For Quick Alerts
ALLOW NOTIFICATIONS  
For Daily Alerts

ಪಾದದ ಬಿರುಕಿಗೆ ಕೆಲವೊಂದು ಆರೋಗ್ಯದ ಸಮಸ್ಯೆಯೇ ಕಾರಣ!

By Arshad
|

ಪಾದಗಳ ಹಿಮ್ಮಡಿಯಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಒಣಚರ್ಮ ಹಾಗೂ ದಿನದ ಹೆಚ್ಚು ಹೊತ್ತು ನಿಂತೇ ಇರುವ ಕಾರಣ ಎದುರಾಗುವ ಒತ್ತಡ ಪ್ರಮುಖ ಕಾರಣಗಳಾಗಿವೆ. ಬಿರುಕು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತದೆ, ಆದರೆ ಸ್ಥೂಲದೇಹಿಗಳಲ್ಲಿ ದೇಹದ ಹೆಚ್ಚಿನ ಭಾರದ ಕಾರಣ ಕೊಂಚ ಹೆಚ್ಚೇ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಹಿಮ್ಮಡಿಯಲ್ಲಿ ತೆರೆದಿರುವ ಪಾದರಕ್ಷೆಯನ್ನು ತೊಡುವುದರಿಂದ ಕಿರಿದಾಗಿದ್ದ ಬಿರುಕುಗಳು ಹೆಚ್ಚಬಹುದು.

ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಸರಳ ಮನೆಮದ್ದುಗಳು

ಇದರ ಹೊರತಾಗಿ ಚರ್ಮದ ವ್ಯಾಧಿಗಳಾದ ಸೋರಿಯಾಸಿಸ್, ಎಕ್ಸಿಮಾ, ಅಥ್ಲೀಟ್ಸ್ ಫುಟ್ ಹಾಗೂ ತೆಳುವಾದ ಪದರವೇಳುವ juvenile plantar dermatosis ಎಂಬ ಸ್ಥಿತಿಯೂ ಬಿರುಕುಗಳಿಗೆ ಕಾರಣವಾಗಬಹುದು. ಬಿರುಕುಗಳ ಅಂಚುಗಳು ಸಿಪ್ಪೆಯಂತೆ ಸುಲಿಯಲು ಬಿಸಿಲಿನ ಝಳವೂ ಕಾರಣವಾಗಬಹುದು....

ಬಿರುಕುಗಳಿಗೆ ಪ್ರಮುಖ ಕಾರಣಗಳು

ಬಿರುಕುಗಳಿಗೆ ಪ್ರಮುಖ ಕಾರಣಗಳು

ಪಾದಗಳಲ್ಲಿ ಬಿರುಕು ಬಿಡುವುದರಿಂದ ಪ್ರಾರಂಭದಲ್ಲಿ ನೋವಿನ ಅನುಭವವಾಗದೇ ಇದ್ದರೂ ಸೌಂದರ್ಯವನ್ನು ಕುಗ್ಗಿಸುವುದಂತೂ ಖಚಿತ. ಆದರೆ ಬಿರುಕುಗಳು ಕೊಂಚ ಆಳಕ್ಕಿಳಿಯುತ್ತಿದ್ದಂತೆಯೇ ಚರ್ಮದ ಒಳಪದರದ ರಕ್ತನಾಳಗಲು ಸುಲಭವಾಗಿ ಒಡೆಯುವ ಮೂಲಕ ನೋವು ಕಾಣಿಸಿಕೊಳ್ಳುತ್ತದೆ. ನಡೆಯುವಾಗ ಪಾದಗಳ ಮೇಲೆ ಭಾರ ಬಿದ್ದಾಕ್ಷಣ ಭಾರೀ ನೋವು ಎದುರಾಗುತ್ತದೆ.

