For Quick Alerts
ALLOW NOTIFICATIONS  
For Daily Alerts

ಕಾರಣವಿಲ್ಲದೇ ಸುಸ್ತಾಗುತ್ತಿದೆಯೇ? ಹಾಗಾದರೆ ಇದೆಲ್ಲಾ ಕಾರಣವಿರಬಹುದು!

By Arshad
|

ಒಂದು ವೇಳೆ ನಿಮಗೆ ಇಡಿಯ ದಿನ ಸಕಾರಣವಿಲ್ಲದೇ ಸುಸ್ತು ಆವರಿಸಿದ್ದರೆ ಈ ಲೇಖನವನ್ನು ಓದುವುದು ನಿಮಗೆ ಆಗತ್ಯವಾಗಿದೆ. ಅದರಲ್ಲೂ ದಿನವಿಡೀ ತೂಕಡಿಕೆ ಅನವರತವಾಗಿ ಆವರಿಸುತ್ತಲೇ ಇದ್ದರೆ ಇದು ನಿಮ್ಮ ಆರೋಗ್ಯದ ಯಾವುದೋ ಏರುಪೇರನ್ನು ಸೂಚಿಸುತ್ತಿದೆ.

ಪ್ರತಿದಿನವೂ ಸಾಕಷ್ಟು ಗಾಢನಿದ್ದೆಯನ್ನು ಪಡೆಯುವುದು ಒಟ್ಟಾರೆ ಆರೋಗ್ಯಕ್ಕೆ ಎಷ್ಟು ಉತ್ತಮವೆಂಬುದು ನಿಮಗೆ ಗೊತ್ತೇ ಇದೆ. ಒಂದು ದಿನಕ್ಕೆ ಎಂಟು ಘಂಟೆಗಳ ಕಾಲ ಗಾಢನಿದ್ದೆ ಪಡೆಯುವ ಮೂಲಕ ದೇಹ ಮರುದಿನ ಪೂರ್ಣ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. ಅಲ್ಲದೇ ತೂಕ ಇಳಿಸಬೇಕಾದರೂ ಇಷ್ಟು ನಿದ್ದೆ ಅಗತ್ಯ. ಆದರೆ ಒಂದು ವೇಳೆ ಚೆನ್ನಾಗಿ ನಿದ್ದೆ ಮಾಡಿದ ಬಳಿಕವೂ ದಿನವಿಡೀ ಸುಸ್ತು ಆವರಿಸಿದಂತಿದ್ದರೆ ಈ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಏಕೆಂದರೆ ಆರೋಗ್ಯದಲ್ಲಿ ಯಾವುದೇ ಏರುಪೇರಾಗದ ಹೊರತು ಈ ಪರಿಯ ಸುಸ್ತು ಖಂಡಿತಾ ಆವರಿಸುವುದಿಲ್ಲ.

ದಿನವಿಡೀ ಸುಸ್ತು ಇರುವುದನ್ನು ಒಂದು ಮಾಹಿತಿಯಾಗಿ ಪಡೆಯುವ ವೈದ್ಯರು ಇದಕ್ಕೆ ಕಾರಣಗಳಲ್ಲಿ ಹುಡುಕಲು ಸಾಮಾನ್ಯವಾಗಿ ಎಡವುತ್ತಾರೆ. ಏಕೆಂದರೆ ಸುಸ್ತು ಆವರಿಸಲು ಕೆಲವಾರು ಕಾರಣಗಳಿವೆ. ಇದರೊಂದಿಗೆ ಆವರಿಸುವ ಸ್ನಾಯುಗಳ ನೋವು, ನಿಃಶಕ್ತಿ ಹಾಗೂ ಸಂಧುಗಳಲ್ಲಿ ನೋವು ಸಹಾ ವೈದ್ಯರಿಗೆ ಸೂಕ್ತ ಕಾರಣಗಳನ್ನು ಹುಡುಕಲು ಜಟಿಲವಾಗಿಸುತ್ತವೆ. ಇದದೊಂದಿಗೆ ಕೆಲಸದ ಗತಿಯಲ್ಲಿ ಹಿಂದೆ ಬೀಳುವುದು, ಇಡಿಯ ದಿನದಲ್ಲಿ ಯಾವುದೇ ಕೆಲಸ ಮಾಡಲು ಆಸಕ್ತಿಯೇ ಇರುವುದು ಸಹಾ ಈ ಸಮಸ್ಯೆಯನ್ನು ಇನ್ನಷ್ಟು ಜಟಿಲವಾಗಿಸುತ್ತವೆ. ಇದಕ್ಕೆ ಕಾರಣವಾಗಿರಬಹುದಾದ ಕೆಲವು ಸಾಧ್ಯತೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಇವುಗಳು ನಿಮ್ಮ ನಿಃಶಕ್ತಿಗೆ ಸೂಕ್ತ ಕಾರಣ ಕಂಡುಕೊಳ್ಳಲು ನೆರವಾಗಬಹುದು.

