For Quick Alerts
ALLOW NOTIFICATIONS  
For Daily Alerts

ಯೋಗ ಟಿಪ್ಸ್: ಬೆನ್ನು ನೋವಿನ ಸಮಸ್ಯೆಗೆ 'ಸುಖಾಸನ'

By Vani Naik
|

ಮೊದಲು, ವಯಸ್ಸಾದವರಲ್ಲಿ ಅಷ್ಟೇ ಬೆನ್ನು ನೋವು ಒಂದು ದೊಡ್ಡ ಸಮಸ್ಯೆಯಾಗಿ ಕಾಣುತ್ತಿತ್ತು. ಆದರೆ, ಈಗ ಬೆನ್ನು ನೋವಿನ ಸಮಸ್ಯೆ ಮಧ್ಯವಯಸ್ಕರಲ್ಲಿ, ಹದಿಹರಯದವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಬದಲಾದ ಜೀವನಶೈಲಿ, ಬಹಳ ಸಮಯದವರೆಗೆ ನಿರಂತರವಾಗಿ ಕುಳಿತುಕೊಂಡೇ ಕೆಲಸ ಮಾಡುವುದು ಅಥವಾ ಯಾರ ಕೆಲಸದಲ್ಲಿ ಮೇಲಿಂದ ಮೇಲೆ ಬಗ್ಗುವುದು ಅನಿವಾರ್ಯವಾಗಿರುತ್ತದೆಯೋ ಅಂತಹವರಲ್ಲಿ ಸಹಜವಾಗಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ!

ಈ ರೀತಿಯಾದ ಕೆಲಸಕ್ಕೆ ಸಂಬಂಧಪಟ್ಟ, ಬೆನ್ನು ನೋವಿಗೆ ಕಾರಣವಾಗುವ ಕೆಲವು ಭಂಗಿಗಳಿಂದ ಬೆನ್ನಿನ ಸದೃಢತೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದು ಒಂದು ಪ್ರಶ್ನೆಯಾಗುತ್ತದೆ. ವಿಟಮಿನ್ಸ್ ಮುಂತಾದ ಔಷದೋಪಚಾರದಿಂದ, ವ್ಯಾಯಾಮದಿಂದ ಬೆನ್ನುನೋವಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಆದರೆ, ಈ ಎಲ್ಲಾ ವಿಧಾನಗಳಿಗಿಂತ ಯೋಗಾಭ್ಯಾಸವನ್ನು ರೂಢಿಸಿಕೊಂಡರೆ ಬೆನ್ನು ನೋವಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದು. ದಂಡಾಸನ- ವಾತಕ್ಕೆ ಸಂಬಂಧಪಟ್ಟ ನೋವಿಗೆ ರಾಮಬಾಣ

Sukhasana (Easy Pose) For A Stronger Back

ಸುಖಾಸನ ಅಥವಾ ಸುಲಭವಾದ ಭಂಗಿ ಎಂದು ಕರೆಯಲ್ಪಡುವ ಆಸನವು ಬೆನ್ನನ್ನು ಗಟ್ಟಿಗೊಳಿಸುವುದಷ್ಟೇ ಅಲ್ಲದೇ ಸದೃಢವಾಗಿಯೂ ಮಾಡುತ್ತದೆ. ಸುಖಾಸನ ಆಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. ಸುಖಂ ಎಂದರೆ "ಸುಲಭವಾದದ್ದು" ಅಥವಾ "ಆನಂದ" ಎಂತಲೂ ಆಗುತ್ತದೆ. ಆಸನ ಎಂದರೆ "ಭಂಗಿ" ಎಂದರ್ಥ. ಸುಖಾಸನವು ಸುಲಭವಾದ ಆಸನವಾಗಿದ್ದು ಯಾವುದೇ ವಯಸ್ಸಿನ ವರ್ಗದವರೂ ಕೂಡ ಮಾಡಬಹುದು. ಕೈಕಾಲುಗಳ ಆರೋಗ್ಯ ವೃದ್ಧಿಗೆ ಅನುಸರಿಸಿ ವಸಿಷ್ಠಾಸನ

ಈ ಆಸನವು ಧ್ಯಾನ ಮಾಡಲು ಕೂಡ ಅನುಕೂಲವಾಗಿರುತ್ತದೆ. ಈ ಆಸನವನ್ನು ಅಭ್ಯಾಸ ಮಾಡಲು ಪ್ರಾರಂಭಿಕ ಹಂತದಲ್ಲಿರುವವರು ಗೋಡೆಯ ಆಸರೆಯನ್ನು ಪಡೆದುಕೊಳ್ಳಬಹುದು. ಆದರೆ, ನಿರಂತರವಾದ ಅಭ್ಯಾಸದಿಂದ ಯಾವುದೇ ಆಧಾರವಿಲ್ಲದೇ ಆಸನವನ್ನು ಹಾಕಬಹುದು. ಈ ಕೆಳಗೆ ಆಸನವನ್ನು ಹಾಕುವ ಬಗೆ ಹೇಗೆ ಮತ್ತು ಅದರಿಂದಾಗುವ ಲಾಭಗಳೇನೇನು ಎಂದು ತಿಳಿದುಕೊಳ್ಳೋಣ.

