For Quick Alerts
ALLOW NOTIFICATIONS  
For Daily Alerts

ಆರೋಗ್ಯಕಾರಿ ಟಿಪ್ಸ್: ವಿಕ್ಸ್ ವೇಪೋರಬ್‌ನಲ್ಲಿದೆ ಹತ್ತಾರು ಲಾಭ

By Super
|

ಶೀತವಾಯಿತೇ? ವಿಕ್ಸ್ ಹಚ್ಚಿ ಎನ್ನುವಷ್ಟರ ಮಟ್ಟಿಗೆ ವಿಕ್ಸ್ ಎಂಬ ಔಷಧಿ ದಶಕಗಳಿಂದ ನಮ್ಮ ಮನೆಗಳಲ್ಲಿ ಬಳಸಲ್ಪಡುತ್ತಾ ಬರಲಾಗಿದೆ. ಮೊದಲೆಲ್ಲಾ ಚಿಕ್ಕದಾದ ಲೋಹದ ಡಬ್ಬಿಯಲ್ಲಿ ಬರುತ್ತಿತ್ತು. ಬಳಿಕ ಪ್ಲಾಸ್ಟಿಕ್ಕಿನ ಡಬ್ಬಿಯಲ್ಲಿ, ಮೂಗಿನ ಹೊಳ್ಳೆಗಳ ಮೂಲಕ ಎಳೆದುಕೊಳ್ಳಬಹುದಾದ ಇನ್ ಹೇಲರ್ ರೂಪದಲ್ಲಿ ಬರತೊಡಗಿತು.

ಚಿಕ್ಕಂದಿನಲ್ಲಿ ಅಮ್ಮ, ಅಜ್ಜಿಯರು ನಮಗೆ ವಿಕ್ಸ್ ಹಚ್ಚಿ ಹೊದಿಕೆ ಹೊದಿಸಿ ಮಲಗಿಸುತ್ತಿದ್ದುದು ಇಂದು ಹಿರಿಯರಾದವರಿಗೂ ನೆನಪಿರುವ ಸಂಗತಿ. ಮೂಗು ಕಟ್ಟಿದ್ದರೆ, ಶೀತವಾದರೆ, ನೆಗಡಿ, ಜ್ವರ, ಮೈಕೈ ನೋವು ಯಾವುದೇ ಇದ್ದರೂ ಮೊದಲು ನೀಡುತ್ತಿದ್ದುದೇ ವಿಕ್ಸ್. ಶೀತಕ್ಕೂ ಹೊರತಾಗಿ ವಿಕ್ಸ್ ಅನ್ನು ಇನ್ನೂ ಹಲವು ವಿಧದ ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿ ಬಳಸಬಹುದು ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅದೂ ಒಂದೆರಡಲ್ಲ, ಭರ್ತಿ ಹದಿಮೂರು ರೂಪದಲ್ಲಿ ಇದನ್ನು ಬಳಸಬಹುದು.

ಹದಿಮೂರಕ್ಕೂ ಹೆಚ್ಚು ವಿಧಾನಗಳಲ್ಲಿ ಬಳಸಬಹುದಾದರೂ ಈ ಹದಿಮೂರು ವಿಧಾನಗಳನ್ನು ಪರೀಕ್ಷಿಸಿ ಸುರಕ್ಷಿತ ಮತ್ತು ಸಮರ್ಥ ಎಂದು ಪ್ರಮಾಣೀಕರಿಸಿದ ಬಳಿಕವೇ ಇಲ್ಲಿ ನೀಡಲಾಗಿದೆ. ಈ ಹದಿಮೂರು ವಿಧಾನಗಳಲ್ಲಿ ವಿಕ್ಸ್ ಅನ್ನು ಹೇಗೆ ಬಳಸಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಷೋ ಪರಾಮರ್ಶಿಸುತ್ತದೆ...