ಒಣಚರ್ಮ

ಒಣಚರ್ಮ

ಪಾದದ ಚರ್ಮ ನಮ್ಮ ದೇಹದಲ್ಲಿಯೇ ಅತಿ ದಪ್ಪನಾದ ಚರ್ಮವಾಗಿದ್ದು ಸ್ವಾಭಾವಿಕವಾಗಿ ಹೆಚ್ಚಿನ ಆರ್ದತೆಯ ಅಗತ್ಯವಿದೆ. ಯಾವುದೋ ಕಾರಣದಿಂದ ಚರ್ಮ ಆರ್ದ್ರತೆ ಹಾಗೂ ಅವಶ್ಯಕ ತೈಲಗಳನ್ನು ಕಳೆದುಕೊಂಡರೆ ಚರ್ಮ ತೀರಾ ಒಣಗಿ ಸುಲಭವಾಗಿ ಬಿರುಕು ಬಿಡುತ್ತದೆ.

ಪಾದಗಳ ಮೇಲೆ ಹೆಚ್ಚಿನ ಒತ್ತಡ

ಪಾದಗಳ ಮೇಲೆ ಹೆಚ್ಚಿನ ಒತ್ತಡ

ಒಂದು ವೇಳೆ ಒಣಚರ್ಮದ ಮೇಲೆ ಹೆಚ್ಚಿನ ಒತ್ತಡ ಹೇರಿದರೆ ಚರ್ಮ ಹಿಗ್ಗದೇ ಬಿರುಕು ಬಿಡುತ್ತದೆ. ಹಸಿ ಹಪ್ಪಳವನ್ನು ಅತ್ತಿತ್ತ ಎಳೆದರೆ ಕೊಂಚ ಹಿಗ್ಗುತ್ತದೆ. ಆದರೆ ಹುರಿದ ಹಪ್ಪಳವನ್ನು ಎಳೆದರೆ ತುಂಡಾಗುತ್ತದೆ ಅಲ್ಲವೇ, ನಮ್ಮ ಚರ್ಮವೂ ಹೀಗೇ, ಆರ್ದ್ರತೆಯಿಲ್ಲದೇ ಒಣಗಿ ಗಟ್ಟಿಯಾಗಿದ್ದರೆ ಕೊಂಚ ಹೆಚ್ಚಿನ ಒತ್ತಡ ಬಿದ್ದರೂ ಸುಲಭವಾಗಿ ಬಿರುಕು ಬಿಡುತ್ತದೆ.

ಅಥ್ಲೀಟ್ಸ್ ಫುಟ್

ಅಥ್ಲೀಟ್ಸ್ ಫುಟ್

ಸಾಮಾನ್ಯವಾಗಿ ಕ್ರೀಡಾಪಟುಗಳು ಹೆಚ್ಚಿನ ಹೊತ್ತು ಕಾಲುಚೀಲಗಳನ್ನು ಧರಿಸಿಯೇ ಇದ್ದು ಬೆವರು ಹೆಚ್ಚು ಸಾಂದ್ರೀಕೃತಗೊಳ್ಳುವ ಕಾರಣ ಶಿಲೀಂಧ್ರದ ಸೋಂಕು ಇತರರಿಗಿಂತ ಇವರಲ್ಲಿಯೇ ಹೆಚ್ಚಾಗಿ ಕಂಡುಬರುವ ಕಾರಣ ಈ ಹೆಸರು ಬಂದಿದೆ. ಈ ಸೋಂಕು ಸುಲಭವಾಗಿ ಹರಡುವ ಕಾರಣ ಇವರು ತೊಟ್ಟ ಕಾಲುಚೀಲ, ಪಾದರಕ್ಷೆಗಳು ಇತರರ ಕಾಲುಚೀಲ, ಬಟ್ಟೆಗಳ ಮೂಲಕ ಇತರರಿಗೆ ಹರಡಬಹುದು.

ಸೋರಿಯಾಸಿಸ್

ಸೋರಿಯಾಸಿಸ್

ಚರ್ಮದ ಮೇಲಿನ ಪದರದ ಮೇಲೆ ಕೆಂಪು ಅಥವಾ ಗುಲಾಬಿ ಬಣ್ಣದ ಹುರುಪೆ, ಪಕಳೆ ಎದ್ದಂತೆ ಮೇಲ್ಪದರ ಪ್ರತ್ಯೇಕವಾಗಿ ಬರುವುದು ಸೋರಿಯಾಸಿಸ್ ವ್ಯಾಧಿಯ ಲಕ್ಷಣವಾಗಿದೆ. ಈ ವ್ಯಾಧಿ ಆವರಿಸಿದ ಪಾದಗಳು ಸುಲಭವಾಗಿ ಬಿರುಕು ಬಿಡುತ್ತವೆ.

