ದೇಹ ನೀಡುವ ಈ ಸೂಚನೆಗಳನ್ನು ಯಾವತ್ತೂ ನಿರ್ಲಕ್ಷಿಸಬೇಡಿ!

By Arshad
Subscribe to Boldsky

ನಿಸರ್ಗದ ಸೃಷ್ಟಿಯಲ್ಲಿ ಅತಿ ಕ್ಲಿಷ್ಟಕರ, ಸಂಕೀರ್ಣವಾದ ಸೃಷ್ಟಿ ಎಂದರೆ ಮಾನವ ದೇಹ. ಇದರ ಅತ್ಯಂತ ದೊಡ್ಡ ಪವಾಡವೆಂದರೆ ಗುಣಪಡಿಸಿಕೊಳ್ಳುವ ಶಕ್ತಿ. ಮಾನವನಿರ್ಮಿತ ವಸ್ತುಗಳಲ್ಲಿ ಯಾವುದೇ ತೊಂದರೆಯಾದರೆ ಸೂಚನೆ ನೀಡುವಂತೆ ಅಥವಾ ಸ್ಥಗಿತಗೊಳ್ಳುವಂತೆ ನಿರ್ಮಿಸಿರಲಾಗಿರುತ್ತದೆ. ಅಂತೆಯೇ ನಮ್ಮ ದೇಹವೂ ಯಾವುದೋ ತೊಂದರೆಯಾದರೆ ಕೆಲವು ಸೂಚನೆಗಳನ್ನು ನೀಡುತ್ತವೆ. ಅತಿ ಸಾಮಾನ್ಯ ಸೂಚನೆ ಎಂದರೆ ನೋವು.

ಎಲ್ಲಿಯವರೆಗೆ ಈ ನೋವು ಭರಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ನಾವು ಇವನ್ನು ಅಲಕ್ಷಿಸಿಬಿಡುತ್ತೇವೆ. ಇದೇ ನಾವು ಮಾಡುವ ಅತಿ ದೊಡ್ಡ ತಪ್ಪು! ಕೆಲವು ಸೂಚನೆಗಳು ಆರೋಗ್ಯವನ್ನೇ ಪಣವಾಗಿಡುವಷ್ಟು ಸೂಕ್ಷ್ಮವಾಗಿದ್ದು ಇವನ್ನು ಮಾತ್ರ ಯಾವುದೇ ಕಾರಣಕ್ಕೂ ಅಲಕ್ಷಿಸಕೂಡದು.

ಸಾಮಾನ್ಯವಾಗಿ ಈ ಅಲಕ್ಷ್ಯಕ್ಕೆ ನಮ್ಮಲ್ಲಿ ಈ ಬಗ್ಗೆ ತಿಳಿವಳಿಕೆ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ. ಈ ಸೂಚನೆಗಳು ನಮಗೆ ಗೊತ್ತಿಲ್ಲದ ಕೆಲವಾರು ಮಾಹಿತಿಗಳನ್ನು ಸೂಚ್ಯವಾಗಿ ಪ್ರಕಟಿಸಿರುತ್ತಿರುತ್ತವೆ. ವಾಸ್ತವವಾಗಿ ವೈದ್ಯರು ನಮ್ಮಲ್ಲಿ ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳುವುದೂ ಈ ಸೂಚನೆಗಳನ್ನೇ! ನಾವು ಸರ್ವಥಾ ಅಲಕ್ಷಿಸಕೂಡದ ಕೆಲವು ಸೂಚನೆಗಳ ಬಗ್ಗೆ ಇಂದಿನ ಲೇಖನದಲ್ಲಿ ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಲಾಗಿದೆ...

