For Quick Alerts
ALLOW NOTIFICATIONS  
For Daily Alerts

ಮಂಡಿ-ಪಾದಗಳನ್ನು ಸದೃಢಗೊಳಿಸಲು ತಾಡಾಸನ ಅನುಸರಿಸಿ

By Vani Naik
|

ಮಂಡಿ ನೋವು, ಕೀಲು ನೋವು, ಪಾದಗಳ ನೋವಿನಿಂದಾಗಿ ನಡೆದಾಡುವ ಸಮಸ್ಯೆಯನ್ನು ಹಿಂದೆ ನಾವು ವಯಸ್ಸಾದವರಲ್ಲಿ ಮಾತ್ರ ಕಾಣುತ್ತಿದ್ದೆವು. ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಮೂಳೆಗಳು ಸವೆದು ಅಶಕ್ತವಾಗಿ ಹೆಚ್ಚು ನೋವಿಗೆ ಕಾರಣವಾಗುತ್ತದೆ. ಇದೇ ಕಾರಣದಿಂದಾಗಿ ವಯಸ್ಸಾದವರು ಬೀಳುವುದು, ಬಿದ್ದು ಗಾಯ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಕೆಲವರು ಆರ್ಥ್ರೈಟಿಸ್ ಸಮಸ್ಯೆಯನ್ನು ಕೂಡ ಎದುರಿಸಿರಬಹುದು.

Tadasana (Mountain Pose) To Strengthen Knees & Ankles

ಆದರೆ ಒಂದೆರಡು ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಈಗ ಕೇವಲ ವಯಸ್ಸಾದವರು ಮಾತ್ರವಲ್ಲದೇ, ಮಧ್ಯ ವಯಸ್ಕರು, ಹದಿಹರಯದವರು ಕೂಡ ಪಾದಗಳ ನೋವು, ಮಂಡಿ ನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾರಣ ಏನಿರಬಹುದು ಎಂದು ಯೋಚಿಸಿದಾಗ, ಬದಲಾದ ಜೀವನಶೈಲಿ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಬಹುದು.

ವ್ಯಾಯಾಮ ಇಲ್ಲದ ಜಡ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡ ಮುಂತಾದವುಗಳು ಸಮಸ್ಯೆಗೆ ಕಾರಣವಾಗುತ್ತದೆ. ನೋವು ಕಾಣಿಸಿಕೊಂಡಾಗಲೆಲ್ಲಾ ಒಂದು ನೋವುಶಮನಕ ಮಾತ್ರೆಯನ್ನು ನುಂಗುವುದರ ಮೂಲಕ ತಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳಲು ನೋಡುತ್ತೇವೆ. ಆದರೆ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಯೋಚಿಸುವುದೇ ಇಲ್ಲ. ಸ್ನಾಯುಗಳ ಬಲವರ್ಧನೆಗೆ- ಏಕ ಪಾದ ರಾಜಕಪೋತಾಸನ

ಮಂಡಿಗಳನ್ನು ಸದೃಢವಾಗಿಸಿ ನೋವು ಮರುಕಳಿಸದಂತೆ ನೋಡಿಕೊಳ್ಳಲು ಯೋಗಾಭ್ಯಾಸವನ್ನು ಮಾಡಬೇಕು. ತಾಡಾಸನ ಅತ್ಯಂತ ಸುಲಭವಾದ ಆಸನಗಳಲ್ಲಿ ಒಂದಾಗಿದೆ. ಮಂಡಿಗಳನ್ನು, ಪಾದಗಳನ್ನು ಸದೃಢವಾಗಿಸಲು ತಾಡಾಸನದ ಅಭ್ಯಾಸವು ನೆರವಾಗುತ್ತದೆ. ಈ ಆಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. ತಾಡ ಎಂದರೆ, "ಪರ್ವತ" ಮತ್ತು ಆಸನ ಎಂದರೆ "ಭಂಗಿ" ಎಂದರ್ಥ. ಅನೇಕ ಆಸನಗಳಿಗೆ ಈ ಆಸನವು ಪ್ರಾರಂಭಿಕ ಹಂತವಾಗಿದ್ದು, ಆರೋಗ್ಯದ ದೃಷ್ಚಿಯಿಂದ ಲಾಭದಾಯಕವೂ ಆಗಿದೆ. ತಾಡಾಸನವನ್ನು ಕ್ರಮವಾಗಿ ಹಾಕಲು ಈ ಕೆಳಗೆ ವಿವರಣೆಯನ್ನು ನೀಡಲಾಗಿದೆ. ಕೈಕಾಲುಗಳ ಆರೋಗ್ಯ ವೃದ್ಧಿಗೆ ಅನುಸರಿಸಿ ವಸಿಷ್ಠಾಸನ