ಕೊಬ್ಬು ಕರಗಿಸಲು

ಕೊಬ್ಬು ಕರಗಿಸಲು

ಕೊಬ್ಬು ಕರಗಿಸುವ ನಿಮ್ಮ ಪ್ರಯತ್ನಗಳಿಗೆ ವಿಕ್ಸ್ ನೆರವು ನೀಡುತ್ತದೆ. ದೇಹದ ಸೊಂಟ, ಕಾಲು ಮೊದಲಾದ ಕಡೆ ತುಂಬಿಕೊಂಡಿರುವ ಕೊಬ್ಬನ್ನು ಕರಗಿಸಲು ಈ ಭಾಗಕ್ಕೆ ಕೊಂಚ ವಿಕ್ಸ್ ಆಧಾರಿತ ಕ್ರೀಂ ಹಚ್ಚಿ ನಿಮ್ಮ ತೂಕ ಇಳಿಸುವ ಪ್ರಯತ್ನಗಳನ್ನು ಮುಂದುವರೆಸಿ. ಇದರಿಂದ ಕೊಬ್ಬು ಇರುವ ಸ್ಥಳದಲ್ಲಿ ಹೆಚ್ಚಿನ ಶಾಖ ಉತ್ಪತ್ತಿಯಾಗಿ ಈ ಶಾಖವನ್ನು ತಣಿಸಲು ದೇಹಕ್ಕೆ ಹೆಚ್ಚಿನ ಕೊಬ್ಬನ್ನು ಕರಗಿಸಬೇಕಾಗಿ ಬರುತ್ತದೆ. ಇದರಿಂದ ಕೊಬ್ಬು ಕರಗುವುದು ಮಾತ್ರವಲ್ಲ, ಇದೇ ಸ್ಥಳದಲ್ಲಿ ಮತ್ತೊಮ್ಮೆ ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ. ವಿಕ್ಸ್ ಆಧಾರಿತ ಕ್ರೀಂ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೊಬ್ಬು ಕರಗಿಸಲು

ಕೊಬ್ಬು ಕರಗಿಸಲು

ಇದಕ್ಕಾಗಿ ಒಂದು ದೊಡ್ಡ ಚಮಚ ವಿಕ್ಸ್, ಎರಡರಿಂದ ನಾಲ್ಕು ಕರ್ಪೂರದ ಬಿಲ್ಲೆಗಳು, ಅರ್ಧ ಚಮಚ ಅಡುಗೆ ಸೋಡಾ ಮತ್ತು ಕೊಂಚವೇ ಆಲ್ಕೋಹಾಲ್ ಸೇರಿಸಿ ಮಿಶ್ರಣ ಮಾಡಿ ಈ ಲೇಪನವನ್ನು ಮನೆಯಲ್ಲಿದ್ದಾಗ ಅಥವಾ ವ್ಯಾಯಾಮಕ್ಕೂ ಮೊದಲು ಬೊಜ್ಜು ಹೆಚ್ಚಿರುವ ಭಾಗಕ್ಕೆ ಹಚ್ಚಿ. ವ್ಯಾಯಾಮದ ಬಳಿಕ ಸ್ನಾನದ ಸಮಯದಲ್ಲಿ ನಿವಾರಿಸಿ.

ಕಟ್ಟಿಕೊಂಡಿರುವ ಮೂಗಿಗೆ

ಕಟ್ಟಿಕೊಂಡಿರುವ ಮೂಗಿಗೆ

ಮೂಗು ಕಟ್ಟಿಕೊಂಡಿರುವುದು, ಸೈನುಸೈಟಿಸ್ ಮೊದಲಾದ ತೊಂದರೆಗಳಿಗೆ ಕೊಂಚ ವಿಕ್ಸ್ ಅನ್ನು ಎದೆಯ ಮೇಲ್ಭಾಗಕ್ಕೆ ಹಚ್ಚಿ ಮಲಗಿ. ಮೈತಾಪದಿಂದ ವಿಕ್ಸ್ ನ ಆವಿ ನಿಧಾನವಾಗಿ ಗಾಳಿಯಲ್ಲಿ ಪಸರಿಸಿ ಮೂಗಿನ ಮೂಲಕ ದೇಹದ ಒಳಭಾಗಕ್ಕೆ ಲಭ್ಯವಾಗುತ್ತದೆ. ಇಡಿಯ ರಾತ್ರಿ ಇದೇ ರೀತಿ ವಿಕ್ಸ್ ನ ಆವಿಯನ್ನು ಉಸಿರಾಡುವ ಮೂಲಕ ಕಟ್ಟಿಕೊಂಡಿದ್ದ ಮೂಗು ತೆರೆದು ಸುಗಮವಾಗಿ ಉಸಿರಾಡಿ ನೆಮ್ಮದಿನ ನಿದ್ದೆಗೆ ಕಾರಣವಾಗುತ್ತದೆ.