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳು

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳು

ಈ ವರ್ತುಲಗಳಿಗೆ ಮುಖ್ಯ ಕಾರಣವೆಂದರೆ ಸಾಕಷ್ಟು ನಿದ್ದೆ ಇಲ್ಲದಿರುವುದು. ಪ್ರತಿಯೊಬ್ಬರಿಗೂ ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲವಾದರೂ ನಿದ್ದೆ ಬೇಕಾಗಿರುತ್ತದೆ. ಆದರೆ ಆರು ಗಂಟೆಗೂ ಕಾಲ ಸತತವಾಗಿ ನಿದ್ದೆ ಮಾಡಿದ್ದರೆ ಈ ವರ್ತುಲಗಳು ಉಂಟಾಗುತ್ತವೆ. ಅಲ್ಲದೇ ರಕ್ತಹೀನತೆಯೂ ಈ ವರ್ತುಲಗಳಿಗೆ ಇನ್ನೊಂದು ಮುಖ್ಯ ಕಾರಣವಾಗಿದೆ. ಈ ರೋಗಿಗಗಳ ರಕ್ತದಲ್ಲಿ ಸಾಕಷ್ಟು ಕೆಂಪುರಕ್ತಕಣಗಳಿಲ್ಲದೇ ಇರುವ ಕಾರಣ ಕಣ್ಣ ಕೆಳಗಿನ ಚರ್ಮ ಗಾಢವಾಗುತ್ತಾ ಹೋಗುತ್ತದೆ.

ಬೆರಳುಗಳ ಬಣ್ಣ ಬದಲಾಗುವುದು

ಬೆರಳುಗಳ ಬಣ್ಣ ಬದಲಾಗುವುದು

ಕೊಂಚ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಆಗಾಗ ಬೆರಳುಗಳ ಬಣ್ಣ ಸಾಮಾನ್ಯಕ್ಕಿಂತ ಬದಲಾಗುತ್ತಾ ಹೋಗುತ್ತಿದ್ದರೆ ಇದು ಗಂಭೀರವಾದ ತೊಂದರೆಯ ಪರಿಣಾಮವಾಗಿದೆ ಎಂದು ತಿಳಿದುಕೊಳ್ಳಬೇಕು. ಇದು Raynaud's syndrome ಅಂದರೆ ಕಡಿಮೆ ತಾಪಮಾನದಲ್ಲಿ ರಕ್ತನಾಳಗಳು ಸೆಡೆತಗೊಳ್ಳುವ ಕಾಯಿಲೆಯ ಲಕ್ಷಣವಾಗಿದೆ. ಈ ಕಾಯಿಲೆಯಿಂದ ದೇಹದ ಎಲ್ಲಾ ಭಾಗದ ಚರ್ಮವೂ ಬಣ್ಣಗೆಟ್ಟರೂ ದೇಹದ ತುದಿಭಾಗಗಳಾದ ಕೈ ಮತ್ತು ಕಾಲು ಬೆರಳುಗಳಲ್ಲಿ ಈ ಪರಿಣಾಮ ಗರಿಷ್ಟವಾಗಿ ಗೋಚರಿಸುತ್ತದೆ.

ದೃಷ್ಟಿ ಮಂಜಾಗುವುದು

ದೃಷ್ಟಿ ಮಂಜಾಗುವುದು

ಒಂದು ವೇಳೆ ನಿಮಗೆ ಕಣ್ಣುಗಳು ಸುಸ್ತಾಗಿದ್ದಂತೆ ಹಾಗೂ ಮುಂದಿನ ದೃಷ್ಟಿ ಮಂಜಾಗಿದ್ದಂತೆ ತೋರಿದ್ದರೆ, ಜನರನ್ನು ಗುರುತಿಸಲು ಕಷ್ಟವಾಗುತ್ತಿದ್ದರೆ ನಿಮಗೆ ಸಮೀಪ ದೃಷ್ಟಿಯ ತೊಂದರೆ ಎದುರಾಗಿರಬಹುದು.