ನಿಮಗೆ ರಕ್ತಹೀನತೆ ಆವರಿಸಿದೆ: ಒಂದು ವೇಳೆ ದಿನವಿಡೀ ಸುಸ್ತು ಆವರಿಸಿದ್ದರೆ ಇದಕ್ಕೆ ರಕ್ತಹೀನತೆ ಪ್ರಮುಖ ಕಾರಣವಾಗಿರಬಹುದು. ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಇದ್ದರೆ ಇದರಿಂದ ಕೆಂಪುರಕ್ತಕಣಗಳೂ ಕಡಿಮೆಯಾಗುತ್ತವೆ. ಪರಿಣಾಮವಾಗಿ ಆಮ್ಲಜನಕವನ್ನು ಜೀವಕೋಶಗಳವರೆಗೆ ಕೊಂಡೊಯ್ಯಲು ಕೆಂಪುರಕ್ತಗಣಗಳ ಸಂಖ್ಯೆ ಕಡಿಮೆ ಇರುವ ಕಾರಣ ತಲುಪುವ ಆಮ್ಲಜನಕವೂ ಕಡಿಮೆಯಾಗಿ ಪೂರ್ಣ ಕ್ಷಮತೆಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಸುಸ್ತು ಆವರಿಸುತ್ತದೆ...

ನಿಮಗೆ ಖಿನ್ನತೆ ಆವರಿಸಿದೆ

ನಿಮಗೆ ಖಿನ್ನತೆ ಆವರಿಸಿದೆ

ಖಿನ್ನತೆಯ ಪರಿಣಾಮವಾಗಿ ಮಾನಸಿಕವಾಗಿ ಕುಗ್ಗುವುದು ಮಾತ್ರವಲ್ಲ, ವ್ಯಕ್ತಿಯನ್ನು ದೈಹಿಕವಾಗಿಯೂ ನಿತ್ರಾಣಗೊಳಿಸುತ್ತದೆ. ಜೊತೆಗೇ ಸ್ನಾಯುಗಳ ನೋವು, ನಿದ್ದೆ ಆವರಿಸಲು ತೊಂದರೆಯಾಗುವುದು ಮೊದಲಾದವುಗಳೂ ಎದುರಾದರೆ ನಿಮಗೆ ತಕ್ಷಣ ವೈದ್ಯರನ್ನು ಭೇಟಿಯಾಗುವ ಅಗತ್ಯವಿದೆ.

