Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಧ್ಯಯನ ವರದಿ: ನಿತ್ಯ ಯೋಗದಿಂದ ನೆನಪಿನ ಶಕ್ತಿ ಚುರುಕು
ದೇಹವನ್ನು ಆರೋಗ್ಯವಿಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ ಯೋಗಭ್ಯಾಸ ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಯೋಗ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿಟ್ಟು ಕೊಳ್ಳಬಹುದು ದೃಢವಾಗಿ ಮತ್ತು ಸುಂದರವಾಗಿಡಲು ಯೋಗ ತುಂಬಾ ಸಹಕಾರಿ.
ಯೋಗದಲ್ಲಿ ಬರುವ ಉಸಿರಾಟ ಪ್ರಕ್ರಿಯೆ ಮತ್ತು ಇತರ ಆಸನಗಳು ಮೆದುಳಿನ ಎರಡೂ ಕಡೆಗಳಲ್ಲೂ ಸಮತೋಲನವನ್ನು ಕಾಪಾಡುತ್ತದೆ. ವಯಸ್ಸಾದಂತೇ ಅರಿವಿನ ಶಕ್ತಿಗಳು ಕುಂಠಿತಗೊಳ್ಳುತ್ತವೆ. ಯೋಗದಿಂದ ಮನಸ್ಸಿನ ಯೋಚನಾ ಲಹರಿ ಮತ್ತು ಚಟುವಟಿಕೆ ಎರಡನ್ನೂ ಸಮತೋಲನದಲ್ಲಿ ಇಟ್ಟು ಕೊಳ್ಳಬಹುದೆಂದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಸಂಶೋಧಕರ ಪ್ರಕಾರ ವಯಸ್ಸಾದ ಯೋಗಭ್ಯಾಸ ಮಾಡುವ ಸ್ತ್ರೀಯರನ್ನು (ಯೋಗಿನಿ) ಎಂದು ಕರೆಯಲ್ಪಡುವರನ್ನು ಪರೀಕ್ಷಿಸಿದಾಗ ಕಾರ್ಟಿಕಲ್ (ಮೆದುಳಿನ ಹೊರ ಕವಚ) ಮತ್ತು ಮೆದುಳಿನ ಮುಂಭಾಗದಲ್ಲಿ ಅರಿವಿನಂಶ ನೆನಪು ಮತ್ತು ಅರಿವಿನ ಪ್ರಕ್ರಿಯೆ ಅಂಶ ಹೆಚ್ಚುತ್ತದೆಯೆಂದು ಕಂಡು ಬಂದಿದೆ. ವಯಸ್ಸಾದಂತೆ ನಮ್ಮ ನೆನಪಿನ ಶಕ್ತಿ ಕುಂದುತ್ತದೆ ಮತ್ತು ಸಮತೋಲನವನ್ನು ಕಳೆದುಕೊಳ್ಳುತ್ತೇವೆ. ವಿಜ್ಞಾನಿಗಳ ಪ್ರಕಾರ ವಯಸ್ಸಾದಂತೆ ಮೆದುಳಿನ ಹೊರಕವಚ ತೆಳ್ಳಗಾಗುತ್ತಾ ಅರಿವಿನ ಅಂಶವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಾವು ಈ ಅಂಶದಿಂದ ಹೇಗೆ ಹೊರ ಬರಬಹುದೆಂದು ಚಿಂತನಾಶೀಲರಾಗೋಣ..
ಫ್ರಂಟಿಯರ್ ಸ್ ಏಜಂಗ್ ನ್ಯೂರೋ ಸಯಿನ್ಸ್ ಪತ್ರಿಕಾ ವರದಿಯಂತೆ ಯೋಗ ಮಾಡುವುದರಿಂದ ಯೋಚನಾಲಹರಿ ಚೂರುಕುಗೊಳ್ಳಬಹುದು. ಸಂಶೋಧಕಿ ಎಲಿಸಾ ಕೊಜಾಸಾ ಐನ್ ಸ್ಟಿನ್ ಆಸ್ಪತ್ರೆ ಬ್ರೆಜಿಲ್ ರವರ ಪ್ರಕಾರ ಯೋಗದಿಂದ ಮಿದುಳಿನ ಬೆಳವಣಿಗೆಗೆ, ಏಕಾಗ್ರತೆಗೆ ಮತ್ತು ಸದೃಢ ದೇಹವನ್ನು ಸರಿಯಾದ ಯೋಗ ತರಬೇತಿಯಿಂದ ಪಡೆಯಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.
ಸಂಶೋಧಕ ಗುಂಪಿನವರು ಹೆಚ್ಚಿನ ವಯಸ್ಸಾದ ಯೋಗ ತರಬೇತುದಾರರನ್ನು ಮತ್ತು ಯೋಗ ಮಾಡದೆ ಇರುವ ವಯಸ್ಸಾದ ಜನರ ಗುಂಪನ್ನು ಪರೀಕ್ಷಿಸಿದಾಗ ಮಿದುಳಿನ ಅಂಶಗಳಲ್ಲಿ ಯಾವುದೇ ವ್ಯತ್ಯಾಸ ಕಾಣಿಸಿಕೊಳ್ಳಲಿಲ್ಲ ಇದರ ಜೊತೆಯಲ್ಲಿ ಎಂಟು ವರ್ಷದಿಂದ ಎರಡು ಬಾರಿ ಯೋಗ ಮಾಡುವ ಯೋಗಿನಿಯರನ್ನು ಮತ್ತೊಂದು ಗುಂಪು ಹದಿನೈದು ವರ್ಷದಿಂದ ಯೋಗ ನಿರತರನ್ನು ಪರೀಕ್ಷಿಸಿದ್ದಾರೆ. ಇನ್ನೂ ಮುಂದಕ್ಕೆ ಹೋಗಿ ಸಂಶೋಧಕರು ಯೋಗಿನಿಯರು ಮತ್ತು ಯೋಗ, ಧ್ಯಾನ ಅಭ್ಯಾಸ ಮಾಡದ ಅರುವತ್ತು ವರ್ಷಕ್ಕಿಂತ ಮಿಗಿಲ್ಪಟ್ಟ ಸ್ತ್ರೀಯರನ್ನು ದೈಹಿಕವಾಗಿ ಪರೀಕ್ಷಿಸಿದರು.
ಸಂಶೋಧಕರ ಪ್ರಕಾರ ಮಿದುಳಿನಲ್ಲಿ ಅಯಸ್ಕಾಂತ ಅನುರಣನ ಇದೆಯೇ ಇಲ್ಲವೆಂಬುದನ್ನು ಖಾತ್ರಿ ಪಡಿಸಿದ್ದಾರೆ. ರುಯಿ ಆಫೋನ್ಸೊ ಇಸೆಲಿಟ ಆಲ್ಬರ್ಟ್ ಐನ್ ಸ್ಟಿನ್ ಸಾವೊ ಪವುಲೊರವರ ಪ್ರಕಾರ ಮಿದುಳಿನ ಮುಂಭಾಗದ ಎಡ ಹೊರ ಕವಚದ ಪ್ರದೇಶಗಳಲ್ಲಿ ಜಾಸ್ತಿ ಚಿಂತನಾಶೀಲತೆ, ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚು ಕಂಡು ಬಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

