ದೇಹದ ತೂಕ ಹೆಚ್ಚಾಗಬೇಕೆ? ಇಂತಹ ಆಹಾರಗಳನ್ನು ಸೇವಿಸಿ

By: manu
Subscribe to Boldsky

ಇಂದಿನ ದಿನಗಳಲ್ಲಿ ತೂಕ ಕಳೆದುಕೊಳ್ಳುವುದು ಒಂದು ಅಗತ್ಯತೆಯಾಗಿ ಪರಿಣಿಮಿಸಿದೆ ಕೆಲವೊಮ್ಮೆ ಇಳಿಸುವ ಭರದದಲ್ಲಿ ಅಗತ್ಯ ತೂಕಕ್ಕೂ ಕಡಿಮೆಯಾದರೆ ಇದು ಆರೋಗ್ಯಕ್ಕೆ ಮಾರಕವಾಗಬಹುದು. ಆಗ ಕಳೆದುಕೊಂಡ ತೂಕವನ್ನು ಸೂಕ್ತ ತೂಕಕ್ಕೆ ಏರಿಸಿಕೊಳ್ಳುವುದು ಆರೋಗ್ಯ ಉಳಿಸಿಕೊಳ್ಳಲು ಅನಿವಾರ್ಯವಾಗುತ್ತದೆ. ತೂಕ ಇಳಿಸಲು ನೂರಾರು ಸಲಹೆಗಳಿವೆ. ಆದರೆ ತೂಕ ಏರಿಸಿಕೊಳ್ಳಲು ಆರೋಗ್ಯಕರವಾದ ಮಾರ್ಗಗಳು ಮಾತ್ರ ತೋಚುವುದಿಲ್ಲ. ಆದರೆ ಈ ಕೊರತೆಯನ್ನು ಆಯುರ್ವೇದ ಸಾವಿರಾರು ವರ್ಷಗಳ ಹಿಂದೆಯೇ ನೀಗಿಸಿದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

ನಮ್ಮ ದೇಹದ ತೂಕ ಆರೋಗ್ಯಕರವಾಗಿರಲು ಎಷ್ಟಿರಬೇಕು ಎಂಬುದನ್ನು ಆಯುರ್ವೇದ ತೂಕದ ಬದಲಾಗಿ ಮೂರು ಮೂಲಭೂತ ಧಾತುಗಳಾದ ಕಫ, ವಾತ ಮತ್ತು ಪಿತ್ತಗಳಿಂದ ಅಳೆಯುತ್ತದೆ. ತೂಕ ಏರಿಸಿಕೊಂಡು ಉತ್ತಮ ಆರೋಗ್ಯ ಉಳಿಸಿಕೊಳ್ಳಲು ಈ ಮೂರೂ ಧಾತುಗಳನ್ನು ಸಮತೋಲನದಲ್ಲಿರಿಸಿಯೇ ಮುಂದುವರೆಯಬೇಕಾದುದು ಆಯುರ್ವೇದದ ಪ್ರಕಾರ ಅಗತ್ಯವಾಗಿದೆ. ಆಯುರ್ವೇದ ವಿಧಾನ ಆರೋಗ್ಯಕರ, ಸರಳ ಮತ್ತು ಸಮಗ್ರವಾಗಿದ್ದು ಪರಿಣಾಮಕಾರಿಯಾಗಿದೆ ಹಾಗೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನೂ ಬೀರುವುದಿಲ್ಲ.