ದಣಿದ ಪಾದಗಳಿಗೆ

ದಣಿದ ಪಾದಗಳಿಗೆ

ಇಡಿಯ ದಿನದ ಚಟುವಟಿಕೆಯ ಬಳಿಕ ಮನೆಗೆ ಹಿಂದಿರುಗಿದಾಗ ಪಾದಗಳು ನೋಯುತ್ತಿರುತ್ತವೆ. ಹೆಚ್ಚಿನವರಿಗೆ ಪಾದಗಳು ಕೊಂಚ ಊದಿಕೊಂಡತೆಯೂ ಇರುತ್ತವೆ. ಇಡಿಯ ಮೈಭಾರವನ್ನು ಪಾದಗಳ ಮೇಲೆ ಸತತವಾಗಿ ಹೇರಿರುವ ಕಾರಣ ಪಾದಗಳು ನೋಯುತ್ತವೆ. ಗಾಳಿಯಾಡದ ಪಾದರಕ್ಷೆ ಧರಿಸಿದರಂತೂ ಈ ನೋವು ಇನ್ನಷ್ಟು ಹೆಚ್ಚುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದಣಿದ ಪಾದಗಳಿಗೆ

ದಣಿದ ಪಾದಗಳಿಗೆ

ರಾತ್ರಿ ಮಲಗುವ ಮುನ್ನ ತಣ್ಣೀರಿನಲ್ಲಿ ಪಾದಗಳನ್ನು ತೊಳೆದುಕೊಂಡು ಒರೆಸಿ ಒಣಗಿದ ಬಳಿಕ ಕೊಂಚ ವಿಕ್ಸ್ ಅನ್ನು ಪಾದಗಳ ತಳಭಾಗಕ್ಕೆ ತೆಳುವಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿ ಮಲಗಿಕೊಳ್ಳಿ. ಹೊದಿಕೆ ಪಾದಗಳನ್ನು ಆವರಿಸುವಂತಿರಲಿ. ಬೆಳಿಗ್ಗೆದ್ದಾಗ ಪಾದಗಳ ನೋವು ಮಾಯವಾಗಿ ತಾಜಾತನದಲ್ಲಿರುವುದು ಮಾತ್ರವಲ್ಲ, ಪಾದಗಳ ದೃಢವಾಗಿದ್ದ ಚರ್ಮವೂ ಮೃದುವಾಗಿರುವುದು ಅನುಭವಕ್ಕೆ ಬರುತ್ತದೆ.

