For Quick Alerts
ALLOW NOTIFICATIONS  
For Daily Alerts

ಉಪ್ಪಿನಂಶ ಆಹಾರವನ್ನು ಕಡಿಮೆ ಸೇವಿಸಿ-ತೂಕ ಕಳೆದುಕೊಳ್ಳಿ!

By Super Admin
|

ನಿಮ್ಮ ದೇಹದ ತೂಕವು ಅಧಿಕವಾಗಿ ಹೋಗುತ್ತಿದೆಯೇ? ತೂಕ ಕಡಿಮೆ ಮಾಡಿಕೊಳ್ಳಲು ಯೋಗ ಮಾಡಬೇಕೆ? ಜಿಮ್‌ಗೆ ಹೋಗಬೇಕೇ? ಎಂಬ ಪ್ರಶ್ನೆಯನ್ನು ಮಾಡಿಕೊಳ್ಳುವ ಮೊದಲು ನಿಮ್ಮ ಮನೆಯ ಆಹಾರಕ್ಕೆ ಸ್ವಲ್ಪ ಉಪ್ಪನ್ನು ಕಡಿಮೆ ಮಾಡಿಕೊಳ್ಳಿ. ಉಪ್ಪಿನಲ್ಲಿರುವ ಸೋಡಿಯಂ ಅಂಶವು ನಿಮ್ಮ ದೇಹದಲ್ಲಿ ತೂಕವನ್ನು ಹೆಚ್ಚಿಸುತ್ತದೆ.

ಆದ್ದರಿಂದ ಜಿಮ್ ಮತ್ತು ವ್ಯಾಯಮವು ನಮ್ಮ ದೇಹದ ತೂಕವನ್ನು ಹೇಗೆ ಕಡಿಮೆ ಮಾಡುತ್ತದೆಯೋ, ಹಾಗೆಯೇ ಉಪ್ಪು ಕಡಿಮೆ ಮಾಡುವುದು ಸಹ ನಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಎಂದು ನಾವು ತಿಳಿದುಕೊಳ್ಳಬೇಕಾದ ಸಮಯ ಬಂದಿದೆ. ಹಾಗೆಂದು ಉಪ್ಪನ್ನು ನಮ್ಮ ಆಹಾರದಿಂದ ಸಂಪೂರ್ಣವಾಗಿ ನಿಷೇಧಿಸಬೇಕೆಂದು ನಾವು ಹೇಳುತ್ತಿಲ್ಲ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ

ಬದಲಿಗೆ ಅದನ್ನು ಮಿತವಾಗಿ ಸೇವಿಸಬೇಕು ಎಂದು ನಾವು ಹೇಳುತ್ತಿದ್ದೇವೆ. ಹಲವಾರು ಪೋಷಕಾಂಶ ತಜ್ಞರ ಪ್ರಕಾರ ನಮ್ಮ ದೇಹಕ್ಕೆ ದಿನವೊಂದಕ್ಕೆ 2.4 ಮಿ.ಗ್ರಾಂ ಸೋಡಿಯಂ ಸಾಕಂತೆ. ಇದಕ್ಕಿಂತ ಹೆಚ್ಚಿಗೆ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಯಂತೆ. ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ಅಧಿಕವಾಗಿ ಸೋಡಿಯಂ ಅನ್ನು ಸೇವಿಸಿದರೆ ನಿರ್ಜಲೀಕರಣ, ಅಧಿಕ ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡಗಳ ಸಮಸ್ಯೆ ಮತ್ತು ಹೃದ್ರೋಗದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಉಪ್ಪನ್ನು ನಾವು ಸರಿಯಾಗಿ ಆಲೋಚಿಸಿ ಬಳಸಬೇಕಾಗುತ್ತದೆ. ಬನ್ನಿ ಹೇಗೆಲ್ಲಾ ಉಪ್ಪು ನಮ್ಮ ದೇಹವನ್ನು ಸೇರುತ್ತದೆ ಎಂದು ಮೊದಲು ತಿಳಿದುಕೊಂಡು, ಅವುಗಳ ಸೇವನೆಯನ್ನು ಕಡಿಮೆ ಮಾಡಿ....

ಕ್ಯಾನ್‌ನಲ್ಲಿರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಡಿ

ಕ್ಯಾನ್‌ನಲ್ಲಿರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಡಿ

ಕ್ಯಾನ್‌ನಲ್ಲಿರುವ ಆಹಾರ ಮತ್ತು ಪಾನೀಯಗಳಲ್ಲಿ ಉಪ್ಪಿನಂಶ ಇರುತ್ತದೆ. ಇವುಗಳನ್ನು ಸೇವಿಸುವುದರಿಂದಾಗಿ ನಿಮ್ಮ ದೇಹದ ತೂಕದಲ್ಲಿ ಏರಿಕೆಯುಂಟಾಗುತ್ತದೆ.

ಚಿಪ್ಸ್ ಮತ್ತು ಸಂಸ್ಕರಿಸಿದ ಆಹಾರ

ಚಿಪ್ಸ್ ಮತ್ತು ಸಂಸ್ಕರಿಸಿದ ಆಹಾರ

ಚಿಪ್ಸ್ ಮತ್ತು ಸಂಸ್ಕರಿಸಿದ ಆಹಾರದಲ್ಲಿ ಉಪ್ಪಿನಂಶವು ಅಧಿಕವಾಗಿ ಇರುತ್ತದೆ. ಆದ್ದರಿಂದ ಈ ಆಹಾರವನ್ನು ಸೇವಿಸಬೇಡಿ.

