For Quick Alerts
ALLOW NOTIFICATIONS  
For Daily Alerts

  ವಿಶ್ವ ಯೋಗ ದಿನ ವಿಶೇಷ: ಯೋಗ ಮಾಡಿ, ಆರೋಗ್ಯ ಪಡೆಯಿರಿ

  By Manu
  |

  ಆರೋಗ್ಯವನ್ನು ಉತ್ತಮವಾಗಿರಿಸಲು ದೇಹವನ್ನು ಸೆಳೆತಕ್ಕೆ ಒಡಮಾಡುವ ಯೋಗಾಸನ ಭಾರತದ ಒಂದು ಪುರಾತನ ಸಂಸ್ಕೃತಿಯಾಗಿದ್ದು ಇದರ ಪರಿಣಾಮ ಮತ್ತು ಪ್ರಯೋಜನಗಳನ್ನು ಇಂದಿನ ವಿಜ್ಞಾನವೂ ಒಪ್ಪಿ ಈ ಆಸನಗಳನ್ನು ಕಂಡುಹಿಡಿದ ಋಷಿ ಮುನಿಗಳಿಗೆ ಭೇಷ್ ಎಂದಿದೆ.

  ಯೋಗಾಸನವನ್ನು ವಿಶ್ವಮಟ್ಟದಲ್ಲಿ ಎಲ್ಲರೂ ಅನುಸರಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಭಾರತ ಸರ್ಕಾರ ಪ್ರಾರಂಭಿಸಿದ ವಿಶ್ವ ಯೋಗ ದಿನ ಒಂದು ಪ್ರಮುಖ ದಿನವಾಗಿದ್ದು ಯೋಗಾಸನ ಅನುಸರಿಸುವ ಮೂಲಕ ಇಡಿಯ ವಿಶ್ವವೇ ಉತ್ತಮ ಆರೋಗ್ಯ ಹೊಂದುವಂತಾಗಬೇಕು ಎಂದ ಸಂದೇಶ ನೀಡುತ್ತಿದೆ.

  International Yoga Day 2016: Yoga Asanas For Good Health
   

  ಈ ದಿನದಂದು ವಿಶ್ವಮಟ್ಟದಲ್ಲಿ ಎಲ್ಲರೂ ಏಕಸಮಯದಲ್ಲಿ ಯೋಗಾಸನಗಳನ್ನು ಅನುಸರಿಸುವುದು ಸಾಂಕೇತಿಕವಾಗಿದ್ದು ಇಂದು ಪ್ರಾರಂಭಿಸಿದ ಯೋಗಾಸನ ಸತತವಾಗಿ ಮುಂದುವರೆದು ನಿತ್ಯದ ಒಂದು ಚಟುವಟಿಕೆಯಾಗಿಸುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿ, ರಕ್ತಪರಿಚಲನೆ ಹೆಚ್ಚಿಸುವುದು, ಸ್ನಾಯುಗಳಿಗೆ, ಮೂಳೆಗಳಿಗೆ ಸೆಳೆತ ನೀಡುವ ಮೂಲಕ ಉತ್ತಮ ಆರೋಗ್ಯ ಹೊಂದುವಂತಾಗಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.   ಈ ಟಾಪ್ 10 ಕೊಡುಗೆ ಯೋಗ ಮಾಡುವವರಿಗೆ ಮಾತ್ರ

  ಆದರೆ ಈ ದಿನದಂದು ಎಲ್ಲಾ ಆಸನಗಳನ್ನು ಅನುಸರಿಸಲು ಸಾಧ್ಯವಾಗದು. ಪ್ರಾರಂಭದ ಹಂತದಲ್ಲಿ ಕೆಳಗಿನ ಸ್ಲೈಡ್ ಷೂ ಮೂಲಕ ನೀಡಲಾಗಿರುವ ಆಸನಗಳೇ ಹೆಚ್ಚು ಸೂಕ್ತವಾಗಿವೆ:

  International Yoga Day 2016: Yoga Asanas For Good Health
   

  ಉತ್ತಮ ನಿದ್ದೆಗಾಗಿ ಅನುಸರಿಸಿ ಹಾಲಾಸನ

  ನೇಗಿಲ ರೂಪ ಪಡೆಯುವ ದೇಹದ ಮೂಲಕ ಬೆನ್ನು ಮತ್ತು ಕಾಲಿನ ಸ್ನಾಯುಗಳು ಹೆಚ್ಚಿನ ಸೆಳೆತ ಪಡೆದು ರಕ್ತಪರಿಚಲನೆ ಹೆಚ್ಚಿಸುವ ಮೂಲಕ ರಾತ್ರಿಯ ನಿದ್ದೆ ಸುಖಕರವಾಗಿಸಲು ನೆರವಾಗುತ್ತದೆ. ಆದರೆ ಈ ಆಸನದಲ್ಲಿ ಪಳಗುವುದು ಮೊದಲ ಪ್ರಯತ್ನಗಳಲ್ಲಿ ಸಾಧ್ಯವಾಗಲಿಕ್ಕಿಲ್ಲ. ಆದರೆ ಅಸಾಧ್ಯವೂ ಅಲ್ಲ, ಕೆಲವೇ ದಿನಗಳಲ್ಲಿ ಈ ಆಸನ ಸುಲಭಸಾಧ್ಯವಾಗುತ್ತದೆ.

  ಉತ್ತಮ ಪರಿಣಾಮ ಪಡೆಯಲು ರಾತ್ರಿ ಊಟದ ಬಳಿಕ ಕೊಂಚ ಅಡ್ಡಾಡಿ ಹಿಂದಿರುಗಿ ಈ ಆಸನವನ್ನು ಅನುಸರಿಸಿ ಬಳಿಕ ಮಲಗುವ ಮೂಲಕ ಉತ್ತಮ ನಿದ್ದೆ ಪಡೆಯಬಹುದು. ನಿದ್ರೆ ಬರುತ್ತಿಲ್ಲವೇ? ಮಾತ್ರೆ ಬಿಡಿ, ಯೋಗ ಮಾಡಿ

  ಬೆನ್ನು ನೋವು ಕಡಿಮೆಗೊಳಿಸಲು ಅನುಸರಿಸಿ ಬಿಟಿಲಾಸನ

  ನೆಲದ ಮೇಲೆ ಬೋರಲಾಗಿ ಮಲಗಿ ನಿಧಾನವಾಗಿ, ಉಸಿರನ್ನು ಎಳೆದುಕೊಳ್ಳುತ್ತಾ ಕಾಲುಗಳನ್ನು ಮಡಚುತ್ತಾ ದೇಹವನ್ನು ಮೇಲಕ್ಕೆತ್ತಿ. ಉಸಿರು ಪೂರ್ಣವಾಗುವಾಗ ಕೈಗಳು ನೀಳವಾಗಿದ್ದು ಬೆರಳುಗಳು ಮುಂದೆ ಚಾಚಿರಬೇಕು. ಒಂದರ್ಥದಲ್ಲಿ ಮಗುವನ್ನು ಕುದುರೆಯ ಮೇಲೆ ಕುಳಿತುಕೊಳ್ಳಲು ನಾವು ಅನುಸರಿಸುವ ಭಂಗಿ.