ಕೋಣೆಯ ದುರ್ಗಂಧ ನಿವಾರಿಸಲು

ಕೋಣೆಯ ದುರ್ಗಂಧ ನಿವಾರಿಸಲು

ಕೋಣೆಯಲ್ಲಿ ಯಾವುದೋ ಕಾರಣದಿಂದಾಗಿ ಕೆಟ್ಟ ವಾಸನೆ ಆವರಿಸಿದ್ದರೆ ಇದನ್ನು ಹೊರಹಾಕಿ ವಾತಾವಣವನ್ನು ಆರೋಗ್ಯಕರವಾಗಿಸಲು ವಿಕ್ಸ್ ನೆರವಿಗೆ ಬರುತ್ತದೆ. ಕೋಣೆಯಲ್ಲಿ ಆವಿಯನ್ನು ಸೂಸುವ ವೆಪೋರೈಸರ್ ನಲ್ಲಿ ಕೊಂಚ ನೀರು ತುಂಬಿ ಇದರ ಮೇಲೆ ಕೊಂಚವೇ ವಿಕ್ಸ್ ವೆಪೋರಬ್ ಸೇರಿಸಿ ಉಪಕರಣವನ್ನು ಚಾಲೂ ಮಾಡಿ. ಕೊಂಚವೇ ಹೊತ್ತಿನಲ್ಲಿ ಕೋಣೆಯಲ್ಲಿ ತುಂಬಿಕೊಳ್ಳುವ ವಿಕ್ಸ್ ನ ಪರಿಮಳ ದುರ್ಗಂಧವನ್ನು ಹೊಡೆದೋಡಿಸುತ್ತದೆ. ವಿಕ್ಸ್ ನ ನವಿರಾದ ಪುದೀನಾದಂತಹ ಪರಿಮಳವನ್ನು ಎಲ್ಲರೂ ಇಷ್ಟಪಡುವ ಕಾರಣ ವಾತಾವರಣದಲ್ಲಿ ಆಹ್ಲಾದತೆ ಮೂಡುತ್ತದೆ. ಈ ಗಾಳಿಯನ್ನು ಸೇವಿಸುವ ಮೂಲಕ ಶೀತವಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಕಾಲುಬೆರಳಿನ ಉರುಗುಗಳ ಸೋಂಕು ನಿವಾರಿಸುತ್ತದೆ

ಕಾಲುಬೆರಳಿನ ಉರುಗುಗಳ ಸೋಂಕು ನಿವಾರಿಸುತ್ತದೆ

ಪಾದಗಳನ್ನು ನಿತ್ಯವೂ ತೊಳೆಯದೇ ಇರುವ ಮೂಲಕ ಹಾಗೂ ಸತತವಾಗಿ ಸಾಕ್ಸ್ ಗಳನ್ನು ಹಾಕಿಕೊಂಡೇ ಇರುವವರಲ್ಲಿ ಕಾಲುಬೆರಳುಗಳ ಉಗುರುಗಳ ಬುಡದಲ್ಲಿ ಶಿಲೀಂಧ್ರದ ಸೋಂಕು ಸುಲಭವಾಗಿ ಹರಡುತ್ತದೆ. ಇದನ್ನು ಸರಿಪಡಿಸಲು ಕೊಂಚ ವಿಕ್ಸ್ ಅನ್ನು ನಿತ್ಯವೂ ತಣ್ಣೀರಿನಲ್ಲಿ ತೊಳೆದುಕೊಂಡು ಒರೆಸಿ ಒಣಗಿಸಿದ ಪಾದಗಳಿಗೆ, ಸೋಂಕು ಇರುವ ಸ್ಥಳದಲ್ಲಿ ಹಚ್ಚಿ ಮಲಗಿದರೆ ಎರಡೇ ವಾರದಲ್ಲಿ ಈ ಸೋಂಕು ಪೂರ್ಣವಾಗಿ ಇಲ್ಲವಾಗುತ್ತದೆ.

ಬೆಕ್ಕುಗಳನ್ನು ದೂರವಿರಿಸಲು

ಬೆಕ್ಕುಗಳನ್ನು ದೂರವಿರಿಸಲು

ನಿಮ್ಮ ಸಾಕುಪ್ರಾಣಿಗಳಿಗೆ ಮನೆಯ ಪೀಠೋಪಕರಣಗಳನ್ನು ಕೆರೆಯುವ ಅಭ್ಯಾಸವಿರುತ್ತದೆ. ಇವುಗಳು ದುಬಾರಿ ವಾರ್ನಿಸ್ ಪದರವನ್ನು ಕೆರೆದಿರುವುದನ್ನು ಕಂಡಾಗ ಕೋಪ ಉಕ್ಕೇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆಕ್ಕುಗಳನ್ನು ದೂರವಿರಿಸಲು