ಆಯುರ್ವೇದ ತಜ್ಞರ ಪ್ರಕಾರ "ಉತ್ತಮ ಆರೋಗ್ಯಕ್ಕಾಗಿ ವ್ಯಕ್ತಿಯ ತೂಕ ಅತಿ ಹೆಚ್ಚೂ ಇರಬಾರದು, ಅತಿ ಕಡಿಮೆಯೂ ಇರಬಾರದು. ಇದನ್ನು ಆಯುರ್ವೇದ ಸಮತೋಲನ ಅಥವಾ ದೇಹದ ತೂಕದ ಸಹಿತ ಎಲ್ಲಾ ವಿಷಯಗಳೂ ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದು ಕರೆಯುತ್ತದೆ. ಒಂದು ವೇಳೆ ನೀವು ಅನಾರೋಗ್ಯ ಪೀಡಿತರಾಗಿದ್ದು ಈ ಸಮಯದಲ್ಲಿ ತೂಕ ಕಳೆದುಕೊಂಡಿದ್ದರೆ ಚಿಕಿತ್ಸೆಯ ಬಳಿಕ ನಿಮ್ಮ ತೂಕ ನಿಧಾನವಾಗಿ ಹಾಗೂ ಸಾವಕಾಶವಾಗಿ ಏರಬೇಕು. ಇದಕ್ಕಾಗಿ ಯಾವುದೇ ತೂಕ ಏರಿಸುವ ಹೆಚ್ಚುವರಿ ಔಷಧಿಗಳನ್ನು ತೆಗೆದುಕೊಳ್ಳಬಾರದು, ಇವುಗಳು ಯಕೃತ್ ಹಾಗೂ ಮೂತ್ರಪಿಂಡಗಳಿಗೆ ಅಪಾಯವುಂಟುಮಾಡಬಹುದು. ಆದ್ದರಿಂದ ತೂಕವನು ಹೆಚ್ಚಿಸಿಕೊಳ್ಳುವುದನ್ನೇ ಉದ್ದೇಶವಾಗಿಸುವ ಬದಲು ದೇಹದಾರ್ಡ್ಯತೆ ಹಾಗೂ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದತ್ತ ಗಮನ ಹರಿಸಬೇಕು. ಬನ್ನಿ, ಆಯುರ್ವೇದ ಈ ಬಗ್ಗೆ ಏನು ಸಲಹೆ ಮಾಡುತ್ತದೆ ಎಂದು ನೋಡೋಣ:

ದಿನಕ್ಕೊಂದು ಲೋಟದಷ್ಟು ಕೆನೆಭರಿತ ಹಾಲು

ದಿನಕ್ಕೊಂದು ಲೋಟದಷ್ಟು ಕೆನೆಭರಿತ ಹಾಲು

ಕೊಬ್ಬುಯುಕ್ತ ಕೆನೆಭರಿತ ಹಾಲನ್ನು ನೀವು ಓಟ್ ಮಿಲ್, ಧಾನ್ಯಗಳೊoದಿಗೆ, ಅಥವಾ ಹಾಗೆಯೇ ಒಂದು ಲೋಟದಷ್ಟು ಚಾಕಲೇಟ್ ಸ್ವಾದಭರಿತ ಪೇಯವಾಗಿಯೂ ಬಳಸಬಹುದು. ಇದು ಕ್ಯಾಲರಿಗಳಿoದ ಸಮೃದ್ಧವಾಗಿದ್ದು, ವಿಟಮಿನ್ A ಮತ್ತು ವಿಟಮಿನ್ D ಗಳನ್ನು ಸಹ ಹೊಂದಿದೆ. ತೂಕವನ್ನು ಅಲ್ಪಾವಧಿಯಲ್ಲಿ ಗಳಿಸಿಕೊಳ್ಳಲು ನೀವು ಕೆನೆರಹಿತ ಹಾಲಿಗೆ ಬದಲಾಗಿ ಕುಬ್ಬುಯುಕ್ತ ಕೆನೆಭರಿತ ಹಾಲನ್ನು ಆರಿಸಿಕೊಳ್ಳಿರಿ. ಒಂದು ಲೋಟದಷ್ಟು ಕೆನೆಭರಿತ ಹಾಲು ಸುಮಾರು 120 ರಿಂದ 150 ಕ್ಯಾಲರಿಗಳನ್ನು ಹೊಂದಿದೆ.

