For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಕೊಬ್ಬನ್ನು ಕರಗಿಸಲು-'ಬಾಳೆಹಣ್ಣಿನ ಸ್ಪೆಷಲ್ ಜ್ಯೂಸ್' ರೆಸಿಪಿ!

By Arshad
|

ನಿಮ್ಮ ಸ್ನೇಹಿತೆಯ ಮದುವೆ ಇನ್ನು ಕೆಲವೇ ದಿನಗಳಲ್ಲಿ ಆಗಮಿಸುತ್ತಿದ್ದು ಈ ವಿಶೇಷ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಲೆಹೆಂಗಾವನ್ನು ಧರಿಸಬೇಕೆಂದು ಇಚ್ಛಿಸಿದ್ದೀರಿ. ಆದರೆ ಏನು ಮಾಡುವುದು ಈ ಹೊಟ್ಟೆಯ ಭಾಗದಲ್ಲಿ ತುಂಬಿಕೊಂಡಿರುವ ಬೊಜ್ಜು ಈ ಬಯಕೆಯ ಮೇಲೆ ತಣ್ಣೀರು ಸುರಿಸುತ್ತಿದೆಯೇ?

ಬರೆ ಲೆಹೆಂಗಾ ಮಾತ್ರವಲ್ಲ ಇದೇ ಕಾರಣಕ್ಕೆ ನಿಮ್ಮ ನೆಚ್ಚಿನ ಉಡುಪುಗಳನ್ನೂ ತೊಡಲು ಸಾಧ್ಯವಾಗುತ್ತಿಲ್ಲವೇ? ಹೊಟ್ಟೆಯ ಮತ್ತು ಸೊಂಟದ ಕೊಬ್ಬನ್ನು ನಿವಾರಿಸಲು ಮಾಡಿದ ಪ್ರಯತ್ನಗಳೆಲ್ಲಾ ನಿಷ್ಪಲವಾಗಿವೆಯೇ? ಇದು ಬರೆಯ ನಿಮ್ಮ ಮಾತ್ರವಲ್ಲ, ಲಕ್ಷಾಂತರ ಮಹಿಳೆಯರ ಸಮಾನವಾದ ತೊಂದರೆಯಾಗಿದ್ದು ಇದನ್ನು ಕರಗಿಸುವುದು ತುಂಬಾ ಕಷ್ಟವಾಗಿದೆ.

Banana juice

ಇತ್ತೀಚಿನ ಸಮೀಕ್ಷೆಯ ಪ್ರಕಾರ ಬಹುತೇಕ ಎಲ್ಲಾ ಮಹಿಳೆಯರು ಈ ಸ್ಥಿತಿಯನ್ನು ಕೊಂಚವಾದರೂ ಅನುಭವಿಸಿಯೇ ಇರುತ್ತಾರೆ. ಪುರುಷರಿಗೆ ಹೋಲಿಸಿದರೆ ಈ ಸಂಖ್ಯೆ ಮಹಿಳೆಯರಲ್ಲಿಯೇ ಹೆಚ್ಚು. ಏಕೆಂದರೆ ಮಹಿಳೆಯರ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳು ಇದಕ್ಕೆ ಪ್ರಮುಖ ಕಾರಣವಾಗಿವೆ.

ಸೊಂಟದ ಕೊಬ್ಬು ಕೇವಲ ಸೌಂದರ್ಯವನ್ನು ಕಸಿಯುವುದು ಮಾತ್ರವಲ್ಲ, ಅತ್ಯಂತ ಅನಾರೋಗ್ಯಕರವೂ ಹೌದು. ಸೊಂಟದ ಸುತ್ತಳತೆ ಹೆಚ್ಚಿದಷ್ಟೂ ಸ್ಥೂಲಕಾಯದ ಪರೋಕ್ಷ ಪರಿಣಾಮಗಳು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಬೆನ್ನು ನೋವು, ಮೊಣಕಾಲಿನ ಗಂಟುನೋವು, ಹೃದಯಸಂಬಂಧಿ ತೊಂದರೆಗಳು ಇತ್ಯಾದಿಗಳು ಆವರಿಸುತ್ತವೆ.