ಸುಖಾಸನವನ್ನು ಹಾಕಲು ಕ್ರಮಬಧ್ಧವಾದ ವಿವರಣೆ
1. ಕಾಲುಗಳನ್ನು ಮುಂದಕ್ಕೆ ಚಾಚಿ ನೇರವಾಗಿ ಕುಳಿತುಕೊಳ್ಳಿ.
2. ಮಂಡಿಗಳನ್ನು ಅಗಲಿಸಿ, ಬಾಗಿಸಿ ಕಾಲುಗಳನ್ನು ಮಡಿಸಬೇಕು.
3. ಪಾದದ ತುದಿಯ ಹೊರಭಾಗ ನೆಲದ ಮೇಲಿರಿಸಬೇಕು.
4. ಪಾದಗಳನ್ನು ಆರಾಮವಾಗಿರಿಸಿರಬೇಕು ಮತ್ತು ಪಾದಗಳ ಹಾಗು ಜಠರ ಕುಹರದ ಮಧ್ಯೆ ಸಾಕಷ್ಟು ಅಂತರವಿರಬೇಕು.
5. ಹಸ್ತಗಳನ್ನು ತೊಡೆಯ ಮೇಲಿರಿಸಬೇಕು.
6. ನಿಮ್ಮ ಬೆನ್ನನ್ನು ಸಮತೋಲನವಾಗಿಟ್ಟುಕೊಳ್ಳಿ. ಮೂಳೆ ತುದಿ ಹಾಗು ಸಾರ್ವಜನಿಕ ಮೂಳೆ ಎರಡೂ ನೆಲದಿಂದ ಸಮನಾಂತರನಾಗಿರಬೇಕು.
7.ನಿಮ್ಮ ಭುಜಗಳನ್ನು ಸ್ಥಿರವಾಗಿರಿಸಿ.
8. ಇದೇ ಭಂಗಿಯಲ್ಲಿ ಸಾಕೆನಿಸುವಷ್ಟು ಹೊತ್ತು ಕುಳಿತುಕೊಳ್ಳಿ.
9. ಮಡಿಸಿರುವ ಕಾಲುಗಳನ್ನು ಆಗಾಗ ಬದಲಾಯಿಸಕೊಳ್ಳಬಹುದು. ರಕ್ತ ಪರಿಚಲನೆ ಹೆಚ್ಚಿಸಲು ಅಧೋಮುಖ ವೃಕ್ಷಾಸನ ಅನುಸರಿಸಿ

ಸುಖಾಸನದಿಂದಾಗುವ ಇತರೆ ಲಾಭಗಳು

ಮೆದುಳನ್ನು ಆರಾಮವಾಗಿರಿಸುತ್ತದೆ. ದೇಹದ ನಮ್ಯಯತೆಯನ್ನು ವೃದ್ಧಿಸುತ್ತದೆ. ರಕ್ತ ಸಂಚಾರವನ್ನು ವೃದ್ಧಿಸುತ್ತದೆ. ಪಚನ ಕಾರ್ಯವನ್ನು ಉತ್ತಮಗೊಳಿಸಿ ಸದಾ ಉತ್ಸಾಹಿಗಳಾಗಿರುವುದಕ್ಕೆ ಎಣೆ ಮಾಡಿಕೊಡುತ್ತದೆ.

ಎಚ್ಚರಿಕೆ:
ಸ್ಲಿಪ್ ಡಿಸ್ಕ್‌ಯಿಂದ ಬಳಲುತ್ತಿರುವವರು, ಸೊಂಟ ಅಥವಾ ಮಂಡಿಗಳಿಗೆ ಗಾಯವಾದವರು ಈ ಆಸನವನ್ನು ಮಾಡತಕ್ಕದ್ದಲ್ಲ. ಯೊಗ ತರಬೇತಿದಾರರ ಸಲಹೆ ಸೂಚನೆಗಳ ಮೇಲೆ ಮಾಡುವುದು ಹೆಚ್ಚು ಸೂಕ್ತ.

English summary

Sukhasana (Easy Pose) For A Stronger Back

Sukhasana, or the easy pose, is one such yoga asana that has been proved to strengthen our back and in turn make it more stronger. Sukhasana comes from the Sanskrit word 'Sukham' which means easy or pleasure and 'Asana' which means pose. Sukhasana is one of the simplest forms of asana and can be done by people of all age groups. This asana can also be used for meditation purposes.
X
Desktop Bottom Promotion