳ ಮುಚ್ಚದೇ ಸುಮಾರು ಹದಿನೈದು ನಿಮಿಷ ಕುದಿಸಿ. ಬಳಿಕ ಅರಿಶಿನದ ತುಂಡನ್ನು ಸೋಸಿ ತೆಗೆಯಿರಿ. ಈ ಹಾಲನ್ನು ತಣಿದ ಬಳಿಕವೇ ಕುಡಿಯಿರಿ. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು.

ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆಯ ಮಸಾಜ್ ಮಾಡಿ

ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆಯ ಮಸಾಜ್ ಮಾಡಿ

ಸ್ವಲ್ಪ ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಬಿಸಿ ಮಾಡಿದ ಎಣ್ಣೆಯನ್ನು ನೋವಿರುವ ಜಾಗಕ್ಕೆ 10-15 ನಿಮಿಷಗಳಿಗೆ ಹಚ್ಚಿ ಹಾಗೂ ವೃತ್ತಾಕಾರವಾಗಿ ಮಸಾಜ್ ಮಾಡಿ. ಎಣ್ಣೆ ಮಸಾಜ್ ನೋವಿನಿಂದ ತ್ವರಿತ ಆರಾಮವನ್ನು ನೀಡುತ್ತದೆ.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಪುದೀನಾ ಎಣ್ಣೆಯನ್ನು ನಿಮಗೆ ನೋವು ಇರುವ ಮಂಡಿಯ ಮೇಲೆ ಹಾಕಿ ಮಸಾಜ್ ಮಾಡಿ. ಇದರಲ್ಲಿರುವ ತಂಪುಕಾರಕ ಗುಣಗಳು ನೋವನ್ನು ನಿವಾರಿಸುತ್ತದೆ. ಹೀಗಾಗಿ ಪುದೀನಾ ಎಣ್ಣೆಯು ಸಹ ಒಂದು ಪರಿಣಾಮಕಾರಿಯಾದ ಮನೆಮದ್ದಾಗಿದೆ.

ಶುಂಠಿ

ಶುಂಠಿ

ಇದರಲ್ಲಿ ನೋವು ನಿವಾರಕ ಮತ್ತು ಉರಿಯೂತ ನಿರೋಧಕ ಗುಣಗಳು ಇರುವುದರಿಂದ ಇವು ಮಂಡಿನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಶುಂಠಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನೋವು ಇರುವ ಭಾಗದಲ್ಲಿ ಲೇಪಿಸಿ, ಮಸಾಜ್ ಮಾಡಿ. ನಿಮಗೆ ಬೇಕಾದಲ್ಲಿ ಶುಂಠಿ ಪೇಸ್ಟ್ ಸಹ ಲೇಪಿಸಬಹುದು.

ಎಪ್ಸಂ ಸಾಲ್ಟ್ (ಮೆಗ್ನಿಷಿಯಂ ಸಲ್ಫೇಟ್)

ಎಪ್ಸಂ ಸಾಲ್ಟ್ (ಮೆಗ್ನಿಷಿಯಂ ಸಲ್ಫೇಟ್)

ಎಪ್ಸಂ ಸಾಲ್ಟ್‌ನಲ್ಲಿರುವ ಅಧಿಕ ಪ್ರಮಾಣದ ಮೆಗ್ನಿಷಿಯಂ ನೋವನ್ನು ನಿವಾರಿಸುತ್ತದೆ. ಇದನ್ನು ಹಿಂದಿಯಲ್ಲಿ ಸೆಂದಾ ನಮಕ್ ಎಂದು ಕರೆಯುತ್ತಾರೆ. ಇದನ್ನು ನೀರಿನಲ್ಲಿ ಹಾಕಿ ಕರಗುವಂತೆ ಮಾಡಿ. ನಿಮ್ಮ ಮೊಣಕಾಲನ್ನು ಈ ಮಿಶ್ರಣದಲ್ಲಿ ನೆನೆಸಿ, ನಿಮ್ಮ ನೋವು ನಿವಾರಣೆಯಾಗುವುದನ್ನು ನೀವೇ ನೋಡಿ. ನಿಮಗೆ ಇಷ್ಟವಿದ್ದಲ್ಲಿ ಎಪ್ಸಂ ಸಾಲ್ಟ್ ನೀರಿನಲ್ಲಿ ಸ್ನಾನ ಸಹ ಮಾಡಬಹುದು.

