For Quick Alerts
ALLOW NOTIFICATIONS  
For Daily Alerts

ದಂಡಾಸನ- ವಾತಕ್ಕೆ ಸಂಬಂಧಪಟ್ಟ ನೋವಿಗೆ ರಾಮಬಾಣ

By vani nayak
|

ಕೆಲವರು ಕುಳಿತುಕೊಳ್ಳುವಾಗ ಪೃಷ್ಠಭಾಗದಲ್ಲಿ ನೋವು, ಸೊಂಟ ನೋವು, ಅಥವಾ ಕಾಲುಗಳಲ್ಲಿ ಜುಮ್ಮೆನುಸುವಿಕೆ..ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇವು ವಾತ ನೋವು ಅಥವಾ ಸೊಂಟಬೇನೆ ಸಮಸ್ಯೆಯನ್ನು ಎದುರಿಸುತ್ತಿರುವವರಲ್ಲಿ ಕಂಡು ಬರುವ ಮುಖ್ಯ ಲಕ್ಷಣಗಳು. ನಿಮ್ಮ ಸೊಂಟಭಾಗದಿಂದ ಕಾಲಿನ ಹಿಂಭಾಗದ ತನಕ ವಿಸ್ತರಿಸುವ ನರವನ್ನು ಸಿಯಾಟಿಕ್ (sciatic) ನರ ಎಂದು ಕರೆಯುತ್ತಾರೆ. ಮಂಡಿ-ಪಾದಗಳನ್ನು ಸದೃಢಗೊಳಿಸಲು ತಾಡಾಸನ ಅನುಸರಿಸಿ

ಈ ನರಕ್ಕೆ ಏನಾದರು ಸಮಸ್ಯೆ ಉಂಟಾದರೆ ವಿಪರೀತವಾಗಿ ನೋವು ಕಾಣಿಸಿಕೊಳ್ಳುತ್ತದೆ. ಇಂಥ ನೋವನ್ನು ಆಂಗ್ಲ ಭಾಷೆಯಲ್ಲಿ ಸಿಯಾಟಿಕ ಎಂದು ಕರೆಯುತ್ತಾರೆ. ಅಂದರೆ, ವಾತಕ್ಕೆ ಸಂಬಂಧ ಪಟ್ಟ ನೋವು ಅಥವಾ ಸೊಂಟ ನೋವು ಎಂದು ಹೇಳಬಹುದು.

ಆದರೆ ಕೆಲವರು ಇದಕ್ಕೆ ಹೆಚ್ಚು ಮಹತ್ವ ಕೊಡದೇ ನೋವು ಶಮನಕ ಮಾತ್ರೆಯನ್ನು ತೆಗೆದುಕೊಂಡು ಆ ಸಮಯಕ್ಕೆ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇಂಥ ಅಭ್ಯಾಸಗಳು ಇದ್ದಲ್ಲಿ ಅದನ್ನು ನಾವು ನಿವಾರಿಸಿತೊಳ್ಳಲೇಬೇಕು. ಇಂಥ ಸಮಸ್ಯೆಯನ್ನು ಎದುರಿಸುತ್ತಿರುವವರು, ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬೇಕಾದ್ದಲ್ಲಿ , ಯೋಗಾಭ್ಯಾಸವನ್ನು ಮಾಡಬೇಕು. ಅತ್ಯಂತ ಸರಳವಾದ ಆಸನ ಎಂದೆನಿಸಿಕೊಂಡಿರುವ ದಂಡಾಸನವು ಈ ವಾತನೋವನ್ನು ಉಪಶಮನ ಮಾಡುವುದರಲ್ಲಿ ಬಹಳ ಸಹಾಯಕಾರಿಯಾಗಿದೆ.

Dandasana (Staff Pose) To Alleviate Sciatica Pain

ಈ ಆಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. ದಂಡ ಎಂದರೆ "ಕೋಲು" ಹಾಗು ಆಸನ ಎಂದರೆ "ಭಂಗಿ" ಎಂದರ್ಥ. ಈ ಆಸನವನ್ನು ಬೆಳಗಿನ ಜಾವ ಅಭ್ಯಾಸಿಸಿದರೆ ಒಳ್ಳೆಯದು. ಆದರೆ ಬೆಳಗಿನ ಹೊತ್ತು ಸಮಯ ಸಿಗದೇ ಹೋದರೆ ಸಂಜೆ ಹೊತ್ತು ಕೂಡ ಈ ಆಸನವನ್ನು ಹಾಕಬಹುದು. ಆದರೆ, ಊಟವಾದ ಬಳಿಕ ಆಸನವನ್ನು ಹಾಕಲು ಆರು ತಾಸಿನ ಅಂತರವಿರಬೇಕು.