ಬೆಕ್ಕುಗಳನ್ನು ದೂರವಿರಿಸಲು

ಆದರೆ ಪ್ರಾಣಿಗಳು ಈ ತರಹ ಮಾಡದಿರುವಂತೆ ನೋಡಿಕೊಳ್ಳಲು ಕೊಂಚ ವಿಕ್ಸ್ ಅನ್ನು ಬೆಕ್ಕು, ನಾಯಿಗಳು ಕೆರೆಯಲು ಸಾಧ್ಯವಿರುವ ಸ್ಥಳದಲ್ಲಿ ತೆಳುವಾಗಿ ಹಚ್ಚಿ. ನಾಯಿಗಳ ಮತ್ತು ಬೆಕ್ಕುಗಳ ಮೂಗು ನಮಗಿಂತಲೂ ಹೆಚ್ಚು ಸೂಕ್ಷ್ಮವಾಗಿರುವ ಕಾರಣ ಈ ವಾಸನೆಯ ಬಳಿ ಮತ್ತೆ ಬರುವುದಿಲ್ಲ.

ಕುದುರೆ ಸವಾರಿಗೆ

ಕುದುರೆ ಸವಾರಿಗೆ

ಸಾಮಾನ್ಯವಾಗಿ ಗಂಡುಕುದುರೆ ಹೆಣ್ಣು ಕುದುರೆಯ ವಾಸನೆ ಪಡೆದುಕೊಳ್ಳುತ್ತಿದ್ದಂತೆಯೇ ಸವಾರನ ಅಣತಿಗೆ ಕಾಯದೇ ತನ್ನದೇ ದಿಕ್ಕಿನಲ್ಲಿ ಓಟ ಪ್ರಾರಂಭಿಸುತ್ತದೆ. ಇದನ್ನು ತಡೆಯಲು ಕೊಂಚ ವಿಕ್ಸ್ ಅನ್ನು ಕುದುರೆಯ ಮುಖಕ್ಕೆ ಲೇಪಿಸಿದರೆ ಇದಕ್ಕೆ ವಿಕ್ಸ್ ನ ಹೊರತಾಗಿ ಬೇರಾವುದೇ ವಾಸನೆ ಬರದ ಕಾರಣ ತರಬೇತುದಾರ ಹೇಳಿದಂತೆ ಕೇಳುತ್ತದೆ.

ನಾಯಿಗಳ ಮೇಲಿನ ಚಿಗಟ ನಿವಾರಿಸಲು

ನಾಯಿಗಳ ಮೇಲಿನ ಚಿಗಟ ನಿವಾರಿಸಲು

ನಾಯಿಗಳ ಚರ್ಮದಲ್ಲಿ ಹುದುಗಿ ತುರಿಕೆ ಬರಿಸುವ ಚಿಗಟ, ಉಣುಗು, ತಿಗಣೆ, ಸೊಳ್ಳೆ ಮೊದಲಾದವುಗಳನ್ನು ನಿವಾರಿಸಲು ವಿಕ್ಸ್ ಉಪಯುಕ್ತವಾಗಿದೆ. ಪ್ರಾಣಿಯ ಚರ್ಮಕ್ಕೆ ತೆಳುವಾಗಿ ವಿಕ್ಸ್ ಹಚ್ಚಿದರೆ ಇದರ ವಾಸನೆಗೆ ಕ್ರಿಮಿಗಳೆಲ್ಲವೂ ಹಾರಿ ಹೋಗುತ್ತವೆ. ವಿಕ್ಸ್ ನಲ್ಲಿರುವ ಮೆಂಥಾಲ್ ಕ್ರಿಮಿಗಳನ್ನು ಓಡಿಸಲು ಸಮರ್ಥವಾಗಿದೆ.