ನೀವು ಅಗತ್ಯವಿದ್ದಷ್ಟು ವ್ಯಾಯಾಮ ಮಾಡುತ್ತಿಲ್ಲ

ನೀವು ಅಗತ್ಯವಿದ್ದಷ್ಟು ವ್ಯಾಯಾಮ ಮಾಡುತ್ತಿಲ್ಲ

ದೇಹವನ್ನು ನಿತ್ಯವೂ ಕನಿಷ್ಠ ಪ್ರಮಾಣದಲ್ಲಿಯಾದರೂ ದಂಡಿಸುವುದು ಆರೋಗ್ಯಕ್ಕೆ ಅಗತ್ಯವಾಗಿದೆ. ಸಾಕಷ್ಟು ವ್ಯಾಯಾಮದ ಮೂಲಕ ದೇಹ ಚಟುವಟಿಕೆಯಿಂದ ಹಾಗೂ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ವ್ಯಾಯಾಮದಿಂದ ಜೀವಕೋಶಗಳ ಒಳಗೆ ಹೊಸದಾದ ಮೈಟೋಕಾಂಡ್ರಿಯಾ ಎಂಬ ಭಾಗ ಹೊಸದಾಗಿ ಉತ್ಪತ್ತಿಯಾಗಲು ನೆರವಾಗುತ್ತದೆ. ಇದು ಜೀವಕೋಶಗಳ ಮಟ್ಟದಿಂದ ದೇಹಕ್ಕೆ ಹೆಚ್ಚಿನ ಚೇತನವನ್ನು ನೀಡುತ್ತದೆ.

ನೀವು ಮಧುಮೇಹಿಗಳಾಗಿರಬಹುದು

ನೀವು ಮಧುಮೇಹಿಗಳಾಗಿರಬಹುದು

ವಿಶೇಷವಾಗಿ ಟೈಪ್ 2 ಮಧುಮೇಹವಿರುವ ವ್ಯಕ್ತಿಗಳ ದೇಹದಲ್ಲಿ ಸಾಕಷ್ಟು ಸಕ್ಕರೆ ಲಭ್ಯವಿದ್ದರೂ ಇದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗುತ್ತವೆ. ತನ್ಮೂಲಕ ಈ ಸಕ್ಕರೆ ಶಕ್ತಿಯಾಗಿ ಪರಿವರ್ತಿತವಾಗದೇ ದೇಹಕ್ಕೆ ಹೆಚ್ಚಿನ ಶ್ರಮದ ಕೆಲಸ ಮಾಡಲು ಸಾಧ್ಯವಾಗದೇ ಸುಸ್ತು ಆವರಿಸಿ ಇಡಿಯ ದಿನ ಹಾಗೇ ಇರುತ್ತದೆ.

ನಿಮ್ಮ ಥೈರಾಯ್ಡ್ ಗ್ರಂಥಿಗಳ ಕ್ಷಮತೆ ಕುಂದಿದೆ

ನಿಮ್ಮ ಥೈರಾಯ್ಡ್ ಗ್ರಂಥಿಗಳ ಕ್ಷಮತೆ ಕುಂದಿದೆ

ನಿತ್ಯದ ಹತ್ತು ಹಲವು ಕೆಲಸಗಳು ಸೂಕ್ತವಾಗಿ ಕಾರ್ಯನಿರ್ವಹಿಸಬೇಕಾದರೆ ಥೈರಾಯ್ಡ್ ಗ್ರಂಥಿಯೂ ರಸದೂತಗಳನ್ನು ಸ್ರವಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಥೈರಾಯ್ಡ್ ಗ್ರಂಥಿಯ ಕ್ಷಮತೆ ಕುಂದಿದ್ದರೆ ಇದು ಸಾಕಷ್ಟು ಪ್ರಮಾಣದ ರಸದೂತವನ್ನು ಉತ್ಪಾದಿಸಲು ಸಾಧ್ಯವಾಗದೇ ಅಥವಾ ನಿಯಂತ್ರಣಕ್ಕೆ ಸಿಗದ ಪ್ರಮಾಣದಲ್ಲಿ ಉತ್ಪತ್ತಿಗೊಳಿಸಿ ಶಕ್ತಿಹೀನತೆಯನ್ನು ಎದುರಿಸಬೇಕಾಗುತ್ತದೆ.

