ಸ್ಲಿಮ್‌ ಆಗಿ ಕಾಣಲು, ಇಂತಹ ಸಿಂಪಲ್ ಟಿಪ್ಸ್ ಅನುಸರಿಸಿ ಸಾಕು!

By: manu
Subscribe to Boldsky

ನಡುವಯಸ್ಸು ತಲುಪುತ್ತಿದ್ದಂತೆಯೇ ಹೆಚ್ಚಿನ ಮಹಿಳೆಯರ ಸೊಂಟ ವಿಸ್ತಾರವಾಗುತ್ತಾ ಸಹಜ ಸೌಂದರ್ಯವನ್ನು ಕಸಿದುಬಿಡುತ್ತದೆ. ನಿಮ್ಮ ನೆಚ್ಚಿನ ತಾರೆಯರು ಮತ್ತು ಕಿರಿಯರ ಜೀರೋ ಫಿಗರ್ ನೋಡಿದಾಗ ಅವ್ಯಕ್ತವಾದ ಹತಾಶೆ ನಿಮ್ಮನ್ನು ಆವರಿಸುತ್ತಿದೆಯೇ? ಈ ಸುಲಭ ಮತ್ತು ಮನೆಯಲ್ಲಿಯೇ ತಯಾರಿಸಬಹುದಾದ ಪೇಯವನ್ನು (ಜ್ಯೂಸ್) ಕುಡಿಯುವ ಮೂಲಕ ನೀವೂ ಬಳುಕುವಂತಹ ಸೊಂಟವನ್ನು ಪಡೆಯಬಹುದು.

ಸಾಮಾನ್ಯವಾಗಿ ಸೊಂಟದ ಸುತ್ತಳತೆ ಹೆಚ್ಚಲು ದೇಹದಲ್ಲಿ ಸಂಗ್ರಹವಾಗುವ ಕೊಬ್ಬು ಪ್ರಮುಖ ಕಾರಣವಾಗಿದೆ. ಈ ಪೇಯ ಜೀರ್ಣಗೊಳ್ಳಲು ಸೊಂಟದ ಕೊಬ್ಬನ್ನು ಶೀಘ್ರವಾಗಿ ಬಳಸುವ ಕಾರಣ ಕೊಬ್ಬನ್ನು ಕರಗಿಸುತ್ತದೆ. ತಜ್ಞರ ಪ್ರಕಾರ ಸೊಂಟದ ಕೊಬ್ಬು ಅತಿ ಕಠಿಣವಾಗಿ ಕರಗುವ ಕೊಬ್ಬಾಗಿದ್ದು ಈ ಸ್ಥಳದಲ್ಲಿ ಸ್ನಾಯುಗಳು ಅತಿ ಕಡಿಮೆ ಇರುವುದೂ ಈ ಕೊಬ್ಬನ್ನು ಕರಗಿಸಲು ಕಷ್ಟಕರವಾಗಿಸಲು ಇನ್ನೊಂದು ಕಾರಣವಾಗಿದೆ. ಶ್! ಇದು ಕೊಬ್ಬು ಕರಗಿಸುವ ಸಿಂಪಲ್ ಟ್ರಿಕ್ಸ್-ಪ್ರಯತ್ನಿಸ ನೋಡಿ....

ಆದ್ದರಿಂದ ಈ ಭಾಗದ ಕೊಬ್ಬನ್ನು ಹೆಚ್ಚು ಕಬಳಿಸುವ ಆಹಾರವೇ ಇದಕ್ಕೆ ಸೂಕ್ತ ಉತ್ತರವಾಗಿದೆ. ಈ ಪೇಯ ಕೊಬ್ಬು ಕರಗಿಸಲು ಅತ್ಯುತ್ತಮವಾಗಿದೆ. ಸರಿಯಾದ ಕ್ರಮದ ಸೇವನೆಯಿಂದ ಕೆಲವೇ ದಿನಗಳಲ್ಲಿ ಮರಳಿನ ಗಡಿಯಾರದಂತಹ ಕಟಿಯನ್ನು ನೀವೂ ಪಡೆಯಬಹುದು. ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!

ಈ ಪೇಯವನ್ನು ಮನೆಯಲ್ಲಿಯೇ ಲಭ್ಯವಿರುವ ಸಾಮಾಗ್ರಿಗಳನ್ನು ಬಳಸಿರುವುದರಿಂದ ಇದನ್ನು ಸುಲಭವಾಗಿ ತಯಾರಿಸಬಹುದು. ಇದರೊಂದಿಗೆ ಕೊಂಚ ವ್ಯಾಯಾಮವೂ ಅಗತ್ಯ, ಆದರೆ ಅನಿವಾರ್ಯವಲ್ಲ. ನಿಮ್ಮ ನಿತ್ಯದ ಮನೆಕೆಲಸಗಳೇ ನಿಮ್ಮ ವ್ಯಾಯಾಮಕ್ಕೆ ಸಾಕಷ್ಟಾಯಿತು. ಬನ್ನಿ, ಈ ವಿಧಾನ ಯಾವುದು ಎಂಬುದನ್ನು ನೋಡೋಣ....  