ವಾಸ್ತವವಾಗಿ ಕೊಬ್ಬು ನಮಗೆ ಬೇಕೇ ಬೇಕು. ದೇಹಕ್ಕೆ ಹೆಚ್ಚಿನ ಹೊತ್ತು ಆಹಾರ ಸಿಗದೇ ಇದ್ದಾಗ ದೇಹ ಕೊಬ್ಬನ್ನು ಉಪಯೋಗಿಸಿ ದೈಹಿಕ ಚಟುವಟಿಕೆಗಳು ಮುಂದುವರೆಯುವಂತೆ ನೋಡಿಕೊಳ್ಳುತ್ತದೆ. ಆದರೆ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಶೇಖರವಾಗುವುದೇ ಸೊಂಟದ ಸುತ್ತಳತೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇದನ್ನು ನಿವಾರಿಸಲು ಮಾಡಿದ ಯತ್ನಗಳಿಗೆ ವಿರುದ್ದವಾಗಿ ದೇಹ ಇನ್ನಷ್ಟು ಕೊಬ್ಬನ್ನು ಸೇರಿಸಿಕೊಳ್ಳುತ್ತದೆ.

ಈ ಕೊಬ್ಬನ್ನು ಬಲವಂತವಾಗಿ ಹೊರತೆಗೆಯುವ ಲಿಪೋಸಕ್ಷನ್ ಎಂಬ ವಿಧಾನದಿಂದ ಕೊಬ್ಬು ನಿವಾರಣೆಯಾದರೂ ಇದರ ಪರೋಕ್ಷ ಪರಿಣಾಮಗಲು ಮಾರಕವಾಗಬಹುದು. ಅಷ್ಟೇ ಅಲ್ಲ, ಇದು ಅತಿ ದುಬಾರಿ ಸಹಾ! ಇದಕ್ಕೆ ಬದಲಾಗಿ ಒಂದು ಪೇಯವನ್ನು ನಿಯಮಿತವಾಗಿ ಕುಡಿಯುವ ಮೂಲಕವೂ ಈ ಕೊಬ್ಬನ್ನು ಸುರಕ್ಷಿತವಾಗಿ ನಿವಾರಿಸಬಹುದು:

ಅಗತ್ಯವಿರುವ ಸಾಮಗ್ರಿಗಳು
*ಮಧ್ಯಮಗಾತ್ರದ ಬಾಳೆಹಣ್ಣು - 1
*ಅಗಸೆಬೀಜ (flax seeds) - 1 ದೊಡ್ಡಚಮಚ
*ಶುಂಠಿ ಪುಡಿ - 2 ಚಿಕ್ಕ ಚಮಚ
*ಕೊಬ್ಬು ರಹಿತ ಮೊಸರು - ½ ಕಪ್

ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಈ ಪೇಯವನ್ನು ಸೂಕ್ತ ಪ್ರಮಾಣದಲ್ಲಿ ನಿಯಮಿತವಾಗಿ ಕುಡಿಯುತ್ತಾ ಬರುವ ಮೂಲಕ ಹಲವು ವ್ಯಕ್ತಿಗಳು ಅದ್ಭುತ ಪರಿಣಾಮವನ್ನು ಪಡೆದಿದ್ದಾರೆ. ಆದರೆ ಬರೇ ಈ ಪೇಯ ಕುಡಿದು ಉಳಿದ ಅನಾರೋಗ್ಯಕರ ಅಭ್ಯಾಸಗಳನ್ನು ಮುಂದುವರೆಸಿದರೆ ಆಗದು. ಬದಲಿಗೆ ಸೂಕ್ತ ಆಹಾರಗಳ ಸೇವನೆ, ಕೊಬ್ಬು ಹೆಚ್ಚಿರುವ ಆಹಾರಗಳನ್ನು ಸೇವಿಸದಿರುವುದು ಹಾಗೂ ದಿನಕ್ಕೆ ಕನಿಷ್ಠ ಮುಕ್ಕಾಲು ಗಂಟೆಯಾದರೂ ವ್ಯಾಯಾಮ ಮಾಡುವುದು ಅಗತ್ಯವಾಗಿದೆ.