ಸ್ಟ್ರೆಚಿಂಗ್

ಸ್ಟ್ರೆಚಿಂಗ್

ಸ್ನಾಯುಗಳ ಸ್ಟ್ರೆಚಿಂಗ್ ಯಾವಾಗಲೂ ವಿಶ್ರಾಂತಿ ಮತ್ತು ನೋವನ್ನು ತಪ್ಪಿಸಲು ಉತ್ತಮ ವ್ಯಾಯಾಮವಾಗಿವೆ. ಮಂಡಿಗಳಿಗೆ ಒಳ್ಳೆಯದಾದ ಅನೇಕ ಸ್ಟ್ರೆಚಿಂಗ್ ವ್ಯಾಯಾಮಗಳಿವೆ. ಕೆಲವು ಉತ್ತಮ ಸ್ಟ್ರೆಚಿಂಗ್ ವ್ಯಾಯಾಮಗಳಲ್ಲಿ ಮೊಣಕಾಲನ್ನು ಸಡಿಲಗೊಳಿಸಿ ಸ್ನಾಯುಗಳ ನೋವನ್ನು ದೂರಮಾಡುವ ಹಮ್ ಸ್ಟ್ರಿಂಗ್ ಸ್ಟ್ರೆಚಿಂಗ್ ಉತ್ತಮವಾಗಿದೆ. ನೀವು ಮುಂದೆ ಒಂದು ಕಾಲನ್ನು ಇರಿಸಿ ಮತ್ತು ನೀವು ಒತ್ತಡ ಅಭಿಪ್ರಾಯವಾಗುವ ತನಕ ಇನ್ನೊಂದು ಕಾಲಿನ ಮಂಡಿಯನ್ನು ಬಾಗಿ ಕುಳಿತುಕೊಳ್ಳಬೇಕು. ಇಂತಹ ಇತರ ಹಲವು ವ್ಯಾಯಾಮಗಳಿವೆ.

ಮುಂಜಾನೆ ವ್ಯಾಯಾಮ ಮಾಡಿ

ಮುಂಜಾನೆ ವ್ಯಾಯಾಮ ಮಾಡಿ

ವ್ಯಾಯಾಮ ಮಾಡಿ ಮಂಡಿಗಳ ನೋವನ್ನು ಕಡಿಮೆ ಮಾಡಿಕೊಳ್ಳಲು ದಿನವೂ ವ್ಯಾಯಾಮ ಮಾಡಿ. ನಿಯಮಿತವಾಗಿ ಓಡಾಡುವುದರಿಂದಾಗಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೆಂದು ಜಿಮ್‍ಗೆ ಹೋಗುವ ಅಗತ್ಯವಿಲ್ಲ. ಬದಲಿಗೆ ಬೆಳಗ್ಗೆ ಎದ್ದು ಓಡಾಡಿ ಸಾಕು.

ಮ್ಯಾಟ್ ವ್ಯಾಯಾಮ

ಮ್ಯಾಟ್ ವ್ಯಾಯಾಮ

ಲೆಗ್ ಲಿಫ್ಟ್, ಮೊಣಕಾಲು ಲಿಫ್ಟ್ ಮುಂತಾದವು ಕೆಲವು ಮ್ಯಾಟ್ ವ್ಯಾಯಾಮಗಳು ಇವು ಮೊಣಕಾಲು ನೋವು ಕಡಿಮೆಗೊಳಿಸಲು ಸಾಕಷ್ಟು ಸಹಾಯಕವಾಗಿವೆ. ಮ್ಯಾಟ್ ವ್ಯಾಯಾಮ, ಮನೆಯಲ್ಲಿ ಯಾವುದೇ ಸಮಯದಲ್ಲಿ ಮಾಡಬಹುದು. ಕಾಲನ್ನು ಎತ್ತುವಾಗ ನಿಮ್ಮ ಮಂಡಿಗಳನ್ನು ಬಗ್ಗಿಸುವಂತಿಲ್ಲ. ಕೆಲವು ಇಂಚುಗಳಷ್ಟು ಕಾಲನ್ನು ಮೇಲೇರಿಸಿ. ಈ ವ್ಯಾಯಾಮ ಮೊಣಕಾಲಿನ ನೋವು ನಿವಾರಣೆಗೆ ಅತ್ಯುತ್ತಮವಾದದ್ದು.

