ಅಧ್ಯಯನ ವರದಿ: ಬಲಿಷ್ಠರಾಗಲು 30 ನಿಮಿಷದ ವರ್ಕ್‌ ಔಟ್‌ ಸಾಕು!

By: Hemanth
Subscribe to Boldsky

ಮಹಿಳೆಯರು ತಾವು ಬಲಿಷ್ಠವಾಗಿಲ್ಲವೆಂದು ಯಾವಾಗಲೂ ಭಾವಿಸುತ್ತಾ ಇರುತ್ತಾರೆ, ಅಲ್ಲದೆ ತಾವು ಪುರುಷರಷ್ಟು ಬಲಿಷ್ಠರಾಗಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಕೂಡ ಹೊಂದಿರುತ್ತಾರೆ. ಆದರೆ ಇದು ತಪ್ಪು ಮಹಿಳೆಯರು ಕೂಡ ಪುರುಷರಷ್ಟೇ ಬಲಿಷ್ಠರಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.

ಮಹಿಳೆಯು ಪ್ರತೀ ದಿನ 30 ನಿಮಿಷ ಕಾಲ ವ್ಯಾಯಾಮ ಮಾಡಿದರೆ ಆಗ ಅವರ ದೇಹವು ಬಲಿಷ್ಠ ಹಾಗೂ ಸಪೂರವಾಗುವುದು. ವ್ಯಾಯಾಮ ಮಾಡದೆ ಇರುವ ಮಹಿಳೆಗಿಂತ 30 ನಿಮಿಷ ವ್ಯಾಯಾಮ ಮಾಡುವ ಮಹಿಳೆಯು ಪರಿಣಾಮಕಾರಿಯಾಗಿ ಸುಧಾರಣೆ ಕಂಡುಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳಿವೆ.

women Exercise

ವ್ಯಾಯಾಮದ ಬಳಿಕ 20 ನಿಮಿಷ ಕಾಲ ಉಳಿಯುವಂತಹ ಶಕ್ತಿಯು ಅವರು ತುಂಬಾ ಬಲಿಷ್ಠವಾಗಿದ್ದಾರೆ ಎನ್ನುವ ಭಾವನೆ ಉಂಟು ಮಾಡುತ್ತದೆ. ಮಹಿಳೆಯರು ಸಾಮಾನ್ಯವಾಗಿ ತಮ್ಮ ದೇಹದ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿರುತ್ತಾರೆ ಎಂದು ಕೆನಡಾದ ಒಕಾನಗಾನ್ ಲ್ಲಿರುವ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮಾರ್ಟಿನ್ ಗಿನಿಸ್ ತಿಳಿಸಿದ್ದಾರೆ.

ಮಹಿಳೆಯ ದೇಹವು ಸರಿಯಾಗಿಲ್ಲದ ವೇಳೆ ಆಕೆಗೆ ಇದು ಮಾನಸಿಕ ಹಾಗೂ ದೈಹಿಕವಾಗಿ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಆಕೆಯ ಆತ್ಮವಿಶ್ವಾಸ ಕಡಿಮೆಯಾಗಿ, ಖಿನ್ನತೆ ಮತ್ತು ಆಹಾರ ಸೇವನೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವ್ಯಾಯಾಮದಿಂದ ತುಂಬಾ ಸಕಾರಾತ್ಮಕವಾದ ಬದಲಾವಣೆಗಳು ಆಕೆಯಲ್ಲಿ ಕಂಡು ಬರುವುದು ಎಂದು ಗಿನಿಸ್ ತಿಳಿಸಿದರು.

ಈ ಅಧ್ಯಯನವನ್ನು ಜರ್ನಲ್ ಸೈಕಾಲಜಿ ಆಫ್ ಸ್ಪೋರ್ಟ್ಸ್ ಆ್ಯಂಡ್ ಎಕ್ಸಸೈಸ್‌ನಲ್ಲಿ ಪ್ರಕಟಿಸಲಾಗಿದೆ. ಕೇವಲ ಕುಳಿತುಕೊಂಡು ಪುಸ್ತಕ ಓದುವ ಮತ್ತು 30 ನಿಮಿಷ ಕಾಲ ಪ್ರತಿನಿತ್ಯ ಏರೋಬಿಕ್ಸ್ ವ್ಯಾಯಾಮ ಮಾಡುವ ಮಹಿಳೆಯರ ಮಧ್ಯೆ ಈ ಅಧ್ಯಯನದಲ್ಲಿ ವ್ಯತ್ಯಾಸ ನೋಡಲಾಯಿತು.

women Exercise

ಒಂದು ಸಮಯದಲ್ಲಿ ನಮ್ಮ ದೇಹದ ಬಗ್ಗೆ ನಮಗೆ ಒಳ್ಳೆಯ ಅಭಿಪ್ರಾಯಗಳು ಇರಲಿಲ್ಲ. ಈ ಅಧ್ಯಯನದ ಪ್ರಕಾರ ಒಳ್ಳೆಯ ಅಭಿಪ್ರಾಯ ಮತ್ತು ವ್ಯಾಯಾಮ ಮಾಡಬೇಕೆಂದು ತಿಳಿದುಬರುತ್ತದೆ. ಇದರ ಪರಿಣಾಮ ತಕ್ಷಣ ಆಗುವಂತದ್ದಾಗಿದೆ ಎಂದು ಗಿನಿಸ್ ವಿವರಿಸಿದ್ದಾರೆ. ವ್ಯಾಯಾಮದಿಂದಾಗಿ ಮಹಿಳೆಯರ ದೇಹವು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು.

ವ್ಯಾಯಾಮದ ಬಳಿಕ ಮಹಿಳೆಯರು ಪಡೆಯುವಂತಹ ಶಕ್ತಿ ಮತ್ತು ಸಬಲೀಕರಣವು ಅವರ ಒಳಗಿನ ಮಾತಿನಲ್ಲಿ ಉಂಟಾಗಿರುವಂತಹ ಉತ್ತೇಜನದಿಂದ ಎಂದು ನಾವು ಭಾವಿಸಿದ್ದೇವೆ ಎಂದು ಗಿನಿಸ್ ಹೇಳಿದರು. ಮಹಿಳೆಯರಲ್ಲಿ ಇರುವಂತಹ ಎಲ್ಲಾ ರೀತಿಯ ನಾಕಾರಾತ್ಮಕತೆ ಹೋಗಲಾಡಿಸಿ ಸಕಾರಾತ್ಮಕ ಹಾಗೂ ಒಳ್ಳೆಯ ಭಾವನೆ ಉಂಟು ಮಾಡಲಿದೆ ಎಂದು ಆಕೆ ತಿಳಿಸಿದರು.

English summary

30-Minute Workout May Make Women Stronger, Thinner: Study

A single exercise session lasting for just 30 minutes can have an immediate positive effect on women who feel negative about their bodies, and make them feel strong and thinner, a study has found. The results showed that compared to women who did not exercise, the women who undertook a 30-minute exercise session had significant improvements in their body image.
Subscribe Newsletter