ಹೊರಗಿನ ಆಹಾರ ಸೇವಿಸಬೇಡಿ

ಹೊರಗಿನ ಆಹಾರ ಸೇವಿಸಬೇಡಿ

ಯಾವಾಗಲು ಮನೆಯಲ್ಲಿ ಮಾಡಿದ ಆಹಾರವನ್ನೆ ಸೇವಿಸಿ. ಹೊರಗೆ ಮಾಡಿದ ಆಹಾರದಲ್ಲಿ ಯಾವ ಮಟ್ಟಿಗೆ ಉಪ್ಪನ್ನು ಬಳಸಿರುತ್ತಾರೆ ಎಂದು ನಮಗೆ ತಿಳಿಯುವುದಿಲ್ಲ. ಆದ್ದರಿಂದ ಹೊರಗಡೆ ಹೋಟೆಲ್ ಊಟವನ್ನು ಮಾಡಬೇಡಿ, ಮನೆಯಲ್ಲಿಯೇ ಊಟ ಮಾಡಿ.

ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿಗೆ ಸೇವಿಸಿ

ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿಗೆ ಸೇವಿಸಿ

ಹಣ್ಣು ಮತ್ತು ತರಕಾರಿಗಳಲ್ಲಿ ಸೇರಿಸಿದ ಸೋಡಿಯಂ ಇರುವುದಿಲ್ಲ. ಆದ್ದರಿಂದ ಕಚ್ಛಾ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ. ಇವುಗಳಿಂದ ನಿಮ್ಮ ದೇಹಕ್ಕೆ ಯಾವುದೇ ಉಪ್ಪಿನಂಶ ಸೇರುವುದಿಲ್ಲ.

ಆಹಾರ ಪದಾರ್ಥಗಳ ಲೇಬಲ್ ಅನ್ನು ಪರೀಕ್ಷಿಸಿ

ಆಹಾರ ಪದಾರ್ಥಗಳ ಲೇಬಲ್ ಅನ್ನು ಪರೀಕ್ಷಿಸಿ

ಯಾವುದೇ ಆಹಾರವನ್ನು ಸೇವಿಸುವ ಮೊದಲು ಅದರ ಲೇಬಲ್ ಅನ್ನು ಪರಿಶೀಲಿಸಿ. ಎಷ್ಟರ ಮಟ್ಟಿಗೆ ಅದರಲ್ಲಿ ಸೋಡಿಯಂ ಇದೆಯೆಂದು ಪರಿಶೀಲಿಸಿ. ಒಂದು ವೇಳೆ ಸೋಡಿಯಂ ಅಧಿಕವಾಗಿದ್ದರೆ ಅದನ್ನು ಸೇವಿಸಬೇಡಿ.

ಕಾಟೇಜ್ ಚೀಸ್ ಸೇವಿಸಬೇಡಿ

ಕಾಟೇಜ್ ಚೀಸ್ ಸೇವಿಸಬೇಡಿ

ಕಾಟೇಜ್ ಚೀಸ್‌ನಲ್ಲಿ ಉಪ್ಪಿನಂಶ ಅಧಿಕವಾಗಿರುತ್ತದೆ. ಅದರಲ್ಲಿ ಸೋಡಿಯಂ ಅಂಶ ಸಹ ಹೆಚ್ಚಾಗಿರುತ್ತದೆ. ಆದ್ದರಿಂದ ಇದನ್ನು ಸೇವಿಸಬೇಡಿ.

ಉಪ್ಪಿನಿಂದ ಕೂಡಿರುವ ಒಣ ಹಣ್ಣುಗಳನ್ನು ಸೇವಿಸಬೇಡಿ

ಉಪ್ಪಿನಿಂದ ಕೂಡಿರುವ ಒಣ ಹಣ್ಣುಗಳನ್ನು ಸೇವಿಸಬೇಡಿ

ಮಾರುಕಟ್ಟೆಯಲ್ಲಿ ದೊರೆಯುವ ಒಣ ಹಣ್ಣುಗಳಲ್ಲಿ ಉಪ್ಪಿನಂಶವು ಅಧಿಕವಾಗಿರುತ್ತದೆ. ಆದ್ದರಿಂದ ಆದಷ್ಟು ಕಚ್ಛಾ ಒಣ ಹಣ್ಣುಗಳನ್ನೆ ಸೇವಿಸಿ, ಅದನ್ನು ಬಿಟ್ಟು ಉಪ್ಪಿನಂಶ ಇರುವ ಒಣ ಹಣ್ಣುಗಳನ್ನು ಸೇವಿಸಬೇಡಿ.

ಆಹಾರದ ಮೇಲೆ ಉಪ್ಪನ್ನು ಹಾಕಿಕೊಳ್ಳಬೇಡಿ

ಆಹಾರದ ಮೇಲೆ ಉಪ್ಪನ್ನು ಹಾಕಿಕೊಳ್ಳಬೇಡಿ

ಸಲಾಡ್, ತರಕಾರಿ, ಹಣ್ಣು ಮತ್ತು ಮೊಟ್ಟೆಯ ಮೇಲೆ ಉಪ್ಪನ್ನು ಹಾಕಿಕೊಂಡು ತಿನ್ನುವ ಅಭ್ಯಾಸ ಹಲವರಿಗೆ ಇರುತ್ತದೆ. ನೀವು ಹಾಗೆ ಮಾಡಬೇಡಿ.

English summary

Cut On Salt Intake And Prevent Weight Gain

Does your body feel heavy like you have put on too much of weight or you feel bloated? Then you need to watch out on your salt intake. The sodium content in salt, which is found in minute granules, is the chief constituent that helps retain the water in your body, which is why you tend to gain weight. When the sodium level is high, then despite rigorous exercises and diet control, the fats and calories in the body, especially the waistline, fail to recede.
Story first published: Wednesday, July 27, 2016, 20:16 [IST]
X
Desktop Bottom Promotion