ಆಲೂಗಡ್ಡೆ

ಆಲೂಗಡ್ಡೆ

ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ, ಸಾಮಾನ್ಯವಾಗಿ ಜನರು ಆಲೂಗಡ್ಡೆಯನ್ನು ತ್ಯಜಿಸಲು ಮುಂದಾಗುತ್ತಾರೆ. ಆದರೆ ತೂಕವನ್ನು ಹೊಂದಲು ಬಯಸುವವರು ಹೀಗೆ ಮಾಡುವುದರ ಅಗತ್ಯವಾದರೂ ಏನು? ಇದು ಸಂಕೀರ್ಣ ಸಕ್ಕರೆಗಳ (complex carbohydrates) ಒಂದು ಅತ್ಯುತ್ತಮ ಮೂಲವಾಗಿದ್ದು, ತೂಕವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ. ಇದು ಅತ್ಯಧಿಕ ಪೌಷ್ಟಿಕ ಮೌಲ್ಯವನ್ನು ಹೊಂದಿದ್ದು, ಪಿಷ್ಟ, ನಾರು, ಮತ್ತು ವಿಟಮಿನ್ ಸಿ ನಿಂದ ಸಮೃದ್ಧವಾಗಿದೆ. ಆಲೂಗಡ್ಡೆಗಳನ್ನು ಅವುಗಳ ಸಿಪ್ಪೆಯೊಂದಿಗೆ ಬಳಸಿದರೆ ಸಮೃದ್ಧ ಪ್ರೋಟೀನ್ ನ ಲಾಭವನ್ನು ಪಡೆಯಬಹುದು ಅಥವಾ ಅವುಗಳನ್ನು ಇತರ ತರಕಾರಿಗಳೊಂದಿಗೆ ಬೆರೆಸಿಯೂ ಬಳಸಬಹುದು. ಒಂದು ಮಧ್ಯಮ ಗಾತ್ರದ ಆಲೂಗಡ್ಡೆಯು ಸುಮಾರು 150 ಕ್ಯಾಲರಿಗಳನ್ನು ಹೊಂದಿದೆ.

