For Quick Alerts
ALLOW NOTIFICATIONS  
For Daily Alerts

ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!

By Madhumati.Hiremath
|

ಈಗಿನ ಬಹುತೇಕ ರೋಗಗಳಿಗೆ ಕಾರಣ ‘ಒತ್ತಡ'. ಎಲ್‌ಕೆಜಿ ಮಗುವಿಗೂ ಕೂಡ ಒತ್ತಡ ತಪ್ಪಿದ್ದಲ್ಲ. ಬೇಗ ಏಳಬೇಕು, ಹೋಮ್ ವರ್ಕ್ ಮಾಡಬೇಕು, ಪರೀಕ್ಷೆಯಲ್ಲಿ 99% ಮಾರ್ಕ್ಸ್ ತೆಗೆಯಬೇಕು....ಹೀಗೆ ಒತ್ತಡ ಎಂಬುದು ದೊಡ್ಡವರಿಂದ ಹಿಡಿದು ಸಣ್ಣ ಮಗುವಿನವರೆಗೂ ಉಸಿರು ಕಟ್ಟಿಸುವ ಪರಿಸ್ಥಿತಿಯನ್ನು ನಿರ್ಮಿಸುತ್ತದೆ.

ಒತ್ತಡದಲ್ಲಿ ಮಾಡುವ ಕೆಲಸಗಳು ಸರಿಯಾಗಿಯೂ ಇರುವುದಿಲ್ಲ, ಸಂತಸವನ್ನೂ ನೀಡುವುದಿಲ್ಲ. ಮಧುಮೇಹ , ಬಂಜೆತನ, ರಕ್ತದೊತ್ತಡ, ಪಾರ್ಶ್ವವಾಯುಗಳಂತಹ ಭಾರೀ ರೋಗಗಳಿಗೆ ಒತ್ತಡವೇ ಮೂಲ ಕಾರಣ. ಈ ಒತ್ತಡವನ್ನು ತಪ್ಪಿಸಲಂತೂ ಆಗುವುದಿಲ್ಲ. ಆದರೆ ಇದರಿಂದಾಗುವ ದುಷ್ಪರಿಣಾಮಗಳನ್ನು ಮಾತ್ರ ತಡೆಗಟ್ಟಬಹುದು. ಹೇಗೆ ಅಂತೀರಾ?

ಬನ್ನಿ ನಾವಿಲ್ಲಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು, ಇವು ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ಮುದವನ್ನು ನೀಡುವುದರ ಜೊತೆಗೆ, ಮನಸ್ಸಿಗೆ ಹೊಸ ಚೈತನ್ಯವನ್ನು ತುಂಬಿಸುತ್ತದೆ. ಹಾಗಿದ್ರೆ ತಡ ಏಕೆ? ಬನ್ನಿ ಒಂದು ಹತ್ತು ನಿಮಿಷ ರಿಲ್ಯಾಕ್ಸ್ ಆಗಿ, ನಂತರ ನೋಡಿ ನಿಮ್ಮ ಮನಸ್ಸಿಗೆ ಹತ್ತಾನೆ ಬಲಬರುವುದನ್ನು..! ನೆಮ್ಮದಿ ಕೆಡಿಸುವ ಮಾನಸಿಕ ಒತ್ತಡಕ್ಕೆ ಕಾರಣವೇನು?

Tips for Managing Stress

ಚೀ ಗುಂಗ
ಒತ್ತಡವನ್ನು ನಿಭಾಯಿಸಲು ನೆರೆಯ ರಾಷ್ಟ್ರ ಚೀನಾದಲ್ಲೊಂದು ರೂಢಿ ಇದೆ. ಅದುವೇ "ಚೀ ಗುಂಗ". ಏನಿದು ಚೀ ಗುಂಗ..? ನೆಲದ ಮೇಲೆ ಊಟಕ್ಕೆ ಕೂರುವಂತೆ ಚಕ್ಕಳ ಮಕ್ಕಳ ಹಾಕಿ ಕುಳಿತುಕೊಳ್ಳಬೇಕು . ನಮ್ಮ ಎಡಗೈಯನ್ನು ಬಲತೊಡೆಯ ಮೇಲೆ ಬಲಗೈಯನ್ನು ಎಡ ತೊಡೆಯ ಮೇಲಿಟ್ಟು ಒಂದರಿಂದ ಹತ್ತರವರೆಗೆ ಎಣಿಸುತ್ತಾ ನಿಧಾನವಾಗಿ ಕುತ್ತಿಗೆಯನ್ನು ಮೇಲಕ್ಕೆ ಮಾಡಿ ಉಸಿರನ್ನು ಒಳಗೆ ಎಳೆದುಕೊಳ್ಳಬೇಕು. ಪುನಃ ನಿಧಾನವಾಗಿ ಕುತ್ತಿಗೆಯನ್ನು ಮೇಲಿಂದ ಕೆಳಗೆ ಬಾಗಿಸುತ್ತಾ ಒಂದರಿಂದ ಹತ್ತರವರೆಗೆ ಎಣಿಸುತ್ತಾ ಉಸಿರನ್ನು ಹೊರಕ್ಕೆ ಬಿಡಿ. ಇದೇ ರೀತಿ 10 ನಿಮಿಷಗಳವರೆಗೆ ಪುನರಾವರ್ತಿಸಿ.

