For Quick Alerts
ALLOW NOTIFICATIONS  
For Daily Alerts

  ಥಟ್ ಅಂತ ಶಕ್ತಿ ಬರಬೇಕೇ? ಒಮ್ಮೆ ಭುಜಂಗಾಸನ ಪ್ರಯತ್ನಿಸಿ

  By Manu
  |

  ಹಾವು ಕಚ್ಚುವ ಮುನ್ನ ತನ್ನ ಕುತ್ತಿಗೆಯಭಾಗವನ್ನು ಊ ಆಕಾರದಲ್ಲಿ ಒಳಸೆಳೆದು ಮಿಂಚಿನ ವೇಗದಲ್ಲಿ ತಲೆಯನ್ನು ಮುಂದೆ ತಂದು ಕಚ್ಚುತ್ತದೆ. ಇಂತಹ ಥಟ್ ಅಂತ ಬೇಕಾಗುವ ಶಕ್ತಿ ನಿಮ್ಮ ಶರೀರದಲ್ಲಿ ತುಂಬಿಕೊಳ್ಳಬೇಕು ಎಂದರೆ ಭುಜಂಗಾಸನ ಹಾಕಬೇಕು ಎಂದು ಯೋಗಾಭ್ಯಾಸ ತಿಳಿಸುತ್ತದೆ. ಭುಜಂಗ ಅಂದರೆ ನಾಗರಹಾವು ಮತ್ತು ಆಸನ ಅಂದರೆ ಭಂಗಿ. ನಾಗರಹಾವು ಹೆಡೆಯೆತ್ತಿ ನಿಂತ ಭಂಗಿಯನ್ನು ಹೋಲುವ ಕಾರಣ ಈ ಆಸನಕ್ಕೆ ಈ ಹೆಸರನ್ನಿಡಲಾಗಿದೆ.

  ಈ ಆಸನವನ್ನು ಆರಂಭಿಸುವ ಮೊದಲು ಬೆನ್ನುಮೂಳೆಯನ್ನು ನೆಟ್ಟಗಾಗಿಸುವ ಕೆಲವು ಆಸನಗಳನ್ನು ಅಥವಾ ವ್ಯಾಯಾಮಗಳನ್ನು ಕಡ್ಡಾಯವಾಗಿ ಕೆಲವು ನಿಮಿಷಗಳಾದರೂ ಅನುಸರಿಸಬೇಕು. ಏಕಾಏಕಿ ಈ ಆಸನವನ್ನು ಅನುಸರಿಸುವುದು ತರವಲ್ಲ. ಸುಲಭವಾದ (ಮತ್ತು ಎಲ್ಲರ ನೆಚ್ಚಿನ) ಆಸನವೆಂದರೆ ಹೊಟ್ಟೆಯ ಮೇಲೆ ಮಲಗಿ ಒಂದು ಕೈಯನ್ನು ತಲೆದಿಂಬಾಗಿಸಿ ಒಂದು ಕೆನ್ನೆ ನೆಲಕ್ಕೆ ತಾಕುವಂತೆ ಮಲಗುವುದು.

  Bhujangasana (Cobra Pose) For Instant Energy
    

  ಎರಡೂ ಕಾಲುಗಳ ಎಲ್ಲಾ ಬೆರಳುಗಳು ಉಗುರಿನಿಂದ ನೆಲವನ್ನು ಒತ್ತಿದ್ದು ಹಿಮ್ಮಡಿ ನೇರವಾಗಿ ಲಂಬವಾಗಿರಬೇಕು. ಶಾಂತಿಯಿಂದ ನಿಧಾನವಾಗಿ ಉಸಿರಾಡುತ್ತಾ, ಮನದಲ್ಲಿ ಯಾವುದನ್ನೂ ಆಲೋಚಿಸದೇ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳುತ್ತಿರುವ ಅನುಭವವನ್ನು ಅನುಭವಿಸಬೇಕು. ಇನ್ನೊಂದು ಕೈ ಮುಷ್ಟಿಕಟ್ಟಿ ಬೆನ್ನ ಹಿಂದೆ ಇರಿಸಿ ಕೆಲವು ನಿಮಿಷ ಹಾಗೇ ಮಲಗಿಕೊಳ್ಳುವ ಮೂಲಕ ಬೆನ್ನುಮೂಳೆ ನೆಟ್ಟನಾಗಿ ಸಡಿಲವಾಗುತ್ತದೆ.              ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯದ್ಭುತ ಯೋಗಾಸನಗಳು

  ಭುಜಂಗಾಸನವನ್ನು ಅನುಸರಿಸುವುದು ಹೇಗೆ?