ಆರೋಗ್ಯಯುತ, ಸಿಹಿಯಾದ ಹಣ್ಣುಗಳು

ಆರೋಗ್ಯಯುತ, ಸಿಹಿಯಾದ ಹಣ್ಣುಗಳು

ಪಪ್ಪಾಯಿ, ಬಾಳೆಹಣ್ಣು, ಮತ್ತು ಅನಾನಾಸುಗಳಂತಹ ಹಣ್ಣುಗಳು ನೀವು ತೂಕವನ್ನು ಹೊಂದಲು ಸಹಕಾರಿಯಾಗಬಲ್ಲವು. ಇವು ಸಹಜವಾದ ಸಕ್ಕರೆಯನ್ನು ಹೊಂದಿದ್ದು, ಶಕ್ತಿಯ ಸಮೃದ್ಧ ಮೂಲಗಳಾಗಿವೆ. ತೂಕವನ್ನು ವೃದ್ಧಿಸಿಕೊಳ್ಳಲು ಹಂಬಲಿಸುವವರಿಗೆ avocado ಹಣ್ಣುಗಳು ಅತ್ಯುತ್ತಮ ಆಯ್ಕೆಗಳಾಗಿವೆ. ಇವು ಕೊಬ್ಬು ಮತ್ತು ಕ್ಯಾಲರಿಯುಕ್ತವಾಗಿವೆ. ಒಂದು avocado ವು ಸುಮಾರು 300 ಕ್ಯಾಲರಿಗಳನ್ನು ಹೊಂದಿದೆ. ಅದ್ದರಿಂದ, ಈ ಸಿಹಿಯಾದ ಮತ್ತು ಆರೋಗ್ಯಯುತ ಹಣ್ಣುಗಳನ್ನು, ಫ್ರೂಟ್ ಸಲಾಡ್, ಸಿಹಿ ತಿನಿಸು, ಮತ್ತು ಮಿಲ್ಕ್ ಶೇಕ್ ನoತಹ ವಸ್ತುಗಳಿಗೆ ಬೆರೆಸಿ ಸೇವಿಸಬಹುದು.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳು ಕ್ಯಾಲರಿಭರಿತವಾಗಿದ್ದು, ಪೋಷಕಾಂಶಗಳು ಮತ್ತು ಪ್ರೋಟೀನ್ ಅನ್ನೂ ಸಹ ಹೊಂದಿವೆ. ಒಂದು ಮೊಟ್ಟೆಯು ಸರಾಸರಿ 70 ಕ್ಯಾಲರಿಗಳನ್ನು ಮತ್ತು 5 ಗ್ರಾಂ ಗಳಷ್ಟು ಕೊಬ್ಬನ್ನು ಹೊಂದಿರುತ್ತದೆ. ಆದ್ದರಿಂದಲೇ, ಮೊಟ್ಟೆಯು ದೇಹಧಾರ್ಡ್ಯ ಪಟುಗಳಿಗೆ ಪ್ರಿಯವಾದುದಾಗಿದೆ. ಇವು ಒಮೇಗಾ - 3 ಕೊಬ್ಬಿನಾಮ್ಲಗಳಿoದ ಸಂಪನ್ನವಾಗಿದ್ದು, ಮೊಟ್ಟೆಯ ಹಳದಿ ಲೋಳೆಯು ಅತಿ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಹೊಂದಿದ್ದು ಇದೇನೂ ಅನಾರೋಗ್ಯಕಾರಿಯಲ್ಲ. ಅದ್ದರಿಂದ, ಶೀಘ್ರವಾಗಿ ತೂಕವನ್ನು ಗಳಿಸಲು ಮೊಟ್ಟೆಯನ್ನು ಬೇಯಿಸಿದ ರೂಪದಲ್ಲೋ, ಅಥವಾ ಕುದಿಸಿದ ರೂಪದಲ್ಲೋ, ಅಥವಾ ಹಸಿಯಾಗಿಯೋ ನಿಮಗೆ ಸೂಕ್ತವೆನಿಸುವ ರೀತಿಯಲ್ಲಿ ಅಸ್ವಾದಿಸಿರಿ.

ಕೆಂಪು ಮಾಂಸ

ಕೆಂಪು ಮಾಂಸ

ಮಾಂಸವು ಕ್ಯಾಲರಿಯುಕ್ತವಾಗಿದ್ದು, ತೂಕವನ್ನು ಬಹು ಬೇಗನೆ ವೃದ್ಧಿಸುತ್ತದೆ. ಇದನ್ನು ಆರೋಗ್ಯಯುತ ಶರೀರಕ್ಕಾಗಿ, ಆರೋಗ್ಯಯುತ ಆಹಾರಕ್ರಮದಲ್ಲಿ ಬಳಸಬಹುದು. ಇವು ಪ್ರೋಟೀನ್ ಗಳ ಒಂದು ಅಗರವಾಗಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಿವೆ. ತೂಕವನ್ನು ಗಳಿಸಲು ಇದನ್ನು ಕರಿಯುವುದರ ಮೂಲಕವೋ ಅಥವಾ ಬೇಯಿಸುವುದರ ಮೂಲಕವೋ ಆನಂದಿಸಿರಿ.