ದೃಷ್ಟಿಯಲ್ಲಿ ನೀರಿನ ಬಿಂದುಗಳಂತೆ ಗೋಚರಿಸುವುದು

ದೃಷ್ಟಿಯಲ್ಲಿ ನೀರಿನ ಬಿಂದುಗಳಂತೆ ಗೋಚರಿಸುವುದು

ನಮಗೆಲ್ಲರಿಗೂ ಆಗಾಗ, ವಿಶೇಷವಾಗಿ ಬೆಳಿಗ್ಗೆ ನಿದ್ದೆಯಿಂದ ಎದ್ದ ಬಳಿಕ ಕಣ್ಣಿಗೆ ಕಾಣುವ ದೃಷ್ಟಿಯಲ್ಲಿ ಚಿಕ್ಕ ಚಿಕ್ಕ ವೃತ್ತಾಕಾರಗಳು ಗೋಚರಿಸುತ್ತವೆ ಹಾಗೂ ಇವು ಮೇಲಿನಿಂದ ಕೆಳಕ್ಕಿಳಿಯುತ್ತಿರುವಂತೆ ಅನ್ನಿಸುತ್ತದೆ. ಕೆಲವು ಬಾರಿ ಕಣ್ಣು ಮಿಟುಕಿಸಿದರೆ ಇವು ಮಾಯವಾಗುತ್ತವೆ. ಆದರೆ ಇವು ಕೊಂಚ ಗಾಢವಾಗಿದ್ದು ಚುಕ್ಕೆಗಳು ಅಥವಾ ಪಟ್ಟೆಯಂತೆ ದಿನವಿಡೀ ಕಾಣುತ್ತಿದ್ದು ನೀವು ನೋಡುವ ದೃಷ್ಟಿಗೆ ಅಡ್ಡವಾಗಿದ್ದಂತೆ ಅನ್ನಿಸಿದರೆ ಮಾತ್ರ ಇದು ಕಣ್ಣಿಗೆ ಸಂಬಂಧಪಟ್ಟ ತೊಂದರೆ ಅಥವಾ ಕ್ಯಾಟರಾಕ್ಟ್ ಆವರಿಸುತ್ತಿದೆ ಎಂಬುದ ಮುನ್ಸೂಚನೆಯಾಗಿದೆ.

ಹೊಟ್ಟೆಯಲ್ಲಿ ಗುಡುಗುಡು

ಹೊಟ್ಟೆಯಲ್ಲಿ ಗುಡುಗುಡು

ಆಗಾಗ ಹೊಟ್ಟೆಯಲ್ಲಿ ಇಲಿಯೊಂದು ಓಡಾಡಿದಂತೆ ಗುಡುಗುಡು ಸದ್ದಾಗುತ್ತದೆ. ಇದು ಕರುಳುಗಳ ಚಲನೆಯಿಂದ ಉಂಟಾಗುವ ಸದ್ದಾಗಿದ್ದು ಪ್ರತಿಯೊಬ್ಬರಿಗೂ ಆಗಾಗ ಅನುಭವವಾಗುತ್ತಲೇ ಇರುತ್ತದೆ. ಇದು ಸಾಮಾನ್ಯವಾಗಿದೆ. ಆದರೆ ಈ ಸದ್ದು ಪ್ರತಿದಿನವೂ ಎಂಬಂತೆ ಆಗುತ್ತಿದ್ದರೆ ಹಾಗೂ ಇದು ನೋವಿನಿಂದ ಕೂಡಿದ್ದರೆ ಮಾತ್ರ ಇದಕ್ಕೆ ಬೇರಾವುದೋ ಕಾರಣವಿದ್ದು ವೈದ್ಯರು ಸೂಕ್ತ ಪರೀಕ್ಷಿಯಿಂದ ಮಾತ್ರವೇ ಕಂಡುಕೊಳ್ಳಬಲ್ಲರು. ತಕ್ಷಣವೇ ಅಲಕ್ಷಿಸದೇ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಪರೆ ಏಳುವ ಚರ್ಮ

ಪರೆ ಏಳುವ ಚರ್ಮ

ಚರ್ಮದ ಹೊರಪದರ ಒಣಗಿ ಪರೆಯಂತೆ ಏಳುತ್ತಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್ನುಗಳ ಕೊರತೆ ಇದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ನಿಮ್ಮ ಆಹಾರದಲ್ಲಿ ಎಲ್ಲಾ ಪೋಷಕಾಂಶಗಳಿರುವಂತೆ ಸಮತೋಲನದ ಆಹಾರ ಸೇವಿಸುವ ಮೂಲಕ ಈ ತೊಂದರೆಯನ್ನು ನಿವಾರಿಸಬಹುದು. ಆದರೆ ಈ ಚರ್ಮ ಪರೆ ಎದ್ದ ಬಳಿಕ ತುರಿಕೆಯೂ ಇದ್ದರೆ ಮಾತ್ರ ತಕ್ಷಣವೇ ಚರ್ಮವೈದ್ಯರಲ್ಲಿ ತಪಾಸಣೆಗೊಳಪಡಬೇಕು.

