For Quick Alerts
ALLOW NOTIFICATIONS  
For Daily Alerts

ಸ್ನಾಯುಗಳ ಬಲವರ್ಧನೆಗೆ- ಏಕ ಪಾದ ರಾಜಕಪೋತಾಸನ

By Vani Naik
|

ಇತ್ತೀಚಿನ ದಿನಗಳಲ್ಲಿ ದೇಹಕ್ಕೆ ಅಗತ್ಯವಿರುವ ದೈಹಿಕ ಚಟುವಟಿಕೆಗಳು ಜನರಲ್ಲಿ ಬಹಳ ಕಡಿಮೆಯಾಗುತ್ತಿದೆ. ಇದರಿಂದಾಗಿ ಬಹುತೇಕ ಮಂದಿ ಹಲವಾರು ನೋವಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಕಡೆಗಾಣಿಸಿದಲ್ಲಿ, ದೀರ್ಘಾವಧಿಯಲ್ಲಿ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ದೀರ್ಘಕಾಲ ಕುರ್ಚಿಯ ಮೇಲೆ ಕುಳಿತುಕೊಂಡು ಬಿಡುವಿಲ್ಲದೆ ಕೆಲಸ ಮಾಡುವುದು, ಅನೇಕ ಕಾರಣಗಳಲ್ಲಿ ಪ್ರಮುಖವಾದದ್ದು.

ನಮ್ಮ ದೇಹದಲ್ಲಿನ ಟೊಂಕ ಭಾಗದ ಅಥವಾ ಪೃಷ್ಠದ ಸ್ನಾಯುಗಳು ನಮ್ಮ ಚಲನವಲನಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಅವುಗಳನ್ನು ಉತ್ತಮ ಸ್ಧಿತಿಯಲ್ಲಿ ಇಟ್ಪುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಟೊಂಕ ಭಾಗದ ಸ್ನಾಯುಗಳ ನಮ್ಯತೆಯನ್ನು ವರ್ಧಿಸಲು ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ.

ಇದು ನಾವು ನಡೆಯಲು, ಮೆಟ್ಟಿಲುಗಳನ್ನು ಏರಲು, ಕುಳಿತುಕೊಳ್ಳಲು, ಪದ್ಮಾಸನ ಹಾಕಿಕೊಳ್ಳಲು, ಮಲಗಲು ಮತ್ತು ನಮ್ಮ ಮಂಡಿಗಳಿಗೆ ಆಧಾರ ಕೊಡಲು ನೆರವಾಗುತ್ತದೆ. ಯಾವುದೇ ಕ್ರೀಡೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ನೇರವಾಗಿ ನಿಮ್ಮ ಟೊಂಕ ಭಾಗದ ಸ್ನಾಯುಗಳ ಸಾಮರ್ಥ್ಯದ ಮೇಲೆ ಅವಲಂಬಿಸುತ್ತಿರುತ್ತದೆ.

Eka Pada Rajakapotasana,To Improve Flexibility Of Hip Muscles

ಹಾಗಾಗಿ ಅದರ ನಮ್ಯತೆಯನ್ನು ವರ್ಧಿಸುವುದು ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕುರ್ಚಿಯ ಮೇಲೆ ಬಹಳ ಕಾಲ ಕುಳಿತುಕೊಂಡು ಕೆಲಸ ಮಾಡುವುದರಿಂದ, ಟೊಂಕ ಭಾಗದ ಸ್ನಾಯುಗಳು ಗಟ್ಟಿಯಾಗಿ, ಸಡಿಲತೆಯನ್ನು ಕಳೆದುಕೊಳ್ಳುತ್ತದೆ. ಇದರ ಪರಿಣಾಮವಾಗಿ ಆ ಭಾಗ ದುರ್ಬಲವಾಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಕಲ್ಪನೆಯಾಗೇ ಉಳಿದುಕೊಂಡುಬಿಡುತ್ತದೆ. ಕೈಕಾಲುಗಳ ಆರೋಗ್ಯ ವೃದ್ಧಿಗೆ ಅನುಸರಿಸಿ ವಸಿಷ್ಠಾಸನ

ಆದರೆ ಈ ಆಸನವು ನಿಮಗೆ ಅಂತಹ ಸಮಸ್ಯೆಯಿಂದ ಹೊರ ಬರಲು ನೆರವಾಗುತ್ತದೆ. ಇತರ ಆಸನಗಳಂತೆ, ಈ ಆಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. "ಏಕ" ಎಂದರೆ ಒಂದು, "ಪಾದ" ಎಂದರೆ

