ಅಧ್ಯಯನ ವರದಿ: ಮಲಗುವ ಮೊದಲು ಆಹಾರ ಸೇವಿಸಿದರೆ ತೂಕ ಹೆಚ್ಚಳ!

By: Hemanth
Subscribe to Boldsky

ತಿನ್ನುವಂತಹ ಆಹಾರ ಹಾಗೂ ಅದನ್ನು ತಿನ್ನುವ ಸಮಯವು ತುಂಬಾ ಮಹತ್ವದ್ದಾಗಿರುವುದು. ಇದೆರಡರ ಮೇಲೆ ಆರೋಗ್ಯವು ನಿರ್ಭರವಾಗಿರುವುದು. ಅಧ್ಯಯನಗಳ ಪ್ರಕಾರ ತಡರಾತ್ರಿ ವೇಳೆ ತಿಂಡಿತಿನಿಸು ತಿಂದರೆ ಅದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಏನು ತಿನ್ನುತ್ತಿದ್ದೀರಿ ಎನ್ನುವುದರೊಂದಿಗೆ ಯಾವ ಸಮಯದಲ್ಲಿ ತಿನ್ನುತ್ತಿದ್ದೀರಿ ಎನ್ನುವುದು ಮುಖ್ಯವಾಗಿದೆ. ತಿನ್ನುವ ಸಮಯ ನಿಮ್ಮ ತೂಕ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

eating fast food

ಮಲಗುವ ಮೊದಲು ಆಹಾರ ಸೇವಿಸಿದರೆ ಅದರಿಂದ ತೂಕ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ಹೇಳಿವೆ. ಸಂಶೋಧನೆಗಳ ಪ್ರಕಾರ ದೇಹವು ಉತ್ಪಾದಿಸುವಂತಹ ನಿದ್ರಾ ಹಾರ್ಮೋನು ಮೆಲಟೋನಿನ್ ಮತ್ತು ಬಿಎಂಐ ಮಧ್ಯೆ ಸಂಬಂಧವಿದೆ. ಮಲಗುವ ಸ್ವಲ್ಪ ಹೊತ್ತಿನ ಮೊದಲು ಆಹಾರ ಸೇವಿಸುವವರಲ್ಲಿ ಬಿಎಂಐ ಮತ್ತು ಕೊಬ್ಬಿನ ಪ್ರಮಾಣವು ಮಲಗುದಕ್ಕಿಂತ ತುಂಬಾ ಹೊತ್ತಿನ ಮೊದಲು ಆಹಾರ ಸೇವಿಸುವವರಿಗಿಂತ ಹೆಚ್ಚಿರುವುದು ಎಂದು ಅಧ್ಯಯನಗಳು ಹೇಳಿವೆ.

ಮನುಷ್ಯನ ಜೈವಿಕ ಗಡಿಯಾರ ತಯಾರಿಸುವಂತಹ ಮೆಲಟೋನಿನ್ ಮೇಲೆ ಆಹಾರ ಸೇವನೆಯು ಸಂಬಂಧ ಹೊಂದಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಇದು ದೇಹದಲ್ಲಿ ಹೆಚ್ಚಿನ ಕೊಬ್ಬು ಮತ್ತು ಬಿಎಂಐಯೊಂದಿಗೆ ಸಂಬಂಧ ಹೊಂದಿದೆ. ತೂಕ ಹೆಚ್ಚಳವಾಗಲು ಸಾಮಾನ್ಯ ಸಮಯಕ್ಕಿಂತಲೂ ಜೈವಿಕ ಗಡಿಯಾರವು ಹೆಚ್ಚು ಪರಿಣಾಮ ಬೀರುವುದು. 

eating fast food

ಮಲಗುವ ಸ್ವಲ್ಪ ಮೊದಲು ಊಟ ಮಾಡಿದರೆ ಅದರಿಂದ ತೂಕ ಹೆಚ್ಚಳವಾಗುವ ಸಾಧ್ಯತೆಯಿದೆ. ಯಾವ ಸಮಯದಲ್ಲಿ ಆಹಾರ ಸೇವಿಸಿದ್ದೀರಿ ಎನ್ನುವುದು ಇದನ್ನು ಅವಲಂಬಿಸಲ್ಲ. ಈ ಅಧ್ಯಯನವನ್ನು ಯುವ ವಿದ್ಯಾರ್ಥಿಗಳ ಮೇಲೆ ನಡೆಸಲಾಗಿದೆ. ಆಹಾರ ಮತ್ತು ಜೈವಿಕ ಗಡಿಯಾರದ ಲಯವು ಸಂಪೂರ್ಣ ಜನಸಂಖ್ಯೆಯನ್ನು ಅವಲಂಬಿಸಿಲ್ಲ.

English summary

Eating At This Time Can Make You Gain Weight

Research suggests that it is high time to ditch the late-night snacks, as you will be more likely to gain weight. The time that you eat the food is more important, and it is as important as what you're eating. The time at which you eat can either make or break your weight.
Story first published: Monday, September 25, 2017, 23:45 [IST]
Subscribe Newsletter