Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಪ್ರತಿದಿನ 30 ನಿಮಿಷ ವ್ಯಾಯಮ ಮಾಡಿ-ಯಾವ ಕಾಯಿಲೆಯೂ ಹತ್ತಿರ ಬರಲ್ಲ!
ಇಂದಿನ ದಿನದಲ್ಲಿ ವ್ಯಾಯಾಮವೆಂಬುದು ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ಮಾರ್ಪಡಿಸಬೇಕಾಗಿದೆ. ಬಿಡುವಿಲ್ಲದ ಜೀವನ ಪದ್ಧತಿಯನ್ನು ನಾವು ಅನುಸರಿಸುವುದರಿಂದ ನಮ್ಮ ದೇಹಕ್ಕೆ ವ್ಯಾಯಾಮ ಅತ್ಯಗತ್ಯವಾಗಿದೆ. ಇಂದು ಹೆಚ್ಚಿನ ನಮ್ಮ ಕೆಲಸಗಳನ್ನು ನಾವು ಕುಳಿತೇ ಮಾಡುವುದರಿಂದ ನಮ್ಮ ದೇಹಕ್ಕೆ ವ್ಯಾಯಾಮ ಸಿಗುವುದಿಲ್ಲ.
ಆ ಸಂದರ್ಭದಲ್ಲಿ ಕೆಲವೊಂದಿಷ್ಟು ವ್ಯಾಯಾಮ ಅಭ್ಯಾಸಗಳನ್ನು ನಾವು ನಡೆಸಿ ದೇಹವನ್ನು ಚಟುವಟಿಕೆಯಿಂದ ರೂಪಿಸಬೇಕು. ನಿಮ್ಮ ದೇಹಕ್ಕೆ ವ್ಯಾಯಾಮವನ್ನು ನಡೆಸಲು ನೀವು ಹೆಚ್ಚುವರಿ ಸಮಯವನ್ನು ಕಳೆಯಬೇಕೆಂದೇನಿಲ್ಲ. ಕೇವಲ ಅರ್ಧ ಗಂಟೆಯಷ್ಟು ವ್ಯಾಯಾಮವನ್ನು ಮಾಡಿಕೊಂಡು ಜಡ್ಡುಗಟ್ಟಿದ ದೇಹವನ್ನು ಸಕ್ರಿಯಗೊಳಿಸಬಹುದಾಗಿದೆ.
ಅರ್ಧ ಗಂಟೆಯ ವ್ಯಾಯಾಮದಿಂದ ನಮ್ಮ ದೇಹಕ್ಕೆ ದೊರಕುವ ಪ್ರಯೋಜನಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿದ್ದೇವೆ. ವ್ಯಾಯಾಮವು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನೆರವಾಗಲಿದ್ದು ನಿಮ್ಮ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಇದು ದೂರ ಮಾಡಲಿದೆ...

ಶಕ್ತಿಯನ್ನು ಹೆಚ್ಚಿಸಲಿದೆ
ಕಚೇರಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಿ ದಣಿದಿದ್ದೀರಾ? ನಿಮ್ಮ ಶಕ್ತಿಯ ಮಟ್ಟ ಕುಗ್ಗಿದೆ ಎಂದಾದಲ್ಲಿ ಅರ್ಧ ಗಂಟೆಯಷ್ಟು ವ್ಯಾಯಾಮವನ್ನು ಮಾಡಿ ಅದನ್ನು ಪುನಃ ಪಡೆದುಕೊಳ್ಳಿ. ಅಂತೆಯೇ ಈ ವ್ಯಾಯಾಮ ಮಾಡುವುದರಿಂದ ನೀವು ದಣಿವಿಗೆ ಒಳಗಾಗುವುದಿಲ್ಲ. ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಶಕ್ತಿಯು ಇದರಿಂದ ದೊರೆಯಲಿದೆ. ಶಕ್ತಿಯ ಪುರೈಕೆಯನ್ನು ವ್ಯಾಯಾಮದಿಂದ ನೀವು ಪುನಃ ಪಡೆದುಕೊಳ್ಳಲಿರುವಿರಿ.

ಹೃದಯಕ್ಕೆ ಉತ್ತಮ
ನೀವು ಹೆಚ್ಚಿನ ಹೃದಯಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ದೈಹಿಕ ವ್ಯಾಯಾಮವು ನಿಮ್ಮ ಹೃದಯ ಸಂಬಂಧಿ ತೊಂದರೆಗಳನ್ನು ನಿವಾರಿಸಲಿದೆ. 30 ನಿಮಿಷಗಳ ವ್ಯಾಯಾಮವು ಹೃದಯಕ್ಕೆ ಬೇಕಾದ ಶಕ್ತಿಯನ್ನು ನೀಡಲಿದೆ. ನೀವು ಹೆಚ್ಚು ಚಟುವಟಿಕೆಯಿಂದ ಕೂಡಿರುವಷ್ಟೂ ಸಮಯವೂ ಉತ್ತಮ ಕೊಲೆಸ್ಟ್ರಾಲ್ ಮಟ್ಟವು ನಿಮ್ಮ ದೇಹಕ್ಕೆ ಪೂರೈಕೆಯಾಗಲಿದೆ. ರಕ್ತದ ಹರಿವು ಚೆನ್ನಾಗಿ ಆಗಿ ಹೃದಯಕ್ಕೆ ರಕ್ತ ಪಂಪಾಗುತ್ತದೆ.