  * ಈಗ ತಲೆಯ ಅಡಿಯಿಂದ ಕೈಗಳನ್ನು ಕೈಗಳನ್ನು ತೆಗೆದು ಭುಜಗಳ ಕೆಳಗೆ ಹಸ್ತಗಳು ನೆಲಕ್ಕೆ ತಾಗುವಂತೆ ಇರಿಸಿ. ಮೊಣಕೈಗಳು ಸೊಂಟದ ಪಕ್ಕ ಹತ್ತಿರದಲ್ಲಿರುವಂತಿರಲಿ. ಎರಡೂ ಕಾಲುಗಳು ಒಂದಕ್ಕೊಂದು ತಾಕುವಂತಿರಲಿ, ಸಾಧ್ಯವಾದರೆ ಎರಡೂ ಪಾದಗಳ ಹಿಮ್ಮಡಿಗಳೂ ಒಂದಕ್ಕೊಂದು ತಾಕುವಂತಿರಲಿ. ನೋವು ಅನ್ನಿಸಿದರೆ ಬೇಡ, ಎಷ್ಟು ಸಾಧ್ಯವೋ ಅಷ್ಟು ಮಾತ್ರ ಹತ್ತಿರ ಬರಲಿ. ಹಣೆ ನೆಲಕ್ಕೆ ತಾಕುವಂತಿರಲಿ.

  * ಎರಡೂ ಕಾಲುಗಳು ಜೊತೆಯಾಗಿರುವುದು ಮುಖ್ಯ, ಇಲ್ಲದಿದ್ದರೆ ಸೊಂಟದ ಮೂಳೆಯ ಕೆಳಭಾಗಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ.

  * ಪ್ರಥಮ ಹಂತದಲ್ಲಿ ಉಸಿರನ್ನು ಮೇಲೆಳೆದುಕೊಳ್ಳುತ್ತಾ ಮುಖವನ್ನು ನಿಧಾನವಾಗಿ ಮೇಲೆತ್ತುತ್ತಾ ಕೈಗಳಿಂದ ನೆಲವನ್ನು ದೂಡಿ ಭುಜವನ್ನೂ ಮೇಲಕ್ಕೆತ್ತಿ. ಕೈಗಳು ಪೂರ್ಣವಾಗಿ ನೆಟ್ಟಗಾಗುವ ವೇಳೆಗೆ ತಲೆ ಸಾಧ್ಯವಾದಷ್ಟು ಹಿಂದೆ ಬಾಗಬೇಕು. ಈ ಭಂಗಿ ಈಗ ನಾಗರಹಾವು ಹೆಡೆಯೆತ್ತಿ ನಿಂತಿರುವ ಭಂಗಿಯಂತೆ ತೋರುವ ಕಾರಣದಿಂದಲೇ ಈ ಆಸದ ಹೆಸರನ್ನಿಡಲಾಗಿದೆ.

  Bhujangasana (Cobra Pose) For Instant Energy

  * ನಿಮ್ಮ ಸಾಮರ್ಥ್ಯದ ಗರಿಷ್ಠ ಮಟ್ಟದ ಹಿಂದೆ ಹೋದ ಬಳಿಕ ಈ ಸ್ಥಿತಿಯಲ್ಲಿ ಪೂರ್ಣ ಉಸಿರೆಳೆದುಕೊಂಡು ಕೊಂಚ ಹೊತ್ತು ಇರಿ. ನೆನಪಿರಲಿ, ಹೊಟ್ಟೆಯ ಭಾಗ ನೆಲದಿಂದ ಅಲ್ಲಾಡಬಾರದು, ಅಲ್ಲಾಡಿದರೆ ಸೊಂಟಕ್ಕೆ ಭಾರಿಯಾಗಬಹುದು. ಅಂತೆಯೇ ಕೈಗಳಿಗೂ ನೋವಾಗಬಾರದು. ಕೈಗಳಿಗೆ ನೋವಾಗುತ್ತಿದೆ ಎಂದರೆ ಶರೀರದ ಭಾರವನ್ನೆಲ್ಲಾ ಕೈಗಳ ಮೇಲೆ ಹೇರುತ್ತಿದ್ದೀರಿ ಎಂದು ಅರ್ಥ. ವಾಸ್ತವವಾಗಿ ಶರೀರವನ್ನು ಮೇಲೆಳೆದುಕೊಳ್ಳಲು ಬೆನ್ನಿನ ಸ್ನಾಯುಗಳನ್ನು ಹೆಚ್ಚು ಮತ್ತು ಕೈಗಳ ಮೇಲಿನ ಭಾರವನ್ನು ಕಡಿಮೆ ಹಾಕಬೇಕು. ಇದರಿಂದ ಸೊಂಟದ ಹಿಂದಿನ ಸ್ನಾಯುಗಳು, ಬೆನ್ನಿನ ಸ್ನಾಯುಗಳು ಮತ್ತು ವಿಶೇಷವಾಗಿ ಪ್ರಷ್ಠದ ಸ್ನಾಯುಗಳು ಅತ್ಯುತ್ತಮವಾದ ಸೆಳೆತವನ್ನು ಪಡೆಯುತ್ತವೆ.        