ಎಕ್ಸಿಮಾ

ಎಕ್ಸಿಮಾ

ಒಂದು ವೇಳೆ ಚರ್ಮ ಊದಿದಂತಿದ್ದು ತುರಿಕೆಯಿಂದ ಕೂಡಿದ್ದರೆ ಇದಕ್ಕೆ ಎಕ್ಸಿಮಾ ಎಂಬ ಚರ್ಮವ್ಯಾಧಿ ಕಾರಣವಿರಬಹುದು. ಇದರ ಪರಿಣಾಮವಾಗಿ ಚರ್ಮ ಒಣಗಿ ಕೆಂಪಗಾಗುತ್ತದೆ ಹಾಗೂ ಬಿರುಕುಗಳು ಕಾಣಿಸಿಕೊಂಡು ಬಿರುಕು ಬಿಡುತ್ತದೆ. ಈ ಸ್ಥಿತಿಗೆ ಕೆಲವಾರು ಕಾರಣಗಳಿವೆ, ಮಾನಸಿಕ ಒತ್ತಡ, ಅಲರ್ಜಿಕಾರಕ ಸೋಪು, ಆಹಾರದ ಅಲರ್ಜಿಗಳು ಹಾಗೂ ವಾತಾವರಣವೂ ಈ ಸ್ಥಿತಿಗೆ ಕಾರಣವಾಗಬಹುದು.

Juvenile Plantar Dermatosis

Juvenile Plantar Dermatosis

ಈ ಚರ್ಮವ್ಯಾಧಿ ವಿಶೇಷವಾಗಿ ಪುಟ್ಟ ಮಕ್ಕಳನ್ನು ಕಾಡುತ್ತದೆ. ಈ ಸ್ಥಿತಿಯಲ್ಲಿ ಪಾದದ ಚರ್ಮದ ಹೊರಪದರ ತೆಳುವಾಗಿ ಕೆಂಪು ಅಥವಾ ಗುಲಾಬಿ ಬಣ್ಣದಿಂದ ಕೂಡಿದ್ದು ಹೊಳೆಯುವ ಪದರದಂತೆ ಕಾಣಿಸುತ್ತದೆ. ಪಾದದ ಬೆವರು ಹಾಗೂ ತೆರೆದ ಚಪ್ಪಲಿಗಳನ್ನು ತೊಡುವ ಮೂಲಕ ಈ ಸ್ಥಿತಿ ಉಲ್ಬಣಗೊಳ್ಳುತ್ತದೆ. ಈ ವ್ಯಾಧಿ ಪಾದಗಳಲ್ಲಿ ಬಿರುಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಬಿಸಿಲಿನ ಝಳ

ಬಿಸಿಲಿನ ಝಳ

ಸೂರ್ಯನ ಕಿರಣಗಳ ಅತಿನೇರಳೆ ಕಿರಣಗಳು ಚರ್ಮಕ್ಕೆ ಎಷ್ಟು ಅಪಾಯಕಾರಿಯಾಗಿದೆ ಎಂದು ನಮಗೆಲ್ಲಾ ತಿಳಿದೇ ಇದೆ. ಬಿಸಿಲಿನಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುವ ಮೂಲಕ ಚರ್ಮವೂ ಒಣಗಿ ಕೆಂಪಗಾಗುತ್ತದೆ ಹಾಗೂ ಸಿಪ್ಪೆಯೇಳುತ್ತದೆ. ಇದು ಸಹಾ ಬಿರುಕಿಗೆ ಕಾರಣವಾಗುತ್ತದೆ.

English summary

causes-of-cracked-heel-have-something-to-do-with-your-health-read-to-find-out

Cracked feet is not just an eye sore. If deep fissures and cracks develop, they can make standing and walking painful and even unbearable for you.If germs enter through the breaks in the skin, then they can cause infections as well.
X
Desktop Bottom Promotion