For Quick Alerts
ALLOW NOTIFICATIONS  
For Daily Alerts

ಕಾಡುವ ಸೊಂಟ ನೋವಿಗೆ ಅನುಸರಿಸಿ-'ಆನಂದ ಬಾಲಾಸನ'

By vani naik
|

ಸಾಧಾರಣವಾಗಿ, ಕೆಲಸಕ್ಕೆ ಹೋಗುವವರಲ್ಲಿ ಅದರಲ್ಲೂ ಬಹಳ ತಾಸುಗಳ ಕಾಲ ಕುಳಿತು ಕೆಲಸ ಮಾಡುವವರಲ್ಲಿ, ಸೊಂಟ ನೋವು ಅಧಿಕವಾಗಿ ಕಂಡು ಬರುತ್ತದೆ. ಬೆನ್ನೆಲಬಿನಲ್ಲಿ, ಸೊಂಟದಲ್ಲಿ ಗಾಯಗಳಾಗಿರುವ ಕ್ರೀಡಾ ಪಟುಗಳು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ. ನೋವು ನಿವಾರಕ ಗುಳಿಗೆಗಳು, ಸ್ಪ್ರೇಗಳು ಸುಲಭವಾಗಿ ಔಷಧಿ ಅಂಗಡಿಗಳಲ್ಲಿ ಲಭ್ಯವಿರುವುದರಿಂದ, ಬಹಳಷ್ಟು ಜನರು ಇವುಗಳನ್ನು ಬಳಸಿ ತಮ್ಮ ನೋವನ್ನು ಶಮನಗೊಳಿಸಿಕೊಳ್ಳುತ್ತಾರೆ.

ಯೋಗಾಸನವನ್ನು ಅಭ್ಯಾಸ ಮಾಡುವುದರಿಂದ ಸೊಂಟನೋವಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ಸಿಗುತ್ತದೆ. ಅದರಲ್ಲೂ ಆನಂದ ಬಾಲಾಸನವು ಸೊಂಟ ನೋವಿನ ನಿವಾರಣೆಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಆನಂದ ಬಾಲಾಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. "ಆನಂದ" ಎಂದರೆ ಸಂತೋಷ ಎಂದರ್ಥ. "ಬಾಲ" ಎಂದರೆ ಮಗು ಎಂದರ್ಥ. "ಆಸನ" ಎಂದರೆ ಭಂಗಿ ಎಂದರ್ಥ. ಕೆಳ ಬೆನ್ನು ನೋವಿಗೆ ಒಂದೇ ಪರಿಹಾರ 'ಮರೀಚ್ಯಾಸನ'

ಇದು ನೋಡುವುದಕ್ಕೆ ಸುಲಭವೆನಿಸಿದರೂ, ಕೆಲವರಿಗೆ ಈ ಆಸನವನ್ನು ಹಾಕಲು ಕಷ್ಟವಾಗಬಹುದು. ಪ್ರಾರಂಭಿಕ ಹಂತದಲ್ಲಿ ಆಸನವನ್ನು ಹಾಕಲು ಕಷ್ಟವೆನಿಸಿದರೆ, ಕಂಬಳಿಯನ್ನು ಕುತ್ತಿಗೆಗೆ ಆಸರೆಯಾಗಿ ಬಳಸಬಹುದು. ಅಭ್ಯಾಸ ಮಾಡುತ್ತಾ ಹೋದಂಗೆಲ್ಲಾ ಸುಲಭವಾಗುತ್ತಾ ಹೋಗುತ್ತದೆ. ಈ ಆಸನವನ್ನು ಹಾಕುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ. ಆನಂದ ಬಾಲಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:

1. ನಿಂತಿರುವ ಭಂಗಿಯಿಂದ ನಿಧಾನವಾಗಿ ನೆಲದ ಮೇಲೆ ಮಲಗುವ ಭಂಗಿಗೆ ಬರಬೇಕು. ಬೆನ್ನನ್ನು ಕೆಳಮುಖ ಮಾಡಿ ಅಡ್ಡಾಗಬೇಕು.
2. ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡೂ ಮಂಡಿಗಳು ನಿಮ್ಮ ಎದೆಯ ಭಾಗಕ್ಕೆ ಸಮೀಪವಿರುವಂತೆ ನೋಡಿಕೊಳ್ಳಬೇಕು.
3. ನಿಮ್ಮ ಕಾಲ್ಬೆರಳನ್ನು ನಿಮ್ಮ ಕೈಗಳಿಂದ ಹಿಡಿಯಬೇಕು.
4. ನಿಮ್ಮ ತೋಳುಗಳನ್ನು ಮತ್ತು ನಿಮ್ಮ ಕಾಲುಗಳನ್ನು ನಿಧಾನವಾಗಿ ಅಗಲಿಸಬೇಕು.
5. ನಿಮ್ಮ ತಲೆ, ಮೂಳೆತುದಿ ಮತ್ತು ತ್ರಿಕಾಸ್ಥಿ ನೆಲಕ್ಕೆ ತಾಕಿರಬೇಕು.
6. ಹಿಮ್ಮಡಿಯನ್ನು ಮೇಲಕ್ಕೆ ಎತ್ತಿರಬೇಕು ಮತ್ತು ನಿಮ್ಮ ಕೈಗಳಿಂದ ಎಳೆದುಕೊಳ್ಳಬೇಕು.
7. ಕುತ್ತಿಗೆ ಹಿಂಭಾಗ, ಭುಜಗಳು ಮತ್ತು ಬೆನ್ನನ್ನು ಸಂಪೂರ್ಣವಾಗಿ ನೆಲಕ್ಕೆ ಅದುಮಿರಬೇಕು.
8. ಧೀರ್ಘವಾಗಿ ಉಸಿರಾಡಿಸಿ ಮತ್ತು ಅದೇ ಭಂಗಿಯಲ್ಲಿ 20-30 ಸೆಕೆಂಡುಗಳ ಕಾಲವಿರಬೇಕು.
9. ನಿಧಾನವಾಗಿ ಭಂಗಿಯಿಂದ ಹೊರಗೆ ಬನ್ನಿ. ಇದೇ ರೀತಿ 3-4 ಬಾರಿ ಅಭ್ಯಾಸ ಮಾಡಬೇಕು.

ಬೆನ್ನುನೋವಿನ ನಿವಾರಣೆಗೆ ಐದು ಟಿಪ್ಸ್
Ananda Balasana (Happy Baby Pose) For Lower Back Pain

ಆನಂದ ಬಾಲಾಸನದಿಂದಾಗುವ ಇತರ ಲಾಭಗಳು
*ಬೆನ್ನೆಲಬನ್ನು ಮತ್ತು ತೊಡೆಸಂದುವನ್ನು ಹಿಗ್ಗಿಸುವುದಕ್ಕೆ ಸಹಾಯ ಮಾಡುತ್ತದೆ
*ಮಂಡಿರಜ್ಜು ಮತ್ತು ಒಳತೊಡೆಗಳನ್ನು ಹಿಗ್ಗುವಿಕೆಗೆ ನೆರವಾಗುತ್ತದೆ
*ಕೈಗಳ ಮತ್ತು ತೋಳುಗಳ ಬಲವನ್ನು ವರ್ಧಿಸುತ್ತದೆ
*ಆಯಾಸ ಒತ್ತಡಗಳನ್ನು ಉಪಶಮನ ಮಾಡುತ್ತದೆ
*ಮನಸ್ಸನ್ನು ಶಾಂತಗೊಳಿಸುತ್ತದೆ
*ತ್ರಿಕಾಸ್ಥಿಯನ್ನು ಸಡಿಲಗೊಳಿಸುತ್ತದೆ
*ಪಚನ ಕಾರ್ಯವನ್ನು ವೃದ್ಧಿಸುತ್ತದೆ

ಎಚ್ಚರಿಕೆ
ಯಾರಿಗೆ, ಕುತ್ತಿಗೆಯಲ್ಲಿ ಮಂಡಿಯಲ್ಲಿ ಗಾಯಗಳಾಗಿದೆಯೋ ಅವರು ಈ ಆಸನವನ್ನು ಮಾಡತಕ್ಕದ್ದಲ್ಲ. ಒಂದು ವೇಳೆ ಮಾಡಲಿಚ್ಛಿಸಿದರೂ ನುರಿತ ಯೋಗಾ ತರಬೇತಿದಾರರ ಸಲಹೆ, ಸೂಚನೆಗಳ ಮೇರೆಗೆ ಮಾಡತಕ್ಕದ್ದು.

English summary

Ananda Balasana (Happy Baby Pose) For Lower Back Pain

Lower back pain is one of the most common complaints you hear of from working people, especially those confined to long hours of sitting jobs. Yet another group of people are the sports persons who are prone to injuries. When they sustain injuries on their spine or the lower back, they complain of pain. Here is the step-wise procedure to perform Ananda Balasana. Take a look.
Story first published: Wednesday, August 10, 2016, 20:02 [IST]
X
Desktop Bottom Promotion