ಸ್ಟೆಪ್ ಅಪ್

ಸ್ಟೆಪ್ ಅಪ್

ಮೆಟ್ಟಿಲು ಅಥವಾ ಸ್ಟೆಪ್ ಅಪ್ ವ್ಯಾಯಾಮ ಅನೇಕ ಪ್ರಯೋಜನಗಳನ್ನು ಹೊಂದಿದ್ದು ಹೃದಯ ವ್ಯಾಯಾಮವಾಗಿದೆ. ಈ ವ್ಯಾಯಾಮ, ಹೃದಯ ಬಡಿತಗಳನ್ನು ಹೆಚ್ಚಿಸುತ್ತದೆ, ದೇಹದಲ್ಲಿ ಶಾಖ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಮತ್ತು ಇಡೀ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಸ್ಟೆಪ್ ಅಪ್ ಮಾಡುವಾಗ ಮಂಡಿಯನ್ನು ಬಗ್ಗಿಸಕೂಡದು. ಇದು ನೇರ ಮತ್ತು ಸ್ಥಿರವಾಗಿರಬೇಕು. ಒಂದು ನಿಮಿಷಗಳ ನಿರಂತರ ಸ್ಟೆಪ್ ಅಪ್ ವ್ಯಾಯಾಮ ಮಂಡಿಗಳಿಗೆ ಲಾಭಕರವಾಗಿರುತ್ತದೆ. ಸ್ಟೆಪ್ ಅಪ್ ವ್ಯಾಯಾಮ ಮೊಣಕಾಲನ್ನು ಬೆಚ್ಚಗಾಗಿಸುವ ಮತ್ತು ಅದರ ಮೇಲೆ ಯಾವುದೇ ತೀವ್ರವಾದ ಒತ್ತಡ ಬೀಳದಂತೆ ಕಡಿಮೆ ಮಾಡುತ್ತದೆ. ಇದು ಯಾವುದೇ ರೀತಿಯ ಮೊಣಕಾಲು ಗಾಯದಿಂದ ಬಳಲುತ್ತಿರುವ ನೀವು ಮಾಡಬಹುದಾದ ಒಂದು ತ್ವರಿತ ವ್ಯಾಯಾಮ.

ಯೋಗ

ಯೋಗ

ಯಾವುದೇ ಮೊಣಕಾಲು ಗಾಯ ಸಂಭವಿಸಿದಾಗ ಮಾಡಬಹುದಾದ ಮತ್ತೊಂದು ಉತ್ತಮ ವ್ಯಾಯಾಮ ಯೋಗ. ಯೋಗ ನಿಧಾನವಾಗಿ ಸ್ನಾಯುಗಳನ್ನು ಸಡಿಲಗೊಳಿಸಿ, ಮಂಡಿಗಳ ಮೇಲೆ ಯಾವುದೇ ಒತ್ತಡ ಅಥವಾ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಕೇವಲ ಕಾಲುಗಳು ಮತ್ತು ಮೊಣಕಾಲುಗಳ ವಿಶ್ರಾಂತಿಗೆ ಮೀಸಲಾದ ಅನೇಕ ಯೋಗ ಆಸನಗಳಿವೆ. ಯೋಗ, ಇತರ ವ್ಯಾಯಾಮಗಳಿಗೆ ಹೋಲಿಸಿದರೆ ದೀರ್ಘಾವಧಿ ಪರಿಣಾಮಗಳನ್ನು ಹೊಂದಿದೆ. ಕೇವಲ " ಸೂರ್ಯ ನಮಸ್ಕಾರ" ಒಂದೇ ಮಂಡಿ ನೋವು ನಿವಾರಿಸಲು ಸಹಾಯ ಮಾಡಬಹುದು.

English summary

Natural Home Remedies For Knee Pain And Swelling Relief

Knee pain is one of the popular health conditions which can happen with not only older people but also young people including children. And this pain often takes place because of the wear and tear of knee joints. The severity of knee pain may vary from minor to severe. Now it’s time not to let the knee pain prevent you from doing what you like. You can cure knee pain effectively and quickly by applying one of these easy and cheap treatments at home
Subscribe Newsletter