ಪೀನಟ್ ಬಟರ್

ಪೀನಟ್ ಬಟರ್

ಪೀನಟ್ ಬಟರ್, ಪ್ರೋಟೀನ್ ಮತ್ತು ಕೊಬ್ಬುಗಳ ಒಂದು ಸಮೃದ್ಧ ಅಗರವಾಗಿದ್ದು, ತೂಕವನ್ನು ಹೊಂದಲು ಇಚ್ಚಿಸುವವರಿಗೆ ಇಂದೊಂದು ಉತ್ತಮ ಆಯ್ಕೆಯಾಗಬಹುದು. ಒಂದು ಟೇಬಲ್ ಚಮಚದಷ್ಟು Peanut butter, ಹತ್ತಿರ ಹತ್ತಿರ 100 ಕ್ಯಾಲರಿಗಳನ್ನು ಒಳಗೊಂಡಿದೆ. ಅಲ್ಲದೇ, ಇದು ಇನ್ನೂ ಅನೇಕ ಅವಶ್ಯಕ ಪೋಷಕಾಂಶಗಳನ್ನು ಒಳಗೊಂಡಿದೆ. ಪೀನಟ್ ಬಟರ್ ನಲ್ಲಿರುವ ಕೊಬ್ಬು, ಅಸoತೃಪ್ತ ಕೊಬ್ಬಿನ ವರ್ಗಕ್ಕೆ (unsaturated type) ಸೇರಿದ್ದು, ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ. Peanut butter ಅನ್ನು ನೀವು ಕಂದು ಬಣ್ಣದ ಬ್ರೆಡ್ಡುಗಳೊಂದಿಗೆಯೋ ಅಥವಾ ಸೇಬಿಗೆ ಅದ್ದುವುದರ ಮೂಲಕವೋ ಅಥವಾ workout ಪೇಯದ (workout shake) ನ ನoತರವೂ ಆಸ್ವಾದಿಸಬಹುದು.

ಒಣ ಹಣ್ಣುಗಳು (Dry fruits)

ಒಣ ಹಣ್ಣುಗಳು (Dry fruits)

ಒಣ ಹಣ್ಣುಗಳು (Dry fruits) ಮತ್ತು ಕಾಳುಗಳು; ಕ್ಯಾಲರಿಗಳು, ಪೋಷಕಾಂಶಗಳು, ಮತ್ತು ನಾರಿನ ಸಮೃದ್ಧ ಮೂಲಗಳಾಗಿವೆ. ಹೀಗಾಗಿ, ನಿಮ್ಮ ಆಹಾರ ಕ್ರಮಕ್ಕೆ, ಒಂದಿಷ್ಟು ಒಣದ್ರಾಕ್ಷಿ, ಬಾದಾಮಿ, ಅಕ್ರೋಟ, ಮತ್ತು ಗೇರು ಬೀಜ, ಇವುಗಳನ್ನು ಸೇರಿಸಿ. ಒಂದು ಕಪ್ ನಷ್ಟು ಒಣದ್ರಾಕ್ಷಿಯು ಸುಮಾರು 449 ಕ್ಯಾಲೋರಿಗಳಷ್ಟು ಮತ್ತು ಒಂದು ಕಪ್ ನಷ್ಟು ಬಾದಾಮಿಯು ಸರಿಸುಮಾರು 529 ಕ್ಯಾಲರಿಗಳಷ್ಟು ಶಕ್ತಿಯನ್ನು ಹೊಂದಿದೆ. ಇವುಗಳ ಸವಿಯನ್ನು ನೀವು icecream ಮತ್ತು ಮೊಸರಿಗೆ ಅಲಂಕಾರಕವಾಗಿ ಅಥವಾ ಸಲಾಡ್ ಮತ್ತು ಧಾನ್ಯಗಳೊoದಿಗೆ ಸೇರಿಸಿಯೋ ಸೇವಿಸಬಹುದು.

ಆಲೀವ್ ಎಣ್ಣೆ

ಆಲೀವ್ ಎಣ್ಣೆ

ಸಲಾಡ್ ಗೆ ಒಂದು ಹನಿ ಆಲೀವ್ ಎಣ್ಣೆ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಅಗತ್ಯಯುತ ಕ್ಯಾಲೋರಿ ಜೊತೆಗೆ ಲಿನೋಲಿಯಿಕ್ ಆಮ್ಲ ಕೂಡ ಇರುತ್ತದೆ. ಇದನ್ನು ಪ್ರತಿದಿನ ಬಳಸುವುದರಿಂದ ತೂಕ ಹೆಚ್ಚುವುದರ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು.