  * ಈ ಹಂತದಲ್ಲಿ ಎರಡೂ ಭುಜಗಳನ್ನು ಸಾಧ್ಯವಾದಷ್ಟು ಹಿಂದೆ ಸೆಳೆಯಬೇಕು. ಈಗ ಕೈಗಳು ಪೂರ್ಣವಾಗಿ ಲಂಬವಾಗುತ್ತವೆ. ಈ ಭಂಗಿಯಲ್ಲಿ ಎರಡು ನಿಮಿಷಗಳವರೆಗೆ ಇದ್ದರೆ ಉತ್ತಮ. ಎರಡೂ ನಿಮಿಷಗಳವರೆಗೆ ಉಸಿರು ಕಟ್ಟಿ ಹಿಡಿದರೆ ಇನ್ನಷ್ಟು ಉತ್ತಮ. ಪ್ರಾರಂಭದಲ್ಲಿ ಸಾಧ್ಯವಾಗದಿದ್ದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಸಮಯ ಇದ್ದರೆ ಸಾಕು.

  * ಬಳಿಕ ಈ ಹಂತವನ್ನು ಹೇಗೆ ಪ್ರಾರಂಭಿಸಿದಿರೋ ಹಾಗೇ ಹಿಂದೆ ಬರಬೇಕು, ಈಗ ಪೂರ್ಣವಾಗಿ ಉಸಿರನ್ನು ನಿಧಾನವಾಗಿ ಬಿಡಬೇಕು.

  * ಈ ಆಸನವನ್ನು ಕನಿಷ್ಟ ಹತ್ತು ಬಾರಿ ಪುನರಾವರ್ತಿಸಿ.           ವಾತ ಪಿತ್ತ ಕಫಗಳಿಗಾಗಿ ಸೂಕ್ತ ಯೋಗಾಸನಗಳು

  ಭುಜಂಗಾಸನದ ಪ್ರಯೋಜನಗಳು:

  *ಈ ಆಸನವನ್ನು ಅನುಸರಿಸುವ ಮೂಲಕ ಕುತ್ತಿಗೆ, ಭುಜಗಳು, ಬೆನ್ನಿನ ಸ್ನಾಯುಗಳು, ಕೆಳಬೆನ್ನಿನ ಸ್ನಾಯುಗಳು ಉತ್ತಮ ಸೆಳೆತ ಪಡೆದು ಸಡಿಲಗೊಳ್ಳುತ್ತವೆ.

  *ಈ ಭಾಗದಲ್ಲಿ ಹೆಚ್ಚಿನ ರಕ್ತಸಂಚಾರವಾಗುವ ಮೂಲಕ ಒತ್ತಡ ನಿವಾರಣೆಯಾಗುತ್ತದೆ. ಎಲ್ಲಾ ಅಂಶಗಳನ್ನು ಒಂದುಗೂಡಿಸಿದರೆ ತಕ್ಷಣವೇ ಶರೀರದಲ್ಲಿ ಹೆಚ್ಚಿನ ಶಕ್ತಿ ಸಂಚಾರವಾಗಿರುವುದು ಕಂಡುಬರುತ್ತದೆ. ಮನಸ್ಸೂ ನಿರಾಳವಾಗುತ್ತದೆ.

  Bhujangasana (Cobra Pose) For Instant Energy
   

  ಎಚ್ಚರಿಕೆ:

  *ಗರ್ಭಿಣಿಯರು ಈ ಆಸನವನ್ನು ಸರ್ವಥಾ ಅನುಸರಿಸಕೂಡದು. ಏಕೆಂದರೆ ಈ ಭಂಗಿಯಲ್ಲಿ ದೇಹದ ಭಾರ ನೇರವಾಗಿ ಹೊಟ್ಟೆಯ ಮೇಲೆ ಬೀಳುವ ಕಾರಣ ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ.

  *ಅಲ್ಲದೇ ಹೊಟ್ಟೆಯ ಶಸ್ತ್ರಚಿಕಿತ್ಸೆ, ಹರ್ನಿಯಾ, ಮೂತ್ರಪಿಂಡಗಳ ತೊಂದರೆ ಇರುವವರಿಗೂ ಈ ಆಸನ ಸೂಕ್ತವಲ್ಲ. ಉಳಿದಂತೆ ಸಾಮಾನ್ಯ ಆರೋಗ್ಯವುಳ್ಳ ಎಲ್ಲರೂ ಅನುಸರಿಸಬಹುದು.

  English summary

  Bhujangasana (Cobra Pose) For Instant Energy

  The word "Bhujangasana" can be split into two words, Bhujang (cobra) + Asana (pose), which is nothing but a Cobra pose. The body gets rejuvenated by this asana, as it attains a raised hood kind of a posture, which is why this asana is also known as the Cobra pose.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more