ಚಿಕ್ಕ ಪುಟ್ಟ ತಲೆನೋವಿಗೆ

ಚಿಕ್ಕ ಪುಟ್ಟ ತಲೆನೋವಿಗೆ

ಒಂದು ವೇಳೆ ನಿಮಗೆ ತಲೆನೋವು ಬಾಧಿಸುತ್ತಿದ್ದರೆ, ಅದರಲ್ಲೂ ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವಿದ್ದರೆ, ಇದು ಪ್ರಾರಂಭವಾಯಿತು ಎನ್ನುವಾಗ ತಕ್ಷಣ ಕೊಂಚ ವಿಕ್ಸ್ ಅನ್ನು ಹಣೆ ಮತ್ತು ಹಣೆಯ ಪಕ್ಕದ (ಕಿವಿಯ ಮುಂಭಾಗದ) ಭಾಗದಲ್ಲಿ ತೆಳುವಾಗಿ ಹಚ್ಚಿ. ಒಂದು ವೇಳೆ ತಲೆನೋವು ಪ್ರಾರಂಭಿಕ ಹಂತ ದಾಟಿರದೇ ಇದ್ದರೆ ತಕ್ಷಣ ನಿಧಾನವಾಗಿ ಕಡಿಮೆಯಾಗತೊಡಗುತ್ತದೆ. (ಒಂದು ವೇಳೆ ತಲೆನೋವು ಈ ಹಂತ ದಾಟಿ ಉಗ್ರ ರೂಪ ಪಡೆದರೆ ವಿಕ್ಸ್ ಇರಲಿ ತಲೆನೋವಿನ ಯಾವುದೇ ಮಾತ್ರೆಗೂ ಇದು ಬಗ್ಗುವುದಿಲ್ಲ)

 ಚಿಕ್ಕಪುಟ್ಟ ಗಾಯಗಳಿಗೆ

ಚಿಕ್ಕಪುಟ್ಟ ಗಾಯಗಳಿಗೆ

ಒಂದು ವೇಳೆ ಚಿಕ್ಕಪುಟ್ಟ ತರಚು ಗಾಯವಾಗಿದ್ದರೆ, ಮುಳ್ಳು ಚುಚ್ಚಿದ್ದರೆ ವಿಕ್ಸ್ ಅನ್ನು ಈ ಭಾಗಕ್ಕೆ ತೆಳುವಾಗಿ ಹಚ್ಚಿ. ಕೊಂಚ ಉರಿ ಎನಿಸಿದರೂ ಈ ಭಾಗ ಮತ್ತೊಮ್ಮೆ ತುಂಬಿಕೊಳ್ಳುವ ಕಾರ್ಯಕ್ಕೆ ಚಾಲನೆ ದೊರಕುವ ಮೂಲಕ ಶೀಘ್ರವಾಗಿ ಗುಣವಾಗುತ್ತದೆ.

ಪ್ರಾಣಿಗಳ ವಾಸನೆ ನಿವಾರಿಸಲು

ಪ್ರಾಣಿಗಳ ವಾಸನೆ ನಿವಾರಿಸಲು

ಪ್ರಾಣಿಗಳು ತಮ್ಮ ಎಲ್ಲೆಕಟ್ಟುಗಳನ್ನು ತೋರ್ಪಡಿಸಲು ತಾವಿರುವ ಸ್ಥಳದ ಸುತ್ತಲೂ ಇರುವ ಕಂಭಗಳ ಮೇಲೆ ಮೂತ್ರ ವಿಸರ್ಜಿಸಿ ಬೇರೆ ಪ್ರಾಣಿಗಳಿಗೆ ಇಲ್ಲಿಂದ ಒಳಬರದೇ ಇರಲು ಸೂಚನೆ ನೀಡುತ್ತವೆ. ಸತತವಾಗಿ ಈ ಮಾದರಿಯಲ್ಲಿ ನಿಮ್ಮ ಸಾಕುನಾಯಿ ತನ್ನ ಎಲ್ಲೆಕಟ್ಟುಗಳನ್ನು ಕಟ್ಟಿಕೊಳ್ಳುತ್ತಿದ್ದರೆ ಕೆಲವೇ ದಿನಗಳಲ್ಲಿ ಮೂತ್ರದ ವಾಸನೆ ಅಸಹನೀಯವಾಗುತ್ತದೆ. ಈಗ ನಾಯಿಯ ನೆಚ್ಚಿನ ಸ್ಥಳದಲ್ಲಿ ಕೊಂಚ ವಿಕ್ಸ್ ಹಚ್ಚಿರುವ ಮೂಲಕ ಮುಂದಿನ ಬಾರಿ ಅಲ್ಲಿ ತನ್ನ ಕೆಲಸ ಮಾಡುವುದಿಲ್ಲ. ಏಕೆಂದರೆ ಇಲ್ಲಿನ ವಿಕ್ಸ್ ವಾಸನೆಯನ್ನು ನಾಯಿಗಳ ಸೂಕ್ಷ್ಮಗ್ರಾಹಿಯಾದ ಮೂಗು ಸಹಿಸುವುದೇ ಇಲ್ಲ.

