For Quick Alerts
ALLOW NOTIFICATIONS  
For Daily Alerts

ಮೈಕೈ ನೋವೇ? ಹಾಗಾದರೆ ಈ ಆಹಾರ ತಿನ್ನಿ

|

ವಯಸ್ಸು 30 ದಾಟಿದರೆ ಸಾಕು ಮೈಕೈ ನೋವು, ಸಂದಿ ನೋವು ಮುಂತಾದ ತೊಂದರೆ ಕಾಣಿಸಿಕೊಳ್ಳುವುದು. ಈ ರೀತಿಯ ತೊಂದರೆಗಳು ನಾನಾ ಕಾರಣಗಳಿಂದ ಉಂಟಾಗಬಹುದು. ಅದರಲ್ಲೂ ಮೈಕೈ ನೋವಿಗೆ ಈ ಕೆಳಗಿನ ಅಂಶಗಳು ಕೂಡ ಪ್ರಮುಖ ಕಾರಣಗಳಾಗಿವೆ.
* ಸರಿಯಿಲ್ಲದ ಆಹಾರಕ್ರಮ
* ವ್ಯಾಯಾಮ ಮಾಡದಿರುವುದು
* ಕಾಯಿಲೆ
* ವಿಪರೀತ ಮಾನಸಿಕ ಒತ್ತಡ
* ಕಂಪ್ಯೂಟರ್ ಮುಂದೆ ತುಂಬಾ ಹೊತ್ತು ಕೂರುವುದು

ಮೈಕೈ ನೋವು ಕಾಣಿಸಿಕೊಂಡರೆ ಹೆಚ್ಚಿನವರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಥವಾ ಚುಚ್ಚು ಮದ್ದು ತೆಗೆದುಕೊಳ್ಳುವುದು ಮಾಡುತ್ತಾರೆ. ಒಂದು ವಿಷಯ ನೆನೆಪಿಟ್ಟುಕೊಳ್ಳಿ, ಆಗಾಗ ನೋವು ನಿವಾರಕ ಮಾತ್ರೆಗಳನ್ನು ನುಂಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದು. ಆದ್ದರಿಂದ ಆದಷ್ಟು ನೈಸರ್ಗಿಕವಾದ ವಿಧಾನಗಳಿಂದ ಸಮಸ್ಯೆಗಳನ್ನು ದೂರ ಮಾಡುವುದು ಒಳ್ಳೆಯದು.

ಮೈಕೈ ನೋವು ಕಾಣಿಸಿಕೊಂಡಾಗ ಎಣ್ಣೆ ಮಸಾಜ್ ಮಾಡಿದರೆ ನೋವು ಕಡಿಮೆಯಾಗುವುದು. ಅದರ ಜೊತೆ ಕೆಲವೊಂದು ಆಹಾರಗಳು ಮೈಕೈ ನೋವು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ, ಅಂತಹ ಾಹಾರಗಳನ್ನು ಡಯಟ್ ನಲ್ಲಿ ಸೇರಿಸಬೇಕು. ಆ ನೋವು ನಿವಾರಕ ಆಹಾರಗಳು ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಬೆರಿ ಹಣ್ಣುಗಳು:

ಬೆರಿ ಹಣ್ಣುಗಳು:

ಸ್ಟ್ರಾಬರಿ, ನೇರಳೆ ಹಣ್ಣು ಇವುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸ್ಟ್ರಾಬರಿ ಹಣ್ಣನ್ನು ತಿನ್ನುವುದರಿಂದ ಅದರಲ್ಲಿರುವ ವಿಟಮಿನ್ ಸಿ ಹಾಗೂ antioxidants ಅಂಶ ಮೈಕೈ ನೋವಿಗೆ ಔಷಧಿಯಾಗಿ ವರ್ತಿಸಿ ನೋವನ್ನು ಕಡಿಮೆ ಮಾಡುತ್ತದೆ.