ಒತ್ತಡ ನಿವಾರಣೆ
ನೀವು ಹೆಚ್ಚು ವ್ಯಾಯಾಮ ಮಾಡಿದಂತೆ ದೇಹದ ಭಾಗಗಳಲ್ಲಿರುವ ಕೋಶಗಳು ಹೆಚ್ಚಿನ ಉತ್ಪಾದನೆಯನ್ನು ಮಾಡಲಿವೆ. ಮೆದುಳಿನ ಕೋಶವನ್ನು ಪುನರುಜ್ಜೀವನಗೊಳಿಸಿ ನಿಮ್ಮ ಸ್ಮರಣೆ ಶಕ್ತಿಯನ್ನು ಹೆಚ್ಚಿಸಲಿನೀವು ಒತ್ತಡದ ದಿನವನ್ನು ಎದುರಿಸುತ್ತಿದ್ದೀರಾ? ಹಾಗಿದ್ದರೆ ಅರ್ಧಗಂಟೆಯ ವ್ಯಾಯಾಮ ನಿಮ್ಮ ಒತ್ತಡವನ್ನು ದೂರಮಾಡುವಲ್ಲಿ ನೆರವಾಗಲಿರುವುದು ಖಂಡಿತ. ಮೆದುಳಿನಲ್ಲಿರುವ ರಾಸಾಯನಿಕ ಅಂಶಗಳಾದ ನೊರೆಪೆನ್‌ಫಿರಿನ್ ಅನ್ನು ಇದು ನಿಯಂತ್ರಿಸಿ ಹೆಚ್ಚುವರಿ ಒತ್ತಡದಿಂದ ನೀವು ಬಳಲುದಂತೆ ಕಾಪಾಡುತ್ತದೆ. ದೆ.

ಸ್ಮರಣೆ ಶಕ್ತಿಯನ್ನು ಹೆಚ್ಚಿಸುತ್ತದೆ
ನೀವು ಹೆಚ್ಚು ವ್ಯಾಯಾಮ ಮಾಡಿದಂತೆ ದೇಹದ ಭಾಗಗಳಲ್ಲಿರುವ ಕೋಶಗಳು ಹೆಚ್ಚಿನ ಉತ್ಪಾದನೆಯನ್ನು ಮಾಡಲಿವೆ. ಮೆದುಳಿನ ಕೋಶವನ್ನು ಪುನರುಜ್ಜೀವನಗೊಳಿಸಿ ನಿಮ್ಮ ಸ್ಮರಣೆ ಶಕ್ತಿಯನ್ನು ಹೆಚ್ಚಿಸಲಿದೆ.

ತೂಕ ಇಳಿಕೆ
ನೀವು ಹೆಚ್ಚುವರಿ ತೂಕದ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದಾದಲ್ಲಿ ವ್ಯಾಯಾಮವು ನಿಮ್ಮ ತೂಕವನ್ನು ಇಳಿಕೆ ಮಾಡುವಲ್ಲಿ ಸಹಾಯ ಮಾಡಲಿದೆ. ನಿಮ್ಮನ್ನು ಈ ವ್ಯಾಯಾಮವು ನಿತ್ಯವೂ ಚಟುವಟಿಕೆಯಿಂದ ಇರಿಸಲಿದ್ದು ನಿಮ್ಮನ್ನು ಹೆಚ್ಚುವರಿ ಆಹಾರ ಸೇವನೆಯಿಂದ ಕೂಡ ನಿಯಂತ್ರಿಸಲಿದೆ. ದೀರ್ಘ ಗಂಟೆಯವರೆಗೆ ವ್ಯಾಯಾಮ ಮಾಡುವವರಿಗಿಂತ ಅರ್ಧಗಂಟೆ ವ್ಯಾಯಾಮ ಮಾಡುವವರಿಗೆ ಹೆಚ್ಚಿನ ಪ್ರಯೋಜನ ಉಂಟಾಗುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.

ರಕ್ತದ ಒತ್ತಡ ಮಟ್ಟವನ್ನು ನಿರ್ವಹಿಸುತ್ತದೆ
ನಿಮ್ಮ ರಕ್ತದ ಒತ್ತಡ ಮಟ್ಟವನ್ನು ನಿರ್ವಹಿಸುವಲ್ಲಿ ಈ ವ್ಯಾಯಾಮವು ಸಹಕಾರಿಯಾಗಲಿದೆ. ಹೆಚ್ಚುವರಿ ರಕ್ತದೊತ್ತಡ ಸಮಸ್ಯೆಯು ಕಡಿಮೆ ಪ್ರಮಾಣಕ್ಕೆ ಇಳಿಯಲಿದೆ.

ಮಧುಮೇಹದ ಅಪಾಯವನ್ನು ತಡೆಯುತ್ತದೆ
ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಇದು ಸಹಾಯ ಮಾಡಲಿದ್ದು ಎರಡನೇ ವಿಧ ಮಧುಮೇಹವನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ವ್ಯಾಯಾಮ ನೆರವಾಗಲಿದೆ.



Click it and Unblock the Notifications