ವಾಸನೆಯನ್ನು ಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದಿರುವುದು

ವಾಸನೆಯನ್ನು ಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದಿರುವುದು

ವಯಸ್ಸಾಗುತ್ತಿದ್ದಂತೆಯೇ ವಾಸನಾಗ್ರಹಣ ಶಕ್ತಿಯೂ ಮಂದವಾಗುತ್ತಾ ಹೋಗುತ್ತದೆ. ಇದು ನರವ್ಯವಸ್ಥೆ ಶಿಥಿಲವಾಗುತ್ತಿರುವ ಸೂಚನೆಯಾಗಿದೆ. ಆದರೆ ನೀವಿನ್ನೂ ಯುವಕರಾಗಿದ್ದು ಈ ಹಂತದಲ್ಲಿಯೇ ವಾಸನೆಯನ್ನು ಗ್ರಹಿಸುವ ಶಕ್ತಿ ಉಡುಗಿದ್ದರೆ ತಕ್ಷಣ ವೈದ್ಯರನ್ನು ಕಂಡು ತಪಾಸಣೆಗೊಳಪಡಬೇಕು. ಇದು ಭಾರೀ ಶೀತ ಅಥವಾ ವೈರಲ್ ಸೋಂಕಿನ ಪ್ರಭಾವವೂ ಆಗಿರಬಹುದು.

ಕಣ್ಣುರೆಪ್ಪೆ ಅದುರುವುದು

ಕಣ್ಣುರೆಪ್ಪೆ ಅದುರುವುದು

ನಮ್ಮೆಲ್ಲರಿಗೂ ಆಗಾಗ ಕಣ್ಣುಗಳು ಅದುರುತ್ತಲೇ ಇರುತ್ತವೆ. ಎಡಗಣ್ಣು ಅದುರಿದರೆ ಅಶುಭ, ಬಲಗಣ್ಣು ಅದುರಿದರೆ ಶುಭ ಎಂದೆಲ್ಲಾ ಹಿರಿಯರು ಹೇಳುತ್ತಲೇ ಇರುತ್ತಾರೆ. ಅಚ್ಚರಿ ಎಂದರೆ ಎರಡರಲ್ಲಿ ಒಂದು ಕಣ್ಣು ಮಾತ್ರವೇ ಅದುರುತ್ತದೆ. ಎರಡೂ ಕಣ್ಣುಗಳು ಒಂದೇ ಸಮಯದಲ್ಲಿ ಅದುರುವುದು ಅಪರೂಪ. ಹಾಗೂ ಈ ಅದುರುವಿಕೆ ಒಂದೆರಡು ನಿಮಿಷಕ್ಕೇ ಸೀಮಿತಗೊಂಡಿರುತ್ತದೆ. ಆದರೆ ಒಂದು ವೇಳೆ ಕಣ್ಣುಗಳಿಗೆ ವಿಪರೀತವಾದ ಒತ್ತಡ ಹೇರಿದ್ದರೆ ಅದುರುವಿಕೆಯ ಮೂಲಕ ಕಣ್ಣುಗಳು ಬಳಲಿರುವುದನ್ನು ಸೂಚಿಸುತ್ತವೆ. ತಕ್ಷಣವೇ ಕಣ್ಣುಗಳನ್ನು ತಣ್ಣೀರಿನಿಂದ ತೊಳೆದುಕೊಂಡು ಕಣ್ಣುಗಳ ಮೇಲೆ ತಣ್ಣೀರಿನಿಂದ ತೋಯಿಸಿದ ಹತ್ತಿಯುಂಡೆಗಳನ್ನು ಇರಿಸಿ ಕೊಂಚ ಕಾಲ ಕಣ್ಣು ಮುಚ್ಚಿ ವಿಶ್ರಾಂತಿ ಪಡೆದರೆ ಸರಿಹೋಗುತ್ತದೆ. ಇದಕ್ಕೂ ಅದುರುವಿಕೆ ಕಡಿಮೆಯಾಗಲಿಲ್ಲವೆಂದರೆ ಮಾತ್ರ ತಕ್ಷಣ ನೇತ್ರವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದು ಸಹಾ ನರವ್ಯವಸ್ಥೆಗೆ ಸಂಬಂಧಿಸಿದ ತೊಂದರೆಯಾಗಿರಬಹುದು.

For Quick Alerts
ALLOW NOTIFICATIONS
For Daily Alerts

    English summary

    Body Signals That Must Never Be Ignored At Any Cost

    Analysing these symptoms will help us recognise several unknown health conditions that they are indicating. We tend to dismiss several small health issues, but there are some symptoms that require medical attention at the earliest. In this article we have listed the body signs not to ignore. Read further to know what these body signs are that you must never ignore at any cost.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more