ಕಾಲು, "ರಾಜ" ಎಂದರೆ ಅರಸ, "ಕಪೋತ" ಎಂದರೆ ಪಾರಿವಾಳ ಮತ್ತು "ಆಸನ" ಎಂದರೆ ಭಂಗಿ. ಈ ಆಸನವು ಟೊಂಕ ಭಾಗದ ಸ್ನಾಯುಗಳ ನಮ್ಯತೆಯನ್ನು ವರ್ಧಿಸಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ಆಸನ ಸ್ವಲ್ಪ ಅನುಭವ ಗಳಿಸಿದ ಯೋಗಪಟುಗಳು ಮಾಡುವುದು ಉತ್ತಮ. ಇದು ಪೃಷ್ಠಗಳ ಬಲವರ್ಧನೆಗೆ ಮತ್ತು ಬೆನ್ನಿನ ಕೆಳಭಾಗದಲ್ಲಿರುವ ತೊಂದರೆಯಿಂದ ಕಾಲುಗಳಲ್ಲಿ ಕಾಣಿಸಿಕೊಳ್ಳುವ ನೋವಿಗೂ ಶಮನಕಾರಿ. ಈ ಆಸನವನ್ನು ಹಾಕಲು ಇಲ್ಲಿ ಕ್ರಮಬ್ಧವಾಗಿ ವಿವರಣೆಯನ್ನು ನೀಡಲಾಗಿದೆ, ಮುಂದೆ ಓದಿ.... ಸಂಧಿವಾತ ವಿರುದ್ಧ ಹೋರಾಡಲು ಬಳಸಿ 'ಗರುಡಾಸನ' ಎಂಬ ಅಸ್ತ್ರ!

ಹಂತ 1. ಮಾರ್ಜರ್ಯಾಸನದಂತೆ ನಿಮ್ಮ ಮೊಣಕಾಲಿನ ಮೇಲೆ ನಿಂತುಕೊಂಡು ಈ ಆಸನವನ್ನು ಆರಂಭಿಸಿ.
ಹಂತ 2. ನಿಧಾನವಾಗಿ ಉಸಿರೆಳೆದುಕೊಳ್ಳುತ್ತ, ನಿಮ್ಮ ಬಲ ಮಂಡಿಯನ್ನು ಬಲ ಮಣಿಕಟ್ಟಿನ ಬಳಿ ತನ್ನಿರಿ.
ಹಂತ 3. ನಿಮ್ಮ ಮೊಣಕಾಲನ್ನು ಮಣಿಸಿಟ್ಟುಕೊಂಡೇ ಹಿಮ್ಮಡಿಯ ಗಂಟನ್ನು ನಿಧಾನವಾಗಿ ತೊಡೆಸಂದಿನ ಬಳಿ ತರಬೇಕು. ಕ್ರಮವಾಗಿ, ಕಾಲಿನ ಬೆರಳುಗಳು ಮಣಿಕಟ್ಟನ್ನು ಮುಟ್ಟುವಂತೆ ನಿಮ್ಮ ಎಡಗಾಲನ್ನು