ಧ್ಯಾನ
ಧ್ಯಾನ ಬರೀ ಋಷಿ-ಮುನಿಗಳಿಗೆ ಮಾತ್ರ ಅಲ್ಲ. ಇದನ್ನು ಯಾವ ವಯಸ್ಸಿನವರಾದ್ರೂ, ಯಾವ ವೇಳೆಯಲ್ಲಿ ಬೇಕಾದ್ರೂ ಮಾಡಬಹುದು. ಉದ್ವಿಘ್ನಗೊಂಡ ಮನಸ್ಸನ್ನು ಶಾಂತಗೊಳಿಸಿ ಪುನಃ ಚೈತನ್ಯ ಗೊಳಸುವುದಲ್ಲದೆ ಹೃದಯ ಬಡಿತವನ್ನು ನಿಧಾನಿಸಿ ಆಮ್ಲಜನಕದ ಸರಬರಾಜನ್ನು ನಿಯಮಿತಗೊಳಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮೆದುಳಿನಿಂದ ಹೊಮ್ಮುವ ತರಂಗಗಳ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ನೆರವಾಗುತ್ತದೆ. ನಿಮಗೆ ಸರಿ ಎನ್ನಿಸುವಂತೆ ಕುಳಿತು, ಕಣ್ಣು ಮುಚ್ಚಿ ಹತ್ತರಿಂದ ಒಂದರವರೆಗೆ ಎಣಿಸುತ್ತಾ ಮನಸ್ಸನ್ನು ಕೇಂದ್ರೀಕರಿಸಬೇಕು. ಹೀಗೆ ಮಾಡುವಾಗ ಉಸಿರಾಟ ನಿಧಾನವಾಗಿರಲಿ. ಇದನ್ನೇ 10-15 ನಿಮಿಷ ಪುನರಾವರ್ತಿಸಿ. ಕೆಲಸದ ಒತ್ತಡದಿಂದ ವಿಶ್ರಾಂತಿ ಬೇಕೆಂದು ಅನಿಸುತ್ತಿದೆಯೇ?

ಮಸಾಜ್
ಎರಡೂ ಕಣ್ಣುಗಳನ್ನು ಮುಚ್ಚಿ ತೋರು ಬೆರಳಿಂದ ಕಣ್ಣು ಗುಡ್ಡೆಗಳ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. ಇವುಗಳು ಕುಳಿತಲ್ಲೇ 10-15 ನಿಮಿಷಗಳಲ್ಲಿ ಮಾಡಿಕೊಳ್ಳುವ ಒತ್ತಡ ನಿಯಂತ್ರಕಗಳಾದರೆ, ಕುತ್ತಿಗೆ ಮಸಾಜ್, ಪೆಡಿಕ್ಯೂರ್, ಮೆನಿಕ್ಯುರ್, ಬೆನ್ನಿನ ಮಸಾಜ್, ನಡಿಗೆ, ವ್ಯಾಯಾಮಗಳು ನಿಮ್ಮ ಒತ್ತಡವನ್ನು ನಿವಾರಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತವೆಯಾದರೂ ಒಳ್ಳೆಯ ಪರಿಣಾಮ ಖಚಿತ. ಒತ್ತಡವನ್ನು ನಿವಾರಿಸಿಕೊಂಡಷ್ಟೂ ಉತ್ತಮ ಆರೋಗ್ಯ ನಿಮ್ಮದಾಗುವುದು ಖಂಡಿತ.

English summary

Tips for Managing Stress

Certain situations create stress instantly, such as a major issue at work or a crisis at home that needs to be addressed right away. When there's an urgent problem that requires your immediate attention, managing stress is important so that you can think clearly. Try these stress reduction tips to help you deal with anxiety-provoking experiences:
X
Desktop Bottom Promotion