For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜು ಕರಗಿಸಲು ಪರಿಪೂರ್ಣ 'ನಾವಾಸನ'

By Manu
|

ನಮ್ಮ ದೇಹದಲ್ಲಿ ಅತ್ಯಂತ ಕಡೆಯದಾಗಿ ಕರಗುವ ಕೊಬ್ಬು ಎಂದರೆ ಹೊಟ್ಟೆ ಮತ್ತು ಸೊಂಟದ ಕೊಬ್ಬು. ಇದೇ ಕಾರಣಕ್ಕೆ ಈ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಅಂತೆಯೇ ಅಸಾಧ್ಯವೂ ಅಲ್ಲ. ಯೋಗಾಸನಗಳಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಕೆಲವು ಆಸನಗಳಿದ್ದು ಇದನ್ನು ಮನೆಯಲ್ಲಿಯೇ, ನಿಮಗೆ ಅನುಕೂಲವಾದ ಸಮಯದಲ್ಲಿ ನಿಯಮಿತವಾಗಿ ಅನುಸರಿಸುವ ಮೂಲಕ ಹೊಟ್ಟೆಯ ಬೊಜ್ಜನ್ನು ನಿಧಾನವಾಗಿಯಾದರೂ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಕರಗಿಸಬಹುದು. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಇಂದಿನ ದಿನಗಳಲ್ಲಿ ಯುವಕರಿಗೆ ಸರಿಸಮಾನವಾಗಿ ಯುವತಿಯರೂ ಸಪಾಟಾದ ಹೊಟ್ಟೆಯನ್ನು ಬಯಸುತ್ತಾರೆ. ಈ ನಿಟ್ಟಿನಲ್ಲಿ ಯೋಗಾಸನದಲ್ಲಿಯೇ ಅತ್ಯಂತ ಪರಿಣಾಮಕಾರಿಯಾದ ಆಸನವೆಂದರೆ 'ಪರಿಪೂರ್ಣ ನಾವಾಸನ'. ನಾವೆ ಎಂದರೆ ದೋಣಿ ಎಂಬ ಅರ್ಥವಿದೆ. ಈ ಆಸನದಲ್ಲಿ ದೇಹ ದೋಣಿಯ ರೂಪ ಪಡೆಯುವುದರಿಂದ ಈ ಹೆಸರು ಬಂದಿದೆ. ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯದ್ಭುತ ಯೋಗಾಸನಗಳು

ಈ ಆಸನವನ್ನು ಅನುಸರಿಸಲು ಕೊಂಚ ಹೆಚ್ಚಿನ ಶ್ರಮ ಮತ್ತು ಸತತ ಅಭ್ಯಾಸದ ಹಾಗೂ ಕೊಂಚ ತಾಳ್ಮೆಯ ಅಗತ್ಯವೂ ಇದೆ. ಆದರೆ ಇದರ ಪರಿಣಾಮ ಮಾತ್ರ ಅತ್ಯಂತ ಸಿಹಿಯಾಗಿರುತ್ತದೆ. ಈ ಆಸನವನ್ನು ಅನುಸರಿಸುವವರು ದೈಹಿಕವಾಗಿ ಸಬಲರಿರಬೇಕು. ಬನ್ನಿ, ಈ ಆಸನವನ್ನು ಅನುಸರಿಸುವ ಬಗೆ ಹಾಗೂ ಇದರ ಪ್ರಯೋಜನಗಳ ಬಗ್ಗೆ ಕೆಳಗಿನ ಸ್ಲೈಡ್ ಷೋ ಮೂಲಕ ಅರಿಯೋಣ: ಪರಿಪೂರ್ಣ ನಾವಾಸನದ ಹಂತಗಳು...