  International Yoga Day 2016: Yoga Asanas For Good Health

  ಈ ಹಂತಕ್ಕೆ ಬಂದ ಬಳಿಕ ಉಸಿರನ್ನು ಪೂರ್ಣವಾಗಿ ಬಳಿಕ ಮತ್ತೆ ಎಳೆದುಕೊಳ್ಳುತ್ತಾ ತಲೆಯನ್ನು ಮೇಲೆತ್ತಿ, ಹೊಟ್ಟೆಯನ್ನು ಕೆಳಗೆ ಬರುವಂತೆ ಬೆನ್ನುಮೂಳೆಯನ್ನು ಬಗ್ಗಿಸಿ. ಕೊಂಚ ಹೊತ್ತು ಹೀಗೇ ಇದ್ದು ಉಸಿರು ಬಿಡಿ. ಬಳಿಕ ಮತ್ತೊಮ್ಮೆ ಉಸಿರು ಎಳೆದುಕೊಳ್ಳುತ್ತಾ ಇದಕ್ಕೆ ವಿರುದ್ಧ, ಅಂದರೆ ತಲೆಯನ್ನು ಕೆಳಗೆ ಹಾಕಿ ಹೊಟ್ಟೆಯನ್ನು ಮೇಲಕ್ಕೆತ್ತಿ. ಅಂದರೆ ಬೆನ್ನುಮೂಳೆ ಕಮಾನಿನ ರೀತಿಯಲ್ಲಿ ಮೇಲಕ್ಕೆ ಬಾಗಬೇಕು. ಈ ಆಸನದಿಂದ ಬೆನ್ನಿನ ಸ್ನಾಯುಗಳಿಗೆ ಅತಿ ಹೆಚ್ಚಿನ ಸೆಳೆತ ಸಿಗುವ ಮೂಲಕ ಬೆನ್ನುನೋವು ಕಡಿಮೆಯಾಗುತ್ತದೆ.

  ಒತ್ತಡ ಕಡಿಮೆಯಾಗಿಸಲು ಅನುಸರಿಸಿ ಬಾಲಾಸನ

  ಬಾಲ ಎಂದರೆ ಮಗು ಎಂಬ ಅರ್ಥವಿದೆ. ಈ ಆಸನದಲ್ಲಿ ಮಕ್ಕಳನ್ನು ಅನುಸರಿಸುವ ಮೂಲಕ ಮೆದುಳಿನಲ್ಲಿ ಬಾಲ್ಯವನ್ನು ಅನುಭವಿಸುತ್ತಿರುವ ಅನುಭೂತಿಯುಂಟಾಗಿ ಮನಸ್ಸಿನ ಒತ್ತಡ ಕಡಿಮೆಯಾಗಲು ನೆರವಾಗುತ್ತದೆ. ತಾಯಿಯ ಗರ್ಭದಲ್ಲಿ ಮಗು ಹೇಗೆ ಮಲಗಿತ್ತೋ ಆ ಭಂಗಿಯನ್ನು ಅನುಸರಿಸುವ ಮೂಲಕ ಬಾಲ್ಯಾವಸ್ಥೆಗೆ ತೆರಳಿದ ಅನುಭವನ್ನು ಪಡೆಯಬಹುದು.

  International Yoga Day 2016: Yoga Asanas For Good Health
   

  ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಈ ಸೂರ್ಯನಮಸ್ಕಾರ

  ಇಡಿಯ ದೇಹದ ಎಲ್ಲಾ ಸ್ನಾಯುಗಳಿಗೆ ಏಕಸಮಯದಲ್ಲಿ ಸೆಳೆತ ನೀಡುವ ಆಸನಗಳಲ್ಲಿ ಸೂರ್ಯನಮಸ್ಕಾರವೂ ಒಂದು. ಆದರೆ ಸೂರ್ಯನಮಸ್ಕಾರದಲ್ಲಿ ಒಟ್ಟು ಹನ್ನೆರಡು ವಿಧಗಳಿದ್ದು ನಿಮಗೆ ಯಾವುದು ಸೂಕ್ತವೋ ಅದನ್ನು ಆರಿಸಿಕೊಳ್ಳಬಹುದು. ಉತ್ತಮ ಆರೋಗ್ಯಕ್ಕೆ ನಿತ್ಯವೂ ವಿವಿಧ ಸೂರ್ಯನಮಸ್ಕಾರಗಳನ್ನು ಅನುಸರಿಸುವ ಮೂಲಕ ಎಲ್ಲಾ ಸ್ನಾಯುಗಳಿಗೆ ಸೆಳೆತ ಪಡೆಯಬಹುದು. ಅಲ್ಲದೇ ಬೆಳಗ್ಗಿನ ಪ್ರಥಮ ಕಿರಣಗಳೊಂದಿಗೆ ಅನುಸರಿಸಿದರೆ ಆರೋಗ್ಯ ವೃದ್ಧಿಸುತ್ತದೆ. ಸೂರ್ಯ ನಮಸ್ಕಾರದ 12 ಆಸನಗಳು ಮತ್ತು ಮಂತ್ರ  

  ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನುಸರಿಸಿ ಮುದ್ರೆಗಳು

  ನಮ್ಮ ಹಸ್ತ ಮತ್ತು ಬೆರಳುಗಳ ಮೇಲೆ ಒತ್ತಡ ನೀಡುವ ಮುದ್ರೆಗಳ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯವಿದೆ. ಇದರಲ್ಲಿ ಪ್ರಮುಖವಾದುದು ಎಂದರೆ 'ಪ್ರಾಣಮುದ್ರೆ' ಇದನ್ನು ದಿನದ ಯಾವುದೇ ಸಮಯದಲ್ಲಿ ಅನುಸರಿಸಬಹುದಾಗಿದ್ದು ಇದರಿಂದ ವಿಶೇಷವಾಗಿ ಕಣ್ಣಿನ ಸ್ನಾಯುಗಳಿಗೆ ಹೆಚ್ಚಿನ ಪ್ರಯೋಜನವಿದೆ. ಒಟ್ಟಾರೆ ಆರೋಗ್ಯವೂ ವೃದ್ದಿಸುತ್ತದೆ.

  International Yoga Day 2016: Yoga Asanas For Good Health
   

  ಮೆದುಳಿನ ಕ್ಷಮತೆ ಹಚ್ಚಿಸಲು ಅನುಸರಿಸಿ ವೃಕ್ಷಾಸನ

  ಮೆದುಳಿಗೆ ಹೆಚ್ಚಿನ ಪ್ರಚೋದನೆ ನೀಡಿ ಕ್ಷಮತೆಯನ್ನು ಹೆಚ್ಚಿಸುವ ವೃಕ್ಷಾಸನವನ್ನು ಅನುಸರಿಸಲು ಮೊದಲು ಎರಡೂ ಕಾಲುಗಳನ್ನು ಕೊಂಚವೇ ಅಗಲಿಸಿ ನಿಂತುಕೊಳ್ಳಿ. ಬಳಿಕ ಬಲಪಾದವನ್ನು ಎಡಗಾಲ ತೊಡೆಯ ಮೇಲಿರಿಸಿ. ಕಾಲುಬೆರಳುಗಳು ನೆಲದ ಅಭಿಮುಖವಾಗಿದ್ದು ಮೊಣಗಂಟಿಗೆ ತಾಕುವಂತಿರಲಿ. ಎರಡೂ ಕೈಗಳನ್ನು ನೇರವಾಗಿ ತಲೆಯ ಮೇಲೆ ಮುಗಿಯುವಂತೆ ಜೋಡಿಸಿ. ಪೂರ್ಣ ಉಸಿರೆಳೆದು ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಉಸಿರು ಕಟ್ಟಿ.     ದೈಹಿಕ ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿ ಜಿಮ್ ಬಿಡಿ

  English summary

  International Yoga Day 2016: Yoga Asanas For Good Health

  Yoga is an ancient art that is described in our Indian scriptures. It is a combination of modern science and the wisdom of sages. On the occasion of International yoga day, there are a list of must do positions to try out which can help you to stay healthy and live a longer life.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more