ಅಗತ್ಯವಿರುವ ಸಾಮಾಗ್ರಿಗಳು:

ಅಗತ್ಯವಿರುವ ಸಾಮಾಗ್ರಿಗಳು:

* ಟೊಮೆಟೊರಸ - 1 ಲೋಟ

* ಹಸಿಶುಂಠಿಯ ರಸ - 2 ದೊಡ್ಡ ಚಮಚ

* ಸೇಬಿನ ಶಿರ್ಕಾ - 3 ದೊಡ್ಡ ಚಮಚ

ಅಗತ್ಯವಿರುವ ಸಾಮಾಗ್ರಿಗಳು:

ಅಗತ್ಯವಿರುವ ಸಾಮಾಗ್ರಿಗಳು:

ಈ ಪಾನೀಯವನ್ನು ನಿಯಮಿತವಾಗಿ ಸೇವಿಸುವುದು ಅಗತ್ಯವಾಗಿದೆ. ಇದರಿಂದ ನಿಧಾನವಾಗಿ ಸೊಂಟದ ಕೊಬ್ಬು ಕರಗುತ್ತಾ ನಿಮ್ಮ ಇಚ್ಛೆಯ ಬಳುಕುವ ಸೊಂಟ ಪಡೆಯಲು ಸಾಧ್ಯವಾಗುತ್ತದೆ.

ವ್ಯಾಯಾಮವೂ ಅತ್ಯಗತ್ಯ

ವ್ಯಾಯಾಮವೂ ಅತ್ಯಗತ್ಯ

ಆದರೆ ಬರೆಯ ಈ ಪೇಯವನ್ನು ಕುಡಿದ ಮಾತ್ರಕ್ಕೆ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಕೊಬ್ಬು ಹೆಚ್ಚಿಸುವ ಯಾವುದೇ ಆಹಾರಗಳನ್ನು ಕೆಲಕಾಲದವರೆಗೆ ಸೇವಿಸದಿರುವುದು ಹಾಗೂ ಸಾಕಷ್ಟು ವ್ಯಾಯಾಮವನ್ನು ಮಾಡುತ್ತಿರುವುದು ಅಗತ್ಯ. ದಿನದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನಡೆಯುವುದರಿಂದಲೂ ನಿಮ್ಮ ವ್ಯಾಯಾಮದ ಅಗತ್ಯತೆ ಪೂರೈಸುತ್ತದೆ.

ಟೊಮೆಟೊ, ಶುಂಠಿ ಮತ್ತು ಸೇಬಿನ ಶಿರ್ಕಾ (Apple vinegar)

ಟೊಮೆಟೊ, ಶುಂಠಿ ಮತ್ತು ಸೇಬಿನ ಶಿರ್ಕಾ (Apple vinegar)

ಟೊಮೆಟೊ, ಶುಂಠಿ ಮತ್ತು ಸೇಬಿನ ಶಿರ್ಕಾ ಈ ಮೂರೂ ಸಾಮಾಗ್ರಿಗಳು ಜೊತೆಗೂಡಿದಾಗ ಇದು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಹಾಗೂ ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸುತ್ತದೆ.

ತಯಾರಿಕಾ ವಿಧಾನ ಮತ್ತು ಸೇವನೆಯ ವಿವರಗಳು:

ತಯಾರಿಕಾ ವಿಧಾನ ಮತ್ತು ಸೇವನೆಯ ವಿವರಗಳು:

* ಒಂದು ಲೋಟದಲ್ಲಿ ಮೇಲೆ ವಿವರಿಸಿದ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿ ಮಿಶ್ರಣ ಮಾಡಿ.

* ಅಗತ್ಯವೆನಿಸಿದರೆ ಮಾತ್ರ ಕೊಂಚ ನೀರು ಸೇರಿಸಬಹುದು.

ತಯಾರಿಕಾ ವಿಧಾನ ಮತ್ತು ಸೇವನೆಯ ವಿವರಗಳು:

ತಯಾರಿಕಾ ವಿಧಾನ ಮತ್ತು ಸೇವನೆಯ ವಿವರಗಳು:

* ಈ ದ್ರವನ್ನು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಸೇವಿಸಿ.

* ಬಳಿಕ ಮುಕ್ಕಾಲು ಗಂಟೆಯವರೆಗೆ ಏನನ್ನೂ ಸೇವಿಸದಿರಿ.

 
English summary

Homemade Drink To Attain An Hour-Glass Figure In A Month!

To attain an hour-glass figure, one must aim at losing belly fat and also keeping the other parts toned and slim! Also, experts say that abdominal fat is the hardest to lose, as there is lesser muscle growth in that region. So, if you want an hour-glass figure, you must make an effort to chisel your body into being shapely!
Please Wait while comments are loading...
Subscribe Newsletter