ಸೊಳ್ಳೆಗಳನ್ನು ಓಡಿಸಲು

ಸೊಳ್ಳೆಗಳನ್ನು ಓಡಿಸಲು

ಸೊಳ್ಳೆಗಳನ್ನು ಮನೆಯೊಳಕ್ಕೆ ಬಾರದಂತೆ ಇಡಲು ಸೊಳ್ಳೆಬತ್ತಿ ಅಥವಾ ತುಳಸಿ ಎಲೆಗಳ ಹೊಗೆ ಹಾಕಬಹುದು. ಆದರೆ ಇವೆರಡೂ ಕೊಂಚ ಘಾಟು ತರುವ ವಿಧಾನಗಳಾದ ಕಾರಣ ವಿಕ್ಸ್ ಅನ್ನು ಮನೆಯೊಳಗೆ ಸೊಳ್ಳೆಗಳು ಇರುವ ಸಂಭಾವ್ಯ ಸ್ಥಳಗಳ ಪಕ್ಕ ಹಚ್ಚಿ. ಒಂದು ವೇಳೆ ಸೊಳ್ಳೆ ಕಚ್ಚಿದ್ದರೆ ಕಚ್ಚಿದ್ದ ಭಾಗಕ್ಕೂ ಕೊಂಚ ವಿಕ್ಸ್ ತಕ್ಷಣವೇ ಹಚ್ಚಿ. ಇದರಿಂದ ಸೊಳ್ಳೆಗಳು ಮನೆಯೊಳಗೆ ಸುಳಿಯುವುದಿಲ್ಲ.

ಒಡೆದ ತುಟಿಗಳಿಗೆ

ಒಡೆದ ತುಟಿಗಳಿಗೆ

ಚಳಿ ಅಥವಾ ಆರ್ದ್ರತೆ ಇಲ್ಲದ ವಾತಾವರಣದ ಕಾರಣ ಸಾಮಾನ್ಯವಾಗಿ ತುಟಿಗಳು ಒಡೆಯುತ್ತವೆ. ದೈಹಿಕವಾದ ಇತರ ಕಾರಣಗಳಿಂದಲೂ ತುಟಿಗಳು ಒಡೆಯಬಹುದು, ರಕ್ತ ಬರಬಹುದು ಹಾಗೂ ಪೊರೆ ಏಳಬಹುದು. ಇದಕ್ಕೆ ತುಟಿಯ ಚರ್ಮಕ್ಕೆ ಆರ್ದ್ರತೆ ನೀಡುವುದು ಅಗತ್ಯ. ಈ ಕೆಲಸವನ್ನು ವಿಕ್ಸ್ ಸಮರ್ಥವಾಗಿ ಮಾಡುತ್ತದೆ. ಒಣಗಿ ಒಡೆದ ತುಟಿಗಳಿಗೆ ಕೊಂಚ ವಿಕ್ಸ್ ಅನ್ನು ತುಟಿಗಳಿಗೆ ತೆಳುವಾಗಿ ದಿನಕ್ಕೊಂದು ಬಾರಿ ಹಚ್ಚಿ.

English summary

Amazing medicinal uses of Vicks VapoRub assure you did not know

Vicks VapoRub is an ointment used for decades to relieve cough and other symptoms of the common cold. Surely many of us remember when our mothers or grandmothers made use of this product to provide relief when we were congested or other cold problems. but would you like to get more out of your Vicks VapoRub? Do not miss these use alternative forms.
X
Desktop Bottom Promotion