ಈ ವ್ಯಾಯಾಮಗಳಲ್ಲಿ ಹೊಟ್ಟೆಗೆ ಹೆಚ್ಚು ಶ್ರಮ ನೀಡುವ ವ್ಯಾಯಾಮಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು. ಬಾಗುವ, ಸಂಕುಚಿತಗೊಳಿಸುವ ವ್ಯಾಯಾಮಗಳು ಹೆಚ್ಚು ಫಲಕಾರಿ. ಈ ಪೇಯದಲ್ಲಿರುವ ಎಲ್ಲಾ ಸಾಮಾಗ್ರಿಗಳಲ್ಲಿ ದಿನದ ಅಗತ್ಯಕ್ಕೆ ಸಾಕಷ್ಟು ಪೋಷಕಾಂಶವಿರುವ ಕಾರಣ ಆರೋಗ್ಯವನ್ನು ಕೆಡಿಸದೇ ತೂಕವನ್ನು ಮಾತ್ರ ನಿಧಾನವಾಗಿ ಕಡಿಮೆಯಾಗಿಸುತ್ತಾ ಬರುತ್ತದೆ.

ಈ ಪೇಯದಲ್ಲಿರುವ ಮೊಸರು ಮತ್ತು ಅಗಸೆಬೀಜಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬಿನ ಅವಶ್ಯಕತೆ ಇದೆ. ನಿಯಮಿತವಾಗಿ ಕುಡಿಯುವ ಮೂಲಕ ದೇಹಕ್ಕೆ ಅನಿವಾರ್ಯವಾಗಿ ಸೊಂಟದ ಸುತ್ತಲಿರುವ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಇದೇ ಈ ಪೇಯದ ಗುಟ್ಟು.

ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಹಾಗೂ ಕೊಬ್ಬು ಕರಗಿಸಲು ನೆರವಾಗುತ್ತದೆ. ಶುಂಠಿ ಸಹಾ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ತಯಾರಿಕಾ ವಿಧಾನ
*ಮೇಲೆ ವಿವರಿಸಿದ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯ ಬ್ಲೆಂಡರ್ ನಲ್ಲಿ ಹಾಕಿ ನಯವಾದ ಪೇಯವಾಗುವವರೆಗೆ ಕಡೆಯಿರಿ.
*ಈ ಪೇಯವನ್ನು ಪ್ರತಿದಿನ ಬೆಳಗ್ಗಿನ ಉಪಾಹಾರಕ್ಕೂ ಮೊದಲು ದಿನದ ಪ್ರಥಮ ಆಹಾರವಾಗಿ ನಿಮ್ಮ ನಿತ್ಯದ ವ್ಯಾಯಾಮದ ಬಳಿಕ ಸೇವಿಸಿ.
*ನಿಮ್ಮ ನಿತ್ಯದ ಉಪಹಾರದ ಬದಲಿಗೂ ಈ ಪೇಯವನ್ನೇ ಸೇವಿಸಬಹುದು, ಆದರೂ ಈ ತೀರ್ಮಾನ ಕೈಗೊಳ್ಳುವ ಮುನ್ನ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆಯಿರಿ.

English summary

Natural Banana Drink That Can Reduce Belly Fat Quickly!

According to recent statistics, it is said that belly fat is more common in women, compared to men, due to hormonal issues; however, men can also develop belly fat quickly. As we already know, excess belly fat can surely make a person look unattractive and more than that it is extremely unhealthy!
Story first published: Friday, June 16, 2017, 20:39 [IST]
X
Desktop Bottom Promotion