Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!
ಸಪಾಟಾದ ಹೊಟ್ಟೆ ಪ್ರತಿ ಮಹಿಳೆಯ ಕನಸು. ಆದರೆ ಇಂದಿನ ದಿನಗಳಲ್ಲಿ ಕೆಲಸ ಕಡಿಮೆಯಾದ ಕಾರಣ ಸೊಂಟದ ಸುತ್ತಳತೆ ವಿಶಾಲವಾಗುತ್ತಾ ಸಾಗುತ್ತದೆ. ಇದಕ್ಕೆ ಇಂಬುಕೊಡುವಂತೆ ಸಿದ್ಧ ಆಹಾರಗಳು, ವ್ಯಾಯಾಮದ ಕೊರತೆ, ಟಿವಿ ನೋಡುವಾಗ ತಿನ್ನುವ ಕುರುಕು ತಿಂಡಿಗಳು, ಹೆಚ್ಚಿನ ಕೊಬ್ಬಿನ ಅಂಶವಿರುವ ಆಹಾರಗಳನ್ನು ಮದುವೆ, ವಿಹಾರ, ಕೂಟಗಳಲ್ಲಿ ತಿನ್ನುವುದು ಇತ್ಯಾದಿಗಳೆಲ್ಲಾ ಕಾರಣವಾಗಿವೆ.
ಸೊಂಟ ವಿಶಾಲವಾದಷ್ಟೂ ಹೊಟ್ಟೆಯೂ ಕೊಂಚ ಮುಂದೆ ಬಂದು ಸ್ತ್ರೀಯರ ಬಳುಕುತನವನ್ನು ಕಸಿದುಕೊಳ್ಳುವುದು ಮಾತ್ರವಲ್ಲ, ಮಾನಸಿಕವಾಗಿಯೂ ಹೈರಾಣಾಗಿಸುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್
ಸಪಾಟಾದ ಹೊಟ್ಟೆ ಬೇಕೆಂದರೆ ನಮ್ಮ ಶರೀರವನ್ನು ನಿಸರ್ಗ ಹೇಗೆ ನಿರ್ಮಿಸಿದೆಯೋ ಆ ಕೆಲಸಕ್ಕೆ ತಕ್ಕಂತೆ ಮತ್ತೊಮ್ಮೆ ಮಾರ್ಪಾಡಿಸುವುದು ಅಗತ್ಯ. ನಿಸರ್ಗ ನಮ್ಮ ಶರೀರವನ್ನು ಇಡಿಯ ದಿನ ಕುಳಿತಿರಲು ಅಲ್ಲ, ಬದಲಿಗೆ ಕೆಲಸ ಮಾಡುತ್ತಲೇ ಇರಲು ನಿರ್ಮಿಸಿದೆ. ನಿಮ್ಮ ಹೊಟ್ಟೆಯ ಕೊಬ್ಬನ್ನು 10 ದಿನಗಳಲ್ಲೇ ಕರಗಿಸಿಕೊಳ್ಳಿ!
ಆ ಪ್ರಕಾರ ದಿನವಿಡೀ ಒಂದಲ್ಲಾ ಒಂದು ಕೆಲಸದಲ್ಲಿ ಮಗ್ನರಾಗಿದ್ದು ಸಾತ್ವಿಕ ಆಹಾರ ಸೇವನೆಯ ಮೂಲಕ ಕೆಲವೇ ದಿನಗಳಲ್ಲಿ ಉತ್ತಮ ಆರೋಗ್ಯ ಹಾಗೂ ಸಪಾಟಾದ ಹೊಟ್ಟೆಯನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಅತ್ಯುತ್ತಮವಾದ ಆಹಾರವನ್ನು ಇಂದು ಬೋಲ್ಡ್ ಸ್ಕೈ ತಂಡ ಪ್ರಸ್ತುತಪಡಿಸುತ್ತಿದೆ.....

ಅಗತ್ಯವಿರುವ ಸಾಮಾಗ್ರಿಗಳು
1. ಒಣ ಶುಂಠಿ ಪುಡಿ: ಒಂದು ಚಿಟಿಕೆ

ಅಗತ್ಯವಿರುವ ಸಾಮಾಗ್ರಿಗಳು
2. ಕಾಳು ಮೆಣಸಿನ ಪುಡಿ: ಒಂದು ಚಿಟಿಕೆ

ಅಗತ್ಯವಿರುವ ಸಾಮಾಗ್ರಿಗಳು
3. ಓಮ ಕಾಳಿನ ಪುಡಿ : ಒಂದು ಚಿಟಿಕೆ

ಅಗತ್ಯವಿರುವ ಸಾಮಾಗ್ರಿಗಳು
4. ಜೀರಿಗೆ ಪುಡಿ: ಒಂದು ಚಿಟಿಕೆ

ಅಗತ್ಯವಿರುವ ಸಾಮಾಗ್ರಿಗಳು
5. ಕಲ್ಲುಪ್ಪು: ಒಂದೆರಡು ಕಾಳುಗಳನ್ನು ಕುಟ್ಟಿ ಪುಡಿ ಮಾಡಿ ಇದರಿಂದ ಒಂದು ಚಿಟಿಕೆ

ಅಗತ್ಯವಿರುವ ಸಾಮಾಗ್ರಿಗಳು
6. ಮಜ್ಜಿಗೆ : ಒಂದು ಲೋಟ (ಕೆನೆರಹಿತ)

ತಯಾರಿಸುವ ವಿಧಾನ
ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಮಜ್ಜಿಗೆಯಲ್ಲಿ ಸೇರಿಸಿ ಮಿಶ್ರಣ ಮಾಡಿ. ಈ ಮಜ್ಜಿಗೆಯನ್ನು ದಿನಕ್ಕೆ ಎರಡು ಬಾರಿ ಕುಡಿಯುತ್ತಾ ಬನ್ನಿ. ಮೊದಲ ಲೋಟವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿ, ಬಳಿಕ ಮುಕ್ಕಾಲು ಗಂಟೆಯವರೆಗೆ ಏನನ್ನೂ ಸೇವಿಸಬೇಡಿ.

ತಯಾರಿಸುವ ವಿಧಾನ
ಎರಡನೆಯ ಲೋಟವನ್ನು ರಾತ್ರಿಯ ಊಟದ ಬಳಿಕ ದಿನದ ಅಂತಿಮ ಆಹಾರದ ರೂಪದಲ್ಲಿ ಸೇವಿಸಿ. ಸೇವಿಸಿದ ಒಂದು ಘಂಟೆಯ ನಂತರ ಮಲಗಿ. ಈ ವಿಧಾನದಿಂದ ಕೆಲವೇ ದಿನಗಳಲ್ಲಿ ಹೊಟ್ಟೆ ಸಪಾಟಾಗುತ್ತಾ ಬಂದಿರುವುದನ್ನು ಕಾಣಬಹುದು.



Click it and Unblock the Notifications