ತರಕಾರಿಗಳು:

ತರಕಾರಿಗಳು:

ಪಾಲಾಕ್, ಬ್ರೊಕೋಲಿ, ಈರುಳ್ಳಿ, ಬೀಟ್ ರೂಟ್, ಟೊಮೆಟೊ, ಶುಂಠಿ ಇವುಗಳು ಮೈಕೈ ನೋವನ್ನು ಕಡಿಮೆ ಮಾಡುತ್ತದೆ. ಸಂದಿ ನೋವು ಇರುವವರು ಪಾಸ್ತಾ, ಬ್ರೆಡ್, ಕರಿದ ಪದಾರ್ಥಗಳು ಹಾಗೂ ಕುರುಕಲು ತಿಮಡಿಗಳನ್ನು ತಿನ್ನದಿರುವುದು ಒಳ್ಳೆಯದು.

ನಟ್ಸ್:

ನಟ್ಸ್:

ಬಾದಾಮಿ, ವಾಲ್ ನಟ್, ಕುಂಬಳಕಾಯಿ ಬೀಜ ಇವುಗಳನ್ನು ತಿಂದರೆ ಆರೋಗ್ಯಕ್ಕೂ ಒಳ್ಳೆಯದು ಹಾಗೂ ದೇಹದ ತೂಕವನ್ನು ಕೂಡ ಹತೋಟಿಯಲ್ಲಿಡುತ್ತದೆ. ಈ ನಟ್ಸ್ ಗಳಿಗೆ ಮೈಕೈ ನೋವು ನಿವಾರಿಸುವ ಸಾಮರ್ಥ್ಯ ಇದೆ.

ಆಲೀವ್ ಎಣ್ಣೆ:

ಆಲೀವ್ ಎಣ್ಣೆ:

ಆಲೀವ್ ಎಣ್ಣೆ ಅಡುಗೆ ಮಾಡಲು ಬಳಸಿದರೆ ಇದರಿಂದ ದೇಹ ಕೊಲೆಸ್ಟ್ರಾಲ್ ಕಡಿಮೆಯಾಗುವುದು , ಬೊಜ್ಜು ಕರಗುವುದು ಹಾಗೂ ಮೈಕೈ ನೋವನ್ನು ನಿವಾರಿಸುತ್ತದೆ. ದೇಹದ ತೂಕ ಹೆಚ್ಚಾದರೆ ಕಾಲು ನೋವು ಕಂಡು ಬರುತ್ತದೆ. ಆದ್ದರಿಂದ ಸಮತೂಕವಿರುವಂತೆ ನೋಡಿಕೊಳ್ಳುವುದು ಒಳ್ಳೆಯದು.

 ನಿಂಬೆ ಅಥವಾ ಕಿತ್ತಳೆಯ ಜ್ಯೂಸ್:

ನಿಂಬೆ ಅಥವಾ ಕಿತ್ತಳೆಯ ಜ್ಯೂಸ್:

ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ವಿಟಮಿನ್ ಸಿ ಅವಶ್ಯಕ. ಆದ್ದರಿಂದ ಪ್ರತಿದಿನ ನಿಂಬೆ ಜ್ಯೂಸ್ ಅಥವ ಕಿತ್ತಳೆ ಜ್ಯೂಸ್ ಅನ್ನು ಡಯಟ್ ನಲ್ಲಿ ಸೇರಿಸಿ.

 ಕ್ಯಾಲ್ಸಿಯಂ ಆಹಾರ:

ಕ್ಯಾಲ್ಸಿಯಂ ಆಹಾರ:

ಮೀನು, ಹಾಲು, ಮೊಟ್ಟೆ, ಇವುಗಳಲ್ಲಿ ಕ್ಯಾಲ್ಸಿಯಂ ಅಂಶವಿರುತ್ತದೆ. ಆದ್ದರಿಂದ ಪ್ರತಿನಿತ್ಯದ ಆಹಾರಕ್ರಮದಲ್ಲಿ ಇದನ್ನು ಬಳಸುವುದು ಒಳ್ಳೆಯದು. ಸೊಪ್ಪು ಹೆಚ್ಚಾಗಿ ತಿನ್ನಿ.

English summary

Foods To Reduce Joint Pain | Tips For Health | ಮೈಕೈ ನೋವು ನಿವಾರಿಸುವ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Joint pain can be in knee, elbows, shoulder, neck or hip. Apart from exercise, you should eat healthy and nutritious foods that reduce joint pain and provide relief. Here are the best 6 foods that reduce joint pain.
X
Desktop Bottom Promotion