ಹಂತ 1

ಹಂತ 1

ಮೊದಲು ಕಾಲುಗಳನ್ನು ನೀಳವಾಗಿಸಿ ನೆಲದ ಮೇಲೆ ಕುಳಿತುಕೊಳ್ಳಿ. ಕೈಗಳನ್ನು ಸೊಂಟದಿಂದ ಕೊಂಚವೇ ಹಿಂದಕ್ಕೆ ಹಸ್ತ ಕೆಳಗಿರುವಂತಿರಿಸಿ ನಿರಾಳರಾಗಿರಿ. ಈ ಹಂತದಲ್ಲಿ ಕುತ್ತಿಗೆ, ಬೆನ್ನು ನೆಟ್ಟಗಿರಲು ಹಾಗೂ ದೇಹ ನೇರವಾಗಿರಲಿ. ಆಸನವನ್ನು ಪ್ರಾರಂಭಿಸಲು ಉಸಿರನ್ನು ಮೇಲೆಳೆದುಕೊಳ್ಳುತ್ತಾ ಕುತ್ತಿಗೆಯನ್ನು ಕೊಂಚವೇ ಹಿಂದೆ ಬಾಗಿಸುತ್ತಾ ಕೊಂಚವೇ ಹಿಂದಕ್ಕೆ ಬಾಗಿ, ಅಂದರೆ ಎದೆಯ ಭಾಗ ಮುಂದೆ ಚಾಚುವಂತಿರಬೇಕು.

ಹಂತ 2

ಹಂತ 2

ಈಗ ನಿಧಾನವಾಗಿ ಉಸಿರು ಬಿಡುತ್ತಾ ಪಾದಗಳನ್ನು ನೆಲದಿಂದ ಮೇಲಕ್ಕೆತ್ತಿ. ಈಗ ದೇಹದ ಭಾರವನ್ನು ನೆಲಕ್ಕೆ ಒತ್ತಿಕೊಂಡಿರುವ ಕೈಗಳಿಂದ ಸಮತೋಲನದಲ್ಲಿರಿಸಿ. ಕಾಲುಗಳು ನೇರವಾಗಿದ್ದು ನೆಲಕ್ಕೆ ನಲವತ್ತೈದು ಡಿಗ್ರಿ ಕೋನಕ್ಕೆ ಬರುವಷ್ಟು ಮೇಲೆತ್ತಿ. ಕಾಲುಬೆರಳುಗಳನ್ನು ಮುಂದಕ್ಕೆ ಚಾಚಿ. ಅಂದರೆ ಈ ಹಂತದಲ್ಲಿ ಕಾಲುಬೆರಳುಗಳು ಮತ್ತು ಕಣ್ಣುಗಳು ಒಂದೇ ಮಟ್ಟದಲ್ಲಿರಬೇಕು. ಪ್ರಾರಂಭದಲ್ಲಿ ಈ ಹಂತ ಇಷ್ಟು ಮೇಲಕ್ಕೆ ಬರದೇ ಇದ್ದರೂ ಕ್ರಮೇಣ ಸಾಧ್ಯವಾಗುತ್ತದೆ.

ಹಂತ 3

ಹಂತ 3

ಈಗ ಕೈಗಳನ್ನು ನಿಧಾನವಾಗಿ ಮುಂದೆ ತಂದು ಮೇಲಕ್ಕೆತ್ತಿ ಕಾಲುಬೆರಳುಗಳತ್ತ ಚಾಚಿ. ಅಂದರೆ ಈ ಹಂತದಲ್ಲಿ ಕೈಗಳು ಭೂಮಿಗೆ ಸಮಾನಾಂತರವಾಗಿದ್ದು ದೇಹ ದೋಣಿಯ ಆಕೃತಿಯಲ್ಲಿರುತ್ತದೆ. ಇದೇ ಕಾರಣಕ್ಕೆ ಇದಕ್ಕೆ ನಾವಾಸನ ಎಂಬ ಹೆಸರು ಬಂದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಂತ 3

ಹಂತ 3

ಒಂದು ವೇಳೆ ಪ್ರಾರಂಭದ ಹಂತದಲ್ಲಿ ಕೈಗಳನ್ನು ಮೇಲಕ್ಕೆತ್ತಲು ವಿಪರೀತ ಕಷ್ಟವಾದರೆ ಕೂಡಲೇ ಕೈಗಳನ್ನು ಇಳಿಸಿ ನೆಲದ ಮೇಲಿರಿಸಿ. ಆದರೆ ಕ್ರಮೇಣ ಇದು ಅಭ್ಯಾಸವಾಗುತ್ತದೆ. ಕುತ್ತಿಗೆಯನ್ನು ಹಿಂದಕ್ಕೆ ವಾಲಿಸಬೇಡಿ, ಬೆನ್ನುಮೂಳೆಗೆ ಸಮಾನವಾಗಿ ನೆಟ್ಟಗೇ ಇರಲಿ.

