For Quick Alerts
ALLOW NOTIFICATIONS  
For Daily Alerts

ಯೋಗ ಟಿಪ್ಸ್: ಒತ್ತಡವನ್ನು ಹದ್ದು ಬಸ್ತಿನಲ್ಲಿಡುವ 'ನೌಕಾಸನ'

By Vani nayak
|

ನೀವು ವಿಪರೀತ ಒತ್ತಡದಲ್ಲಿ ಸಿಲುಕಿಕೊಂಡು, ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದೀರ? ಹಾಗಿದ್ದಲ್ಲಿ ಯೋಗಾಸನವನ್ನು ಅಭ್ಯಾಸ ಮಾಡಿ. ಅದರಲ್ಲೂ ನೌಕಾಸನವನ್ನು ರೂಢಿಸಿಕೊಂಡರೆ ನಿಮಗೆ ಒತ್ತಡದಿಂದ ಮುಕ್ತಿ ಸಿಗುತ್ತದೆ.

ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಮಯಸ್ಕರವರೆಗೆ, ಒಂದಲ್ಲ ಒಂದು ರೀತಿಯಲ್ಲಿ ಒತ್ತಡವನ್ನು ಅನುಭವಿಸುತ್ತಾರೆ. ಆದರೆ ಅದರ ತೀವ್ರತೆ ಮಾತ್ರ ಬೇರೆಯಾಗಿರಬಹುದು. ಯಾವುದೇ ರೀತಿಯ ಒತ್ತಡ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಲ್ಲ. ಲವಲವಿಕೆಯ ಜೀವನ ಶೈಲಿಗೆ- ದಿನನಿತ್ಯ ಮಾಡಿ ಹಾಲಾಸನ

ಮೇಲಿಂದ ಮೇಲೆ ಒತ್ತಡವು ಬರುತ್ತಾ ಹೋದರೆ, ಅದರ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಆದ್ದರಿಂದ ಈ ಒತ್ತಡ ಹಿಂದಿನ ಕಾರಣವನ್ನರಿತು ಸರಿಯಾದ ಸಮಯಕ್ಕೆ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದ್ದಲ್ಲಿ, ರಕ್ತದೊತ್ತಡದ ಪ್ರಮಾಮ ಹೆಚ್ಚಾಗಿ, ತಲೆನೋವು, ನಿದ್ರಾಹೀನತೆಯಂತಹ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಯೋಗಾಭ್ಯಾಸವು, ಒತ್ತಡ ನಿವಾರಣೆಯ ನೈಸರ್ಗಿಕ ವಿಧಾನಗಳಲ್ಲಿ ಒಂದಾಗಿದೆ.

Naukasana

ಇದರ ಮತ್ತೊಂದು ಉತ್ತಮ ಅಂಶವೆಂದರೆ, ಇದಕ್ಕೆ ಯಾವುದೇ ರೀತಿಯ ಅಡ್ಡಪರಿಣಾಮಗಳಿರುವುದಿಲ್ಲ. ನೌಕಾಸನವನ್ನು ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ "ಬೋಟ್ ಪೋಸ್" ಎಂತಲೂ ಕರೆಯುತ್ತಾರೆ. ನೌಕಾಸನ ಎಂಬ ಪದ ಸಂಸ್ಕೃತ ಭಾಷೆಯದ್ದಾಗಿದೆ. "ನೌಕಾ" ಎಂದರೆ ನೌಕೆ ಎಂದರ್ಥ ಹಾಗು "ಆಸನ" ಎಂದರೆ ಭಂಗಿ ಎಂದರ್ಥ. ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!

ಪ್ರಾರಂಭಿಕ ಹಂತದಲ್ಲಿರುವವರಿಗೆ, ಈ ಆಸನವನ್ನು ಹಾಕುವುದು ಕಷ್ಟವಾದರೂ, ದಿನ ನಿತ್ಯದ ಅಭ್ಯಾಸದಿಂದ ಸುಲಭವಾಗುತ್ತದೆ. ಏಕೆಂದರೆ, ಈ ಆಸನವನ್ನು ಹಾಕಲು ಸಾಕಷ್ಟು ಸಮತೋಲನತೆ ಬೇಕಾಗುತ್ತದೆ. ಬನ್ನಿ, ಈ ನೌಕಾಸನವನ್ನು ಹಾಕುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ

Naukasana

ನೌಕಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ

1. ಮೊದಲಿಗೆ, ಯೋಗಾ ಮ್ಯಾಟಿನ ಮೇಲೆ ಮಲಗಿಕೊಳ್ಳಿ.

2. ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿರಿಸಬೇಕು ಹಾಗು ಪಾದಗಳನ್ನು ಒಂದಕ್ಕೊಂದುಜೋಡಿಸಿರಬೇಕು.