ಗೋಡಂಬಿ

ಗೋಡಂಬಿ

ಗೇರುಬೀಜದ ಒಳಗಿನ ತಿರುಗಳನ್ನು ಹದವಾಗಿ ಹುರಿದು ಸಿಪ್ಪೆ ನಿವಾರಿಸಿ ತಯಾರಿಸುವ ಗೋಡಂಬಿ ಭಾರತದಲ್ಲಿ ಮಾತ್ರವಲ್ಲ, ಇಡಿಯ ವಿಶ್ವದಲ್ಲಿಯೇ ಖ್ಯಾತಿ ಪಡೆದಿದೆ. ಒಂದು ಎಚ್ಚರಿಕೆಯನ್ನು ಗಮನಿಸಬೇಕು, ಏನೆಂದರೆ ಗೋಡಂಬಿ ಹುರಿದ ಬಳಿಕವೇ ಆರೋಗ್ಯಕರವೇ ಹೊರತು ಹಸಿಯಾಗಿಯಲ್ಲ. ಕರಾವಳಿಯ ಜನರು ಇಷ್ಟಪಡುವಂತೆ ಹಸಿಯಾಗಿ ತಿಂದರೆ ವಿಷಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ! ಗೋಡಂಬಿಯನ್ನು ಬಳಸದೇ ಮಾಡುವ ಸಿಹಿತಿಂಡಿಗಳ ಪಟ್ಟಿ ತೀರಾ ಚಿಕ್ಕದಾಗಿದೆ. ಅದರಲ್ಲೂ ಆರೋಗ್ಯಯುತ ದೇಹಕ್ಕಾಗಿ ಕೈ ತುಂಬಾ ಗೋಡಂಬಿ ತಿನ್ನಬೇಕು. ಇದರಲ್ಲಿರುವ ಎಣ್ಣೆ ಅಂಶ ದಪ್ಪಗಾಗುವಂತೆ ಮಾಡುವುದಷ್ಟೇ ಅಲ್ಲ ಕೂದಲು ಹೊಳೆಯುವಂತೆ ಮಾಡುತ್ತದೆ.

ಒಣ ದ್ರಾಕ್ಷಿ

ಒಣ ದ್ರಾಕ್ಷಿ

ಹಿಂದಿಯಲ್ಲಿ ಕಿಶ್ಮಿಶ್ ಎಂದು ಕರೆಯಲ್ಪಡುವ ಒಣದ್ರಾಕ್ಷಿ ಹಲವು ಪೋಷಕಾಂಶಗಳ ಆಗರವಾಗಿದೆ. ಒಣಫಲಗಳ ಪಟ್ಟಿಯಲ್ಲಿ ಒಣದ್ರಾಕ್ಷಿಯೂ ಇದೆ. ಆದರೆ ಬಾದಾಮಿ, ಅಕ್ರೋಟು ಮೊದಲಾದ ದುಬಾರಿ ಫಲಗಳ ಎದುರು ಈ ಒಣದ್ರಾಕ್ಷಿ ಕೊಂಚ ಅಗ್ಗವಾಗಿರುವ ಕಾರಣಕ್ಕೆ ಹೆಚ್ಚಿನವರು ಈ ಅದ್ಭುತ ಫಲಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ..ಅದರಲ್ಲೂ ದೇಹದ ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಮನೆಮದ್ದಾಗಿದೆ. ಪ್ರತಿದಿನ ಒಂದು ಕೈ ತುಂಬಾ ತಿಂದರೆ ಅದು ಕ್ಯಾಲೋರಿ ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಬೇಕಾದ ಅಗತ್ಯ ನಾರಿನಂಶ ಕೂಡ ದೊರಕುತ್ತದೆ. ಸ್ನಾಕ್ಸ್ ಸಮಯದಲ್ಲಿ ಒಣ ದ್ರಾಕ್ಷಿಯನ್ನು ಬಳಸುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

English summary

Best Healthy Foods to Gain Weight Fast

Cutting the junk from your diet is the first step to weight loss. But sometimes, the healthy foods you swap in are surprisingly high in fat and calories. That's why serving size matters—even when it comes to fruits, nuts, yogurt, and salads. So stop sabotaging your diet, and follow our guide to 30 healthy—but sneaky—foods. You'll also get advice on diet-friendly swaps and serving sizes, making it easier to indulge in meals that are truly guilt-free.
Subscribe Newsletter