ಹಂತ 4

ಹಂತ 4

ಈ ಹಂತದಲ್ಲಿ ದೀರ್ಘವಾಗಿ ಉಸಿರಾಡುತ್ತಾ ಎಷ್ಟು ಹೊತ್ತು ಸಾಧ್ಯವೋ ಅಷ್ಟೂ ಹೊತ್ತು ಹಾಗೇ ಇರಿ. ಈ ಆಸನದಲ್ಲಿ ಹೊಟ್ಟೆಯ ಸ್ನಾಯುಗಳಿಗೆ ಅತೀವವಾದ ಒತ್ತಡ ಬೀಳುವ ಕಾರಣ ಪ್ರಾರಂಭದ ಹಂತದಲ್ಲಿ ನೋವು ಪ್ರಾರಂಭವಾದೊಡನೆ ನಿಲ್ಲಿಸಿಬಿಡಿ. ಹೊಟ್ಟೆಯ ಸ್ನಾಯುಗಳು ಸಾಕು ಎಂಬ ಬಳಿಕ ನಿಧಾನವಾಗಿ ಆಸನವನ್ನು ಪ್ರಾರಂಭಿಸಿದ ವಿರುದ್ಧ ಕ್ರಿಯೆಯನ್ನು ಅನುಸರಿಸಿ ಕುಳಿತುಕೊಳ್ಳಿ.

ಪರಿಪೂರ್ಣ ನಾವಾಸನದ ಪ್ರಯೋಜನಗಳು

ಪರಿಪೂರ್ಣ ನಾವಾಸನದ ಪ್ರಯೋಜನಗಳು

* ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಿ ಕೊಬ್ಬನ್ನು ಕರಗಿಸಲು ಅತ್ಯುತ್ತಮ ಕ್ರಮವಾಗಿದೆ.

* ಬೆನ್ನುಹುರಿ ಮತ್ತು ಬೆನ್ನುಮೂಳೆಯನ್ನೂ ದೃಢಗೊಳಿಸುತ್ತದೆ.

* ಮೂತ್ರಪಿಂಡ, ಥೈರಾಯ್ಡ್ ಗ್ರಂಥಿ, ಕರುಳುಗಳು ಮತ್ತು ಪ್ರೋಸ್ಟೇಟ್ ಗ್ರಂಥಿಗಳಿಗೆ ಹೆಚ್ಚಿನ ಪ್ರಚೋದನೆ ದೊರಕುತ್ತದೆ.

* ಒತ್ತಡದಿಂದ ನಿರಾಳರಾಗಲು ನೆರವಾಗುತ್ತದೆ.

* ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಎಚ್ಚರಿಕೆ

ಎಚ್ಚರಿಕೆ

ಒಂದು ವೇಳೆ ನಿಮಗೆ ಕುತ್ತಿಗೆ ಅಥವಾ ಬೆನ್ನುನೋವಿನ ತೊಂದರೆ ಇದ್ದರೆ ಈ ಆಸನ ನಿಮಗೆ ತಕ್ಕುದಲ್ಲ. ಅಂತೆಯೇ ಗರ್ಣಿಣಿಯರು ಸರ್ವಥಾ ಈ ಆಸನ ಅನುಸರಿಸಕೂಡದು. ಅಸ್ತಮಾ, ಹೃದಯದ ತೊಂದರೆ, ಕಡಿಮೆ ರಕ್ತದೊತ್ತಡ ಮತ್ತು ಇತ್ತೀಚೆಗೆ ಅತಿಸಾರದಿಂದ ಬಳಲಿದ್ದರೆ ಈ ಆಸನ ಅನುಸರಿಸಬಾರದು.

English summary

Paripurna Navasana (Boat Pose) For Cutting Down Tummy Fat

When you think about burning your tummy fat without going to any gym, Yoga is the best answer. Yes, you could perform this technique at the comfort of your home to reap the beautiful benfits from it. Chubby stomach looks good till the time you are a kid, but when you are all grown up, whether a boy or a girl, you want a fat-free tummy to look in shape and well maintained. One such pose, in fact the best pose for fat reduction, is the 'Paripurna Navasana', also known as the full boat pose.
X
Desktop Bottom Promotion