ಎಡಗೈಬಳಿ ತನ್ನಿ.
ಹಂತ 4. ಈಗ ನಿಮ್ಮ ಕಾಲು ನೆಲ ಮುಟ್ಟುವ ಹಾಗೆ ನಿಧಾನವಾಗಿ ಜಾರಿಸಿ. ಮೊಣಕಾಲು ನೇರವಾಗಿರಬೇಕು ಮತ್ತು ಪಾದ ಆಕಾಶವನ್ನು ನೋಡುವಂತಿರಬೇಕು.
ಹಂತ 5. ಕೆಳಭಾಗದ ಮೂಳೆಗಳನ್ನು ಮುಂದೆ ತಳ್ಳುತ್ತ, ಬಲ ಪೃಷ್ಠಭಾಗವನ್ನು ನೆಲಕ್ಕೆ ಒತ್ತುತ್ತ, ಬೆನ್ನಿನ ಕೆಳಭಾಗವನ್ನು ಉದ್ದವಾಗಿಸಿ.
ಹಂತ 6. ಹೆಚ್ಚು ಸ್ಟ್ರೆಚ್ ಮಾಡಿದಷ್ಟೂ ನಿಮ್ಮ ಪೃಷ್ಠದ ಸ್ನಾಯುಗಳು ಬಲಿಷ್ಠವಾಗುತ್ತವೆ ಮತ್ತು ಹೆಚ್ಚು ಬಾಗುವ ಶಕ್ತಿಯನ್ನು ಪಡೆಯುತ್ತವೆ.
ಹಂತ 7. ಉಸಿರಾಟದ ಮೇಲೆ ಹೆಚ್ಚು ಗಮನವಿರಲಿ. ಉಚ್ವಾಸ ಮತ್ತು ನಿಶ್ವಾಸ ಸರಾಗವಾಗಿರಲಿ.
ಹಂತ 8. ಒಂದು ಕಾಲಿನ ಆಸನ ಮಾಡಿದ ನಂತರ ಇನ್ನೊಂದು ಕಾಲಿಗೂ ಇದೇ ಕ್ರಮವನ್ನು ಅನುಸರಿಸಿ.
ಹೊಸದಾಗಿ ಈ ಆಸನವನ್ನು ಹಾಕಲು ಪ್ರಯತ್ನಿಸುವವರು, ಒಂದು ಹಾಸುಗಂಬಳಿಯನ್ನು ನಿಮ್ಮ ಪೃಷ್ಠಭಾಗಕ್ಕೆ ಆಧಾರವಾಗಿ ಬಳಸಬಹುದು. ಕ್ರಮೇಣ ಯಾವುದೇ ಆಧಾರವಿಲ್ಲದೆ ಈ ಆಸನವನ್ನು ಹಾಕಲು ಪ್ರಯತ್ನಿಸಿ.

ಈ ಆಸನದಿಂದ ಆಗುವ ಪ್ರಯೋಜನಗಳು
* ದೇಹದ ಕೆಳಭಾಗವನ್ನು ಹಿಗ್ಗಿಸಲು ನೆರವಾಗುತ್ತದೆ.
* ಕಿಬ್ಬೊಟ್ಟೆಯ ಭಾಗದ ಅಂಗಗಳನ್ನು ಉತ್ತೇಜಿಸುತ್ತದೆ.
* ನರಗಳಿಗೆ ಸಂಬಂಧಿಸಿದ ಅಂದರೆ ವಾತದಿಂದ ಬರುವ ನೋವುಗಳು ನಿವಾರಣೆಯಾಗುತ್ತದೆ.(sciatica)
* ದೇಹದ ಪೃಷ್ಠಭಾಗವು ನಮ್ಯತೆಯಿಂದ ಕೂಡಿರುತ್ತದೆ.
* ನಮ್ಮ ದೇಹದೊಳಗಿನ ಒತ್ತಡ ಹಾಗು ಉದ್ವೇಗವನ್ನು ಹೊರ ಹಾಕಲು ನೆರವು ಮಾಡಿಕೊಡುತ್ತದೆ. ಹೊಟ್ಟೆಯ ಸ್ನಾಯುಗಳ ಬಲವರ್ಧನೆಗೆ-ಮಕರ ಅಧೋಮುಖ ಸ್ವಾನಾಸನ

ಎಚ್ಚರಿಕೆ
ಯಾರು ಕಾಲಿನ ಅಥವಾ ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುತ್ತಾರೊ, ಅಂತವರು ಈ ಆಸನವನ್ನು ಮಾಡತಕ್ಕದ್ದಲ್ಲ.
ನೀವು ಈ ಆಸನವನ್ನು ಅಭ್ಯಾಸ ಮಾಡಲು ಪ್ರಾರಂಭಿಕ ಹಂತದಲ್ಲಿದ್ದರೆ, ತಜ್ಞರ ಸಲಹೆ ಸೂಚನೆಯನ್ನು ಅನುಸರಿಸಿ ಮಾಡತಕ್ಕದ್ದು. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಾಭ್ಯಾಸ

English summary

Eka Pada Rajakapotasana,To Improve Flexibility Of Hip Muscles

These days, people aren't doing any physical activity as required by the body. As a result, they are facing joint problems, which become severe over a certain period of time. One such reason is the long hours of work at the office, which keeps you restricted to your chair only. Our hip muscles are responsible for the basic movement of the body, and it is essential to take care of them. Improving hip mobility has become a major focus of many training programs lately, and with good reason.
X
Desktop Bottom Promotion