ನೀವು ಅಗತ್ಯವಿದ್ದಷ್ಟು ಕ್ಯಾಲೋರಿಗಳನ್ನು ಸೇವಿಸುತ್ತಿಲ್ಲ

ನೀವು ಅಗತ್ಯವಿದ್ದಷ್ಟು ಕ್ಯಾಲೋರಿಗಳನ್ನು ಸೇವಿಸುತ್ತಿಲ್ಲ

ನಿಮ್ಮ ನಿತ್ಯದ ಚಟುವಟಿಕೆಗಳಿಗೆ ಸಾಕಷ್ಟು ಪ್ರಮಾಣದ ಕ್ಯಾಲೋರಿಗಳೂ ಅಗತ್ಯ. ಒಂದು ವೇಳೆ ನಿಮ್ಮ ಆಹಾರದ ಮೂಲಕ ಸಾಕಷ್ಟು ಕ್ಯಾಲೋರಿಗಳು ಲಭ್ಯವಾಗದೇ ಇದ್ದರೆ ನಿಮಗೆ ಇಡಿಯ ದಿನ ಸುಸ್ತು ಆವರಿಸುತ್ತದೆ.

ನೀವು ಹೆಚ್ಚು ಸಕ್ಕರೆ ಸೇವಿಸುತ್ತಿದ್ದೀರಿ

ನೀವು ಹೆಚ್ಚು ಸಕ್ಕರೆ ಸೇವಿಸುತ್ತಿದ್ದೀರಿ

ಒಂದು ದಿನಕ್ಕೆ ಅಗತ್ಯವಿರುವ ಸಕ್ಕರೆಯ ಪ್ರಮಾಣಕ್ಕೂ ಹೆಚ್ಚು (37.5ಗ್ರಾಂ ಪುರುಷರಿಗೆ, 25 ಗ್ರಾಂ ಮಹಿಳೆಯರಿಗೆ) ಸಕ್ಕರೆಯನ್ನು ಸೇವಿಸಿದರೆ ಇದು ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಗತ್ಯಕ್ಕೂ ಹೆಚ್ಚು ಸಕ್ಕರೆ ಇದ್ದರೆ ಇದನ್ನು ಹೀರಿಕೊಳ್ಳಲು ಸಾಧ್ಯವಾಗದೇ ಅಂಗಗಳು ಕುಸಿಯುತ್ತವೆ. ಇದು ಸುಸ್ತು ಹಾಗೂ ತಲೆಸುತ್ತುವಿಕೆಗೆ ಕಾರಣಾವಾಗಿದೆ.

ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ

ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ

ಒಂದು ವೇಳೆ ಇಡಿಯ ದಿನ ಸುಸ್ತು ಆವರಿಸಿದ್ದರೆ ನೀವು ಟೀ ಅಥವಾ ಕಾಫಿ ಕುಡಿಯುವ ಬಗ್ಗೆ ಯೋಚಿಸುತ್ತಿದ್ದರೆ ಇದು ಖಂಡಿತಾ ತಪ್ಪು ಆಲೋಚನೆಯಾಗಿದೆ. ದಿನದ ಅಗತ್ಯದ ನೀರನ್ನು ಸ್ವಚ್ಛ ನೀರೇ ಪೂರೈಸಬಲ್ಲುದೇ ಹೊರತು ಬೇರಾವ ಪೇಯವೂ ಈ ಕೊರತೆಯನ್ನು ನೀಗಿಸಲಾಗದು. ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಟ 64 ಔನ್ಸ್‌ಗಳಷ್ಟು ನೀರು ಕುಡಿಯಲೇಬೇಕು. ಸಾಕಷ್ಟು ನೀರು ಕುಡಿಯದೇ ಇದ್ದರೆ, ಇಷ್ಟೇ ಪ್ರಮಾಣದ ಇತರ ಪಾನೀಯ ಕುಡಿದರೂ ನೀರು ದೇಹಕ್ಕೆ ಲಭ್ಯವಾಗದೇ ಇಡಿಯ ದಿನ ನಿತ್ರಾಣ ಆವರಿಸುತ್ತದೆ.

English summary

Do You Feel Tired Always? Then, Here Are The Health Reasons

It could be a case of constant fatigue that has many doctors stumped and one of the symptoms is feeling tired all the time. Weakness, muscle and joint pain also come along with it. Apart from this, there are a couple of other medical disorders that can be the reason behind you feeling lethargic and tired all day long. Here, we have listed some of the main reasons for you feeling tired all the time. Read further to find out more!
Story first published: Thursday, September 14, 2017, 20:16 [IST]
X
Desktop Bottom Promotion