ಮೊದಲೇ ಹೇಳಿದಂತೆ, ಈ ಆಸನವು ಅತ್ಯಂತ ಸರಳವಾದದ್ದು. ಆದರೆ ಈ ಆಸನದಿಂದ ಹೆಚ್ಚು ಪ್ರಯೋಜನಗಳನ್ನು ಕಂಡುಕೊಳ್ಳಬೇಕಾದರೆ ಸರಿಯಾದ ರೀತಿಯಲ್ಲಿ ಭಂಗಿಯನ್ನು ಅಭ್ಯಾಸಿಸಬೇಕು. ಕೂತು ಮಾಡುವ ಅನೇಕ ಆಸನಗಳಿಗೆ ಈ ಆಸನವು ಪ್ರಾರಂಭಿಕ ಹಂತವಾಗಿರುತ್ತದೆ. ಈ ಕೆಳಗೆ, ದಂಡಾಸನವನ್ನು ಹಾಕಲು ಕ್ರಮಬಧ್ಧವಾಗಿ ವಿವರಣೆ ಹಾಗು ಅದರಿಂದಾಗುವ ಪ್ರಯೋಜನಗಳನ್ನು ನೀಡಲಾಗಿದೆ. ಕೈಕಾಲುಗಳ ಆರೋಗ್ಯ ವೃದ್ಧಿಗೆ ಅನುಸರಿಸಿ ವಸಿಷ್ಠಾಸನ

ದಂಡಾಸನವನ್ನು ಹಾಕಲು ಕ್ರಮಬಧ್ಧವಾದ ವಿವರಣೆ:

1. ಬೆನ್ನನ್ನು ನೇರವಾಗಿಟ್ಟುಕೊಂಡು ನೆಲದ ಮೇಲೆ ಕುಳಿತುಕೊಳ್ಳಿ.

2. ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ. ಕಾಲ್ಬೆರಳುಗಳು ಮೇಲ್ಮುಖವಾಗಿರಬೇಕು.

3. ನಿಮ್ಮ ಪೃಷ್ಠಭಾಗವನ್ನು ಗಟ್ಟಿಯಾಗಿ ನೆಲದ ಮೇಲೆ ಊರಿ ನಿಮ್ಮ ತೂಕ ಅದರ ಮೇಲೆ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕು.

4. ನಿಮ್ಮ ತಲೆಯನ್ನು ಮುಂದಕ್ಕೆ ನೋಡುತ್ತಿರುವಂತೆ ನೇರವಾಗಿರಿಸಬೇಕು.

5. ನಿಮ್ಮ ಹಿಮ್ಮಡಿಗಳನ್ನು ನೆಲದ ಮೇಲೆ ಊರಬೇಕು.

6. ಕೈಗಳನ್ನು ಸೊಂಟದ ಎರಡೂ ಬದಿಯಲ್ಲಿ ನೆಲದ ಮೇಲೆ ಊರಬೇಕು.

7. ಕಾಲುಗಳನ್ನು ಸಡಿಲ ಮಾಡಿ, ಸಹಜವಾಗಿಯೇ ಉಸಿರಾಟವನ್ನು ಮುಂದುವರಿಸಬೇಕು. ಅದನ್ನೇ ಗಮನಿಸಬೇಕು.

8. ಇದೇ ಭಂಗಿಯಲ್ಲಿ 20 ಕ್ಷಣಗಳ ಕಾಲ ಇದ್ದು ನಂತರ ರಿಲ್ಯಾಕ್ಸ್ ಮಾಡಬಹುದು.

Dandasana (Staff Pose) To Alleviate Sciatica Pain

ದಂಡಾಸನದಿಂದಾಗುವ ಇನ್ನಿತರ ಪ್ರಯೋಜನಗಳು:

*ಸ್ನಾಯುಗಳ ಬಲವರ್ಧನೆಗೆ ಸಹಾಯಕಾರಿ.

*ಕಿಬ್ಬೊಟ್ಟೆಯನ್ನು ಗಟ್ಟಿಗೊಳಿಸುತ್ತದೆ. ಎದೆ ಹಾಗೂ ಭುಜಗಳ ಹಿಗ್ಗಿವಿಕೆಗೆ ಎಣೆಮಾಡಿಕೊಡುತ್ತದೆ.

*ಒತ್ತಡಗಳನ್ನು ನಿವಾರಿಸಿ ಏಕಾಗ್ರತೆಯನ್ನು ವರ್ಧಿಸುತ್ತದೆ.

*ಆಸ್ತಮ ರೋಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

*ದೇಹದ ನಿಲುವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆ ಹೆಚ್ಚಿಸಲು ಅಧೋಮುಖ ವೃಕ್ಷಾಸನ ಅನುಸರಿಸಿ

ಎಚ್ಚರಿಕೆ

ಯಾರಿಗೆ ಸೊಂಟದಲ್ಲಿ, ಮಣಿಕಟ್ಟಿನಲ್ಲಿ ಗಾಯಗಳಾಗಿರುತ್ತದೆಯೋ ಅವರು ಈ ಆಸನವನ್ನು ಮಾಡತಕ್ಕದ್ದಲ್ಲ. ಯೋಗ ತರಬೇತಿದಾರರಿಂದ ಸಲಹೆ ಸೂಚನೆ ಮೇಲೆ ಮಾಡುವುದು ಹೆಚ್ಚು ಸೂಕ್ತ.

English summary

Dandasana (Staff Pose) To Alleviate Sciatica Pain

You might have heard of many people complaining of a lower back pain, hip pain, pain while sitting or a tingling sensation in the leg. These are some of the major symptoms of sciatica. When the nerve which extends from the lower back to the back of your leg known as the sciatic nerve is affected, you tend to get a severe amount of pain. This type of a pain is referred to as sciatica.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more