1. ನೇರವಾಗಿ ನಿಂತುಕೊಳ್ಳಿ. ಎರಡೂ ಕೈಗಳನ್ನು ಮುಂದೆ ಚಾಚಿ. ಎರಡೂ ಪಾದಗಳನ್ನು ಜೋಡಿಸಿರವೇಕು.
2. ಕಾಲಿನ ಹೆಬ್ಬೆರಳುಗಳು ಒಂದಕ್ಕೊಂದು ತಾಕುತ್ತಿರಬೇಕು.
3. ನಿಮ್ಮ ದೇಹದ ತೂಕವನ್ನು ಎರಡೂ ಪಾದಗಳಿಂದ ಸಮತೋಲನವಾಗಿಟ್ಟುಕೊಂಡಿರಬೇಕು.
4. ಎದೆಯನ್ನು ಎತ್ತರಿಸಿ ಮತ್ತು ಎರಡೂ ಕೈಗಳನ್ನು ಮೇಲಕ್ಕೆ ತೆಗೆದುಕೊಂಡು ಹೋಗಿ ಎರಡೂ ಕೈಗಳ ಬೆರಳನ್ನು ಜೋಡಿಸಿ.
5. ಮಂಡಿಯನ್ನು ಬಿಗಿಯಾಗಿಸಿ, ಪೃಷ್ಠದ ಮತ್ತು ತೊಡೆಯ ಹಿಂದಿನ ಸ್ನಾಯುಗಳನ್ನು ಕೂಡ ಬಿಗಿಯಾಗಿಸಿ.
6. ಹಿಮ್ಮಡಿಯನ್ನು ಎತ್ತರಿಸಿ ಮತ್ತು ಕಾಲುಗಳನ್ನು ಎತ್ತರಿಸುತ್ತ ತುದಿಗಾಲ ಮೇಲೆ ನಿಲ್ಲಿರಿ.


7. ಇಡೀ ದೇಹವನ್ನು ಹಿಗ್ಗಿಸುವಾಗ ಕೆಳಗಿನ ಕಾಲಿನ ಬೆರಳಿನಿಂದ ಮೇಲಿನ ಕೈ ಬೆರಳಿನವರೆಗೆ ಒತ್ತಡದ ಅನುಭವವಾಗಬೇಕು.
8. ಕೆಲ ಕ್ಷಣಗಳ ಕಾಲ ಅದೇ ಸ್ಥಿತಿಯಲ್ಲಿರಿ ಮತ್ತು ದೀರ್ಘವಾಗಿ ಉಸಿರಾಡಿಸುತ್ತಿರಿ.
9. ನಂತರ ಮೊದಲಿನ ಸ್ಥಿತಿಗೆ ಮರಳಿರಿ.
10. ಅತ್ಯುತ್ತಮ ಫಲಿತಾಂಶಕ್ಕಾಗಿ 8ರಿಂದ 10 ಬಾರಿ ಇದೇ ವ್ಯಾಯಾಮವನ್ನು ಮಾಡಿರಿ. ಲವಲವಿಕೆಯ ಜೀವನ ಶೈಲಿಗೆ- ದಿನನಿತ್ಯ ಮಾಡಿ ಹಾಲಾಸನ
ತಾಡಾಸನದಿಂದ ಇತರ ಲಾಭಗಳು
ಇದು ದೇಹದಲ್ಲಿನ ನೋವುಗಳನ್ನು ನಿವಾರಿಸುತ್ತದೆ. ರಕ್ತ ಸಂಚಾರ ಸುಗಮಗೊಳಿಸುತ್ತದೆ. ಮಕ್ಕಳು ಈ ಆಸನವನ್ನು ಅಭ್ಯಾಸಿಸಿದರೆ ಎತ್ತರವಾಗುತ್ತಾರೆ. ನರಗಳನ್ನು ಚುರುಕುಗೊಳಿಸಿ, ಬೆನ್ನು ನೋವು, ವಾತಕ್ಕೆ ಸಂಬಂಧಪಟ್ಟ ನೋವುಗಳನ್ನು ನಿವಾರಿಸುತ್ತದೆ. ಉಸಿರಾಟ ಮತ್ತು ಪಚನ ಕಾರ್ಯವನ್ನು ವೃದ್ಧಿಸಿ ಹೆಂಗಸರಲ್ಲಿ ಋತುಚಕ್ರವನ್ನು ನಿಯಂತ್ರಿಸುತ್ತದೆ.

ಎಚ್ಚರಿಕೆ
ತಲೆನೋವಿನಿಂದ ಬಳಲುತ್ತಿರುವವರು, ಕಡಿಮೆ ರಕ್ತದೊತ್ತಡ ಇರುವವರು, ಗರ್ಭಾವಸ್ಥೆಯಲ್ಲಿರುವ ಹೆಣ್ಣುಮಕ್ಕಳು ಈ ಆಸನವನ್ನು ಮಾಡತಕ್ಕದ್ದಲ್ಲ. ನುರಿತ ಯೋಗಾಭ್ಯಾಸದ ತಜ್ಞರ ಸಲಹೆ ಸೂಚನೆ ಮೇರೆಗೆ ಈ ಆಸನವನ್ನು ಅಭ್ಯಾಸ ಮಾಡುವುದು ಹೆಚ್ಚು ಸೂಕ್ತ.

English summary

Tadasana (Mountain Pose) To Strengthen Knees & Ankles

Knee pain, ankle and joint pain, accompanied with severe walking problem, used to be the problem of the elderly in the past. As we tend to age, there is weakening of the bones and this can further lead to severe pain. Since the knees and ankles become weak, elderly people are also prone to frequent falling and injuries
X
Desktop Bottom Promotion