3. ದೀರ್ಘವಾದ ಉಸಿರೆಳೆದುಕೊಂಡು, ನಿಧಾನವಾಗಿ ನಿಮ್ಮ ಎದೆಯನ್ನು ಹಾಗು ಪಾದವನ್ನು ನೆಲದ ಮೇಲಿಂದ ಎತ್ತಬೇಕು.

4. ಹೀಗೆ ಮಾಡುವಾಗ, ಕೈಗಳನ್ನು ಚಾಚಿರಬೇಕು ಮತ್ತು ಅದರ ಪರಿಣಾಮ ಹೊಟ್ಟೆಯ ಹಿಗ್ಗುವಿಕೆಯ ಅನುಭವವಾಗಬೇಕು.

5. ನಿಮ್ಮ ದೇಹದ ತೂಕವು ಸಂಪೂರ್ಣವಾಗಿ ಪೃಷ್ಠಭಾಗದ ಮೇಲಿರಬೇಕು.

6. ನಿಮ್ಮ ಎಲ್ಲಾ ಕೈಬೆರಳುಗಳು ಹಾಗು ಕಾಲ್ಬೆರಳುಗಳು ನೇರವಾಗಿರಿಸಬೇಕು.

7. ನಿಮ್ಮ ಕಣ್ಣುಗಳು ಕೂಡ ನೇರ ದೃಷ್ಟಿ ಹೊಂದಿರಬೇಕು.

8. ಇದೇ ಭಂಗಿಯಲ್ಲಿ ಕೆಲ ಕ್ಷಣಗಲ ಕಾಲವಿರಬೇಕು.

9. ನಂತರ ನಿಧಾನವಾಗಿ ಉಸಿರು ಬಿಟ್ಟು ಮರಳಿ ಮೊದಲಿನ ಭಂಗಿಗೆ ಬನ್ನಿ.

10. ಇದೇ ರೀತಿಯಾಗಿ 4-5 ಬಾರಿ ಅಭ್ಯಾಸ ಮಾಡಿ.

Naukasana

ನೌಕಾಸನದಿಂದಾಗುವ ಇತರ ಲಾಭಗಳು

*ಇದರಿಂದ ಕಿಬ್ಬೊಟ್ಟೆಯು ಶಕ್ತಿಯುತವಾಗುತ್ತದೆ.

*ತೋಳುಗಳಿಗೆ ಮತ್ತು ಭುಜಗಳಿಗೆ ಶಕ್ತಿ ತುಂಬುತ್ತದೆ

*ತೊಡೆಗಳಿಗೆ ಹಾಗು ಕಾಲುಗಳಿಗೆ ಸದೃಢತೆಯನ್ನು ಕೊಡುತ್ತದೆ

*ಸ್ನಾಯುಗಳನ್ನು ಶಕ್ತಿಯುತವನ್ನಾಗಿ ಮಾಡುತ್ತದೆ

*ಪಚನ ಕ್ರಿಯೆಯನ್ನು ಉತ್ತೇಜಿಸುತ್ತದೆ

*ಮಲಬದ್ಧತೆಯನ್ನು ನಿವಾರಿಸುತ್ತದೆ

*ಮನಸ್ಸಿಗೆ ಆರಾಮ ಕೊಡುತ್ತದೆ.

ಎಚ್ಚರಿಕೆ

ನೌಕಾಸನವು ಒತ್ತಡ ನಿವಾರಣೆಗೆ ಉತ್ತಮವಾದ ಆಸನವಾಗಿದೆ. ಆದರೆ ಈ ಆಸನವನ್ನು ಹಾಕುವಾಗ ಬಹಳ ಎಚ್ಚರವಹಿಸಬೇಕಾಗುತ್ತದೆ. ಯಾರಿಗೆ ಬೆನ್ನೆಲಬಿನ ಸಮಸ್ಯೆಗಳಿವೆಯೋ, ತಲೆನೋವು, ಮೈಗ್ರೇನ್ ಅಥವಾ ಕಡಿಮೆ ರಕ್ತದೊತ್ತಡದ ಸಮಸ್ಯೆಗಳಿವೆಯೋ ಅವರು ಈ ನೌಕಾಸನವನ್ನು ಮಾಡತಕ್ಕದ್ದಲ್ಲ.

English summary

Naukasana (Boat Pose) To Relieve Stress

Naukasana, which is commonly known as the boat pose, comes from the Sanskrit words 'Nauka' which means boat and 'Asana' which means pose. Though this asana might be a little difficult for a beginner to perform (as it requires a lot of balance), with everyday practice, you could get better at it. So, here is the step-wise procedure to perform this asana. Take a look. Step-by-step Procedure To Perform Naukasana....
Story first published: Thursday, September 22, 2016, 7:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X